PIB Headquarters

ಕೋವಿಡ್-19: ಪಿ ಐ ಬಿ ದೈನಿಕ ವರದಿ

Posted On: 01 AUG 2020 6:36PM by PIB Bengaluru

ಕೋವಿಡ್-19: ಪಿ ಬಿ ದೈನಿಕ ವರದಿ

Coat of arms of India PNG images free download

https://static.pib.gov.in/WriteReadData/userfiles/image/image001ODWN.jpg

(ಕಳೆದ 24 ಗಂಟೆಗಳಲ್ಲಿ ಕೋವಿಡ್-19ಕ್ಕೆ ಸಂಬಂಧಿಸಿದಂತೆ ಬಿಡುಗಡೆ ಮಾಡಲಾದ ಮಾಧ್ಯಮ ಹೇಳಿಕೆಗಳು ಮತ್ತು

ಪಿಐಬಿ ವಾಸ್ತವದ ಪರಿಶೀಲನೆ- FACT CHECK- ಯನ್ನು ಒಳಗೊಂಡಿದೆ)

ಲಾಕ್ ಡೌನ್-1 ಜಾರಿಯಾದ ನಂತರ ಭಾರತದಲ್ಲಿ ಸೋಂಕಿತ ರೋಗಿಗಳ ಸಾವಿನ ಪ್ರಮಾಣ (ಸಿಎಫ್ಆರ್) ದರ ಶೇ.2.15ಕ್ಕೆ ಇಳಿಕೆ. ಸುಮಾರು 11 ಲಕ್ಷ ಮಂದಿ ಗುಣಮುಖ; ಕಳೆದ 24 ಗಂಟೆಗಳಲ್ಲಿ 36,500ಕ್ಕೂ ಅಧಿಕ ಮಂದಿ ಗುಣಮುಖ

ಲಾಕ್ ಡೌನ್-1 ಆರಂಭವಾದ ನಂತರ ದೇಶದಲ್ಲಿ ಸೋಂಕಿತರ ಸಾವಿನ ಪ್ರಮಾಣ ಇಂದು ಅತಿ ಕಡಿಮೆ ಶೇ.2.15ಕ್ಕೆ ಇಳಿದಿದೆ. ಜೂನ್ ಮಧ್ಯ ಭಾಗದಿಂದೀಚೆಗೆ ಈ ಪ್ರಮಾಣ ದಿನೇ ದಿನೇ ಇಳಿಮುಖವಾಗುತ್ತಿದೆ. ಪರಿಣಾಮಕಾರಿ ನಿರ್ಬಂಧ ವಲಯ ನಿಯಂತ್ರಣ ಕಾರ್ಯತಂತ್ರ, ತ್ವರಿತ ಪರೀಕ್ಷೆ ಮತ್ತು ಗುಣಮಟ್ಟದ ಚಿಕಿತ್ಸೆ ನಿರ್ವಹಣೆ ಶಿಷ್ಟಾಚಾರಗಳಿಂದಾಗಿ ಸಮಗ್ರ ನಿರ್ದಿಷ್ಟ ಆರೈಕೆಯನ್ನು ಕೈಗೊಳ್ಳುತ್ತಿರುವುದರಿಂದ ಪ್ರತಿ ದಿನ ಸುಮಾರು 30,000ಕ್ಕೂ ಅಧಿಕ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಈವರೆಗೆ ದೇಶದಲ್ಲಿ ಒಟ್ಟು ಗುಣಮುಖರಾದವರ ಸಂಖ್ಯೆ ಸುಮಾರು 11 ಲಕ್ಷ. ಕಳೆದ 24 ಗಂಟೆಗಳಲ್ಲಿ 36,569 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಇದರೊಂದಿಗೆ ಒಟ್ಟು ಗುಣಮುಖರಾದವರ ಸಂಖ್ಯೆ 10,94,374 ಕ್ಕೆ ಏರಿಕೆಯಾಗಿದೆ. ಒಟ್ಟು ಸೋಂಕಿತರ ಪ್ರಮಾಣ ಶೇ.64.53ಕ್ಕೆ ಹೆಚ್ಚಳವಾಗಿದೆ. ಗುಣಮುಖರಾದ ರೋಗಿಗಳ ಸಂಖ್ಯೆ ಮತ್ತು ಸಕ್ರಿಯ ಕೋವಿಡ್-19 ಪ್ರಕರಣಗಳ ನಡುವಿನ ಅಂತರ ಪ್ರಸ್ತುತ 5,29,271 ಇದೆ. ಸಕ್ರಿಯ ಪ್ರಕರಣಗಳು(5,65,103) ಇದ್ದು, ಅವೆಲ್ಲಾ ವೈದ್ಯಕೀಯ ನಿಗಾದಲ್ಲಿವೆ. ಇಂದಿನ ವರೆಗೆ 1488 ನಿಗದಿತ ಕೋವಿಡ್ ಆಸ್ಪತ್ರೆಗಳಿದ್ದು, 3231 ನಿರ್ದಿಷ್ಟ ಕೋವಿಡ್ ಆರೋಗ್ಯ ಕೇಂದ್ರಗಳು ಮತ್ತು 10,755 ಕೋವಿಡ್ ಆರೈಕೆ ಕೇಂದ್ರಗಳ ಮೂಲಕ ದೇಶದಲ್ಲಿ ಕೋವಿಡ್-19 ವಿರುದ್ಧ ಸೆಣಸಲಾಗುತ್ತಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1642833

ಡಬ್ಲ್ಯೂಎಚ್ಒ ಕಾರ್ಯಕಾರಿ ಮಂಡಳಿಯ ಬ್ಯೂರೋ ಅಧಿವೇಶನದ ಅಧ್ಯಕ್ಷತೆ ವಹಿಸಿದ ಡಾ. ಹರ್ಷವರ್ಧನ್

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷವರ್ಧನ್, ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್ಒ) ಕಾರ್ಯಕಾರಿ ಮಂಡಳಿಯ ಬ್ಯೂರೋದ ಸಭೆಯ ಅಧ್ಯಕ್ಷತೆಯನ್ನು ವರ್ಚುಯಲ್ ರೂಪದಲ್ಲಿ ವಹಿಸಿದ್ದರು. ಬ್ಯೂರೋದಲ್ಲಿ ಡಬ್ಲ್ಯೂಎಚ್ಒದ ಮಹಾನಿರ್ದೇಶಕರು, ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರು ಇರುತ್ತಾರೆ. ಕೋವಿಡ್-19 ಉಂಟುಮಾಡಿರುವ ಜಾಗತಿಕ ಬಿಕ್ಕಟ್ಟನ್ನು ಮತ್ತೆ ಸ್ಮರಿಸಿಕೊಂಡ ಅವರು, ನಾಲ್ಕು ತಿಂಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ, ಕೋವಿಡ್-19 ಎಂದು ಸಾಂಕ್ರಾಮಿಕ ಎಂದು ಘೋಷಿಸಿತು. ಸದ್ಯ ಸುಮಾರು 17 ಮಿಲಿಯನ್ ಜನರಿಗೆ ಕೋವಿಡ್ ಸೋಂಕು ತಗುಲಿದೆ ಮತ್ತು 662 ಸಾವಿರ ಅಮೂಲ್ಯ ಜೀವಗಳನ್ನು ವಿಶ್ವದಾದ್ಯಂತ ಸಾಂಕ್ರಾಮಿಕ ಬಲಿತೆಗೆದುಕೊಂಡಿದೆ. ಸಾಂಕ್ರಾಮಿಕ ವಿಶ್ವದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮ ಅಪಾಯವಾದುದು ಎಂದು ಹೇಳಿದರು. ಅಲ್ಲದೆ ಇಡೀ ವಿಶ್ವ ಈಗ ಆರೋಗ್ಯದ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದೆ ಮತ್ತು ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ಹಲವು ರೋಗಗಳು ಒಡ್ಡುತ್ತಿರುವ ಅಪಾಯಗಳನ್ನು ಎದುರಿಸಲು ಎಲ್ಲ ದೇಶಗಳ ನಡುವೆ ಇನ್ನೂ ಹೆಚ್ಚಿನ ಸಹಕಾರ ಅತ್ಯಗತ್ಯವಾಗಿ ಬೇಕಾಗಿದೆ, ಜಾಗತೀಕರಣ ಯುಗದಲ್ಲಿ ಇಡೀ ವಿಶ್ವವೇ ಮನುಕುಲದ ಬಹುದೊಡ್ಡ ಮನೆಯಾಗಿದೆ. ಸಾಂಕ್ರಾಮಿಕ ರೋಗ ಹರಡಿರುವ ಸವಾಲು ಅತಿ ದೊಡ್ಡದು, ಅದು ಯಾವುದೇ ದೇಶಗಳ ಗಡಿಗಳ ನಡುವೆ ತಾರತಮ್ಯ ಎಸಗುವುದಿಲ್ಲ ಎಂದರು. ನಿಟ್ಟಿನಲ್ಲಿ ಡಾ. ಹರ್ಷವರ್ಧನ್, ಡಬ್ಲ್ಯೂಎಚ್ಒ ಸದಸ್ಯರ ನಡುವೆ ಇನ್ನೂ ಹೆಚ್ಚಿನ ಸಹಭಾಗಿತ್ವ, ಜಾಗತಿಕ ಪ್ರತಿಸ್ಪಂದೆ, ಬೆಂಬಲ ಮತ್ತು ಸಹಕಾರ ಅತ್ಯಗತ್ಯವಾಗಿದ್ದು, ಮೂಲಕ ಸಾಂಕ್ರಾಮಿಕ ಮತ್ತು ಸಾಂಕ್ರಾಮಿಕವಲ್ಲದ ರೋಗಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಬೇಕಿದೆ ಎಂದರು. ಸಾಂಕ್ರಾಮಿಕದ ನಂತರ ಎದುರಾಗಲಿರುವ ಹೊಸ ಅಪಾಯ ಮತ್ತು ಸವಾಲುಗಳನ್ನು ಎದುರಿಸಲು ವಿನೂತನ ಮಾರ್ಗಗಳನ್ನು ಅನ್ವೇಷಿಸಬೇಕಿದೆ ಎಂದು ಅವರು ಹೇಳಿದರು.  

ವಿವರಗಳಿಗೆ : https://pib.gov.in/PressReleseDetail.aspx?PRID=1642622

ಸೋಂಕಿತರ ಸಾವಿನ ಪ್ರಮಾಣ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ವೆಂಟಿಲೇಟರ್ ಗಳ ರಫ್ತಿಗೆ ಅನುಮತಿ ನೀಡಲು ನಿರ್ಧರಿಸಿದ ಕೇಂದ್ರ ಸರ್ಕಾರ

ಕೋವಿಡ್-19 ಕುರಿತ ಸಚಿವರ ಉನ್ನತಾಧಿಕಾರ ಸಮಿತಿ(ಜಿಒಎಂ), ಭಾರತದಲ್ಲಿ ತಯಾರಿಸಿದ ವೆಂಟಿಲೇಟರ್ ಗಳ ರಫ್ತು ಮಾಡಲು ಅವಕಾಶ ಕೋರಿ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಂಡಿಸಿದ್ದ ಪ್ರಸ್ತಾವವನ್ನು ಪರಿಶೀಲಿಸಿ ಅನುಮೋದನೆ ನೀಡಿದೆ. ಈ ನಿರ್ಧಾರವನ್ನು ವಿದೇಶ ವ್ಯಾಪಾರ ಮಹಾನಿರ್ದೇಶಕರು(ಡಿಜಿಎಫ್ ಟಿ) ಅವರಿಗೆ ತಿಳಿಸಲಾಗಿದ್ದು, ದೇಶೀಯವಾಗಿ ತಯಾರಿಸಲಾದ ವೆಂಟಿಲೇಟರ್ ಗಳ ರಫ್ತಿಗೆ ಅಗತ್ಯ ನೆರವು ಹಾಗೂ ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ದೇಶದಲ್ಲಿ ಕೋವಿಡ್-19 ಸೋಂಕಿತ ರೋಗಿಗಳು ಸಾವನ್ನಪ್ಪುತ್ತಿರುವ ಪ್ರಮಾಣ ನಿರಂತರವಾಗಿ ಕುಸಿಯುತ್ತಿರುವ ಹಿನ್ನೆಲೆಯಲ್ಲಿ ಮಹತ್ವದ ನಿರ್ಧಾರವನ್ನು ಭಾರತ ಕೈಗೊಂಡಿದೆ. ಸದ್ಯ ಭಾರತದಲ್ಲಿ ಸೋಂಕಿತರ ಸಾವಿನ ಪ್ರಮಾಣ ಶೇ.2.15ರಷ್ಟಿದ್ದು, ಅದರ ಅರ್ಥ ಕೆಲವೇ ಕೆಲವು ಸೋಂಕಿತರು ಮಾತ್ರ ವೆಂಟಿಲೇಟರ್ ಗಳಲ್ಲಿದ್ದಾರೆ ಎಂಬುದು.

ವಿವರಗಳಿಗೆ : https://pib.gov.in/PressReleseDetail.aspx?PRID=1642872

ಜುಲೈನಲ್ಲಿ ಒಟ್ಟು 87,422 ಕೋಟಿ ರೂ. ಜಿಎಸ್ ಟಿ ಆದಾಯ ಸಂಗ್ರಹ

2020ರ ಜುಲೈ ತಿಂಗಳಲ್ಲಿ ಒಟ್ಟು 87,422 ಕೋಟಿ ರೂ. ಜಿ ಎಸ್ ಟಿ ಆದಾಯ ಸಂಗ್ರಹವಾಗಿದ್ದು, ಅದರಲ್ಲಿ 16,147 ಕೋಟಿ ಸಿಜಿಎಸ್ ಟಿ, 21,418 ಕೋಟಿ ರೂ. ಎಸ್ ಜಿಎಸ್ ಟಿ ಮತ್ತು 42,592 ಕೋಟಿ ಐಜಿಎಸ್ ಟಿ ಹಾಗೂ 7,265 ಕೋಟಿ ಸೆಸ್ ಸಂಗ್ರಹ ಸೇರಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಜಿ ಎಸ್ ಟಿ ಆದಾಯ ಸಂಗ್ರಹ ಶೇ.86ರಷ್ಟಿದೆ. ಕಳೆದ ತಿಂಗಳ ಆದಾಯ ಪ್ರಸಕ್ತ ತಿಂಗಳಿಗಿಂತ ಅಧಿಕವಾಗಿತ್ತು. ಆದರೆ ಗಮನಿಸಲೇಬೇಕಾದ ಮತ್ತೊಂದು ಅಂಶವೆಂದರೆ ಕೋವಿಡ್-19 ಹಿನ್ನೆಲೆಯಲ್ಲಿ ಪರಿಹಾರ ಪ್ರಕಟಿಸಿದ್ದರಿಂದ ಬಹುತೇಕ ತೆರಿಗೆ ಪಾವತಿದಾರರು ಫೆಬ್ರವರಿ, ಮಾರ್ಚ್ ಮತ್ತು ಏಪ್ರಿಲ್ 2020 ತೆರಿಗೆಗಳನ್ನು ಪಾವತಿಸಿದ್ದಾರೆ. ಆದರೆ 5 ಕೋಟಿಗೂ ಕಡಿಮೆ ವಹಿವಾಟು ನಡೆಸುವ ತೆರಿಗೆ ಪಾವತಿದಾರರಿಗೆ ಆದಾಯ ರಿಟರ್ನ್ಸ್ ಸಲ್ಲಿಕೆಗೆ ನೀಡಿದ್ದ ವಿನಾಯಿತಿ ಅವಧಿ ಸೆಪ್ಟೆಂಬರ್ 2020ವರೆಗೆ ಮುಂದುವರಿಯಲಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1642870

ಇಂದು ಒಂದು ರಾಷ್ಟ್ರ ಒಂದು ಪಡಿತರ ಕಾರ್ಡ್ ಯೋಜನೆಗೆ ಮತ್ತೆ ನಾಲ್ಕು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೇರ್ಪಡೆ

ಜಮ್ಮು ಮತ್ತು ಕಾಶ್ಮೀರ, ಮಣಿಪುರ, ನಾಗಾಲ್ಯಾಂಡ್ ಮತ್ತು ಉತ್ತರಾಖಂಡ ಸೇರಿದಂತೆ ನಾಲ್ಕು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶ, ಆಹಾರ ಮತ್ತು ಸಾರ್ವಜನಿಕ ಪಡಿತರ ಇಲಾಖೆಯ ಒಂದು ರಾಷ್ಟ್ರ, ಒಂದು ಪಡಿತರ ಯೋಜನೆಗೆ ಅಗತ್ಯ ತಾಂತ್ರಿಕ ಸಿದ್ಧತೆಗಳನ್ನು ಮಾಡಿಕೊಂಡು ಸೇರ್ಪಡೆಯಾಗಿವೆ. ಹಾಲಿ 20 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ರಾಷ್ಟ್ರೀಯ ಪೋರ್ಟಬಲಿಟಿಗೆ ಸೇರಿದ್ದವು. ಇದರೊಂದಿಗೆ 2020ರ ಆಗಸ್ಟ್  1 ರಿಂದ ಅನ್ವಯವಾಗುವಂತೆ ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆಗೆ ಒಟ್ಟು 24 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ಸೇರ್ಪಡೆಯಾದಂತಾಗಿದೆ. ಒಂದು ರಾಷ್ಟ್ರ, ಒಂದು ಪಡಿತರ ಕಾರ್ಡ್ ಯೋಜನೆ ಡಿಒಎಫ್ ಪಿಡಿಯ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ಆ ಮೂಲಕ ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ 2013(ಎನ್ಎಫ್ಎಸ್ಎ) ಅಡಿಯಲ್ಲಿ ಎಲ್ಲ ಫಲಾನುಭವಿಗಳಿಗೆ ಆಹಾರ ಭದ್ರತಾ ಅರ್ಹತೆಯನ್ನು ಖಾತ್ರಿಪಡಿಸುವುದಾಗಿದೆ. ರಾಷ್ಟ್ರವ್ಯಾಪಿ ಪಡಿತರ ಕಾರ್ಡ್ ಗಳ ಪೋರ್ಟಬಲಿಟಿ ಜಾರಿಯಿಂದಾಗಿ  ಫಲಾನುಭವಿಗಳು ದೇಶದ ಯಾವುದೇ ಭಾಗದಲ್ಲಿ ಇದ್ದರೂ ಭೌತಿಕವಾಗಿ ಅವರು ಯೋಜನೆಯ ಫಲವನ್ನು ಅಲ್ಲಿಯೇ ಪಡೆಯಬಹುದಾಗಿದೆ.

ವಿವರಗಳಿಗೆ :https://pib.gov.in/PressReleseDetail.aspx?PRID=1642826

ಕೊರೊನಾ ಸಾಂಕ್ರಾಮಿಕದ ನಡುವೆಯೂ ಉತ್ತಮ ಕಟಾವು ಹಾಗೂ ಮುಂಗಾರಿನಲ್ಲಿ ಉತ್ತಮ ಬೆಳೆ ಬಿತ್ತನೆ ಕಾರ್ಯ ನಡೆದಿದೆ; ತೃಪ್ತಿ ವ್ಯಕ್ತಪಡಿಸಿದ ಕೇಂದ್ರ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವ ಶ್ರೀ ನರೇಂದ್ರ ಸಿಂಗ್ ತೋಮರ್ ಅವರು, ಕೃಷಿ ಮತ್ತು ಗ್ರಾಮೀಣ ವಲಯಗಳು ಯಾವುದೇ ಸಂಕಷ್ಟದಿಂದ ದೇಶವನ್ನು ಪಾರು ಮಾಡುವ ಸಾಮರ್ಥ್ಯವನ್ನು ತನ್ನೊಳಗೆ ಹೊಂದಿವೆ ಎಂದು ಹೇಳಿದರು. ಸಾಂಕ್ರಾಮಿಕ ಕೊರೊನಾ ಸೋಂಕಿನ ನಡುವೆಯೂ ದೇಶದಲ್ಲಿ ಉತ್ತಮ ಕಟಾವು ಮತ್ತು ಉತ್ತಮ ರೀತಿಯಲ್ಲಿ ಮುಂಗಾರು ಬಿತ್ತನೆ ಕಾರ್ಯ ನಡೆದಿದೆ ಎಂದು ತೃಪ್ತಿ ವ್ಯಕ್ತಪಡಿಸಿದರು. ಅಲ್ಲದೆ ಭವಿಷ್ಯದಲ್ಲೂ ಸಹ ಕೃಷಿ ಸಮುದಾಯ ಮತ್ತು ಗ್ರಾಮೀಣ ಭಾರತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಗುರಿ ಸಾಧನೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಲಿವೆ ಎಂದರು. ದೇಶದ ರೈತರು ಮತ್ತು ಗ್ರಾಮೀಣ ಆರ್ಥಿಕತೆ ಯಾವುದೇ ರೀತಿಯ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಹ ದೇಶವನ್ನು ಕೈಬಿಟ್ಟಿಲ್ಲ ಎಂಬುದಕ್ಕೆ ಇತಿಹಾಸವೇ ಸಾಕ್ಷಿ ಎಂದು ಅವರು ಹೇಳಿದರು.

ವಿವರಗಳಿಗೆ : https://pib.gov.in/PressReleseDetail.aspx?PRID=1642821

ಶ್ರೀ ನಿತಿನ್ ಗಡ್ಕರಿ ಅವರಿಂದ ರೇಷ್ಮೆ ಮಾಸ್ಕ್ ಗಳ ಖಾದಿ ಗಿಫ್ಟ್ ಬಾಕ್ಸ್ ಬಿಡುಗಡೆ

ನೀವು ಇದೀಗ ನಿಮ್ಮ ಕುಟುಂಬದವರಿಗೆ ಮತ್ತು ಗೆಳೆಯರಿಗೆ ವಿಶೇಷ ಖಾದಿ ರೇಷ್ಮೆಯ ಮುಖಗವಸುಗಳನ್ನು ಆಕರ್ಷಕ ಗಿಪ್ಟ್ ಬಾಕ್ಸ್ ಮೂಲಕ ಉಡುಗೊರೆ ನೀಡಬಹುದಾಗಿದೆ. ಕೇಂದ್ರ ಎಂಎಸ್ಎಂಇ ಸಚಿವ ಶ್ರೀ ನಿತಿನ್ ಗಡ್ಕರಿ ನಿನ್ನೆ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ(ಕೆವಿಐಸಿ) ಸಿದ್ಧಪಡಿಸಿರುವ ಗಿಫ್ಟ್ ಬಾಕ್ಸ್ ಗಳನ್ನು ಬಿಡುಗಡೆ ಮಾಡಿದರು. ಈ ಗಿಫ್ಟ್ ಬಾಕ್ಸ್ ನಲ್ಲಿ ನಾನಾ ಬಣ್ಣಗಳು ಮತ್ತು ಪ್ರಿಂಟ್ ಗಳಿರುವ ನಾಲ್ಕು ಮಾಸ್ಕ್ ಗಳಿರಲಿವೆ. ಈ ಮಾಸ್ಕ್ ಗಳನ್ನು ಕೈಯಿಂದ ಮಾಡಲ್ಪಟ್ಟಿರುವ ಸುಂದರ, ಅತ್ಯಾಕರ್ಷಕ ಕಪ್ಪು ಬಣ್ಣದ ಪೇಪರ್ ಬಾಕ್ಸ್ ನಲ್ಲಿ ಪ್ಯಾಕ್ ಮಾಡಲಾಗಿದ್ದು, ಅದರ ಮೇಲೆ ಚಿನ್ನದ ಎಂಬೋಸ್ಡ್  ಪ್ರಿಂಟಿಂಗ್ ಇರಲಿದೆ.

ವಿವರಗಳಿಗೆ : https://pib.gov.in/PressReleseDetail.aspx?PRID=1642829

ಪಿ ಬಿ ಪ್ರಾದೇಶಿಕ ಕಚೇರಿಗಳ ಮಾಹಿತಿ

  • ಚಂಡಿಗಢ: ಚಂಡಿಗಢ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ, ಕೋವಿಡ್ ಸೋಂಕಿತ ವ್ಯಕ್ತಿಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಎಲ್ಲ ಪ್ರಯತ್ನಗಳನ್ನು ನಡೆಸಲಾಗಿದೆ. ಮೂಲಕ ಸೋಂಕಿತ ವ್ಯಕ್ತಿಗೆ ಸೂಕ್ತ ಚಿಕಿತ್ಸೆ ಕೊಡಿಸಲಾಗುವುದು ಎಂದು ಹೇಳಿದ್ದಾರೆ. ಸೋಂಕಿತ ವ್ಯಕ್ತಿಗಳನ್ನು ಪತ್ತೆಹಚ್ಚಲು ಸ್ವಯಂಸೇವಕರು ನಾಗರಿಕ ಕಲ್ಯಾಣ ಸಂಘಗಳ ಸಹಾಯ ಪಡೆಯುವಂತೆ ಅವರು ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ. ಹೊರ ರಾಜ್ಯಗಳಿಂದ ಯಾವೊಬ್ಬ ಸೋಂಕಿತ ವ್ಯಕ್ತಿ ರಾಜ್ಯದೊಳಗೆ ಬರದಂತೆ ಕಠಿಣ ರೀತಿಯಲ್ಲಿ ನಿಯಮಾವಳಿಗಳನ್ನು ಜಾರಿಗೊಳಿಸುವಂತೆ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
  • ಪಂಜಾಬ್ : ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಪೌಷ್ಠಿಕಾಂಶ ಪೇಯವರ್ಕಾ ಹಲ್ದಿ ದೂದ್’, ಅನ್ನು ಬಿಡುಗಡೆ ಮಾಡಿದ್ದಾರೆ. ಇದು ಕೋವಿಡ್-19 ಸಾಂಕ್ರಾಮಿಕದ ಸಂದರ್ಭದಲ್ಲಿ ಜನರ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಸದ್ಯದಲ್ಲೇ ಪೇಯ ಗ್ರಾಹಕರ ಅತ್ಯಂತ ಜನಪ್ರಿಯ ಪೇಯ ಆಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕೊರೊನಾ ಸಾಂಕ್ರಾಮಿಕದ ವಿರುದ್ಧ ಹೋರಾಡಲು ರೋಗ ನಿರೋಧಕ ಶಕ್ತಿ ವೃದ್ಧಿ ಮತ್ತು ಆರೋಗ್ಯವಾಗಿರಲು ಪರ್ಯಾಯ ಮಾರ್ಗಗಳತ್ತ ಯೋಚಿಸುತ್ತಿರುವ ಜನರು ಇದನ್ನು ಸೇವಿಸಲಿದ್ದಾರೆ ಎಂದು ಹೇಳಿದ್ದಾರೆ.
  • ಮಹಾರಾಷ್ಟ್ರ: ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮಹಾರಾಷ್ಟ್ರ ಸರ್ಕಾರ, ನಗರ ಪ್ರದೇಶಗಳಿಗೆ ಪ್ರತ್ಯೇಕ ಕೊಳಗೇರಿ ಪುನರ್ ವಸತಿ ಯೋಜನೆಗಳನ್ನು ರೂಪಿಸಲು ಮುಂದಾಗಿದೆ. ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಸರ್ಕಾರಕ್ಕೆ ಕೊಳಗೇರಿ ಕ್ಲಸ್ಟರ್ ಗಳನ್ನು ನಿರ್ವಹಿಸುವುದು ಪ್ರಮುಖ ಸವಾಲಾಗಿ ಪರಿಣಮಿಸಿದೆ. ಮಧ್ಯೆ, ಧಾರಾವಿಯಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಪ್ರಮುಖ ಘಟ್ಟ ತಲುಪಿದ್ದು, ಜುಲೈ 1 ರಂದು ಅಲ್ಲಿ 531 ಸಕ್ರಿಯ ಪ್ರಕರಣಗಳಿದ್ದವು. ಇದೀಗ ಜುಲೈ 31ಕ್ಕೆ ಸಂಖ್ಯೆ 77ಕ್ಕೆ ಇಳಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ 4,22,118 ಸೋಂಕಿತರಿದ್ದು, ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ಶುಕ್ರವಾರ 1.50 ಲಕ್ಷ ದಾಟಿದ್ದು, ಸಂಖ್ಯೆ 1,50,662. 
  • ಗುಜರಾತ್:  ವಿಶ್ವ ಆರೋಗ್ಯ ಸಂಸ್ಥೆ - ಡಬ್ಲ್ಯೂಎಚ್ ಅಹಮದಾಬಾದ್ ನಲ್ಲಿ ಕೋವಿಡ್-19 ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ ಮತ್ತು ಇಲ್ಲಿ ಜಾರಿಗೊಳಿಸಲಾಗಿರುವ ಧನ್ವಂತರಿ ರಥ  ಮತ್ತು 104 ಫೀವರ್ ಹೆಲ್ಪ್ ಲೈನ್, ಸಂಜೀವಿನ ವನ ಇತ್ಯಾದಿ ಹಲವು ಕ್ರಮಗಳನ್ನು ಇಡೀ ಭಾರತಕ್ಕೆ ಮತ್ತು ಇತರ ದೇಶಗಳಿಗೆ ಮಾದರಿಯಾಗಿದೆ ಎಂದು ಇತರೆ ಸರ್ಕಾರಗಳಿಗೆ ಸಲಹೆ ಮಾಡಿದೆ.   ಮಧ್ಯೆ, ರಾಜ್ಯದಲ್ಲಿ ಶನಿವಾರ 1,153 ಹೊಸ ಪ್ರಕರಣ ಪತ್ತೆಯಾಗಿದೆ.
  • ರಾಜಸ್ಥಾನ: ಅನ್ ಲಾಕ್ 3.0 ಮಾರ್ಗಸೂಚಿಗೆ ಅನುಗುಣವಾಗಿ ಅಂತರ್ ರಾಜ್ಯ ಪ್ರಯಾಣ ಮತ್ತು ರಾಜ್ಯದೊಳಗೆ ಸಾರ್ವಜನಿಕರು ಹಾಗೂ ಸರಕುಗಳ ಸಂಚಾರಕ್ಕೆ ಇದ್ದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ರಾತ್ರಿ ಕರ್ಫ್ಯೂ ಕೂಡ ತೆರವುಗೊಳಿಸಲಾಗಿದೆ.
  • ಮಧ್ಯಪ್ರದೇಶ: ರಾಜ್ಯ ಸರ್ಕಾರ ಖಾಸಗಿ ಪ್ರಯೋಗಾಲಯಗಳಲ್ಲಿ ಕೋವಿಡ್-19 ಪರೀಕ್ಷೆಗಳಲ್ಲಿ 1980 ರೂ. ದರ ನಿಗದಿ ಮಾಡಿದೆ. ಮೊದಲು ಸರ್ಕಾರ ಐಸಿಎಂಆರ್ ಮಾರ್ಚ್ 17ರಂದು ಹೊರಡಿಸಿದ್ದ ಆದೇಶಕ್ಕೆ ಅನುಗುಣವಾಗಿ ಪ್ರತಿ ಮಾದರಿಯ ಪರೀಕ್ಷೆಗೆ 4,500 ರೂ. ದರ ನಿಗದಿ ಮಾಡಿತ್ತು. ನಂತರ ದೇಶದಲ್ಲೇ ತಯಾರಿಸಲಾದ ಆರ್ ಟಿ-ಪಿಸಿಆರ್ ಕಿಟ್ ಗಳಿಂದಾಗಿ ದರವನ್ನು ಕಡಿತಗೊಳಿಸಲಾಗಿತ್ತು. ಇದೀಗ 1980 ರೂ. ನಿಗದಿ ಮಾಡಲಾಗಿದ್ದು, ಇದರಲ್ಲಿ ಮಾದರಿ ಸಂಗ್ರಹ, ಪ್ಯಾಕೇಜಿಂಗ್ ಮತ್ತು ವರದಿ ವೆಚ್ಚಗಳೂ ಸಹ ಸೇರಿವೆ.
  • ಗೋವಾ: ಗೋವಾದಲ್ಲಿ ಶುಕ್ರವಾರ 209 ಹೊಸ ಕೋವಿಡ್-19 ಪ್ರಕರಣಗಳು ಪತ್ತೆಯಾಗಿದ್ದು, ಅದರೊಂದಿಗೆ ರಾಜ್ಯದಲ್ಲಿ ಒಟ್ಟು ಸೋಂಕಿತರ ಪ್ರಮಾಣ 5,913ಕ್ಕೆ ಏರಿಕೆಯಾಗಿದೆ. ಅವುಗಳಲ್ಲಿ 1657 ಸಕ್ರಿಯ ಪ್ರಕರಣಗಳು ಮತ್ತು 4,211 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ಸಾವಿನ ಪ್ರಮಾಣ 45.
  • ಕೇರಳ: ರಾಜ್ಯದಲ್ಲಿ ಇಂದು ಐದು ಕೋವಿಡ್-19 ಸಾವುಗಳು ಸಂಭವಿಸಿವೆ. ಇದರಲ್ಲಿ ಪೊಲೀಸ್ ಸಿಬ್ಬಂದಿಯ ಪೈಕಿ ರಾಜ್ಯದ ಕೊಟ್ಟಾಯಮ್ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿಶೇಷ ವಿಭಾಗದ ಓರ್ವ ಸಬ್ ಇನ್ಸ್ ಪೆಕ್ಟರ್ ಕೂಡ ಸೇರಿದ್ದಾರೆ. ಪೊಲೀಸ್ ಸಿಬ್ಬಂದಿಯಲ್ಲಿ ಇದು ಮೊದಲ ಕೋವಿಡ್ ಸಾವಾಗಿದೆ. 50 ವರ್ಷ ಮೇಲ್ಪಟ್ಟ ಮತ್ತು ಯಾವುದೇ ಅನಾರೋಗ್ಯದಿಂದ ಬಳಲುತ್ತಿರುವ ಅಧಿಕಾರಿಗಳನ್ನು ಕೋವಿಡ್ ಕರ್ತವ್ಯಕ್ಕೆ ನಿಯೋಜಿಸಬಾರದು ಎಂದು ಡಿಜಿಪಿ ಎಲ್ಲ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ. ರಾಜ್ಯದಲ್ಲಿ ಈವರೆಗೆ ಒಟ್ಟು 88 ಪೊಲೀಸ್ ಅಧಿಕಾರಿಗಳಿಗೆ ಕೋವಿಡ್-19 ಸೋಂಕು ತಗುಲಿದೆ. ಮಧ್ಯೆ, ತಿರುವನಂತಪುರದ ಪೊಲೀಸ್ ಕೇಂದ್ರ ಕಚೇರಿಯನ್ನು ಶುಚಿಗೊಳಿಸಲು ಹಾಗೂ ಸ್ಯಾನಿಟೈಸ್ ಮಾಡಲು ಎರಡು ದಿನ ಮುಚ್ಚಲಾಗಿದೆ. ಕೇರಳದಲ್ಲಿ ನಿನ್ನೆ 1310 ಹೊಸ ಪ್ರಕರಣಗಳು ಪತ್ತೆಯಾಗಿವೆ. ಪೈಕಿ 1162 ಸಂಪರ್ಕಗಳಿಂದಾಗಿ ಬಂದಿರುವಂತಹ ಸೋಂಕು. 10,495 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.  1.43 ಲಕ್ಷ ಜನರು ರಾಜ್ಯದಲ್ಲಿ ನಿಗಾದಲ್ಲಿದ್ದಾರೆ.
  • ತಮಿಳುನಾಡು: ಪುದುಚೆರಿಯಲ್ಲಿ ಶನಿವಾರ ಕೋವಿಡ್-19 ಸೋಂಕಿಗೆ ಇಬ್ಬರು ಬಲಿಯಾಗುವುದರೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಹೊಸದಾಗಿ 139 ಪ್ರಕರಣಗಳು ಪತ್ತೆಯಾಗಿವೆ. ಇದರಿಂದಾಗಿ ಕೇಂದ್ರಾಡಳಿತ ಪ್ರದೇಶದಲ್ಲಿ ಸೋಂಕಿತರ ಪ್ರಮಾಣ 3,593ಕ್ಕೆ ಏರಿಕೆಯಾಗಿದ್ದು, ಅದರಲ್ಲಿ  1,357 ಸಕ್ರಿಯ ಪ್ರಕರಣಗಳು. ತಮಿಳುನಾಡಿನಲ್ಲಿ ಸಂಭವಿಸಿದ ಶೇ.82ರಷ್ಟು ಕೋವಿಡ್ ಸಾವುಗಳಿಗೆ ಅನಾರೋಗ್ಯ ಕಾರಣವಾಗಿದೆ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದಾಗಿ ಜುಲೈ 29 ವರೆಗೆ ಶೇ.33.36ರಷ್ಟು ಸಾವು ಸಂಭವಿಸಿವೆ. ತಮಿಳುನಾಡಿನಲ್ಲಿ 5,881 ಹೊಸ ಕೋವಿಡ್-19 ಪ್ರಕರಣಗಳು ಶುಕ್ರವಾರ ಪತ್ತೆಯಾಗಿವೆ. ಇದರಿಂದಾಗಿ ಒಟ್ಟ ಸೋಂಕಿತರ ಸಂಕ್ಯೆ 2,45,859ಕ್ಕೆ ಏರಿಕೆಯಾಗಿದೆ. ಪೈಕಿ 57,968 ಸಕ್ರಿಯ ಪ್ರಕರಣಗಳಿವೆ. ನಿನ್ನೆ 97 ಮಂದಿ ಸಾವನ್ನಪ್ಪಿದ್ದು, ಸಾವನ್ನಪ್ಪಿರುವವರ ಸಂಖ್ಯೆ 3935.
  • ಕರ್ನಾಟಕ:  ಬಿಬಿಎಂಪಿ ಶೇ. 50ರಷ್ಟು ಹಾಸಿಗೆಗಳನ್ನು ನೀಡದ 4 ಆಸ್ಪತ್ರೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಪ್ರಕರಣವನ್ನು ದಾಖಲಿಸಿದೆ. ಕರ್ನಾಟಕದ ಕೃಷಿ ಸಚಿವರು, ಪತ್ನಿ ಹಾಗೂ ಅಳಿಯನಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಬೆಂಗಳೂರಿನ ಕೆ.ಆರ್. ಮಾರುಕಟ್ಟೆ ಆಗಸ್ಟ್ 31 ವರೆಗೆ ಮುಚ್ಚಲ್ಪಟ್ಟಿರುತ್ತದೆ. ನಿನ್ನೆ ಹೊಸದಾಗಿ 5483 ಪ್ರಕರಣಗಳು ದೃಢಪಟ್ಟಿದ್ದು, 3130 ಮಂದಿ ಬಿಡುಗಡೆಯಾಗಿದ್ದಾರೆ ಮತ್ತು 84 ಸಾವು ಸಂಭವಿಸಿವೆ. ಬೆಂಗಳೂರು ನಗರದಲ್ಲಿ 2220 ಪ್ರಕರಣ ವರದಿಯಾಗಿವೆ. ಒಟ್ಟು ಪ್ರಕರಣಗಳೂ 1,24,115;  ಸಕ್ರಿಯ ಪ್ರಕರಣಗಳು: 72,005; ಸಾವು: 2314; ಗುಣಮುಖರಾದವರು: 49,788.
  • ಆಂಧ್ರಪ್ರದೇಶ: ಕೇಂದ್ರ ಸರ್ಕಾರ ಅನ್ ಲಾಕ್ 3.0 ಮಾರ್ಗಸೂಚಿಗಳನ್ನು ಹೊರಡಿಸಿರುವ ಹಿನ್ನೆಲೆಯಲ್ಲಿ ಅಂತರ್ ರಾಜ್ಯ ಪ್ರಯಾಣ ಸ್ವಲ್ಪ ಸಡಿಲಗೊಳಿಸಲಾಗಿದೆ. ಆಂಧ್ರಪ್ರದೇಶಕ್ಕೆ ಆಗಮಿಸುವ ಜನರು ಸ್ಪಂದನಾ ವೆಬ್ ಸೈಟ್ ನಲ್ಲಿ ತಮ್ಮ ಹೆಸರು ನೋಂದಾಯಿಸಬೇಕಿದೆ ಮತ್ತು ಅವರ ಮೊಬೈಲ್ ಮತ್ತು -ಮೇಲ್ ಗೆ ಸ್ವಯಂಚಾಲಿತ -ಪಾಸ್ ಗಳನ್ನು ಕಳುಹಿಸಲಾಗುವುದು. ಮಾಜಿ ಮಂತ್ರಿ ಹಾಗೂ ಬಿಜೆಪಿ ನಾಯಕ ಪೈದಿಕೊಂಡಾಲ ಮಾನಿಕ್ಯಾಲ ರಾವ್ ಇಂದು ವಿಜಯವಾಡದಲ್ಲಿ ಕೋವಿಡ್-19ನಿಂದಾಗಿ ಸಾವನ್ನಪ್ಪಿದ್ದಾರೆ. ಅವರು ಕಳೆದ ಕೆಲವು ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುಂಟೂರಿನ ಮಂಗಳಗಿರಿ ನಗರದ ಹೆಸರಾಂತ ಶ್ರೀ ಲಕ್ಷ್ಮೀನರಸಿಂಹ ದೇವಾಲಯ ಸಿಬ್ಬಂದಿಯೊಬ್ಬರಿಗೆ ಕೋವಿಡ್-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಇಂದಿನಿಂದ ಆರು ದಿನಗಳ ಕಾಲ ದೇವಾಲಯದಲ್ಲಿ ಭಕ್ತರಿಗೆ ದರ್ಶನವನ್ನು ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ನಿನ್ನೆ 10,376 ಹೊಸ ಪ್ರಕರಣಗಳು ದೃಢಪಟ್ಟಿದ್ದು, 3822 ಗುಣಮುಖರಾಗಿದ್ದಾರೆ ಮತ್ತು 68 ಸಾವು ಸಂಭವಿಸಿವೆ. ಒಟ್ಟು ಪ್ರಕರಣ - 1,40,933; ಸಕ್ರಿಯ ಪ್ರಕರಣ - 75,720, ಸಾವು- 1349.
  • ತೆಲಂಗಾಣ: ತೆಲಂಗಾಣದಲ್ಲಿ ಕೋವಿಡ್ ನಿಂದಾಗಿ ಸಂಭವಿಸಿರುವ ಸಾವುಗಳ ಪೈಕಿ ಶೇಕಡ ಅರ್ಧದಷ್ಟು ಜನರಿಗೆ ಇತರೆ ಕಾಯಿಲೆಗಳು ಇರಲಿಲ್ಲ ಎಂದು ರಾಜ್ಯ ಸರ್ಕಾರ ನೀಡಿರುವ ಅಂಕಿ-ಅಂಶಗಳಿಂದ ತಿಳಿದುಬಂದಿದೆ. ಆಗಸ್ಟ್ 5 ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಕೊರೊನಾ ಸೋಂಕು ನಿಯಂತ್ರಣ ಕುರಿತಂತೆ ಕೈಗೊಂಡಿರುವ ಕ್ರಮಗಳ ಚರ್ಚೆ ನಡೆಯುವ ಸಾಧ್ಯತೆ ಇದೆ ಮತ್ತು ಕೊರೊನಾ ಹಿನ್ನೆಲೆಯಲ್ಲಿ ಶಿಕ್ಷಣದಲ್ಲಿ ಅನುಷ್ಠಾನಗೊಳಿಸಿರುವ ಕ್ರಮಗಳ ಬಗ್ಗೆ ಚರ್ಚೆ ನಡೆಯಲಿದೆ. ಕಳೆದ 24 ಗಂಟೆಗಳಲ್ಲಿ 2083 ಹೊಸ ಪ್ರಕರಣ, 1114 ಮಂದಿ ಗುಣಮುಖ ಹಾಗೂ 11 ಸಾವು ಸಂಭವಿಸಿವೆ 2083 ಪ್ರಕರಣಗಳಲ್ಲಿ 578 ಪ್ರಕರಣ ಜಿಎಚ್ ಎಂಸಿಯಲ್ಲಿ ವರದಿಯಾಗಿವೆ. ಒಟ್ಟು ಪ್ರಕರಣಗಳು - 64,786; ಸಕ್ರಿಯ ಪ್ರಕರಣ- 17,754; ಸಾವು -530; ಬಿಡುಗಡೆ - 46,502.
  • ಅರುಣಾಚಲ ಪ್ರದೇಶ : ಅರುಣಾಚಲಪ್ರದೇಶದಲ್ಲಿ 107 ಹೊಸ ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ಪೈಕಿ ಚಾಂಗ್ ಲಾಂಗ್ ನಲ್ಲಿ 38 ಮತ್ತು ಇಟಾನಗರದ ರಾಜಧಾನಿ ವಲಯದಲ್ಲಿ 22(ಐಸಿಆರ್) ಪ್ರಕರಣ ವರದಿಯಾಗಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳು 670. ಈವರೆಗೆ ಅರುಣಾಚಲಪ್ರದೇಶದಲ್ಲಿ 1591 ಪ್ರಕರಣ ದಾಖಲಾಗಿದ್ದು, 918 ಮಂದಿ ಗುಣಮುಖರಾಗಿದ್ದಾರೆ ಮತ್ತು 3 ಸಾವು ಸಂಭವಿಸಿವೆ. ರಾಜ್ಯದಲ್ಲಿ ಈವರೆಗೆ 81,865 ಮಂದಿಯನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ.
  • ಅಸ್ಸಾಂ: ಪ್ರತಿದಿನದ ಕೋವಿಡ್-19 ಪರೀಕ್ಷಾ ಪ್ರಮಾಣ ಹೆಚ್ಚಾಗಿದ್ದು, ಜುಲೈ 1ರಂದು 2112 ಇದ್ದದ್ದು ಜುಲೈ 31ಕ್ಕೆ 6240ಕ್ಕೆ ಏರಿಕೆಯಾಗಿದೆ. ಜುಲೈ 4ರಂದು ಒಟ್ಟು ಸಕ್ರಿಯ  ಪ್ರಕರಣಗಳು 777 ಇದ್ದವು, ಜುಲೈ 31ಕ್ಕೆ ಸಂಖ್ಯೆ 281 ಇತ್ತು.
  • ಮಣಿಪುರ: ಮಣಿಪುರದಲ್ಲಿ 6ನೇ ಕೋವಿಡ್ ಸಂಬಂಧಿ ಸಾವು ಸಂಭವಿಸಿದೆ. ರೋಗಿ ಮಧುಮೇಹ ಮತ್ತು ಹೆಪಟಿಟಿಸ್ ನಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
  • ಮಿಝೋರಾಂ: ಮಿಝೋರಾಂನಲ್ಲಿ ಸೆರ್ ಚಿಪ್ ಬ್ಯಾಟಾಲಿಯನ್  ಆಫ್ ಅಸ್ಸಾಂ ರೈಫಲ್ಸ್ ಝಾವ್ಲಸೈನಲ್ಲಿ ಕೋವಿಡ್ -19 ಜಾಗೃತಿ ಕಾರ್ಯಕ್ರಮ ನಡೆದಿದರು, ಅದರಲ್ಲಿ 42 ಮಂದಿ ಪಾಲ್ಗೊಂಡಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ನಿಗದಿತವಾಗಿ ಕೈ ತೊಳೆಯುವ ಕುರಿತು ಜಾಗೃತಿ ಮೂಡಿಸಲಾಯಿತು.
  • ನಾಗಾಲ್ಯಾಂಡ್: , ನಾಗಾಲ್ಯಾಂಡ್ ನಲ್ಲಿ 552 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವುಗಳಲ್ಲಿ 130 ಹೊಸ ಕೋವಿಡ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಪೈಕಿ ಧಿಮಾಪುರದಲ್ಲಿ 109, ಕೊಹಿಮಾದಲ್ಲಿ 21 ಪ್ರಕರಣ ವರದಿಯಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 1823 ತಲುಪಿದೆ.
  • ಸಿಕ್ಕಿಂ: 11 ಹೊಸ ಕೋವಿಡ್ -19 ಪ್ರಕರಣಗಳೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ ಸಿಕ್ಕಿಂನಲ್ಲಿ 400 ತಲುಪಿದೆ.

 

 ImageImage

***



(Release ID: 1643089) Visitor Counter : 403