ಕಲ್ಲಿದ್ದಲು ಸಚಿವಾಲಯ

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ - ಛತ್ತೀಸ್‌ಘಢದಲ್ಲಿ ಬೆಳವಣಿಗೆಯ ಹೊಸ ಯುಗದ ಆರಂಭ: ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಹ್ಲಾದ್ ಜೋಶಿ

Posted On: 31 JUL 2020 5:58PM by PIB Bengaluru

ವಾಣಿಜ್ಯ ಕಲ್ಲಿದ್ದಲು ಹರಾಜಿನಲ್ಲಿ ಇತರ ಮೂರು ಹೊಸ ಗಣಿಗಳನ್ನು ಐದು ಗಣಿಗಳಿಗೆ ಬದಲಾಯಿಸುವಂತೆ ಛತ್ತೀಸ್ ಸರ್ಕಾರ ಮಾಡಿರುವ ಸಲಹೆಯನ್ನು ಕಲ್ಲಿದ್ದಲು ಸಚಿವಾಲಯ ಒಪ್ಪಿಕೊಂಡಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವ ಶ್ರೀ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ. ಪ್ರಸ್ತುತ ಛತ್ತೀಸ್ಢದ ಒಂಭತ್ತು ಗಣಿಗಳನ್ನು ವಾಣಿಜ್ಯ ಹರಾಜಿಗೆ ಇಡಲಾಗಿದೆ. ಶ್ರೀ ಜೋಶಿ ಅವರು ರಾಯ್ಪುರದಲ್ಲಿ ಮುಖ್ಯಮಂತ್ರಿ ಶ್ರೀ ಭೂಪೇಶ್ ಬಘೇಲ್  ಅವರೊಂದಿಗೆ ನಡೆಸಿದ  ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ವಿಷಯ ತಿಳಸಿದರು.

ಸಭೆಯು ಸಕಾರಾತ್ಮಕ, ಪ್ರಗತಿಪರ ಮತ್ತು ಮುಕ್ತ ಮನಸ್ಸಿನದಾಗಿತ್ತು. ರಾಜ್ಯದ ಕಲ್ಲಿದ್ದಲು ಮತ್ತು ಇತರ ಖನಿಜಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ. ಮುಖ್ಯಮಂತ್ರಿಯವರು ಜಿಲ್ಲಾ ಖನಿಜ ನಿಧಿ ಮತ್ತು ಎನ್ಎಂಇಟಿ ಕುರಿತು ಕೆಲವು ಉತ್ತಮ ಸಲಹೆಗಳನ್ನು ನೀಡಿದ್ದಾರೆ, ಅವುಗಳನ್ನು ನಾವು ಸಕಾರಾತ್ಮಕವಾಗಿ ಪರಿಗಣಿಸುತ್ತೇವೆ. ” ಎಂದು  ಶ್ರೀ ಜೋಶಿ ಹೇಳಿದರು.

ಛತ್ತೀಸ್ಢದ ಪೂರ್ವ ರೈಲ್ವೆ ಲಿಮಿಟೆಡ್ (ಸಿಇಆರ್ಎಲ್) ರೈಲ್ವೆ ಮಾರ್ಗವನ್ನು ಸ್ಥಳಾಂತರಿಸಲು ಸಿಐಎಲ್, ಛತ್ತೀಸ್ ಸರ್ಕಾರ ಮತ್ತು MAHAGENCO ಅಧಿಕಾರಿಗಳನ್ನು ಒಳಗೊಂಡ ಸಮಿತಿಯಿಂದ 15 ದಿನಗಳಲ್ಲಿ ಪ್ರಸ್ತಾವನೆಯನ್ನು ಪಡೆಯಲು ನಿರ್ಧರಿಸಲಾಯಿತು. ಹಾರು ಬೂದಿಯನ್ನು ರಾಶಿ ಹಾಕಲು ಗಣಿಗಾರಿಕೆ ಮಾಡಿರುವ  ಭೂಮಿಯನ್ನು ಬಳಸುವುದಕ್ಕಾಗಿ ಸಿಎಂಪಿಡಿಐ ಮತ್ತು ಛತ್ತೀಸ್ಗಢ ಸರ್ಕಾರದ ಅಧಿಕಾರಿಗಳು ಒಂದು ತಿಂಗಳಲ್ಲಿ ಪ್ರಸ್ತಾವನೆಯನ್ನು ಸಲ್ಲಿಸಲಿದ್ದಾರೆ. ಕಲ್ಲಿದ್ದಲಿನ ಚಿಲ್ಲರೆ ಗ್ರಾಹಕರಿಗೆ ಕಲ್ಲಿದ್ದಲು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ರಾಜ್ಯವು ನೋಡಲ್ ಏಜೆನ್ಸಿಯನ್ನು ರಚಿಸಲಿದೆ. ರಾಜ್ಯದಲ್ಲಿ ಕಲ್ಲಿದ್ದಲಿಗೆ ಸಂಬಂಧಿಸಿದ ಸಣ್ಣ ಅಪರಾಧಗಳನ್ನು ತಡೆಗಟ್ಟುವ ಬಗ್ಗೆಯೂ ಚರ್ಚಿಸಲಾಯಿತು ಎಂದರು.

ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಪ್ರಾರಂಭಿಸುವುದರಿಂದ ಛತ್ತೀಸ್ಗಢದಲ್ಲಿ ಪ್ರಗತಿ ಮತ್ತು ಅಭಿವೃದ್ಧಿಯ ಹೊಸ ಯುಗ ಆರಂಭವಾಗಲಿದೆ ಎಂದು ಕೇಂದ್ರ ಸಚಿವರು ಹೇಳಿದರು. ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯಿಂದ ರಾಜ್ಯವು ಒಂದು ವರ್ಷದಲ್ಲಿ ಕನಿಷ್ಠ  4,400 ಕೋಟಿ ರೂ. ಆದಾಯ ಮತ್ತು ಕನಿಷ್ಠ 2000 ಕೋಟಿ ರೂ. ಹೆಚ್ಚುವರಿ ಪ್ರೀಮಿಯಂ ಗಳಿಸಲಿದೆ. ಇದು ರಾಜ್ಯದ ಜನರಿಗೆ ಸುಮಾರು 60,000 ಹೆಚ್ಚುವರಿ ಉದ್ಯೋಗವನ್ನು ಸೃಷ್ಟಿಸುತ್ತದೆ. ಹೆಚ್ಚುವರಿಯಾಗಿ, ಕಲ್ಲಿದ್ದಲು ಪ್ರದೇಶಗಳ ಸುತ್ತಮುತ್ತಲಿನ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಬಳಸಬಹುದಾದ ರಾಜ್ಯದ ವಿವಿಧ ಜಿಲ್ಲಾ ಖನಿಜ ಪ್ರತಿಷ್ಠಾನ (ಡಿಎಂಎಫ್) ನಿಧಿಗೆ 25 ಕೋಟಿ ರೂ. ಗಳನ್ನು ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆಯು ನೀಡಲಿದೆ ಎಂದರು.

ಸಚಿವರು ಎಸ್ಇಸಿಎಲ್ಕಂಪನಿಯ ಉನ್ನತ ಅಧಿಕಾರಿಗಳೊಂದಿಗೆ ಅದರ ಕಾರ್ಯಕ್ಷಮತೆಯನ್ನು ಪರಿಶೀಲಿಸಿದರು ಮತ್ತು ರೈಲ್ವೆ ಅಧಿಕಾರಿಗಳೊಂದಿಗೆ ಕಲ್ಲಿದ್ದಲು ಸ್ಥಳಾಂತರಿಸುವ ವಿಷಯಗಳ ಬಗ್ಗೆ ಚರ್ಚಿಸಿದರು. ಕಳೆದ ಕೆಲವು ತಿಂಗಳುಗಳಿಂದ ದೇಶವು ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವಾಗಲೂ ಕಲ್ಲಿದ್ದಲು ಯೋಧರು ಮಾಡಿದ ಕಠಿಣ ಪರಿಶ್ರಮದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಅಲ್ಲದೆ, ಸಚಿವರು ಮೆದು ಕಬ್ಬಿಣ ಮತ್ತು ಉಕ್ಕಿನ ಉದ್ಯಮದ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು ಮತ್ತು ಕ್ಷೇತ್ರಕ್ಕೆ ಸಂಬಂಧಿಸಿದ ವಿವಿಧ ವಿಷಯಗಳ ಬಗ್ಗೆ ಅವರ ಅಭಿಪ್ರಾಯಗಳನ್ನು ಪಡೆದುಕೊಂಡರು.

ಛತ್ತೀಸ್ಗಢದಲ್ಲಿ ಕಲ್ಲಿದ್ದಲು ಗಣಿಗಾರಿಕೆಯ ಮಹತ್ವದ ಬಗ್ಗೆ ಮಾತನಾಡಿದ ಅವರು, ರಾಜ್ಯವು ಏಷ್ಯಾದಲ್ಲಿಯೇ ಅತಿದೊಡ್ಡ ಕಲ್ಲಿದ್ದಲು ಗಣಿ ಹೊಂದಿದೆ ಮತ್ತು ಇದು ದೇಶದ ವಿದ್ಯುತ್ ಬೇಡಿಕೆಗಳನ್ನು ಈಡೇರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು. ಕಲ್ಲಿದ್ದಲು ಗಣಿಗಾರಿಕೆ ಛತ್ತೀಸ್ಗಢದ ಪ್ರಗತಿ ಮತ್ತು ಅಭಿವೃದ್ಧಿಯ ಆಕಾಂಕ್ಷೆಗಳನ್ನು ಈಡೇರಿಸುವಲ್ಲಿ ಸಹಾಯ ಮಾಡುತ್ತದೆ. ಕಳೆದ 4 ವರ್ಷಗಳಲ್ಲಿ ಎಸ್ಇಸಿಎಲ್ನಿಂದ ರಾಜ್ಯಕ್ಕೆ 13,200 ಕೋಟಿ ರೂ. ತೆರಿಗೆ ನೀಡಿದೆ. ಇದಲ್ಲದೆಕಲ್ಲಿದ್ದಲು ಉತ್ಪಾದನೆಯ ಹೆಚ್ಚಳದೊಂದಿಗೆ, ಎಸ್ಇಸಿಎಲ್ ಮುಂದಿನ 4 ವರ್ಷಗಳಲ್ಲಿ ರಾಜ್ಯದ ಬೊಕ್ಕಸಕ್ಕೆ  ಸುಮಾರು 22,900 ಕೋಟಿ ರೂ. ತೆರಿಗೆ ಪಾವತಿಸಲಿದೆ. ಎಸ್ಇಸಿಎಲ್ ಹಿಡುವಳಿ ಕಂಪನಿ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಮುಂದಿನ 4 ವರ್ಷಗಳಲ್ಲಿ ಛತ್ತೀಸ್ಗಢದಲ್ಲಿ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು 26,000 ಕೋಟಿ ರೂ.ಗಳ ಬಂಡವಾಳ ವೆಚ್ಚದ ಯೋಜನೆ ರೂಪಿಸಿದೆ ಎಂದು ಶ್ರೀ ಪ್ರಹ್ಲಾದ್ ಜೋಷಿ ತಿಳಿಸಿದರು.

ತ್ವರಿತ ಮತ್ತು ಸುಗಮ ಕಲ್ಲಿದ್ದಲು ಸಾಗಾಟಕ್ಕಾಗಿ ಹೊಸ ಮೂಲಸೌಕರ್ಯಗಳನ್ನು ನಿರ್ಮಿಸುವಲ್ಲಿ ಸರ್ಕಾರದ ಪ್ರಯತ್ನಗಳ ಬಗ್ಗೆ ತಿಳಿಸಿದ ಶ್ರೀ ಜೋಶಿ, ಎಸ್ಇಸಿಎಲ್, ಐಆರ್ಸಿಒಎನ್ ಮತ್ತು ಸಿಎಸ್ಐಡಿಸಿ ಜಂಟಿ ಉದ್ಯಮವಾದ ಛತ್ತೀಸ್ಗಢ ಪೂರ್ವ ರೈಲ್ವೆ ಲಿಮಿಟೆಡ್ (ಸಿಇಆರ್ಎಲ್) ರೈಲು ಕಾರಿಡಾರ್ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ಹೇಳಿದರು.

ಸಿಇಆರ್ಎಲ್ ರೈಲು ಕಾರಿಡಾರ್ ದೇಶದ ಹೆಚ್ಚುತ್ತಿರುವ ಕಲ್ಲಿದ್ದಲು ಅಗತ್ಯತೆಗಳನ್ನು ಪೂರೈಸಲು ಕಲ್ಲಿದ್ದಲು ಸಾಗಾಟಕ್ಕೆ ಎದುರಾಗಿದ್ದ ಲಾಜಿಸ್ಟಿಕ್ ಸವಾಲುಗಳನ್ನು ಎದುರಿಸಲಿದೆ ಮತ್ತು ಪ್ರದೇಶದಲ್ಲಿ ಪ್ರಯಾಣಿಕರ ರೈಲು ಸಂಪರ್ಕವನ್ನು ಒದಗಿಸಲು ಸಹ ಉದ್ದೇಶಿಸಲಾಗಿದೆ. ಕಾರಿಡಾರ್ ಒಟ್ಟು 193 ಕಿಲೋಮೀಟರ್ ಉದ್ದವನ್ನು ಹೊಂದಿದೆ ಮತ್ತು ಇದನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮೊದಲ ಹಂತವು ಖಾರ್ಸಿಯಾದಿಂದ ಧರ್ಮಜಯಢದವರೆಗಿನ 131 ಕಿಲೋಮೀಟರ್ ಉದ್ದದ ಮಾರ್ಗವಾಗಿದೆ ಮತ್ತು 62 ಕಿಲೋಮೀಟರ್ ಉದ್ದದ ಎರಡನೇ ಹಂತವು ಕೊರ್ಬಾದೊಂದಿಗೆ ಧರ್ಮಜಯಗಢವನ್ನು ಗಾರೆ-ಪ್ಲಾಮಾ ಕಲ್ಲಿದ್ದಲು ಗಣಿ ನಿಕ್ಷೇಪಕ್ಕೆ ಸಂಪರ್ಕಿಸುತ್ತದೆ. ಮೊದಲ ಹಂತದಲ್ಲಿ, ಖಾರ್ಸಿಯಾದಿಂದ ಕೊರಿಚಾಪರ್ವರೆಗಿನ 43 ಕಿಲೋಮೀಟರ್ ಭಾಗದಲ್ಲಿ ಈಗಾಗಲೇ ಸರಕು ಸಾಗಣೆ ಕಾರ್ಯಚರಣೆ ಆರಂಭಿಸಲಾಗಿದೆ.

***


(Release ID: 1642728)
Read this release in: English , Hindi , Punjabi , Tamil