ಹಣಕಾಸು ಸಚಿವಾಲಯ

ಕತ್ತರಿಸಿದ ಮತ್ತು ಪಾಲೀಷ್ ಗೊಂಡ ವಜ್ರದ ಮರು ಆಮದಿಗೆ 3 ತಿಂಗಳ ವಿಸ್ತರಣೆ

Posted On: 12 JUL 2020 8:22PM by PIB Bengaluru

ಕತ್ತರಿಸಿದ ಮತ್ತು ಪಾಲೀಷ್ ಗೊಂಡ ವಜ್ರದ ಮರು ಆಮದಿಗೆ 3 ತಿಂಗಳ ವಿಸ್ತರಣೆ

 

ಕೋವಿಡ್ -19 ಹಿನ್ನೆಲೆಯಲ್ಲಿ, ಸರ್ಕಾರ ಇಂದು ರತ್ನ ಮತ್ತು ಆಭರಣ ವಲಯಕ್ಕೆ ನಿರಾಳವಾಗುವಂತೆ ವಿದೇಶಗಳಿಗೆ ಪ್ರಮಾಣೀಕರಣ ಮತ್ತು ಶ್ರೇಣೀಕರಣಕ್ಕಾಗಿ ಕಳುಹಿಸಲಾಗಿದ್ದ ಕತ್ತರಿಸಿದ ಮತ್ತು ಪಾಲೀಶ್ ಮಾಡಿದ ವಜ್ರವನ್ನು ಮರು ಆಮದು ಮಾಡಿಕೊಳ್ಳುವ ಅವಶ್ಯಕತೆಗಳಿಗೆ ವಿನಾಯಿತಿ ನೀಡಿದ್ದು, 3 ತಿಂಗಳುಗಳ ಕಾಲ ಅವಧಿ ವಿಸ್ತರಣೆ ಮಾಡಿದೆ.

ನಿರ್ದಿಷ್ಟ ವಿದೇಶೀ ಪ್ರಯೋಗಾಲಯಗಳಿಂದ ಕತ್ತರಿಸಿದ ಮತ್ತು ಪಾಲೀಶ್ ಮಾಡಲಾದ ವಜ್ರಗಳನ್ನು ಸೂಕ್ತ ಪ್ರಮಾಣೀಕರಣ ಮತ್ತು ಶ್ರೇಣೀಕರಣದ ಬಳಿಕ ಮರಳಿ ಪಡೆಯಲು ರಫ್ತುದಾರರಿಗೆ ಈ ವಿಸ್ತರಿತ ಅವಧಿ ಲಭ್ಯವಾಗಲಿದೆ ಎಂದು ಸಿಬಿಐಸಿ ತಿಳಿಸಿದೆ. ಈ ವಿಸ್ತರಣೆಯು 2020ರ ಫೆಬ್ರವರಿ 1ರಿಂದ 2020ರ ಜುಲೈ 31ರೊಳಗೆ ಮರು ಆಮದು ಮಾಡಿಕೊಳ್ಳಬೇಕಾಗಿದ್ದ ಮತ್ತು ಕೋವಿಡ್ ಸಾಂಕ್ರಾಮಿಕದ ಸನ್ನಿವೇಶದಲ್ಲಿ ಅದು ಸಾಧ್ಯವಾಗದ ಎಲ್ಲ ಕತ್ತರಿಸಿದ ಮತ್ತು ಪಾಲೀಶ್ ಮಾಡಲಾದ ವಜ್ರಗಳಿಗೆ ಅನ್ವಯವಾಗುತ್ತದೆ.

ಅಧಿಸೂಚನೆ ಸಂಖ್ಯೆ 09/2012-ಸೀಮಾಸುಂಕ ದಿನಾಂಕ 9ನೇ ಮಾರ್ಚ್ 2012ಕ್ಕೆ ಸೂಕ್ತವಾಗಿ ತಿದ್ದುಪಡಿ ಮಾಡುವ ಮೂಲಕ ಈ ಪರಿಹಾರ ಘೋಷಿಸಲಾಗಿದೆ ಎಂದು ಸಿಬಿಐಸಿ ತಿಳಿಸಿದೆ. ವಿಸ್ತರಿತ ಅವಧಿಯಲ್ಲಿ ಮರು ಆಮದಿಗೆ ಮೂಲ ಸೀಮಾಸುಂಕ (ಬಿಸಿಡಿ) ಮತ್ತು ಐಜಿಎಸ್.ಟಿ. ಪಾವತಿಸುವ ಅಗತ್ಯ ಇರುವುದಿಲ್ಲ. ಈ ಸೌಲಭ್ಯವು ಕಳೆದ ಮೂರು ವರ್ಷಗಳಿಂದ ಸರಾಸರಿ 5 ಕೋಟಿಗಿಂತ ಕಡಿಮೆ ರಫ್ತು ವಹಿವಾಟು ಹೊಂದಿರುವ ರಫ್ತುದಾರರಿಗೆ ಅನ್ವಯವಾಗುತ್ತದೆ.

ವಿದೇಶದಿಂದ ಮರು ಆಮದು ಮಾಡಿಕೊಳ್ಳಲು ಸಾಮಾನ್ಯವಾಗಿ ಅವಕಾಶ ನೀಡಿದ್ದಾಗ್ಯೂ, ಮಹಾಮಾರಿಯ ಕಾರಣದಿಂದಾಗಿ ಮೂರು ತಿಂಗಳುಗಳಿಂದ ವಿದೇಶದಲ್ಲಿ ಸಿಲುಕಿರುವ ಶ್ರೇಣೀಕರಣಗೊಂಡ ಕತ್ತರಿಸಿದ ಮತ್ತು ಪಾಲೀಶ್ ಮಾಡಲಾದ ವಜ್ರಗಳ ರಫ್ತುದಾರರಿಗೆ ಮಾತ್ರ ಈ ಪರಿಹಾರವನ್ನು ನೀಡಲಾಗುತ್ತದೆ ಎಂಬುದನ್ನು ಗಮನಿಸಬಹುದಾಗಿದೆ. ಇಂಥ ದೊಡ್ಡ ಸಂಖ್ಯೆ ಸರಕುಗಳು ಕಸ್ಟಮ್ಸ್ ಅನುಮತಿಗೆ ಕಾಯುತ್ತಿವೆ.

***



(Release ID: 1638268) Visitor Counter : 169