ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ

ಶ್ರೀ ಪಿಯೂಷ್ ಗೋಯಲ್ ಅವರಿಂದ ವ್ಯಾಪಾರಿ ಸಂಘಗಳ ಪ್ರತಿನಿಧಿಗಳ ಭೇಟಿ

Posted On: 29 MAY 2020 9:59AM by PIB Bengaluru

ಶ್ರೀ ಪಿಯೂಷ್ ಗೋಯಲ್ ಅವರಿಂದ ವ್ಯಾಪಾರಿ ಸಂಘಗಳ ಪ್ರತಿನಿಧಿಗಳ ಭೇಟಿ

ಕೋವಿಡ್-19 ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಲಾಕ್ಡೌನ್ ಅವಧಿ ಸದ್ಬಳಕೆ

ಆತ್ಮನಿರ್ಭರ್ ಪ್ಯಾಕೇಜ್ ಅಡಿಯಲ್ಲಿ

ಎಂಎಸ್ಎಂಇಗಳಿಗಾಗಿ ಘೋಷಿಸಲಾದ ಸಾಲದ ಪ್ರಯೋಜನವನ್ನು ಪಡೆಯಲು ವ್ಯಾಪಾರಿಗಳೂ ಕೂಡ ಅರ್ಹರು

ಗರಿಗೆದರುತ್ತಿರುವ ಆರ್ಥಿಕ ಚಟುವಟಿಕೆಗಳು

 

ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಶ್ರೀ ಪಿಯೂಷ್ ಗೋಯಲ್ ಅವರು ವ್ಯಾಪಾರಿ ಸಂಘಗಳ ಪ್ರತಿನಿಧಿಗಳನ್ನು ವಿಡಿಯೋ ಸಂವಾದದ ಮೂಲಕ ಗುರುವಾರ ಮಾತುಕತೆ ನಡೆಸಿದರು. ಲಾಕ್ಡೌನ್ ಅವಧಿಯಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ರಾಷ್ಟ್ರವು ಸಜ್ಜಾಗಿದೆ ಮತ್ತು ಸಾಮರ್ಥ್ಯಗಳನ್ನು ನಿರ್ಮಿಸಿದೆ ಎಂದು ಅವರು ಹೇಳಿದರು. ಸಂರಕ್ಷಣಾ ಸಾಧನಗಳ ದೇಶೀಯ ಉತ್ಪಾದನೆಯು (ಮುಖಗವಸುಗಳು, ಸ್ಯಾನಿಟೈಜರ್ಗಳು, ಕೈಗವಸುಗಳು, ಪಿಪಿಇ ಮುಂತಾದವು) ಉತ್ತೇಜನವನ್ನು ಪಡೆದುಕೊಂಡಿತು, ಆರೋಗ್ಯ ಮೂಲಸೌಕರ್ಯವನ್ನು ಹೆಚ್ಚಿಸಲಾಯಿತು ಮತ್ತು ಜನರಲ್ಲಿ ಜಾಗೃತಿ ಮೂಡಿಸಿತು. ಹಿಂದೆಂದೂ ಕಾಣದಂತ ಬಿಕ್ಕಟ್ಟನ್ನು ಎದುರಿಸಲು ಒಗ್ಗಟ್ಟಿನಿಂದ ಕೆಲಸ ಮಾಡಲು ನೀಡಿದ ಪ್ರಧಾನ ಮಂತ್ರಿಯವರ ಕರೆಗೆ ಜನರು ಸರ್ಕಾರದ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ಅನುಸರಿಸುವ ಮೂಲಕ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು. ಆರೋಗ್ಯಸೇತುವನ್ನು ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದು ಅಂತಹ ಬಿಕ್ಕಟ್ಟಿನಲ್ಲಿ ರಕ್ಷಣಾಕವಚ, ಸ್ನೇಹಿತ ಮತ್ತು ಸಂದೇಶವಾಹಕವಾಗಿ ಕಾರ್ಯನಿರ್ವಹಿಸುತ್ತದೆ. ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಂಡರು ಮತ್ತು ಇಂತಹ ಸನ್ನಿವೇಶಗಳಲ್ಲಿ ವಿಭಿನ್ನವಾಗಿ ಬದುಕಲು, ಕೆಲಸ ಮಾಡಲು, ಅಧ್ಯಯನ ಮಾಡಲು ಹೊಂದಿಕೊಂಡರು. ಹೆಚ್ಚಿನ ಸಂಪನ್ಮೂಲಗಳು ಮತ್ತು ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ವಿಶ್ವದ ಇತರ ರಾಷ್ಟ್ರಗಳಿಗೆ ಹೋಲಿಸಿದರೆ ನಾವು ಉತ್ತಮ ಸ್ಥಾನದಲ್ಲಿರುವುದರಿಂದ ಪ್ರಧಾನಮಂತ್ರಿಯವರ ಸಮಯೋಚಿತ ಮತ್ತು ಸರಿಯಾದ ನಿರ್ಧಾರಗಳು ಮತ್ತು ಜನರು ಅನುಸರಿಸುತ್ತಿರುವುದು ದೇಶಕ್ಕೆ ಸಹಾಯಕವಾಗಿದೆ ಎಂದು ಶ್ರೀ ಗೋಯಲ್ ಹೇಳಿದರು.

ಮಾರ್ಗಸೂಚಿಗಳನ್ನು ಸಡಿಲಿಸಿದ ನಂತರವೂ ಚಿಲ್ಲರೆ ವ್ಯಾಪಾರಿಗಳು ಎದುರಿಸುತ್ತಿರುವ ಕೆಲವು ಕಷ್ಟಗಳ ಬಗ್ಗೆ, ಸಚಿವರು ಅಗತ್ಯ ಮತ್ತು ಅಗತ್ಯವಿಲ್ಲವೆಂಬ ಭೇದವಿಲ್ಲದೆ ಹೆಚ್ಚಿನ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದರು. ಆರೋಗ್ಯ ಸಚಿವಾಲಯದ ಮಾರ್ಗಸೂಚಿಗಳನ್ನು ಗಣನೆಗೆ ತೆಗೆದುಕೊಂಡ ನಂತರ ಮಾಲ್ಗಳಲ್ಲಿ ಉಳಿದ ಅಂಗಡಿಗಳನ್ನು ತೆರೆಯುವ ನಿರ್ಧಾರವನ್ನು ಶೀಘ್ರದಲ್ಲೇ ತೆಗೆದುಕೊಳ್ಳಲಾಗುವುದು. ಕೋವಿಡ್ -19 ವಿರುದ್ಧ ಹೋರಾಡಲು ಕೇಂದ್ರ ಹಣಕಾಸು ಸಚಿವರು ಘೋಷಿಸಿದ ಆತ್ಮ ನಿರ್ಭರ್ ಪ್ಯಾಕೇಜ್ ಎಂಎಸ್ಎಂಇಗೆ 3 ಲಕ್ಷ ಕೋಟಿ ರೂ.ಗಳ ಸಾಲ ಖಾತರಿಯನ್ನು ನೀಡಿದೆ ಮತ್ತು ಇದು ವ್ಯಾಪಾರಿಗಳನ್ನೂ ಸಹ ಒಳಗೊಂಡಿದೆ. ಎಂಎಸ್ಎಂಇ ಕ್ಷೇತ್ರದ ವ್ಯಾಖ್ಯಾನದಲ್ಲಿ ಮಾಡಿದ ಬದಲಾವಣೆಗಳು ಸಹ ಅವರಿಗೆ ಸಹಾಯ ಮಾಡುತ್ತವೆ ಎಂದರು. ಅವರು ಬಗೆಹರಿಯದೆ ಉಳಿದಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಮುಕ್ತ ಮನಸ್ಸನ್ನು ಹೊಂದಿದ್ದಾರೆ ಎಂದು ಹಣಕಾಸು ಸಚಿವರು ಸೂಚಿಸಿದ್ದಾರೆ ಎಂದು ಅವರು ಹೇಳಿದರು. ಶ್ರೀ ಗೋಯಲ್ ಚಿಲ್ಲರೆ ವ್ಯಾಪಾರಿಗಳು -ಕಾಮರ್ಸ್ನ ಗಾತ್ರದಿಂದ ಹೆದರಬಾರದು ಎಂದು ಹೇಳಿದರು, ಏಕೆಂದರೆ ಸಾಮಾನ್ಯ ವ್ಯಕ್ತಿಯು ತಮ್ಮ ಬಿಕ್ಕಟ್ಟಿನ ಸಮಯದಲ್ಲಿ ಈಗ ನೆರೆಹೊರೆಯ ಕಿರಾಣಿ ಅಂಗಡಿಯವರು ಮಾತ್ರ ಸಹಾಯ ಮಾಡಿದ್ದಾರೆಂದು ಅರಿತುಕೊಂಡಿದ್ದಾರೆ. ಚಿಲ್ಲರೆ ವ್ಯಾಪಾರಿಗಳಿಗೆ ಬಿ-2- ಬಿ ಅನುಕೂಲವಾಗುವಂತೆ ಸರ್ಕಾರವು ವ್ಯವಸ್ಥೆಯೊಂದನ್ನು ರೂಪಿಸುತ್ತಿದೆ ಮತ್ತು ಅವರ ವ್ಯಾಪ್ತಿಯನ್ನು ವಿಸ್ತರಿಸಲು ತಾಂತ್ರಿಕ ನೆರವು ನೀಡುತ್ತದೆ ಎಂದು ಅವರು ಹೇಳಿದರು. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಸರ್ಕಾರವು ಪರಿವರ್ತನಾ ಉಪಕ್ರಮಗಳನ್ನು ಕೈಗೊಂಡಿದ್ದು, ಇದು ಭಾರತವು ಪ್ರಬಲ ರಾಷ್ಟ್ರವಾಗಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು. ನಿಗದಿತ ಅವಧಿ ಯಸಾಲಗಳು, ಮುದ್ರಾ ಸಾಲಗಳು ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ವ್ಯಾಪಾರಿ ಸಮುದಾಯದ ಇತರ ಸಮಸ್ಯೆಗಳಿಗೆ ಸಂಬಂಧಿಸಿದಂತೆ, ಶ್ರೀ ಗೋಯಲ್ ಅವರು ಪರಿಹಾರವನ್ನು ಕಂಡುಹಿಡಿಯಲು ಹಣಕಾಸು ಸಚಿವಾಲಯದೊಂದಿಗೆ ವಿಷಯವನ್ನು ಪ್ರಸ್ತಾಪ ಮಾಡಲಾಗುವುದು ಎಂದು ಹೇಳಿದರು.

ಆರ್ಥಿಕ ಪರಿಸ್ಥಿತಿಯು ಚೇತರಿಕೆ ಹಾದಿಯಲ್ಲಿದೆ ಎಂದು ಹಲವಾರು ಸೂಚಕಗಳು ತೋರಿಸುತ್ತವೆ ಎಂದು ಸಚಿವರು ಹೇಳಿದರು. ತಿಂಗಳ ವಿದ್ಯುತ್ ಬಳಕೆಯು ಕಳೆದ ವರ್ಷದ ಇದೇ ಅವಧಿಗೆ ಸಮನಾಗಿದೆ, ಆಮ್ಲಜನಕದ ಉತ್ಪಾದನೆ ಹೆಚ್ಚಾಗಿದೆ. ಏಪ್ರಿಲ್ ನಲ್ಲಿ ಸುಮಾರು 60% ನಷ್ಟು ಕಡಿಮೆಯಾಗಿದ್ದ ರಫ್ತು ಈಗ ಮೇಲ್ಮುಖ ಪ್ರವೃತ್ತಿಯನ್ನು ತೋರಿಸಲಾರಂಭಿಸಿವೆ ಮತ್ತು ಪ್ರಾಥಮಿಕ ಅಂಕಿ ಅಂಶಗಳು ತಿಂಗಳು ಕುಸಿತವು ಕಡಿಮೆಯಾಗಿರುತ್ತದೆ ಎಂದು ಸೂಚಿಸುತ್ತದೆ. ಮತ್ತೊಂದೆಡೆ, ಸೇವೆಗಳ ರಫ್ತು ಕಳೆದ ತಿಂಗಳೂ ಹೆಚ್ಚಾಗಿದೆ. ಸರಕುಗಳ ರಫ್ತು ಕುಸಿತಕ್ಕಿಂತ ಹೆಚ್ಚಾಗಿ, ಆಮದುಗಳು ಕಳೆದ ತಿಂಗಳು ತೀವ್ರ ಕುಸಿತವನ್ನು ತೋರಿಸಿದ್ದು, ವ್ಯಾಪಾರದ ಕೊರತೆಯನ್ನು ಕಡಿಮೆ ಮಾಡಿದೆ ಎಂದು ಅವರು ಸೂಚಿಸಿದರು.

ಕಳೆದ ಎರಡು ತಿಂಗಳುಗಳಲ್ಲಿ ವ್ಯಾಪಾರಿಗಳು ಮತ್ತು ಭಾರತೀಯ ತಯಾರಕರ ಕಷ್ಟಗಳನ್ನು ನಿವಾರಿಸಲು ಸರ್ಕಾರವು ಕ್ರಮ ಕೈಗೊಂಡಿದೆ ಮತ್ತು ಭವಿಷ್ಯದಲ್ಲಿಯೂ ಸಹ ಅವರಿಗೆ ಬೆಂಬಲ ನೀಡಲಾಗುವುದು ಎಂದು ಸಚಿವರು ಹೇಳಿದರು. ಭಾರತೀಯ ಸರಕುಗಳನ್ನು ಬಳಸಲು, ಉತ್ತೇಜಿಸಲು ಮತ್ತು ಬೆಂಬಲಿಸುವಂತೆ ಅವರು ವ್ಯಾಪಾರಿಗಳಿಗೆ ಕರೆ ನೀಡಿದರು. ಆತ್ಮವಿಶ್ವಾಸ, ಧೈರ್ಯ ಮತ್ತು ದೃಢ ನಿಶ್ಚಯದಿಂದ ಕೆಲಸ ಮಾಡುವಂತೆ ಮತ್ತು ಇದರಿಂದ ಯಶಸ್ಸು ಸಾಧಿಸಲು ಸಾಧ್ಯ ಎಂದು ಸಚಿವರು ಅವರಿಗೆ ಸೂಚಿಸಿದರು,

***



(Release ID: 1628045) Visitor Counter : 290