ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ
ಕೇಂದ್ರ ಎಚ್ ಆರ್ ಡಿ ಸಚಿವರ ಸಲಹೆಯಂತೆ 2020 ಜೆಇಇ (ಮುಖ್ಯ) ಪರೀಕ್ಷೆಯ ಅರ್ಜಿ ನಮೂನೆಯನ್ನು ಆನ್ ಲೈನ್ ನಲ್ಲಿ ಸಲ್ಲಿಸಲು ಮತ್ತೊಂದು ಕೊನೆಯ ಅವಕಾಶ ನೀಡಿದ ಎನ್ ಟಿ ಎ
Posted On:
19 MAY 2020 5:33PM by PIB Bengaluru
ಕೇಂದ್ರ ಎಚ್ ಆರ್ ಡಿ ಸಚಿವರ ಸಲಹೆಯಂತೆ 2020 ಜೆಇಇ (ಮುಖ್ಯ) ಪರೀಕ್ಷೆಯ ಅರ್ಜಿ ನಮೂನೆಯನ್ನು ಆನ್ ಲೈನ್ ನಲ್ಲಿ ಸಲ್ಲಿಸಲು ಮತ್ತೊಂದು ಕೊನೆಯ ಅವಕಾಶ ನೀಡಿದ ಎನ್ ಟಿ ಎ
ಅರ್ಜಿ ನಮೂನೆ 19.05.2020 ರಿಂದ 24.05.2020ರ ವರೆಗೆ ಲಭ್ಯ
ಕೋವಿಡ್-19ನಿಂದಾಗಿ ಉದ್ಭವಿಸಿರುವ ಪರಿಸ್ಥಿತಿಯಿಂದಾಗಿ ಬದಲಾದ ಸನ್ನಿವೇಶದಲ್ಲಿ ವಿದೇಶಿ ಕಾಲೇಜುಗಳನ್ನು ಸೇರಲು ಬಯಸಿದ್ದ ಹಲವು ಭಾರತೀಯ ವಿದ್ಯಾರ್ಥಿಗಳು ಇದೀಗ ದೇಶದಲ್ಲಿಯೇ ಅಧ್ಯಯನ ಮುಂದುವರಿಸಲು ಬಯಸಿದ್ದಾರೆ ಮತ್ತು ಅವರು ಜೆಇಇ(ಮುಖ್ಯ) ಪರೀಕ್ಷೆ 2020ಕ್ಕೆ ಹಾಜರಾಗಲು ಬಯಸಿದ್ದಾರೆ. ಅವರುಗಳು ನೀಡಿದ ಮನವಿಯನ್ನು ಆಧರಿಸಿ ಮತ್ತು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್, ನೀಡಿದ ಸಲಹೆಯನ್ನು ಪರಿಗಣಿಸಿ ಎನ್ ಟಿ ಎ, ಜೆಇಇ(ಮುಖ್ಯ) 2020 ಪರೀಕ್ಷೆಗೆ ಅರ್ಜಿ ನಮೂನೆ ಭರ್ತಿಮಾಡಲು ಕೊನೆಯ ಅವಕಾಶವನ್ನು ನೀಡಿದೆ. ಇದು ಒಂದಲ್ಲಾ ಒಂದು ಕಾರಣದಿಂದಾಗಿ ಜೆಇಇ(ಮುಖ್ಯ) 2020 ಪರೀಕ್ಷೆಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲಾಗದವರು ಅಥವಾ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪೂರ್ಣಗೊಳಿಸಲಾಗದ ಎಲ್ಲ ವಿದ್ಯಾರ್ಥಿಗಳಿಗೂ ಈ ಅವಕಾಶವಿದೆ.
Dr Ramesh Pokhriyal Nishank✔@DrRPNishank
Students who dropped the idea to study abroad, here is your chance to pursue your studies in India.
I have advised @DG_NTA to give one more opportunity to students to submit new/complete online application form for JEE (Main) 2020.
Hurry! Forms available till 24th May.
975
1:36 PM - May 19, 2020
Twitter Ads info and privacy
306 people are talking about this
ಕೋವಿಡ್-19 ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಾಕಷ್ಟು ತೊಂದರೆಗಳನ್ನು ಅನುಭವಿಸಿರುವುದರಿಂದ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್ ಟಿ ಎ) ಇದೀಗ ಒಂದು ಅವಕಾಶ(ಕೊನೆಯ)ವನ್ನು ಆನ್ ಲೈನ್ ಮೂಲಕ ಜೆಇಇ(ಮುಖ್ಯ) 2020 ಪರೀಕ್ಷೆಗೆ ಹೊಸದಾಗಿ ಸಲ್ಲಿಸಲು ಅವಕಾಶ ನೀಡಿದೆ.
ಎಲ್ಲರ ಗಮನಕ್ಕೆ ತರುವುದೇನೆಂದರೆ ಆನ್ ಲೈನ್ ಮೂಲಕ ಅರ್ಜಿ ನಮೂನೆ ಸಲ್ಲಿಸಲುವ ಸೌಕರ್ಯ ವೆಬ್ ಸೈಟ್ jeemain.nta.nic.in ನಲ್ಲಿ 19.05.2020 ರಿಂದ 24.05.2020* ಮಾತ್ರ ಲಭ್ಯವಿರುತ್ತದೆ.
‘*’ ಆನ್ ಲೈನ್ ಅರ್ಜಿಗಳ ಪ್ರಕ್ರಿಯೆ ಪೂರ್ಣಗೊಳಿಸಲು/ಸಲ್ಲಿಸಲು 5 ಗಂಟೆಯವರೆಗೆ ಮಾತ್ರ ಸ್ವೀಕರಿಸಲಾಗುವುದು ಮತ್ತು ಶುಲ್ಕ ಪಾವತಿಗೆ 11.50ರವರೆಗೆ ಮಾತ್ರ.
ನಿಗದಿತ ಶುಲ್ಕವನ್ನು ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/ನೆಟ್ ಬ್ಯಾಂಕಿಂಗ್/ಯುಪಿಐ ಮತ್ತು ಪೇಟಿಎಂ ಮೂಲಕ ಪಾವತಿಸಬಹುದು.
ಸ್ಪಷ್ಟನೆಗಳಿಗೆ ವಿದ್ಯಾರ್ಥಿಗಳಿಗಾಗಿ ವೆಬ್ ಸೈಟ್ ವಿಳಾಸ jeemain.nta.nic.in. ನಲ್ಲಿ ಮಾಹಿತಿ ಬುಲೆಟಿನ್ ಅನ್ನು ಅಪ್ ಲೋಡ್ ಮಾಡಲಾಗಿದೆ.
ಅಭ್ಯರ್ಥಿಗಳು ಮತ್ತು ಅವರ ಪೋಷಕರು ಈ ವೆಬ್ ಸೈಟ್ ಗೆ jeemain.nta.nic.in ಮತ್ತು www.nta.ac.in ಆಗಾಗ್ಗೆ ಭೇಟಿ ನೀಡಿ, ತಾಜಾ ಮಾಹಿತಿಯನ್ನು ಪಡೆದುಕೊಳ್ಳಬಹುದು. ಅಲ್ಲದೆ ಅಭ್ಯರ್ಥಿಗಳು ದೂರವಾಣಿ ಸಂಖ್ಯೆ 8287471852, 8178359845, 9650173668, 9599676953 ಮತ್ತು 8882356803 ಸಂಪರ್ಕಿಸಬಹುದು. ಅಥವಾ ಇ-ಮೇಲ್ ವಿಳಾಸದ jeemain@nta.ac.in ಮೂಲಕ ಹೆಚ್ಚಿನ ಸ್ಪಷ್ಟನೆ ಪಡೆದುಕೊಳ್ಳಬಹುದು.
***
(Release ID: 1625189)
Visitor Counter : 289