ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ವಿರುದ್ಧ ಹೋರಾಡಲು ರೋಗ ನಿರ್ಣಯ ಪರಿಹಾರಗಳು ಮತ್ತು ಅಪಾಯದ ಶ್ರೇಣೀಕರಣ ತಂತ್ರಗಳ ಅಭಿವೃದ್ಧಿಗಾಗಿ ಸಿ ಎಸ್ ಐ ಆರ್, ಇಂಟೆಲ್ ಇಂಡಿಯಾ ಮತ್ತು ಐಐಟಿ ಹೈದ್ರಾಬಾದ್ ಜೊತೆಗೆ ಸಹಕರಿಸುತ್ತಿದೆ

Posted On: 15 MAY 2020 6:33PM by PIB Bengaluru

ಕೋವಿಡ್-19 ವಿರುದ್ಧ ಹೋರಾಡಲು ರೋಗ ನಿರ್ಣಯ ಪರಿಹಾರಗಳು ಮತ್ತು ಅಪಾಯದ ಶ್ರೇಣೀಕರಣ ತಂತ್ರಗಳ ಅಭಿವೃದ್ಧಿಗಾಗಿ

ಸಿ ಎಸ್ ಐ ಆರ್, ಇಂಟೆಲ್ ಇಂಡಿಯಾ ಮತ್ತು ಐಐಟಿ ಹೈದ್ರಾಬಾದ್ ಜೊತೆಗೆ ಸಹಕರಿಸುತ್ತಿದೆ

 

ಸಾರ್ಸ್-ಕೋವ್-2 ಹರಡುವಿಕೆಯನ್ನು ತಗ್ಗಿಸಲು, ರೋಗಿಗಳನ್ನು ತ್ವರಿತಗತಿಯಲ್ಲಿ ಪರೀಕ್ಷಿಸಲು ಮತ್ತು ಅಪಾಯದಲ್ಲಿರುವ ರೋಗಿಗಳನ್ನು ಪತ್ತೆಹಚ್ಚುವುದು ಮಹತ್ವದ ವಿಷಯವಾಗಿದೆ. ಶೀಘ್ರಗತಿಯ ಮತ್ತು ಕಡಿಮೆ ವೆಚ್ಚದ ಕೋವಿಡ್–19 ಪರೀಕ್ಷೆಗಳನ್ನು ಕೈಗೊಳ್ಳಲು ಸಹಾಯ ಮಾಡಲು  ಮತ್ತು ಸಾಂಕ್ರಾಮಿಕ ರೋಗಶಾಸ್ತ್ರವನ್ನು ಅರ್ಥ ಮಾಡಿಕೊಳ್ಳಲು ಕೊರೊನಾ ವೈರಾಣು ಜಿನೋಮ್ ಅನುಕ್ರಮ ಮತ್ತು ಕೊಮೊರ್ಬೊಡಿಟೀಸ್ ಹೊಂದಿರುವ ರೋಗಿಗಳಿಗೆ ಕೃತಕ ಜ್ಞಾನ ಆಧಾರಿತ ಅಪಾಯದ ಶ್ರೇಣೀಕರಣಕ್ಕಾಗಿ ಇಂಟೆಲ್ ಇಂಡಿಯಾ ಮತ್ತು ಹೈದ್ರಾಬಾದ್ ನ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ) ಯ ಜೊತೆ ಸಿ ಎಸ್ ಐ ಆರ್ ಕೆಲಸ ಮಾಡುತ್ತಿದೆ.  

ಈ ಉಪಕ್ರಮದ ಭಾಗವಾಗಿ, ಇಂಟೆಲ್ ಇಂಡಿಯಾ ಬಹು ವಿಧದ ಅಪ್ಲಿಕೇಶನ್ ಗಳು, ಪರೀಕ್ಷಾ ಸಾಧನಗಳು, ದತ್ತಾಂಶ ಸಂಗ್ರಹಣೆ/ಒಗ್ಗೂಡಿಸುವ ಗೇಟ್ ವೇ ಗಳು, ದತ್ತಾಂಶ ವಿನಿಮಯದ ಎಸ್ ಡಿ ಕೆ ಮತ್ತು  ಎಐ ಮಾದರಿಯ ವೇದಿಕೆಯನ್ನು ಒಳಗೊಂಡ ಎಂಡ್ ಟು ಎಂಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತಿದೆ. ಸಿ ಎಸ್ ಐ ಆರ್ ಪ್ರಯೋಗಾಲಯ ಘಟಕಗಳಾದ ಸಿ ಎಸ್ ಐ ಆರ್ ಐಜಿಐಬಿ, ಸಿ ಎಸ್ ಐ ಆರ್- ಸಿಸಿಎಂಬಿ, ಸಿ ಎಸ್ ಐ ಆರ್ ಐಎಂಟಿಎಸಿಹೆಚ್, ಸಿ ಎಸ್ ಐ ಆರ್-ಐಐಪಿ, ಸಿ ಎಸ್ ಐ ಆರ್-ಸಿಎಲ್ಆರ್ ಸಿ ಮತ್ತು ಮುಂತಾದವು ವಿವಿಧ ಆಸ್ಪತ್ರೆಗಳು ಮತ್ತು ರೋಗ ನಿರ್ಣಯ ಸರಪಳಿಗಳೊಂದಿಗೆ ಸಮಗ್ರ ರೋಗ ನಿರ್ಣಯ ಕೈಗೊಳ್ಳಲು ಕಾರ್ಯನಿರ್ವಹಿಸುತ್ತದೆ. ಐಐಟಿ ಹೈದ್ರಾಬಾದ್ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ದೀರ್ಘಕಾಲೀನ ಸನ್ನದ್ಧತೆಗಾಗಿ ಮತ್ತು ಔಷಧಿ ಹಾಗೂ ಲಸಿಕೆ ಆವಿಷ್ಕಾರಕ್ಕೆ ಸಹಾಯ ಮಾಡುವ ಅಪಾಯ ಶ್ರೇಣಿಕರಣದ ಕ್ರಮಾವಳಿಗಳನ್ನು ಐಐಐಟಿ- ಹೈದ್ರಾಬಾದ್ ಅಭಿವೃದ್ಧಿಪಡಿಸಲಿದೆ.              

ಸಿ ಎಸ್ ಐ ಆರ್  ಮಹಾ ನಿರ್ದೇಶಕರಾದ ಡಾ. ಶೇಖರ್ ಸಿ ಮಂಡೆ, “ಕೋವಿಡ್-19 ರಿಂದ ಉದ್ಭವಿಸುತ್ತಿರುವ ಬಹುಶಿಸ್ತಿನ ಸಹಭಾಗಿತ್ವಗಳು ಪ್ರಮುಖವಾಗಿವೆ ಮತ್ತು ಸಿ ಎಸ್ ಐ ಆರ್  ಐಐಐಟಿ- ಹೈದ್ರಾಬಾದ್ ನೊಂದಿಗೆ ಮತ್ತು ಇಂಟೆಲ್ ಇಂಡಿಯಾದೊಂದಿಗೆ ಸಹಯೋಗ ಹೊಂದಲು ಹರ್ಷಿಸುತ್ತದೆ. ಇದು ಜಿನೊಮಿಕ್ಸ್, ಬೃಹತ್ ದತ್ತಾಂಶ ಮತ್ತು ಎಐಗೆ ಪೂರಕ ಸಾಮರ್ಥ್ಯವನ್ನು ನೀಡುತ್ತದೆಎಂಬುದನ್ನು ಗಮನಿಸಿದ್ದಾರೆ

ಕೋವಿಡ್-19 ರ ವಿರುದ್ಧ ಹೋರಾಡಲು ಪರಿಹಾರಗಳನ್ನು ಶೀಘ್ರಗತಿಯಲ್ಲಿ ಅಭಿವೃದ್ಧಿಪಡಿಸಲು ಮತ್ತು  ನಿಯೋಜಿಸಲು ಸಿ ಎಸ್ ಐ ಆರ್  ಐಐಐಟಿ- ಹೈದ್ರಾಬಾದ್ ನೊಂದಿಗೆ ಕಾರ್ಯ ನಿರ್ವಹಿಸಲು ಇಂಟೆಲ್ ಇಂಡಿಯಾ ಬದ್ಧವಾಗಿದೆ”. ಇಂಟೆಲ್ ಜೀವನವನ್ನು ಉತ್ಋಷ್ಟಗೊಳಿಸುವ ತತ್ರಜ್ಞಾನಗಳನ್ನು ವಿನ್ಯಾಸಗೊಳಿಸುತ್ತದೆ ಮತ್ತು ಈ ಉಪಕ್ರಮ ತುರ್ತು ಸ್ಥಳೀಯ ಅಗತ್ಯಗಳಿಗೆ ಪರಿಣಾಮಕಾರಿಯಾಗಿ ಮತ್ತು ಮಾಪನ ಮಾಡುವ ಪರಿಹಾರಗಳನ್ನು ಕಂಡುಹಿಡಿಯಲು ಸುಧಾರಿತ ತಂತ್ರಜ್ಞಾನಗಳನ್ನು ನಿಯೋಜಿಸುವತ್ತ ನಮ್ಮ ಗಮನವನ್ನುಹರಿಸುತ್ತದೆ.

ಸಾರ್ಸ್ - ಕೋವ್ -1 ನಮ್ಮನ್ನು ಬಾಧಿಸಿದಾಗಿನಿಂದ ತಂತ್ರಜ್ಞಾನ ಅಗ್ಗವಾಗಿದೆ, ಹೆಚ್ಚು ಪರಿಣಾಮಕಾರಿಯಾಗಿದೆ ಮತ್ತು ಕೈಗೆಟುಕುವಂತಾಗಿದೆ ಆದರೆ ಸಾರ್ಸ್ - ಕೋವ್ -2 ದ ಈ ಹೋರಾಟದಲ್ಲಿ ಕ್ಲಿಷ್ಟವಾಗಿ ಉಳಿದಿದೆ, ಏಕೆಂದರೆ ಇದು ಹೆಚ್ಚು ನಿರೀಕ್ಷಿಸಬಹುದಾದ ವೇಗ ಮತ್ತು ನಿಖರತೆ, ಔಷಧಿ ಮತ್ತು ಲಸಿಕೆಯ ಆವಿಷ್ಕಾರ ಮತ್ತು ರೋಗನಿರ್ಣಯಕ್ಕೆ ಪುಷ್ಟಿ ನೀಡುತ್ತದೆ”, ಎಂದು ಇಂಟೆಲ್ ಇಂಡಿಯಾದ ರಾಷ್ಟ್ರ ಮುಖ್ಯಸ್ಥರು ಮತ್ತು ಉಪಾಧ್ಯಕ್ಷರು, ದತ್ತಾಂಶ ವೇದಿಕೆಗಳ ತಂಡ, ಇಂಟೆಲ್ ಕಾರ್ಪೋರೇಶನ್ ನ ಉಪಾಧ್ಯಕ್ಷರಾದ ನಿವೃತಿ ರೈ ಹೇಳಿದರು

ಕೋವಿಡ್ -19 ಹಾಗೂ ಇತರ ಸಮಸ್ಯೆಗಳಿಗೆ ಉತ್ತಮ ಅನುಕ್ರಮದ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಇಂಟೆಲ್ ನಂತಹ ಮುಂಚೂಣಿ ಉದ್ಯಮದೊಂದಿಗೆ ಮತ್ತು ಹಲವಾರು ಸಿ ಎಸ್ ಐ ಆರ್ ಪ್ರಯೋಗಾಲಯಗಳ ದೇಶದ ಉನ್ನತ ವಿಜ್ಞಾನಿಗಳೊಂದಿಗೆ ಕಾರ್ಯನಿರ್ವಹಿಸಲು ಐಐಐಟಿ- ಹೈದ್ರಾಬಾದ್ ಬಹಳ ಉತ್ಸುಕವಾಗಿದೆ. ಕ್ರಮಾವಳಿಗಳು, ವಿಜ್ಞಾನ ಮತ್ತು ಎಐ ನಲ್ಲಿನ ನಮ್ಮ ಪರಿಣಿತಿಯ ಮೂಲಕ ಈ ಕಾರ್ಯಚಟುವಟಿಕೆಗಳಲ್ಲಿ ನಮ್ಮ ಪಾಲುದಾರಿಕೆ ನೀಡಲು ನಾವು ಎದುರು ನೋಡುತ್ತೇವೆಎಂದು ಐಐಐಟಿ- ಹೈದ್ರಾಬಾದ್ ನ ನಿರ್ದೇಶಕರಾದ ಪಿ ಜೆ ನಾರಾಯಣನ್  ಅವರು ಉಲ್ಲೇಖಿಸಿದ್ದಾರೆ.

 

https://ci4.googleusercontent.com/proxy/BzbLXiQy4NuCMOZjb_XKZhIQIeXCMrF_RodIl5-MtTAAq067bvZxDLwGhkYc9jLwlkkUzuZaAOwRzoq5H66fL-jEEtan-jSIceNbzNQOxfWR_3yo6tKm=s0-d-e1-ft#https://static.pib.gov.in/WriteReadData/userfiles/image/image001IJJ2.jpg

 

#CSIRFightsCovid19

 

***(Release ID: 1624244) Visitor Counter : 213