ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಸೋಂಕು ತಡೆಗಟ್ಟುವಿಕೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿ.ಐ.ಎಂ.ಎ.ಪಿ ಸಂಸ್ಥೆಯ ಗಿಡಮೂಲಿಕೆ ಉತ್ಪನ್ನ

Posted On: 26 APR 2020 6:30PM by PIB Bengaluru

ಸೋಂಕು ಡೆಗಟ್ಟುವಿಕೆಗೆ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಿ..ಎಂ..ಪಿ ಸಂಸ್ಥೆಯ ಗಿಡಮೂಲಿಕೆ ಉತ್ಪನ್ನ

 

ಲಕ್ನೋದ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಆರೊಮ್ಯಾಟಿಕ್ ಪ್ಲಾಂಟ್ಗಳ (ಸಿ..ಎಂ..ಪಿ) ಸಂಶೋಧಕರು ವೈಜ್ಞಾನಿಕವಾಗಿ ಸಾಬೀತಾಗಿರುವ ಎರಡು ಗಿಡಮೂಲಿಕೆ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿದ್ದಾರೆ, ಇದು ವ್ಯಕ್ತಿಗಳ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸಾಮಾನ್ಯವಾಗಿ ಕೊರೊನವೈರಸ್ ಸೋಂಕಿಗೆ ಸಂಬಂಧಿಸಿದ ಒಣ ಕೆಮ್ಮು ರೋಗಲಕ್ಷಣವನ್ನು ನಿವಾರಿಸಲು ಸಹಾಯ ಮಾಡುತ್ತದೆ.

ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (ಸಿ.ಎಸ್..ಆರ್) ಘಟಕ ಪ್ರಯೋಗಾಲಯವಾದ ಸಿ..ಎಂ..ಪಿ ತನ್ನ ಗಿಡಮೂಲಿಕೆಗಳ ಉತ್ಪನ್ನಗಳಾದಸಿಐಎಂ-ಪೌಶಕ್ಮತ್ತುಹರ್ಬಲ್ ಕೆಮ್ಮು ಸಿರಪ್ತಂತ್ರಜ್ಞಾನವನ್ನು ಉದ್ಯಮಿಗಳು ಮತ್ತು ಸ್ಟಾರ್ಟ್ ಅಪ್ ಕಂಪನಿಗಳಿಗೆ ವರ್ಗಾಯಿಸಲು ನಿರ್ಧರಿಸಿದೆ. ಎರಡು ಉತ್ಪನ್ನಗಳು ವ್ಯಕ್ತಿಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿ ಎಂದು ಕಂಡುಬಂದಿದೆ. ಎರಡೂ ಉತ್ಪನ್ನಗಳಲ್ಲಿ ಪುರಣ್ಯ, ಅಶ್ವಗಂಧ, ಮುಲೇತಿ, ಹರಾದ್, ಬಹೇದ ಮತ್ತು ಸಾತಾವರ್ ಸಂಯುಕ್ತಗಳು ಸೇರಿದಂತೆ ಹನ್ನೆರಡು ಅಮೂಲ್ಯ ಗಿಡಮೂಲಿಕೆಗಳನ್ನು ಬಳಸಲಾಗಿದೆ.

'ಸಿಐಎಂ-ಪೌಶಕ್' ಮತ್ತು 'ಹರ್ಬಲ್ ಕೆಮ್ಮು ನಿವಾರಕ ಸಿರಪ್' ಇದರ ತಂತ್ರಜ್ಞಾನದ ವರ್ಗಾವಣೆಗೆ ಸಹಿ ಹಾಕಿದ ನಂತರ ಉದ್ಯಮಿಗಳಿಗೆ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳಿಗೆ “ " ಗಿಡಮೂಲಿಕೆ ಉತ್ಪನ್ನಗಳನ್ನು ತಯಾರಿಸಲು ಸಂಸ್ಥೆ ತನ್ನ ಪ್ರಾಯೋಗಿಕ ಸೌಲಭ್ಯಗಳನ್ನು ಒದಗಿಸುತ್ತದೆ. ಪೈಲಟ್ ಪ್ಲಾಂಟ್ನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಮತ್ತು ಗುಣಮಟ್ಟದ ನಿಯಂತ್ರಣ ಕೇಂದ್ರವಿದೆ.ಎಂದು ಡಾ. ಪ್ರಬೋಧ್ ಕೆ. ತ್ರಿವೇದಿ ನಿರ್ದೇಶಕ, ಸಿ..ಎಂ..ಪಿ. ಅವರು ಹೇಳಿದರು

ಮಾರುಕಟ್ಟೆಯಲ್ಲಿ ಲಭ್ಯವಿರುವ ಇತರ ರೋಗನಿರೋಧಕ ವರ್ಧಕ ಉತ್ಪನ್ನಗಳಿಗಿಂತ ವೈಜ್ಞಾನಿಕ ಅಧ್ಯಯನಸಿ..ಎಂ -ಪೂಶಾಕ್ಉತ್ತಮ ಪರಿಣಾಮ ನೀಡಿವೆ. ಸಂಸ್ಥೆಯಲ್ಲಿ ನಡೆಸಿದ ಪ್ರಾಣಿ ಪ್ರಯೋಗಗಳಲ್ಲಿ ಇದು ಅಗ್ಗದ, ಸುರಕ್ಷಿತ ಮತ್ತು ಪರಿಣಾಮಕಾರಿ ಎಂದು ಕಂಡುಬಂದಿದೆಎಂದು ಅಧ್ಯಯನದ ಪ್ರಧಾನ ಸಂಶೋಧಕ ಡಾ.ಡಿ.ಎನ್ ಮಣಿ ಹೇಳಿದರು. ಆಯುಷ್ ಸಚಿವಾಲಯದ ಇತ್ತೀಚಿನ ಮಾರ್ಗಸೂಚಿಗಳ ಆಧಾರದ ಮೇಲೆ ಹರ್ಬಲ್ ಕೆಮ್ಮು ನಿವಾರಕ ಸಿರಪ್ ಅನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಆಯುರ್ವೇದದತ್ರಿಡೋಷಾತತ್ವದ ಆಧಾರದ ಮೇಲೆ ಇದನ್ನು ತಯಾರಿಸಲಾಗಿದೆ ಎಂದು ಡಾ.ಮಣಿ ವಿವರಿಸಿದರು.

ಆರೋಗ್ಯ ತಜ್ಞರ ಪ್ರಕಾರ, ಕೊರೊನವೈರಸ್ ಸೋಂಕಿತ ವ್ಯಕ್ತಿಯ ಪ್ರತಿರಕ್ಷಣಾ ಅಸ್ಪಂದನೆ ಕಡಿಮೆ ಮಾಡುತ್ತದೆ ಮತ್ತು ಸಾಂಕ್ರಾಮಿಕ ರೋಗವು ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವ ಜನರ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ರೋಗನಿರೋಧಕ ವ್ಯವಸ್ಥೆಯ ಸುಧಾರಣೆಯು ಸೋಂಕಿನ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಕೊವಿಡ್-19 ರೋಗದ ಸಮರ್ಪಕವಾಗಿ ವಿರುದ್ಧ ಹೋರಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

***



(Release ID: 1618996) Visitor Counter : 133