ರಕ್ಷಣಾ ಸಚಿವಾಲಯ

ಭಾರತೀಯ ನೌಕಾಪಡೆಯಿಂದ ಸ್ವತಃ ನಿರ್ಮಿಸಿರುವ ಮಡಿಚಿಡಬಹುದಾದ ಬಹುಪಯೋಗಿ ಆಕ್ಸಿಜನ್ ಉಪಕರಣ ವಿಶಾಖಪಟ್ಟಣಂ ಜಿಲ್ಲಾಡಳಿತಕ್ಕೆ ಹಸ್ತಾಂತರ

Posted On: 12 APR 2020 6:44PM by PIB Bengaluru

ಭಾರತೀಯ ನೌಕಾಪಡೆಯಿಂದ ಸ್ವತಃ ನಿರ್ಮಿಸಿರುವ ಮಡಿಚಿಡಬಹುದಾದ ಬಹುಪಯೋಗಿ ಆಕ್ಸಿಜನ್ ಉಪಕರಣ ವಿಶಾಖಪಟ್ಟಣಂ ಜಿಲ್ಲಾಡಳಿತಕ್ಕೆ ಹಸ್ತಾಂತರ

 

ವಿಶಾಖಪಟ್ಟಣಂನ ನೌಕಾಪಡೆಯ ಬಂದರಿನಲ್ಲಿ ತಾನೇ ಅಭಿವೃದ್ಧಿ ಮತ್ತು ವಿನ್ಯಾಸಗೊಳಿಸಿರುವ ‘ಮಡಿಚಿಡಬಹುದಾದ ಬಹುಪಯೋಗಿ ಆಕ್ಸಿಜನ್ ಉಪಕರಣವನ್ನು’ ವಿಶಾಖಪಟ್ಟಣಂನ ಕಲೆಕ್ಟರ್ ಶ್ರೀ ವಿನಯ್ ಚಾಂದ್ ಅವರಿಗೆ ಅಡ್ಮಿರಲ್ ಸೂಪರಿಂಟೆಂಡೆಂಟ್ ಶ್ರೀಕುಮಾರ್ ನಾಯರ್ ಅವರು, ಬಂದರಿನಲ್ಲಿ ಪೂರ್ವ ವಲಯದ ನೌಕಾ ಕಮಾಂಡ್ ನ ಮುಖ್ಯ ಆರೋಗ್ಯಾಧಿಕಾರಿ ರಿಯರ್ ಅಡ್ಮಿರಲ್ ಸಿ.ಎಸ್. ನಾಯ್ಡು, ಆಂಧ್ರ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ವಿ. ಸುಧಾಕರ್ ಅವರ ಸಮಕ್ಷಮದಲ್ಲಿ 2020ರ ಏಪ್ರಿಲ್ 9ರಂದು ಹಸ್ತಾಂತರಿಸಲಾಯಿತು.

ಆರು ಮಾರ್ಗಗಳ ರೇಡಿಯಲ್ ಹೆಡ್ಡರ್ ಗಳನ್ನೂ ಒಳಗೊಂಡಿರುವ ಒಂದು ದೊಡ್ಡ ಪ್ರಮಾಣದ ಆಕ್ಸಿಜನ್ ಬಾಟಲ್ ನಿಂದ ಒಂದೇ ಸಲ ಆರು ರೋಗಿಗಳಿಗೆ ಇಂಗಾಲವನ್ನು ಪೂರೈಸುವಂತಹ ವ್ಯವಸ್ಥೆಯನ್ನೂ ಇದು ಒಳಗೊಂಡಿದೆ. ಸದ್ಯ ಕಲೆಕ್ಟರ್ ಗೆ ಐದು ಸೆಟ್ ಉಪಕರಣಗಳನ್ನು ಹಸ್ತಾಂತರಿಸಲಾಗಿದ್ದು, ಉಳಿದ 20 ಸೆಟ್ ಗಳನ್ನು ಮುಂದಿನ ಎರಡು ವಾರಗಳಲ್ಲಿ ಪೂರೈಸುವ ಯೋಜನೆ ಇದೆ.

***



(Release ID: 1613789) Visitor Counter : 113