ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಕೋವಿಡ್-19 ಸ್ಪರ್ಧೆ(ಸಿ3) ಯಲ್ಲಿ ಭಾಗವಹಿಸಲು ಹೊಸ ಆಲೋಚನೆಗಳುಳ್ಳ ಪ್ರಜೆಗಳಿಗೆ ಎನ್ ಐ ಎಫ್ ಆಹ್ವಾನ

Posted On: 04 APR 2020 5:16PM by PIB Bengaluru

ಕೋವಿಡ್-19 ಸ್ಪರ್ಧೆ(ಸಿ3) ಯಲ್ಲಿ ಭಾಗವಹಿಸಲು ಹೊಸ ಆಲೋಚನೆಗಳುಳ್ಳ ಪ್ರಜೆಗಳಿಗೆ ಎನ್ ಐ ಎಫ್ ಆಹ್ವಾನ

ಮನೆಯಲ್ಲಿ ಇರುವ ಜನರನ್ನು ಕ್ರಿಯಾಶೀಲವಾಗಿ ಪಾಲ್ಗೊಳ್ಳುವಂತೆ ಮಾಡಲು ಚಿಂತನೆಗಳಿಗೆ ಆಹ್ವಾನ; ಲಾಕ್ ಡೌನ್ ಸಮಯದಲ್ಲಿ ಪೌಷ್ಠಿಕಾಂಶ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರೋಗ್ಯಕರ ಆಹಾರ ಪದ್ಧತಿ

 

“ಈ ಕ್ರಮ ಕೇವಲ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ನಾನಾ ಹಿನ್ನೆಲೆಗಳಿಂದ ಬಂದಿರುವ ಸಮಾಜದ ನಾನಾ ವರ್ಗದ ಜನರನ್ನು ಕ್ರಿಯಾಶೀಲವಾಗಿ ಭಾಗವಹಿಸುವಂತೆ ಮಾಡುವುದಲ್ಲದೆ, ಹಲವು ಪರಿಹಾರಗಳನ್ನು ಹುಡುಕುವುದು ಮತ್ತು ಅವುಗಳನ್ನು ಜಾರಿಗೊಳಿಸುವುದಾಗಿದೆ” – ಪ್ರೊ|| ಅಶುತೋಷ್ ಶರ್ಮ, ಕಾರ್ಯದರ್ಶಿ, ಡಿ ಎಸ್ ಟಿ

 

ಕೊರೊನಾ ಸಾಂಕ್ರಾಮಿಕ ರೋಗದಿಂದ ಇಡೀ ದೇಶ ಭಾರೀ ಬಿಕ್ಕಟ್ಟಿನ ಸಮಯವನ್ನು ಎದುರಿಸುತ್ತಿದೆ. ಈ ವೇಳೆ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಅಡಿ ಬರುವ ಸ್ವಾಯತ್ತ ಸಂಸ್ಥೆ, ರಾಷ್ಟ್ರೀಯ ಆವಿಷ್ಕಾರ ಫೌಂಡೇಶನ್ – ಭಾರತ (ಎನ್ ಐ ಎಫ್) ಚಾಲೆಂಜ್ ಕೋವಿಡ್-19 ಸ್ಪರ್ಧೆ(ಸಿ3)ಯಲ್ಲಿ ಭಾಗವಹಿಸಲು ಹೊಸ ಚಿಂತನೆಗಳುಳ್ಳ ಪ್ರಜೆಗಳನ್ನು ಆಹ್ವಾನಿಸಿದೆ.

ಎಲ್ಲ ಆಸಕ್ತಿ ಹೊಂದಿರುವ ಆವಿಷ್ಕಾರಿಗಳಿಗೆ ಸ್ವಾಗತವಿದ್ದು, ಅವರು ತಮ್ಮ ಕ್ರಿಯಾಶೀಲ ಚಿಂತನೆಗಳು, ಆವಿಷ್ಕಾರಗಳ ಮೂಲಕ ಕೊರೋನಾ ಸೋಂಕು ಹರಡುವುದನ್ನು ತಪ್ಪಿಸುವುದು ಅಥವಾ ಇತರೆ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಇವು ಸರ್ಕಾರದ ಕ್ರಮಗಳಿಗೆ ಇನ್ನಷ್ಟು ಪೂರಕವಾಗಿ ಕೆಲಸ ಮಾಡುವುದಲ್ಲದೆ, ಸೋಂಕು ಇನ್ನಷ್ಟು ಹರಡದಂತೆ ತಡೆಯುತ್ತದೆ ಅಥವಾ ಅದರ ಪ್ರಭಾವವನ್ನು ತಗ್ಗಿಸುತ್ತದೆ. ನಾವಿನ್ಯ ಚಿಂತನೆಗಳಿಂದ ವ್ಯಕ್ತಿಯ ಕೈಗಳು, ದೇಹ, ಗೃಹೋಪಯೋಗಿ ವಸ್ತುಗಳು ಮತ್ತು ಮನೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ದ್ರಾವಣ ಸಿಂಪಡಿಸುವ ಕೆಲಸಗಳು ಹೆಚ್ಚು ಆಸಕ್ತಿಕರ ಮತ್ತು ಪರಿಣಾಮಕಾರಿಯಾಗಿರುತ್ತವೆ. ಅಲ್ಲದೆ ಅಗತ್ಯ ವಸ್ತುಗಳ ವಿತರಣೆ ಮತ್ತು ಪೂರೈಕೆ ವಿಶೇಷವಾಗಿ ವೃದ್ಧರಿಗೆ ತಲುಪಿಸುವುದು ಉದಾಹರಣೆಗೆ ಅವಶ್ಯಕ ವಸ್ತುಗಳನ್ನು ಮನೆ ಬಾಗಿಲಿಗೆ ಪೂರೈಸುವುದು ಮತ್ತು ಇನ್ನಿತರ ಸೇವೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಾಗಿದೆ.

ಮನೆಗಳಲ್ಲಿರುವ ಜನರನ್ನು ಕ್ರಿಯಾಶೀಲವಾಗಿಡುವ ಉದ್ದೇಶದಿಂದ ಚಿಂತನೆಗಳಿಗೆ ಆಹ್ವಾನಿಸಲಾಗಿದ್ದು, ಲಾಕ್ ಡೌನ್ ವೇಳೆ ಕಚ್ಚಾ ಸಾಮಗ್ರಿಗಳು ಸೀಮಿತ ಪ್ರಮಾಣದಲ್ಲಿ ದೊರಕುವುದರಿಂದ ಪೌಷ್ಠಿಕಾಂಶ ಮತ್ತು ರೋಗ ನಿರೋಧಕ ಶಕ್ತಿ ಇರುವಂತಹ ಆರೋಗ್ಯಕರ ಆಹಾರ ಸೇವನೆ ಮಾಡುವುದು, ಪಿಪಿಇಗಳು(ವೈಯಕ್ತಿಕ ರಕ್ಷಣಾ ಸಲಕರಣೆಗಳು) ಮತ್ತು ಕ್ಷಿಪ್ರ ಸೋಂಕು ಪತ್ತೆ ಸೌಕರ್ಯಗಳು, ಆರೋಗ್ಯ ರಕ್ಷಣಾ ಸಾಮರ್ಥ್ಯವೃದ್ಧಿ, ಕೊರೋನಾ ನಂತರದ ಸಂಪರ್ಕರಹಿತ ಉಪಕರಣಗಳ ಬಗ್ಗೆ ಚಿಂತನೆ, ಕೋವಿಡ್-19 ವಿರುದ್ಧ ನಾನಾ ವಯೋಮಿತಿಯ ವರ್ಗದ ಅಂದರೆ ವಿಶೇಷ ಚೇತನರು, ವಿಕಲಾಂಗರು ಮತ್ತು ಮಾನಸಿಕ ಖಿನ್ನತೆಯನ್ನು ಎದುರಿಸುತ್ತಿರುವಂತಹ ಜನರಿಗೆ ಉಪಯೋಗವಾಗುವಂತಹ ಚಿಂತನೆಗಳಿಗೆ ಆಹ್ವಾನವಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಪ್ರೊ|| ಅಶುತೋಷ್ ಶರ್ಮ, “ಎನ್ಐಎಫ್ ಒಂದು ವಿನೂತನ ಸಂಸ್ಥೆಯಾಗಿದ್ದು, ಅದು ನಾಗರಿಕರಿಂದಲೇ ಹಲವು ತಳಮಟ್ಟದ ಹೊಸ ಚಿಂತನೆಗಳು ಮತ್ತು ಸಮಗ್ರ ಪರಿಹಾರ ಕಂಡುಹಿಡಿಯುವಂತಹ ಅನುಭವಗಳನ್ನು ಆಧರಿಸಿದ ಚಿಂತನೆಗಳಿಗೆ ಹೆಚ್ಚಿನ ಗಮನಹರಿಸುತ್ತಿದೆ. ಈ ಸ್ಪರ್ಧಾ ಕ್ರಮದಿಂದ ಜನರಲ್ಲಿ ಜಾಗೃತಿ ಮೂಡುವುದಷ್ಟೇ ಅಲ್ಲದೆ, ಸಮಾಜದಲ್ಲಿ ನಾನಾ ಹಿನ್ನೆಲೆಯಿಂದ ಬಂದಿರುವ ಜನರು, ಕ್ರಿಯಾಶೀಲವಾಗಿ ಹಲವು ಪರಿಹಾರಗಳನ್ನು ಕಂಡುಹಿಡಿಯಲು ಮತ್ತು ಅವುಗಳನ್ನು ಜಾರಿಗೊಳಿಸಲು ನೆರವಾಗುತ್ತದೆ” ಎಂದರು.

ಆಯ್ದೆ ತಾಂತ್ರಿಕ ಚಿಂತನೆಗಳು ಮತ್ತು ಆವಿಷ್ಕಾರಗಳಿಗೆ ಅಗತ್ಯ ಇನ್ ಕ್ಯುಬೇಶನ್ ಮತ್ತು ವಿಸ್ತರಿಸುವುದಕ್ಕೆ ನೆರವು ನೀಡಲಾಗುವುದು. ವಿವರವಾದ ಚಿಂತನೆಗಳು ಮತ್ತು ಆವಿಷ್ಕಾರಗಳನ್ನು ಈ ವಿಳಾಸಕ್ಕೆ campaign@nifindia.org ಮತ್ತು http://nif.org.in/challenge-covid-19-competition ವ್ಯಕ್ತಿಗಳ ಸಂಪೂರ್ಣ ವಿವರ(ವ್ಯಕ್ತಿಯ ಹೆಸರು, ವಯಸ್ಸು, ಶಿಕ್ಷಣ, ಉದ್ಯೋಗ, ವಿಳಾಸ, ಸಂಪರ್ಕ ಸಂಖ್ಯೆ, ಇ-ಮೇಲ್) ಮತ್ತು ಚಿಂತನೆಗಳು/ಆವಿಷ್ಕಾರಗಳ ವಿವರಗಳನ್ನು(ಫೋಟೋ ಮತ್ತು ವಿಡಿಯೋ ಸೇರಿ) ಕಳುಹಿಸಬಹುದು.

ಸಿ3 ಸ್ಪರ್ಧೆಗಳನ್ನು 2020ರ ಮಾರ್ಚ್ 31ರಂದು ಘೋಷಿಸಲಾಗಿದ್ದು, ಮುಂದಿನ ಆದೇಶದ ವರೆಗೆ ಪ್ರವೇಶಾವಕಾಶ ಇರುತ್ತದೆ.

 

Challenge COVID-19 Competition_Page 1Challenge COVID-19 Competition_Page 2

(ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ ಶ್ರೀ ತುಷಾರ್ ಗರ್ಗ್, tusharg@nifindia.org, ಮೊಬೈಲ್: 9632776780)

 

 

*****

 



(Release ID: 1611185) Visitor Counter : 201