ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿಯ ಮಾಧ್ಯಮ ಪ್ರಕಟಣೆ

Posted On: 30 MAR 2020 7:22PM by PIB Bengaluru

ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿಯ ಮಾಧ್ಯಮ ಪ್ರಕಟಣೆ 
ಕೋವಿಡ್ – 19 ರ ಬಗ್ಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರದ ಕುರಿತು ಮಾಹಿತಿ   


ಕೋವಿಡ್ – 19 ಗೆ ಸಂಬಂಧಿಸಿದಂತೆ 19 ಮಾರ್ಚ್ 2020 ರಂದು ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಸಶಕ್ತವಾದಂತಹ ಸಮೀತಯೊಂದನ್ನು ರಚಿಸಲಾಗಿತ್ತು. ನೀತಿ ಆಯೋಗದ ಸದಸ್ಯ ಪ್ರೊಫೆಸರ್ ವಿನೋದ್ ಪಾಲ್ ಮತ್ತು ಭಾರತ ಸರ್ಕಾರದ ಪ್ರಧಾನ ವಿಜ್ಞಾನ ಸಲಹೆಗಾರ ಪ್ರೊಫೆಸರ್ ಕೆ ವಿಜಯರಾಘವನ್ ಈ ಸಮೀತಿಯ ಅಧ್ಯಕ್ಷತೆಯನ್ನು ವಹಿಸಿದ್ದಾರೆ. ವಿಜ್ಞಾನ ಸಂಸ್ಥೆಗಳು, ವಿಜ್ಞಾನಿಗಳು, ಕೈಗಾರಿಕೆಗಳು ಮತ್ತು ನಿಯಂತ್ರಕ ಸಂಸ್ಥೆಗಳ ಮಧ್ಯೆ ಸಮನ್ವಯತೆಯ ಹೊಣೆಗಾರಿಕೆಯನ್ನು ಮತ್ತು ಸಾರ್ಸ್ – ಕೋವ – 2 ವೈರಾಣು ಮತ್ತು ಕೋವಿಡ್ – 19 ರೋಗಕ್ಕೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ ಕುರಿತು ತ್ವರಿತ ನಿರ್ಧಾರಗಳನ್ನು ತೆಗೆದುಕೊಂಡು ಅಳವಡಿಸುವುದು  ಈ ಸಮೀತಿಯ ಜವಾಬ್ದಾರಿಯಾಗಿದೆ.  
 ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ಕಾರ್ಯದರ್ಶಿ, ಜೈವಿಕ ತಂತ್ರಜ್ಞಾನ ಖಾತೆ ಕಾರ್ಯದರ್ಶಿ, ವೈಜ್ಞಾನಿಕ ಮತ್ತು ಔದ್ಯಮಿಕ ಸಂಶೋಧನೆ ಸಮೀತಿ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕಾರ್ಯದರ್ಶಿ, ದೂರಸಂಪರ್ಕ ಇಲಾಖೆ ಕಾರ್ಯದರ್ಶಿ, ಸೇನಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ, ಐ ಸಿ ಎಂ ಆರ್ ಕಾರ್ಯದರ್ಶಿ, ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ ಕಾರ್ಯದರ್ಶಿ, ಆರೋಗ್ಯ ಸೇವೆಗಳ ಮಹಾ ನಿರ್ದೇಶಕರು ಮತ್ತು ಭಾರತದ ಔಷಧಿ ನಿಯಂತ್ರಣ ನಿರ್ದೇಶಕರು ಈ ಸಮೀತಿಯ ಇತರ ಸದಸ್ಯರಾಗಿದ್ದಾರೆ.  
 ಈ ಸಮೀತಿಯು ವೈಜ್ಞಾನಿಕ ಪರಿಹಾರಗಳ ಅನುಷ್ಠಾನಕ್ಕಾಗಿ ತೀವ್ರಗತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಕೋವಿಡ್ 19 ಸಂದಿಗ್ಧ   ಪರಿಸ್ಥಿತಿಯಿಂದಾಗಿ ಪರೀಕ್ಷಾ ಸೌಲಭ್ಯ ವೃದ್ಧಿಸುವ ಅವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಈ ಕೆಳಗಿನ ಕ್ರಮಗಳು ಜಾರಿಯಲ್ಲಿವೆ : ಡಿ ಎಸ್ ಟಿ, ಡಿ ಬಿ ಟಿ, ಸಿಎಸ್ಐಆರ್, ಡಿಎಇ, ಡಿ ಆರ್ ಡಿ ಒ, ಮತ್ತು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)  ಸಂಸ್ಥೆಗಳಿಗೆ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವಂತೆ ಮತ್ತು ತಮ್ಮ  ಪ್ರಯೋಗಾಲಯಗಳನ್ನು ಕಠಿಣ ಮುಂಗಟ್ಟಲೆ ಮತ್ತು ಗುಣಮಟ್ಟದ ಮೂಲಕ ಸಂಶೋಧನೆ ಹಾಗೂ ಪರೀಕ್ಷೆಗಳಿಗಾಗಿ ಸಿದ್ಧಗೊಳಿಸುವಂತೆ ಕಚೇರಿ ಜ್ಞಾಪನಾ ಪತ್ರವನ್ನು ಹೊರಡಿಸಲಾಗಿದೆ.  ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಐಎಂಸಿಆರ್ ನಿಗದಿಪಡಿಸಿರುವ ಆದ್ಯತೆ ಮೇರೆಗೆ ಪರೀಕ್ಷೆಗಳನ್ನು ವಿಭಿನ್ನ ಸ್ತರಗಳಲ್ಲಿ ವಿಭಜಿಸಲಾಗುವುದು. ಅಲ್ಪ ಮತ್ತು ಮಧ್ಯಕಾಲೀನ ಆದಾಯದ ರೂಪದಲ್ಲೂ ಸಂಶೋಧನೆಗಳನ್ನು ವರ್ಗೀಕರಿಸಲಾಗುವುದು.   
ಈಗಾಗಲೇ ತಿರುವನಂತಪುರಂನ ಡಿಡಿ ಎಸ್ ಟಿ - ಶ್ರೀ ಚಿತ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಡಿಬಿಟಿ- ರಾಜೀವ್ ಗಾಂಧಿ ಸೆಂಟರ್ ಫಾರ್ ಬಯೋಟೆಕ್ನಾಲಜಿ, ತಿರುವನಂತಪುರಂ, ಸಿಎಸ್ಐಆರ್- ಸೆಲ್ಯುಲರ್ ಮತ್ತು ಮಾಲಿಕ್ಯುಲರ್ ಬಯಾಲಜಿ ಸೆಂಟರ್ (ಸಿಸಿಎಂಬಿ), ಹೈದರಾಬಾದ್, ಮುಂಬೈನ ಡಿಎಇ-ಟಾಟಾ ಮೆಮೋರಿಯಲ್ ಆಸ್ಪತ್ರೆ ಪ್ರಯೋಗಾಲಯಗಳನ್ನು ಪರೀಕ್ಷೆ ಪ್ರಯೋಗಾಲಯಗಳು ಎಂದು ಐಸಿಎಂಆರ್ ಗುರುತಿಸಿದೆ. ಪರೀಕ್ಷೆಗಳನ್ನು ನಡೆಸಲು ಮೂಲಭೂತ ಸೌಕರ್ಯಗಳು/ಸಾಮರ್ಥ್ಯ ಹೊಂದಿದ ಇನ್ನುಳಿದ ಪ್ರಯೋಗಾಲಯಗಳನ್ನು ಸಿದ್ಧಪಡಿಸಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳನ್ನು ಪರೀಕ್ಷಿಸಲು ವೈಜ್ಞಾನಿಕ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರತ್ಯೇಕವಾಗಿಡಬೇಕಾದ ಮತ್ತು ಕ್ವಾರೆಂಟೈನ್ ಮಾಡಬೇಕಾದ ವ್ಯಕ್ತಿಗಳ ಮತ್ತು ಸ್ಥಳಗಳ  ಮಾಹಿತಿಯೊಂದಿಗೆ ನಿರ್ಧರಿಸಲು ಈ ಪ್ರಯೋಗ ಅನುಮತಿಸುತ್ತದೆ. 
ಕೋವಿಡ್ – 19 ಪರೀಕ್ಷೆ ಮತ್ತು ರಕ್ತದ ಸೀರಮ್ ನ ವೈಜ್ಞಾನಿಕ ಅಧ್ಯಯನ ನಡೆಸಲು ಸರ್ಕಾರ ಖಾಸಗಿ ವಲಯದೊಂದಿಗೆ ಸ್ವಪ್ರೇರಣೆಯಿಂದ ಕಾರ್ಯನಿರ್ವಹಿಸುತ್ತಿದೆ. ಇದು ವೈರಸ್ ಹರಡುವಿಕೆಯನ್ನು ನಿರ್ವಹಿಸಲು ಮತ್ತು ನಿಯಂತ್ರಿಸುವಲ್ಲಿ ನಿಗಾ ಇಡಲು ಮತ್ತು ಚಿಕಿತ್ಸಕ ಸಂಶೋಧನೆಗೆ ಅನುವು ಮಾಡಿಕೊಡುತ್ತದೆ.  
ವಿವಿಧ ಸಚಿವಾಲಯಗಳು/ಇಲಾಖೆಗಳ ಪ್ರೋತ್ಸಾಹ ಹೊಂದಿರುವ ವೈಜ್ಞಾನಿಕ ಸಂಸ್ಥೆಗಳೆಲ್ಲವೂ ಒಗ್ಗೂಡಿ ಬಂದಿವೆ ಮತ್ತು ಬಹು ಶಿಸ್ತಿನ ಯೋಜನೆಗಳಿಗೆ ಮುಂದಡಿಯಿರಿಸಿದ್ದು ಆ ಯೋಜನೆಗಳು ಈ ಕೆಳಗಿನಂತಿವೆ
ಔಷಧಿಗಳ ಮರುಹಂಚಿಕೆ ಮತ್ತು ಔಷಧಿಗಳ ಪುನರ್ಬಳಕೆ ಕುರಿತ ಕಾರ್ಯಪಡೆಯೊಂದು ಮಾಹಿತಿಯುಳ್ಳ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗುವಂತೆ ವಿವಿಧ ಈಗಾಗಲೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರ ಕುರಿತು ವಿಸ್ತೃತ ಮಾಹಿತಿ ಕಲೆಹಾಕುವ ಕೆಲಸವನ್ನು ಆರಂಭಿಸಿದೆ. ನಿಯಂತ್ರಕ/ಕಾನೂನು ಪ್ರಕ್ರಿಯೆಗಳನ್ನು ಕೂಡಾ ಪಾಲಿಸಲಾಗುತ್ತಿದೆ. 

ಕೋವಿಡ್ – 19 ರೋಗ ಹರಡುವಿಕೆ ಪತ್ತೆಹಚ್ಚಲು ಗಣಿತದ ಮಾದರಿಗಳು ಮತ್ತು ವೈದ್ಯಕೀಯ ಉಪಕರಣಗಳ ಹಾಗೂ ಪೂರಕ ಅವಶ್ಯಕತೆಗಳನ್ನು ಊಹಿಸುವ ಮಾದರಿ 

ಭಾರತದಲ್ಲಿ ಪರೀಕ್ಷಾ ಕಿಟ್ ಗಳು ಮತ್ತು ವೆಂಟಿಲೇಟರ್ ಗಳ ಉತ್ಪಾದನೆ
ಎಂ ಓ ಹೆಚ್ ಎಫ್ ಡಬ್ಲ್ಯೂ ನಿಂದ ನೀಡಲಾದ “SARS-CoV-2 ಕೊರೊನಾವೈರಸ್ ಹರಡುವಿಕೆ ತಡೆಯುವ  ಮಾಸ್ಕ್ ಗಳ ಕುರಿತಾದ ವಿವರಣೆಯುಳ್ಳ ಕೈಪಿಡಿಯನ್ನೂ ಲಗತ್ತಿಸಲಾಗಿದೆ: ಇದು ಮಾಹಿತಿ ವಿತರಣೆಗಾಗಿ ಮನೆಯಲ್ಲಿ ತಯಾರಿಸಿದ ಮಾಸ್ಕ್ ಗಳ ಮಾಹಿತಿ ಕೈಪಿಡಿಯಾಗಿದೆ. 

 


 ****



(Release ID: 1609556) Visitor Counter : 181