ಸಂಪುಟ

ಪರಿವರ್ತಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ ಗಳ (ಇ.ಎಂ.ಸಿ.2.0)ಯೋಜನೆಗೆ ಸಂಪುಟದ ಅನುಮೋದನೆ

Posted On: 21 MAR 2020 4:28PM by PIB Bengaluru

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳ (ಇಎಂಸಿ) ಮೂಲಕ ಸಾಮಾನ್ಯ ಸೌಲಭ್ಯಗಳು ಮತ್ತು ಸೌಕರ್ಯಗಳೊಂದಿಗೆ ವಿಶ್ವ ದರ್ಜೆಯ ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ಪರಿವರ್ತಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್‌ಗಳ (ಇಎಂಸಿ 2.0) ಯೋಜನೆಗೆ ಆರ್ಥಿಕ ನೆರವು ನೀಡಲು ತನ್ನ ಅನುಮೋದನೆ ನೀಡಿದೆ. ಈ ಇಎಂಸಿಗಳು ಇಎಸ್.ಡಿ.ಎಂ. ವಲಯದ ವೃದ್ಧಿಗೆ ನೆರವಾಗುತ್ತದೆ, ಉದ್ಯಮಶೀಲತೆಯ ಪರಿಸರದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ, ನಾವಿನ್ಯತೆಗೆ ಚಾಲನೆ ನೀಡುತ್ತದೆ ಮತ್ತು ವಲಯಕ್ಕೆ ಹೂಡಿಕೆ ಆಕರ್ಷಿಸಿ ವಲಯದ ಆರ್ಥಿಕ ವೃದ್ಧಿಗೆ ವೇಗ ನೀಡುತ್ತದೆ ಹಾಗೂ ಉದ್ಯೋಗಾವಕಾಶ ಮತ್ತು ತೆರಿಗೆ ಆದಾಯ ಹೆಚ್ಚಿಸುತ್ತದೆ ಎಂದು ನಿರೀಕ್ಷಿಸಲಾಗಿದೆ.

ಪರಿವರ್ತಿತ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ (ಇ.ಎಂ.ಸಿ. 2.0) ಯೋಜನೆ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ (ಇ.ಎಂ.ಸಿ.ಗಳು) ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರ (ಸಿ.ಎಫ್.ಸಿ.ಗಳು) ಗಳೆರಡರ ಸ್ಥಾಪನೆಗೂ ಬೆಂಬಲ ನೀಡುತ್ತದೆ. ಈ ಯೋಜನೆಯ ಉದ್ದೇಶಕ್ಕಾಗಿ, ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ (ಇಎಂಸಿ) ಭೌಗೋಳಿಕ ಪ್ರದೇಶಗಳಲ್ಲಿನ ಕೆಲವು ಕನಿಷ್ಠ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗುತ್ತದೆ, ಮಿಗಿಲಾಗಿ ಅದು ಸಮೀಪದಲ್ಲಿರುತ್ತದೆ, ಅಲ್ಲಿ ಇಎಸ್‌.ಡಿಎಂ ಘಟಕಗಳಿಗೆ ಮೂಲಸೌಕರ್ಯ, ಸೌಲಭ್ಯಗಳು ಮತ್ತು ಇತರ ಸಾಮಾನ್ಯ ಸೌಲಭ್ಯಗಳ ಅಭಿವೃದ್ಧಿಯತ್ತ ಗಮನ ಹರಿಸಲಾಗುತ್ತದೆ. ಸಾಮಾನ್ಯ ಸೌಲಭ್ಯ ಕೇಂದ್ರ (ಸಿಎಫ್.ಸಿ)ಗಳಿಗೆ, ಈ ಪ್ರದೇಶದಲ್ಲಿ ಗಣನೀಯ ಸಂಖ್ಯೆಯಲ್ಲಿ ಅಸ್ತಿತ್ವದಲ್ಲಿರುವ ಇಎಸ್‌ಡಿಎಂ ಘಟಕಗಳು ಇರಬೇಕು ಮತ್ತು ಸಾಮಾನ್ಯ ತಾಂತ್ರಿಕ ಮೂಲಸೌಕರ್ಯಗಳನ್ನು ನವೀಕರಿಸುವ ಮತ್ತು ಇಎಂಸಿಗಳು, ಕೈಗಾರಿಕಾ ಪ್ರದೇಶಗಳು / ಉದ್ಯಾನಗಳು / ಕೈಗಾರಿಕಾ ಕಾರಿಡಾರ್‌ಗಳಲ್ಲಿ ಇಎಸ್‌ಡಿಎಂ ಘಟಕಗಳಿಗೆ ಸಾಮಾನ್ಯ ಸೌಲಭ್ಯಗಳನ್ನು ಒದಗಿಸುವತ್ತ ಗಮನ ಹರಿಸಲಾಗುತ್ತದೆ.

ಆರ್ಥಿಕ ಪರಿಣಾಮ

ಪ್ರಸ್ತಾಪಿತ ಇ.ಎಂ.ಸಿ.2.0 ಯೋಜನೆಗೆ ಒಟ್ಟಾರೆ 3,762.25 ಕೋಟಿ ರೂ. (ಮೂರು ಸಾವಿರದ ಏಳುನೂರ ಅರವತ್ತಾ ಎರಡು ಕೋಟಿ ಇಪ್ಪತ್ತೈದು ಲಕ್ಷ ರೂಪಾಯಿ ಮಾತ್ರ) ತೆಗೆದಿರಿಸಲಾಗಿದೆ, ಇದರಲ್ಲಿ 8 ವರ್ಷಗಳ ಅವಧಿಗಾಗಿ 3,725 ಕೋಟಿ ರೂ. (ಮೂರು ಸಾವಿರದ ಏಳು ನೂರಾ ಇಪ್ಪತ್ತೈದು ಕೋಟಿ ರೂಪಾಯಿ) ಮತ್ತು ಆಡಳಿತಾತ್ಮಕ ಮತ್ತು ನಿರ್ವಹಣಾ ವೆಚ್ಚ 37.25 ಕೋಟಿ ರೂ. ( ಮೂವತ್ತೇಳು ಕೋಟಿ ಇಪ್ಪತ್ತೈದು ಲಕ್ಷ ಮಾತ್ರ) ಸೇರಿದೆ.

ಪ್ರಯೋಜನಗಳು

ಈ ಯೋಜನೆಯು ಎಲೆಕ್ಟ್ರಾನಿಕ್ ಉದ್ಯಮಕ್ಕೆ ಇಎಸ್‌.ಡಿಎಂ ವಲಯದಲ್ಲಿ ಹೂಡಿಕೆಯನ್ನು ಆಕರ್ಷಿಸಲು ಮತ್ತು ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸಲು ದೃಢವಾದ ಮೂಲಸೌಕರ್ಯ ನೆಲೆಯನ್ನು ರೂಪಿಸುತ್ತದೆ. ಯೋಜನೆಗಾಗಿ ನಿರೀಕ್ಷಿತ ಉತ್ಪನ್ನಗಳು / ಫಲಿತಾಂಶಗಳು ಹೀಗಿವೆ:

ಎಲೆಕ್ಟ್ರಾನಿಕ್ ವಲಯದಲ್ಲಿ ಹೂಡಿಕೆ ಆಕರ್ಷಿಸಲು ಸಿದ್ಧವಾದ ಮೂಲಸೌಕರ್ಯ ಮತ್ತು ಪ್ಲಗ್ ಅಂಡ್ ಪ್ಲೇ ಸೌಲಭ್ಯದ ಲಭ್ಯತೆ:

ಎಲೆಕ್ಟ್ರಾನಿಕ್ಸ್ ವಲಯದಲ್ಲಿ ಹೊಸ ಹೂಡಿಕೆ

ಉತ್ಪಾದನಾ ಘಟಕಗಳಲ್ಲಿ ಉದ್ಯೋಗ ಸೃಷ್ಟಿ

ಉತ್ಪಾದನಾ ಘಟಕಗಳು ಪಾವತಿಸಿದ ತೆರಿಗೆಯಿಂದ ಬಂದ ಆದಾಯ

ಹಿನ್ನೆಲೆ

ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಅಗತ್ಯವಾದ ಮೂಲಸೌಕರ್ಯ ಪರಿಸರ ವ್ಯವಸ್ಥೆಯನ್ನು ನಿರ್ಮಿಸಲು ಮತ್ತು ರೂಪಿಸಲು; ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಎಂ,ಇಐಟಿವೈ) 2017 ರ ಅಕ್ಟೋಬರ್ ವರೆಗೆ ಅರ್ಜಿಗಳನ್ನು ಸ್ವೀಕರಿಸಲು ಮುಕ್ತವಾಗಿರುವ ಎಲೆಕ್ಟ್ರಾನಿಕ್ಸ್ ಉತ್ಪಾದನಾ ಕ್ಲಸ್ಟರ್ (ಇಎಂಸಿ) ಯೋಜನೆಗೆ ಅಧಿಸೂಚಿಸಿದೆ. ಐದು ವರ್ಷಗಳ ಅವಧಿ (ಅಂದರೆ ಅಕ್ಟೋಬರ್ 2022ರವರೆಗೆ) ವರೆಗೆ ಅನುಮೋದಿತ ಯೋಜನೆಗಳಿಗೆ ವಿತರಿಸಲು ಲಭ್ಯವಿರುವ ನಿಧಿ. ಇಎಂಸಿ ಯೋಜನೆ ಅಡಿಯಲ್ಲಿ, 20 ಹಸಿರು ವಲಯ ಇ.ಎಂ.ಸಿ.ಗಳು ಮತ್ತು 3 ಸಾಮಾನ್ಯ ಸೌಲಭ್ಯ ಕೇಂದ್ರಗಳ (ಸಿ.ಎಫ್.ಸಿ.ಗಳು)ನ್ನು 3565 ಎಕರೆ ಅಳತೆಯ ಪ್ರದೇಶದಲ್ಲಿ ಸರ್ಕಾರದ ಧನಸಹಾಯ ರೂ. 1577 ಕೋಟಿ ಸೇರಿದಂತೆ 3,898 ಕೋಟಿ ರೂಪಾಯಿ ಯೋಜನಾ ವೆಚ್ಚದಲ್ಲಿ ದೇಶಾದ್ಯಂತದ 15 ರಾಜ್ಯಗಳಲ್ಲಿ ನಿರ್ಮಿಸಲು ಅನುಮೋದಿಸಲಾಗಿದೆ.

ದೇಶದಲ್ಲಿ ಎಲೆಕ್ಟ್ರಾನಿಕ್ಸ್ ಕೈಗಾರಿಕೆಗಳಿಗಾಗಿ ಮೂಲಸೌಕರ್ಯ ನೆಲೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಎಲೆಕ್ಟ್ರಾನಿಕ್ಸ್ ಮೌಲ್ಯ ಸರಪಳಿಯನ್ನು ಆಳಗೊಳಿಸಲು ಇಂಥ ಯೋಜನೆಗಳನ್ನು ಮಾರ್ಪಡಿಸಿದ ಸ್ವರೂಪದಲ್ಲಿ ಮುಂದುವರಿಸುವ ಅಗತ್ಯವಿದೆ. ಭಾರತದ ಎಲೆಕ್ಟ್ರಾನಿಕ್ಸ್ ಉತ್ಪಾದನೆ 2014-15ರಲ್ಲಿದ್ದ 1,90,366 ಕೋಟಿ ರೂಪಾಯಿಗಳಿಂದ (29 ಶತಕೋಟಿ ಅಮೆರಿಕನ್ ಡಾಲರ್), 2018-19ರಲ್ಲಿ 4,58,006 ಕೋಟಿ ರೂಪಾಯಿ (70 ಶತಕೋಟಿ ಅಮೆರಿಕನ್ ಡಾಲರ್)ಗಳಿಗೆ ಸಮಗ್ರ ವಾರ್ಷಿಕ ವೃದ್ಧಿ ದರ (ಸಿಎ.ಜಿ.ಆರ್.) ಶೇ.25ರ ದರದಲ್ಲಿ ಹೆಚ್ಚಳವಾಗಿದೆ. ಜಾಗತಿಕ ಎಲೆಕ್ಟ್ರಾನಿಕ್ಸ್ ಉತ್ಪಾದನೆಯಲ್ಲಿ ಭಾರತದ ಪಾಲು ಶೇ.1.3 (2012)ರಿಂದ ಶೇ.3 (2018)ವೃದ್ಧಿಯಾಗಿದೆ. ಇದು ಭಾರತದ ಪ್ರಸಕ್ತ ಜಿಡಿಪಿಯ ಶೇ.2.3ರಷ್ಟಾಗಿದೆ.
 

((Release ID: 1607709) Visitor Counter : 199