ರಕ್ಷಣಾ ಸಚಿವಾಲಯ

ವಿಶಾಖಪಟ್ಟಣದಲ್ಲಿ ಪ್ರತ್ಯೇಕೀಕರಣ ವ್ಯವಸ್ಥೆ ರೂಪಿಸಿದ ಭಾರತೀಯ ನೌಕಾಪಡೆ

Posted On: 18 MAR 2020 10:40PM by PIB Bengaluru

ವಿಶಾಖಪಟ್ಟಣದಲ್ಲಿ ಪ್ರತ್ಯೇಕೀಕರಣ ವ್ಯವಸ್ಥೆ ರೂಪಿಸಿದ ಭಾರತೀಯ ನೌಕಾಪಡೆ

 

ರಾಷ್ಟ್ರದಲ್ಲಿ ಕೋವಿಡ್ -19 ನಿಯಂತ್ರಿಸುವ ಪ್ರಯತ್ನದ ಭಾಗವಾಗಿ, ಭಾರತೀಯ ನೌಕಾಪಡೆ ಪೂರ್ವ ನೌಕಾ ಕಮಾಂಡ್ (ಇ.ಎನ್.ಸಿ.)ನಲ್ಲಿನ ಐ.ಎನ್.ಎಸ್. ವಿಶ್ವಕರ್ಮದಲ್ಲಿ, ಕೋವಿಡ್ ಬಾಧಿತ ರಾಷ್ಟ್ರಗಳಿಂದ ಸ್ಥಳಾಂತರ ಮಾಡಲಾಗಿರುವ ಭಾರತೀಯ ಪ್ರಜೆಗಳಿಗಾಗಿ ಪ್ರತ್ಯೇಕೀಕರಣ (ಕ್ವಾರಂಟೈನ್) ಶಿಬಿರ ಸ್ಥಾಪಿಸಿದೆ.

ಈ ಪ್ರತ್ಯೇಕೀಕರಣ ಶಿಬಿರವು 200 ಸಿಬ್ಬಂದಿಗೆ ಅಗತ್ಯವಾದ ಎಲ್ಲ ಸೂಕ್ತ ಸೌಲಭ್ಯಗಳು ಮತ್ತು ಇತರ ವ್ಯವಸ್ಥೆಗಳಿಂದ ಸಂಪೂರ್ಣ ಸಜ್ಜಾಗಿದೆ.

ಸ್ಥಳಾಂತರಿಸಲಾದ ಸಿಬ್ಬಂದಿಯನ್ನು ಕ್ಯಾಂಪ್ ನಲ್ಲಿಟ್ಟು, ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ ಮತ್ತು ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೀಡಿರುವ ಶಿಷ್ಟಾಚಾರಗಳನ್ವಯ ವೈದ್ಯಕೀಯ ನಿಗಾದಡಿಯಲ್ಲಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಇ.ಎನ್.ಸಿ.ಯ ವೈದ್ಯಕೀಯ ವೃತ್ತಿಪರರು ಮತ್ತು ನೌಕಾ ಸಿಬ್ಬಂದಿಯ ತಂಡದಿಂದ ತೀವ್ರ ನಿಗಾ ಇರಿಸಲಾಗಿದೆ.

ಮುನ್ನೆಚ್ಚರಿಕೆಯ ಕ್ರಮವಾಗಿ, ಸ್ಥಳಾಂತರಿಸಲಾಗಿರುವ ವ್ಯಕ್ತಿಗಳನ್ನು ಹದಿನಾಲ್ಕು ದಿನಗಳ ಕಾಲ ಪ್ರತ್ಯೇಕವಾಗಿಡಲಾಗುತ್ತದೆ. ವೈರಾಣು ಪಸರಿಸದಂತೆ ತಡೆಯಲು ಸ್ಥಳಾಂತರಿಸಲಾಗಿರುವ ಎಲ್ಲ ಸಿಬ್ಬಂದಿಗೆ ಸೂಕ್ತ ರೋಗತಡೆ ಕಾಳಜಿಯ ಆರೈಕೆ ಒದಗಿಸಲಾಗುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಲು ಇ.ಎನ್.ಸಿ. ರಾಜ್ಯ ಮತ್ತು ಜಿಲ್ಲಾ ಆಡಳಿತದ ಆರೋಗ್ಯ ಅಧಿಕಾರಿಗಳೊಂದಿಗೆ ಸಕ್ರಿಯವಾಗಿ ಸಹಯೋಗ ನೀಡುತ್ತಿದೆ.

ಕೋವಿಡ್ 19 – ಕೊರೋನಾ ವೈರಾಣು ಸಾಂಕ್ರಾಮಿಕ ಸೋಂಕು ಒಡ್ಡಿರುವ ಭೀತಿಯ ಸವಾಲನ್ನು ಸಮರ್ಥವಾಗಿ ಎದಿರಸಲು ನಾವು ಸಂಪೂರ್ಣ ಸನ್ನದ್ಧರಾಗಿದ್ದೇವೆ ಎಂಬುದನ್ನು ಖಾತ್ರಿ ಪಡಿಸಲು ಭಾರತ ಸರ್ಕಾರ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಭಾರತದ ಜನರ ಸಕ್ರಿಯ ಬೆಂಬಲದೊಂದಿಗೆ, ನಾವು ನಮ್ಮ ದೇಶದಲ್ಲಿ ವೈರಾಣು ಹಬ್ಬದಂತೆ ತಡೆಯಲು ಸಾಧ್ಯವಿದೆ.

***



(Release ID: 1607059) Visitor Counter : 84