ರೈಲ್ವೇ ಸಚಿವಾಲಯ

ಕೊರೊನಾ ವೈರಾಣು ಹರಡದಂತೆ ತಡೆಗಟ್ಟಲು ಎಲ್ಲ ವಲಯಗಳ ಸನ್ನದ್ಧತೆಯ ಪ್ರಗತಿ ಪರಾಮರ್ಶೆ ನಡೆಸಿದ ರೈಲ್ವೆ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಶ್ರೀ ಪೀಯೂಷ್ ಗೋಯಲ್

Posted On: 18 MAR 2020 2:30PM by PIB Bengaluru

ಕೊರೊನಾ ವೈರಾಣು ಹರಡದಂತೆ ತಡೆಗಟ್ಟಲು ಎಲ್ಲ ವಲಯಗಳ ಸನ್ನದ್ಧತೆಯ ಪ್ರಗತಿ ಪರಾಮರ್ಶೆ ನಡೆಸಿದ ರೈಲ್ವೆ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಶ್ರೀ ಪೀಯೂಷ್ ಗೋಯಲ್

ಕೋವಿಡ್ -19 ಹಿನ್ನೆಲೆಯಲ್ಲಿ ಕ್ಷಿಪ್ರ ಸ್ಪಂದನಾ ತಂಡ ರಚಿಸಿದ ಭಾರತೀಯ ರೈಲ್ವೆ

ಕೊರೊನಾ ವೈರಾಣು ಹರಡದಂತೆ ತಡೆಯಲು ಕೈಗೊಂಡಿರುವ ಕ್ರಮಗಳ ಕುರಿತಂತೆ ಸಕಾಲದ ನಿಗಾಕ್ಕಾಗಿ ಕಾರ್ಯಾರಂಭ ಮಾಡಿದ ಆನ್ ಲೈನ್ ಡ್ಯಾಷ್ ಬೋರ್ಡ್

 

ದೇಶದ ಅತ್ಯಂತ ಬೃಹತ್ ಸಾರಿಗೆಯಾದ ಭಾರತೀಯ ರೈಲ್ವೆದೇಶದಲ್ಲಿ ಕೊರೋನಾ ಸೋಂಕು ಹರಡದಂತೆ ತಡೆಗಟ್ಟಲು ಸರಣಿ ಸಕಾರಾತ್ಮಕ ಕ್ರಮಗಳನ್ನು ಕೈಗೊಂಡಿದೆಪ್ರಸಕ್ತ ಪ್ರಗತಿಯಲ್ಲಿರುವ ಪ್ರಯತ್ನಗಳ ಬಗ್ಗೆ ಖುದ್ದು ತಿಳಿಯಲು ರೈಲ್ವೆ ಹಾಗೂ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವ ಶ್ರೀ ಪೀಯೂಷ್ ಗೋಯೆಲ್  ನಿಟ್ಟಿನಲ್ಲಿ ಭಾರತೀಯ ರೈಲ್ವೆಯ ಸನ್ನದ್ಧತೆಯ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದರು ಸಭೆಯಲ್ಲಿ ರೈಲ್ವೆ ಮಂಡಳಿ ಅಧ್ಯಕ್ಷರುರೈಲ್ವೆ ಮಂಡಳಿಯ ಸದಸ್ಯರುಗಳ ಜೊತೆಗೆ ಎಲ್ಲ ವಲಯಗಳ ಪ್ರಧಾನ ವ್ಯವಸ್ಥಾಪಕರು ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರುವಿಡಿಯೋ ಸಂವಾದದ ಮೂಲಕ ಪಾಲ್ಗೊಂಡಿದ್ದರು.

2. ರೈಲ್ವೆ ಮಂಡಳಿಯ ಅಧ್ಯಕ್ಷರುರಾಷ್ಟ್ರೀಯ ಪ್ರಯತ್ನದ ಭಾಗವಾಗಿ ಕೊರೋನಾ ವೈರಾಣು ಪಸರಿಸದಂತೆ ರೈಲ್ವೆ ಇಲಾಖೆ ಕೈಗೊಂಡಿರುವ ಕ್ರಮಗಳ ಕುರಿತಂತೆ ಸಚಿವರಿಗೆ ವಿವರಿಸಿದರು ಕ್ರಮಗಳಲ್ಲಿ  ಕೆಳಗಿನವು ಸೇರಿವೆ:

1.   ರೈಲ್ವೆ ಜಾಲದಾದ್ಯಂತ ಯಾವುದೇ ಸಂಭವನೀಯ ಪ್ರಕರಮದಲ್ಲಿ ಪ್ರತ್ಯೇಕ ಸೌಲಭ್ಯ (ಕ್ವಾರಂಟೈನ್ನಿರ್ಮಿಸುವುದುಎಲ್ಲಾ ರೈಲ್ವೆ ನಿಲ್ದಾಣದ ಆವರಣದಲ್ಲಿ ಮತ್ತು ರೈಲುಗಳಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಹೆಚ್ಚಿಸುವುದು.

2.   ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಸಿಬ್ಬಂದಿ ಮತ್ತು ತರಬೇತಿ ಇಲಾಖೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಅನಗತ್ಯ ಪ್ರಯಾಣ ನಿರ್ಬಂಧಿಸುವಸೋಂಕಿಗೆ ಸಂಬಂಧಿಸಿದಂತೆ ನಿಯಂತ್ರಣ ಕ್ರಮಗಳ ನಿಗಾ ಮತ್ತು ವೈರಾಣು ಹಬ್ಬದಂತೆ ತಡೆಯುವ ಇತರ ಕಾರ್ಯಾನುಷ್ಠಾನದ ಕ್ರಮಗಳ ಕುರಿತಂತೆ ಹೊರಡಿಸಿರುವ ಸಲಹೆ ಮಾರ್ಗದರ್ಶನಗಳನ್ನು ಪಸರಿಸುವುದು,

3.   ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ವಿವಿಧ ನಿಲ್ದಾಣಗಳಲ್ಲಿ ನೆರವಿನ ಗೂಡುಗಳನ್ನು ಸ್ಥಾಪಿಸಿ ಜನರಿಗೆ ನೆರವು ಲಭ್ಯವಾಗುವಂತೆ ಮಾಡುವುದು.

4.   ಬೋಗಿಗಳಶೌಚಾಲಯಗಳಅಡುಗೆ ಮನೆ ಇರುವ ಬೋಗಿಗಳ ಸ್ವಚ್ಛತೆ ಮತ್ತು ಎಲ್ಲ ಪ್ರಯಾಣಿಕರ ಸಂಪರ್ಕದ ಸ್ಥಳಗಳಲ್ಲಿ ಕೈತೊಳೆಯುವ ಸಲಕರಣೆಗಳ ಸೂಕ್ತ ಲಭ್ಯತೆ ಮತ್ತು ರೈಲುಗಳಲ್ಲಿಪ್ಲಾಟ್ ಫಾಂಗಳಲ್ಲಿ ಮತ್ತು ಕಚೇರಿಗಳಲ್ಲಿ ನೀರಿನ ಲಭ್ಯತೆಯ ಖಾತ್ರಿ.

5.   ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವ ಸಭೆಗಳುತರಬೇತಿಸಮಾವೇಶ ಇತ್ಯಾದಿಗಳ ಮೇಲೆ ನಿರ್ಬಂಧ ಮತ್ತು ನಿರುತ್ತೇಜನಗೊಳಿಸುವುದು.

6.   ರೋಗಳಿಗಳ ಪತ್ತೆ ಮತ್ತು ಸ್ವಚ್ಛತೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ಸಿಬ್ಬಂದಿಗೆ ಸೂಕ್ತವಾದ ಸಾಧನಸಲಕರಣೆಗಳ ಲಭ್ಯತೆಯ ಖಾತ್ರಿ ಪಡಿಸುವುದು.

7.   ರೈಲು ನಿಲ್ದಾಣಗಳು ಮತ್ತು ರೈಲುಗಳಲ್ಲಿ ನಿಯಮಿತವಾಗಿ  ಸಾರ್ವಜನಿಕರಿಗೆ ನೈರ್ಮಲ್ಯದ ಕುರಿತಂತೆ ಮತ್ತು ಪದೇ ಪದೇ ಕೈತೊಳೆಯುವ ಬಗ್ಗೆಸಾಮಾಜಿಕ ಅಂತರ ಕಾಯ್ದುಕೊಳ್ಳುವ ಕುರಿತಂತೆಕೆಮ್ಮುವಾಗ ಮತ್ತು ಸೀನುವಾಗ ಬಾಯಿ ಮುಚ್ಚಿಕೊಳ್ಳುವಂತೆಯಾರಿಗಾದರೂ ಜ್ವರ ಇದ್ದರೆ (ಪ್ರಯಾಣವನ್ನು ಸ್ಥಗಿತಗೊಳಿಸಿ ವೈದ್ಯರ ಬಳಿ ತಕ್ಷಣ ತೆರಳುವಂತೆರೈಲು ನಿಲ್ದಾಣದ ಆವರಣದಲ್ಲಿ ಎಲ್ಲೆಂದರಲ್ಲಿ ಉಗುಳದಂತೆ ಹೀಗೆ ಮಾಡಬೇಕಾದ್ದುಮಾಡಬಾರದ್ದು ಯಾವುವು ಎಂಬ ಕುರಿತಂತೆ ಪಿ.ಸಿಸ್ಟಮ್ ಮೂಲಕ ಪ್ರಕಟಣೆಗಳನ್ನು ನೀಡಲಾಗುತ್ತಿದೆ.

2.1 ಕೋವಿಡ್ 19 ತಡೆ ಹಿನ್ನೆಲೆಯಲ್ಲಿ ರೈಲು ನಿಲ್ದಾಣಗಳಲ್ಲಿ ಅನಗತ್ಯವಾಗಿ ಗುಂಪು ಸೇರುವುದನ್ನು ತಪ್ಪಿಸುವಂತೆ ಎಲ್ಲ ಬಾಧ್ಯಸ್ಥರಿಗೆ ಸೂಚನೆ ನೀಡಲಾಗಿದೆ ಎಂದು ಅವರಿಗೆ ತಿಳಿಸಲಾಯಿತುರೈಲು ನಿಲ್ದಾಣಗಳಲ್ಲಿ ಡಿಆರ್.ಎಂ.ಗಳು ಪರಿಸ್ಥಿತಿಯ ಪರಾಮರ್ಶೆ ನಡೆಸಬಹುದು ಮತ್ತು ಎಲ್ಲಿ ಅಗತ್ಯವಿದೆಯೋ ಅಲ್ಲಿ ನಿಲ್ದಾಣಗಳಲ್ಲಿ ಹೆಚ್ಚಿನ ಜನದಟ್ಟಣೆ ನಿಯಂತ್ರಿಸಲು ಪ್ಲಾಟ್ ಫಾಂ ಟಿಕೆಟ್ ದರವನ್ನು 50 ರೂಪಾಯಿಗಳಿಗೆ ಹೆಚ್ಚಳ ಮಾಡಬಹುದು ಎಂದೂ ಸಲಹೆ ನೀಡಲಾಯಿತು  

3.   ಭಾರತೀಯ ರೈಲ್ವೆಯ ಪ್ರಯತ್ನಗಳನ್ನು ಶ್ಲಾಘಿಸಿದ ಸಚಿವರುಸಾಂಕ್ರಾಮಿಕ ರೋಗದ ವಿರುದ್ಧ ಜಯ ಸಾಧಿಸುವ ತನಕ ವಿರಮಿಸದಂತೆ ಮತ್ತು ಕಠಿಣ ಪರಿಶ್ರಮ ಮುಂದುವರಿಸುವಂತೆ ಸಂಬಂಧಿತ ಎಲ್ಲರಿಗೂ ಸೂಚನೆ ನೀಡಿದರುಭಆರತೀಯ ರೈಲ್ವೆ ಸಿಬ್ಬಂದಿಯ ಕಠಿಣ ಪರಿಶ್ರಮಕ್ಕೆ ಪ್ರಧಾನಮಂತ್ರಿ ಮೋದಿ ಅವರು ವ್ಯಕ್ತಪಡಿಸಿರುವ ಮೆಚ್ಚುಗೆಯನ್ನೂ ಅವರು ತಿಳಿಸಿದರು ನಿಟ್ಟಿನಲ್ಲಿ ನಡೆದಿರುವ ಎಲ್ಲ ಕಾರ್ಯಗಳ ಸತತ ನಿಗಾಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆಯೂ ಸಚಿವರು  ಕೆಳಗಿನ ನಿರ್ದಿಷ್ಟವಾಗಿ ಸೂಚನೆ ನೀಡಿದರು.: 

1.   ಸಚಿವಾಲಯದ ಅಧಿಕಾರಿಗಳು ಮತ್ತು ವಿವಿಧ ವಲಯ ರೈಲ್ವೆಯ ನಡುವೆ ಉತ್ತಮ ಸಹಯೋಗಕ್ಕಾಗಿ ಆನ್ ಲೈನ್ ಡ್ಯಾಷ್ ಬೋರ್ಡ್ ನಿರ್ಮಾಣ ಡ್ಯಾಷ್ ಬೋರ್ಡ್ ಮೂಲಕ ಆನ್ ಲೈನ್ ಮೂಲಕ ಕೋವಿಡ್ 19 ಕುರಿತಂತೆ ದೈನಂದಿನ ಸನ್ನದ್ಧತೆಯ ಕಾರ್ಯಚಟುವಟಿಕೆಗಳ ಬಗ್ಗೆ ನಿಗಾ ಇಡಬಹುದು ಮತ್ತು ಅವುಗಳ ಪ್ರಗತಿ ತಿಳಿಯಬಹುದು.  

2.   ರೈಲ್ವೆ ಮಂಡಳಿಯ ಆರು ಕಾರ್ಯನಿರ್ವಾಹಕ ನಿರ್ದೇಶಕರುಗಳನ್ನೊಳಗೊಂಡ ಕೋವಿಡ್ 19 ಕ್ಷಿಪ್ರ ಸ್ಪಂದನಾ ತಂಡ ರಚನೆ ಮಾಡಲಾಗಿದ್ದುಇದು ಎಲ್ಲ ವಲಯಗಳಲ್ಲಿನ ಭಾರತೀಯ ರೈಲ್ವೆಯ ಪ್ರಯತ್ನಗಳ ಬಗ್ಗೆ ಸಂಚಾಲನೆ ಮಾಡಲಿದೆ ತಂಡವು ಎಲ್ಲ ಕೋವಿಡ್ 19 ಸನ್ನದ್ಧತೆ ಚಟುವಟಿಕೆಯ ಜೊತೆ ಸಹಯೋಗ ಏರ್ಪಡಿಸಲಿದೆಪ್ರತಿ ವಲಯದ ಒಬ್ಬ ನೋಡಲ್ ಅಧಿಕಾರಿ ಕೋವಿಡ್ 19 ಸನ್ನದ್ಧತಾ ಕ್ರಮಗಳ ಸಂಪರ್ಕ ಬಿಂದುವಾಗಿ ಸೇವೆ ಸಲ್ಲಿಸಲಿದ್ದಾರೆ ಮತ್ತು ಅವರು ರೈಲ್ವೆ ಮಂಡಳಿಯ ಕೋವಿಡ್ 19 ಸ್ಪಂದನಾ ತಂಡದೊಂದಿಗೆ ಸತತ ಸಂಪರ್ಕದಲ್ಲಿರುತ್ತಾರೆ.

3.   ಪ್ರಯಾಣಿಕರಿಗೆ ಅನಗತ್ಯವಾದ ರೈಲು ಪ್ರಯಾಣವನ್ನು ನಿಲ್ಲಿಸುವಂತೆ ಪ್ರಯಾಣಿಕರಿಗೆ ಸಲಹೆ ನೀಡಲಾಗಿದೆ ಮತ್ತು ಅವರು ರೈಲಿನಲ್ಲಿ ಪ್ರಯಾಣ ಮಾಡುವಾಗ ಅವರಿಗೆ ನೆಗಡಿಜ್ವರ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಲಾಗುತ್ತದೆಪ್ರಯಾಣದ ಯಾವುದೇ ಸಂದರ್ಭದಲ್ಲಿ ಪ್ರಯಾಣಿಕರಿಗೆ ತಮಗೆ ಜ್ವರ ಇದೆ ಎನಿಸಿದರೆಅವರು ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಿ ವೈದ್ಯಕೀಯ ಆರೈಕೆ ಮತ್ತು ಹೆಚ್ಚಿನ ನೆರವು ಪಡೆಯಬಹುದಾಗಿದೆ.

4.   ಭಾರತೀಯ ರೈಲ್ವೆಯ ಎಲ್ಲ ಕಡೆಗಳಲ್ಲಿ  ಮೇಲಿನ ಎಲ್ಲ ನಿರ್ದೇಶನಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ನಿರಂತರವಾಗಿ ನಿಗಾ ಇಡಲಾಗುವುದು.

 

****


(Release ID: 1606940) Visitor Counter : 124