ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ

ಉನ್ನತ ಮಟ್ಟದ ಸಚಿವರ ಗುಂಪಿನಿಂದ ಕೋವಿಡ್-19 ಪ್ರತಿಬಂಧಿಸಲು ಹಾಗು ನಿಭಾಯಿಸಲು ಕೈಗೊಂಡ ಕ್ರಮಗಳು ಮತ್ತು ಹಾಲಿ ಪರಿಸ್ಥಿತಿಯ ಪರಾಮರ್ಶೆ

Posted On: 11 MAR 2020 7:21PM by PIB Bengaluru

ಉನ್ನತ ಮಟ್ಟದ ಸಚಿವರ ಗುಂಪಿನಿಂದ ಕೋವಿಡ್-19 ಪ್ರತಿಬಂಧಿಸಲು ಹಾಗು ನಿಭಾಯಿಸಲು ಕೈಗೊಂಡ ಕ್ರಮಗಳು ಮತ್ತು ಹಾಲಿ ಪರಿಸ್ಥಿತಿಯ ಪರಾಮರ್ಶೆ

 

ಗೌರವಾನ್ವಿತ ಪ್ರಧಾನ ಮಂತ್ರಿ ಅವರ ನಿರ್ದೇಶನದ ಮೇರೆಗೆ ದೇಶದಲ್ಲಿ ನೋವೆಲ್ ಕೊರೊನಾ ವೈರಸ್ (ಕೋವಿಡ್-19 )ಯ ನಿರ್ವಹಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳು, ಸಿದ್ದತೆ ಮತ್ತು ಪರಿಸ್ಥಿತಿಯ ಪರಾಮರ್ಶೆ , ನಿಗಾ ಮತು ಮೌಲ್ಯಮಾಪನ ಮಾಡುವುದಕ್ಕಾಗಿ ಉನ್ನತ ಮಟ್ಟದ ಸಚಿವರ ಗುಂಪನ್ನು (ಜಿ.ಒ.ಎಂ.) ರಚಿಸಲಾಗಿದೆ.  ಜಿ.ಒ.ಎಂ. ನ ಸಭೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಹರ್ಷ ವರ್ಧನ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಾಗರಿಕ ವಾಯು ಯಾನ ಸಚಿವ ಶ್ರೀ ಹರ್ದೀಪ ಎಸ್. ಪುರಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಸುಬ್ರಮಣ್ಯಂ ಜೈಶಂಕರ್, ಗೃಹ ಖಾತೆ ರಾಜ್ಯ ಸಚಿವ ಶ್ರೀ ನಿತ್ಯಾನಂದ ರೈ, ಶಿಪ್ಪಿಂಗ್ ,ರಾಸಾಯನಿಕಗಳು, ಮತ್ತು ರಸಗೊಬ್ಬರ ಸಚಿವಾಲಯದ ರಾಜ್ಯ(ಸ್ವ/ನಿ) ಸಚಿವ ಮನ್ ಸುಖ್ ಮಾಂಡವೀಯ, ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶ್ರೀ ಅಶ್ವಿನಿ ಕುಮಾರ್ ಚೌಬೇ, ಜಿ.ಒ.ಎಂ. ನ ಸದಸ್ಯರು ಭಾಗವಹಿಸಿದ್ದರು.

ಕೋವಿಡ್ -19 ರ ಹಾಲಿ ಸ್ಥಿತಿಯ ಬಗ್ಗೆ ಜಿ.ಒ.ಎಂ. ಗೆ ಪ್ರದರ್ಶಿಕೆ ಮೂಲಕ ವಿವರಿಸಲಾಯಿತು. ಭಾರತದಲ್ಲಿ ಕೋವಿಡ್- 19 ರ ನಿಭಾವಣೆ ಮತ್ತು ತಡೆಯ ಬಗ್ಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ತಿಳಿಸಲಾಯಿತು. ಕೋವಿಡ್ -19 ಕ್ಕೆ ಸಂಬಂಧಿಸಿ ಉಂಟಾಗುತ್ತಿರುವ ಜಾಗತಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ನೀಡಲಾದ ವಿವಿಧ ಪ್ರವಾಸೀ ಸಲಹಾ ಮಾರ್ಗದರ್ಶಿ ಕುರಿತ ಮಾಹಿತಿ ಸಹಿತ 2020 ರ ಮಾರ್ಚ್ 10 ರಂದು ನೀಡಲಾದ ಇನ್ನೂ ಎರಡು ಹೆಚ್ಚುವರಿ ಸಲಹೆಗಳ ಬಗ್ಗೆಯೂ ತಿಳಿಸಲಾಯಿತು. ಪ್ರತಿಬಂಧಕ ಕ್ರಮವಾಗಿ ಚೀನಾ, ಹಾಂಕಾಂಗ್, ಕೊರಿಯಾ ಗಣತಂತ್ರ, ಜಪಾನ್, ಇಟೆಲಿ, ಥೈಲ್ಯಾಂಡ್, ಸಿಂಗಾಪುರ, ಇರಾನ್, ಮಲೇಶಿಯಾ, ಫ್ರಾನ್ಸ್, ಸ್ಪೈನ್, ಮತ್ತು ಜರ್ಮನಿಗಳಿಗೆ ಪ್ರವಾಸ ಕೈಗೊಂಡ ಹಿನ್ನೆಲೆ  ಇರುವವರು ಪ್ರವಾಸೀ ಸಲಹಾ ಮಾರ್ಗದರ್ಶಿ ಪ್ರಕಾರ ಅವರು ದೇಶಕ್ಕೆ ಬಂದ ಬಳಿಕ, ಆ ದಿನದಿಂದ  14 ದಿನಗಳ ಕಾಲ ಸ್ವಯಂ ಕ್ವಾರಂಟೈನ್ ಗೆ ಬದ್ದರಾಗಿರಬೇಕು. ಮತ್ತು ಅವರಿಗೆ ಅವರ ಉದ್ಯೋಗದಾತರು ಈ ಅವಧಿಯಲ್ಲಿ ಮನೆಯಿಂದಲೇ ಕಾರ್ಯನಿರ್ವಹಿಸುವ ಅವಕಾಶ ಒದಗಿಸಿಕೊಡಬೇಕು.

ಈ ಸಭೆಯಲ್ಲಿ ಸಂಬಂಧಿತ ಸಚಿವಾಲಯಗಳ/ ಖಾತೆಗಳ ಕಾರ್ಯದರ್ಶಿಗಳು, ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರೀತಿ ಸುದಾನ್ ಅವರು ಜಿ.ಒ.ಎಂ.ಗೆ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಕಠಿಣ ಐ.ಇ.ಸಿ.ಮಾಡುವುದಕ್ಕೆ ನೀಡಲಾದ ಸಲಹೆಗಳ ಬಗ್ಗೆ ತಿಳಿಸಿದರು. ಜನತೆಗೆ ಕೈಗೊಳ್ಳಬೇಕಾದ ಮುಂಜಾಗರೂಕತಾ ಕ್ರಮಗಳು, ರೋಗ ಲಕ್ಷಣಗಳು, ಮತ್ತು ಸಹಾಯವಾಣಿಗಳ ಸಂಖ್ಯೆಯ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು. ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ  ಹೆಚ್ಚುವರಿ ಕ್ವಾರಂಟೈನ್ ಸೌಲಭ್ಯಗಳು, ಪ್ರತ್ಯೇಕ ವಾರ್ಡ್ ಗಳ ರಚನೆ, ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ತರಬೇತಿ ನೀಡಲು ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆಯೂ ತಿಳಿಸಲಾಯಿತು. ನಿಯಮಿತ ನಿಭಾವಣೆ, ನಿಗಾ, ಸಲಹಾ ಮಾರ್ಗದರ್ಶಿಗಳು, ಇತ್ಯಾದಿಗಳನ್ನು ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದ ಅವರು 12 ದೇಶಗಳಾದ ಚೀನಾ, ಸಿಂಗಾಪುರ, ಥೈಲ್ಯಾಂಡ್, ಹಾಂಕಾಂಗ್, ಜಪಾನ್, ದಕ್ಷಿಣ ಕೊರಿಯಾ, ವಿಯೆಟ್ನಾಂ, ಮಲೇಶಿಯಾ, ನೇಪಾಳ, ಇಂಡೋನೇಶಿಯಾ, ಇರಾನ್, ಮತ್ತು ಇಟಲಿಗಳಿಂದ ಬರುವ ಎಲ್ಲಾ ವಿಮಾನಗಳ ಪ್ರಯಾಣಿಕರನ್ನು ನಿಗದಿ ಮಾಡಿದ ಏರೋಬ್ರಿಡ್ಜ್ ಗಳಲ್ಲಿ ಸಾರ್ವತ್ರಿಕವಾಗಿ ಸ್ಕ್ರೀನಿಂಗ್ ಮಾಡಲಾಗುತ್ತಿದೆ ಎಂಬುದನ್ನೂ ಪುನರುಚ್ಚರಿಸಿದರು.

ಭಾರತದ ನಾಗರಿಕರ ಹಿತಕ್ಕಾಗಿ ಪರಿಗಣಿಸಬಹುದಾದ ಇತರ ವಿವಿಧ ಮುಂಜಾಗರೂಕತಾ ಕಾರ್ಯಕ್ರಮಗಳ ಬಗ್ಗೆಯೂ ಜಿ.ಒ.ಎಂ. ವಿಸ್ತಾರ ವ್ಯಾಪ್ತಿಯಲ್ಲಿ ಸಮಾಲೋಚನೆ ನಡೆಸಿತು. ನೊವೆಲ್ ಕೊರೋನಾವೈರಸ್ ಖಾಯಿಲೆ (ಕೋವಿಡ್-19) ವಿರುದ್ದ ಹೋರಾಡಲು ವಿವಿಧ ಸಚಿವಾಲಯಗಳು/ ಇಲಾಖೆಗಳು ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಒಗ್ಗೂಡಿ ಕೈಗೊಂಡ ಕ್ರಮಗಳು, ಸಿದ್ದತೆಗಳು ಮತ್ತು ಪ್ರಯತ್ನಗಳ ಬಗ್ಗೆ ಜಿ.ಒ.ಎಂ. ತೃಪ್ತಿ ವ್ಯಕ್ತಪಡಿಸಿತು.

ಸಂಪುಟ ಕಾರ್ಯದರ್ಶಿ ಅವರು ಸಂಬಂಧಿತ ಸಚಿವಾಲಯಗಳು, ಸೇನಾ ಪ್ರತಿನಿಧಿಗಳು, ಐ.ಟಿ.ಬಿ.ಪಿ. ಜೊತೆ ಸಭೆ ನಡೆಸಿ, ಎಂ.ಒ.ಎಚ್.ಎಫ್.ಡಬ್ಲ್ಯು. ಸಲಹೆ  ಮಾಡಿರುವ ಸಾಂಕ್ರಾಮಿಕ ಖಾಯಿಲೆಗಳ ಕಾಯ್ದೆ, 1897 ರ ಸೆಕ್ಷನ್ 2 ನ್ನು ಎಲ್ಲಾ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳು ಅನುಷ್ಟಾನ  ಮಾಡುವಂತೆ ನಿರ್ಧರಿಸಿದರು. ಇದರಿಂದ  ಕಾಲ ಕಾಲಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ/ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೀಡಲಾಗುವ ಸಲಹಾ ಮಾರ್ಗದರ್ಶಿಗಳನ್ನು ಜಾರಿಗೆ ತರಲು ಅನುಕೂಲವಾಗಲಿದೆ. ಇಟಲಿಯಿಂದ ಬಂದಿರುವ 83 ಪ್ರಯಾಣಿಕರನ್ನು ಮನೇಸರ್ ನಲ್ಲಿಯ ಸೇನಾ ಸೌಲಭ್ಯದಲ್ಲಿ ಕ್ವಾರಂಟೈನ್ ಮಾಡಲಾಗಿದೆ.

***



(Release ID: 1606064) Visitor Counter : 192