ಪ್ರಧಾನ ಮಂತ್ರಿಯವರ ಕಛೇರಿ

ಭಾರತ ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೇಳಿದ ಪ್ರಧಾನ ಮಂತ್ರಿ ಮೋದಿ

ಪ್ರಕಟಣಾ ದಿನಾಂಕ: 24 FEB 2020 10:02AM by PIB Bengaluru

ಭಾರತ ನಿಮ್ಮ ಆಗಮನವನ್ನು ನಿರೀಕ್ಷಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗೆ ಹೇಳಿದ ಪ್ರಧಾನ ಮಂತ್ರಿ ಮೋದಿ
 

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ 2 ದಿನಗಳ ಅಧಿಕೃತ ಭಾರತ ಭೇಟಿಯ ಮುನ್ನ “@ ಪೊಟಸ್ ರಿಯಲ್ ಡೊನಾಲ್ಡ್ ಟ್ರಂಪ್ / @POTUS realDonaldTrump ಭಾರತ ನಿಮಗಾಗಿ ಕಾಯುತ್ತಿದೆ” ಎಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

“ನಿಮ್ಮ ಭೇಟಿ ನಮ್ಮ ದೇಶಗಳ ನಡುವೆ ಬಾಂಧವ್ಯವನ್ನು ಮತ್ತಷ್ಟು ಬಲಗೊಳಿಸಲಿದೆ. ಅತಿ ಶೀಘ್ರದಲ್ಲಿ ಅಹಮದಾಬಾದ್ ನಲ್ಲಿ ಭೇಟಿ ಆಗೋಣ” ಎಂದು ತಮ್ಮ ಟ್ವೀಟ್ ಸಂದೇಶದಲ್ಲಿ ಪ್ರಧಾನ ಮಂತ್ರಿಗಳು ಬರೆದಿದ್ದಾರೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಅಹಮದಾಬಾದ್ ಗೆ ತಲುಪಲಿದ್ದಾರೆ, ಸಾಬರಮತಿ ಆಶ್ರಮಕ್ಕೆ ಭೇಟಿ ನೀಡುವುದರ ಜೊತೆಗೆ ಮೊಟೆರಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ ನಮಸ್ತೆ ಟ್ರಂಪ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂಜೆ ಅವರು ನವದೆಹಲಿಗೆ ತೆರಳಲಿದ್ದಾರೆ. ಪ್ರಧಾನ ಮಂತ್ರಿ ಅವರೊಂದಿಗೆ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ವಿಸ್ತ್ರುತ ಚರ್ಚೆ ನಡೆಸುವ ನಿರೀಕ್ಷೆ ಇದೆ.


(ಪ್ರಕಟಣೆ ಐ.ಡಿ.: 1604186) ವಿಸಿಟರ್ ಕೌಂಟರ್ : 196
ಪ್ರಕಟಣೆಯನ್ನು ಇದರಲ್ಲಿ ಓದಿ: Marathi , Telugu , English , Urdu , हिन्दी , Bengali , Punjabi , Gujarati , Tamil