ಸಂಪುಟ
ಮೂರು ವರ್ಷಗಳ ಅವಧಿಗೆ 22ನೇ ಭಾರತೀಯ ಕಾನೂನು ಆಯೋಗದ ಸ್ಥಾಪನೆಗೆ ಸಂಪುಟದ ಅನುಮೋದನೆ
Posted On:
19 FEB 2020 4:40PM by PIB Bengaluru
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಆದೇಶದ ಅಧಿಕೃತ ಗೆಜೆಟ್ ಅಧಿಸೂಚನೆ ಪ್ರಕಟವಾದ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಇಪ್ಪತ್ತ ಎರಡನೇ ಭಾರತೀಯ ಕಾನೂನು ಆಯೋಗ ರಚಿಸಲು ತನ್ನ ಅನುಮೋದನೆ ನೀಡಿದೆ.
ಪ್ರಯೋಜನಗಳು
ತನ್ನ ಉಲ್ಲೇಖಿತ ನಿಯಮಗಳ ಪ್ರಕಾರ, ಆಯೋಗಕ್ಕೆ ಅಧ್ಯಯನ ಮತ್ತು ಶಿಫಾರಸುಗಳಿಗಾಗಿ ವಹಿಸಲಾಗುವ ಕಾನೂನಿನ ವಿವಿಧ ಅಂಶಗಳ ಕುರಿತಂತೆ ಸರ್ಕಾರ ವಿಶೇಷಜ್ಞತೆಯ ಸಂಸ್ಥೆಯಿಂದ ಶಿಫಾರಸುಗಳ ಪ್ರಯೋಜನವನ್ನು ಪಡೆದುಕೊಳ್ಳುತ್ತದೆ. ಕಾನೂನು ಆಯೋಗವು, ಹಾಲಿ ಕಾನೂನು ಸುಧಾರಣೆಗಳಿಗಾಗಿ ಮತ್ತು ಹೊಸ ಕಾನೂನುಗಳನ್ನು ರೂಪಿಸಲು ಕೇಂದ್ರ ಸರ್ಕಾರ ತನಗೆ ಉಲ್ಲೇಖಿಸುವ ಅಥವಾ ಸ್ವಯಂ ಕಾನೂನು ಸಂಶೋಧನೆ ಮತ್ತು ಭಾರತದಲ್ಲಿರುವ ಹಾಲಿ ಕಾನೂನುಗಳ ಪರಾಮರ್ಶೆಯನ್ನು ಕೈಗೊಳ್ಳುತ್ತದೆ. ನ್ಯಾಯದಾನ ವ್ಯವಸ್ಥೆಯಲ್ಲಿ ಪ್ರಕ್ರಿಯೆಗಳ ವಿಳಂಬ ನಿವಾರಿಸಲು, ಪ್ರಕರಣಗಳ ತ್ವರಿತ ಇತ್ಯರ್ಥ ಮಾಡಲು, ವ್ಯಾಜ್ಯದ ವೆಚ್ಚ ತಗ್ಗಿಸುವುದೇ ಮೊದಲಾದ ಸುಧಾರಣೆ ತರಲೂ ಇದು ಅಧ್ಯಯನ ಮತ್ತು ಸಂಶೋಧನೆ ಕೈಗೊಳ್ಳುತ್ತದೆ. ಭಾರತೀಯ ಕಾನೂನು ಆಯೋಗವು ಪರಸ್ಪರ ಪೂರಕವಾಗಿರುತ್ತದೆ: -
a. ಸೂಕ್ತವಲ್ಲದ ಮತ್ತು ಮುಂದೆಂದೂ ಅಗತ್ಯವಲ್ಲದ ಕಾನೂನು ಗುರುತಿಸಿ, ತತ್ ಕ್ಷಣವೇ ಬದಲಾವಣೆ ಮಾಡಲು;
b.ರಾಜ್ಯಗಳ ನಿರ್ದೇಶಕ ತತ್ವಗಳ ನಿಟ್ಟಿನಲ್ಲಿ ಹಾಲಿ ಇರುವ ಕಾನೂನುಗಳನ್ನು ಪರಾಮರ್ಶಿಸುವುದು ಮತ್ತು ಅವುಗಳ ಸುಧಾರಣೆಗೆ ಸಲಹೆ ನೀಡುವುದು ಮತ್ತು ನಿರ್ದೇಶಕ ತತ್ವಗಳನ್ನು ಅನುಷ್ಠಾನ ಮಾಡಲು ಅಂಥ ಕಾನೂನು ಅಗತ್ಯವೇ ಎಂಬ ಬಗ್ಗೆ ಸಲಹೆ ನೀಡುವುದು ಮತ್ತು ಸಂವಿಧಾನದ ಪೀಠಿಕೆಯ ಉದ್ದೇಶಗಳನ್ನು ಈಡೇರಿಸುವುದು.;
c. ಕಾನೂನು ಮತ್ತು ನ್ಯಾಯಾಂಗ ಆಡಳಿತಕ್ಕೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಸರ್ಕಾರಕ್ಕೆ ತನ್ನ ಅಭಿಪ್ರಾಯಗಳನ್ನು ಪರಿಗಣಿಸಿ ಮತ್ತು ತಿಳಿಸಬಹುದು, ಅದನ್ನು ಸರ್ಕಾರವು ನಿರ್ದಿಷ್ಟವಾಗಿ ಕಾನೂನು ಮತ್ತು ನ್ಯಾಯ ಸಚಿವಾಲಯ (ಕಾನೂನು ವ್ಯವಹಾರಗಳ ಇಲಾಖೆ) ಮೂಲಕ ಅದನ್ನು ವಹಿಸಬಹುದು;
d.ಕಾನೂನು ಮತ್ತು ನ್ಯಾಯ ಸಚಿವಾಲಯ (ಕಾನೂನು ವ್ಯವಹಾರಗಳ ಇಲಾಖೆ) ಮೂಲಕ ಸರ್ಕಾರವು ಸೂಚಿಸಬಹುದಾದ ಯಾವುದೇ ವಿದೇಶಗಳಿಗೆ ಸಂಶೋಧನೆ ಒದಗಿಸುವ ವಿನಂತಿಗಳನ್ನು ಪರಿಗಣಿಸಲು;
e. ಬಡವರ ಸೇವೆಯಲ್ಲಿ ಅಗತ್ಯವೆನಿಸುವ ಕಾನೂನು ಮತ್ತು ನ್ಯಾಯಿಕ ಪ್ರಕ್ರಿಯೆಗಳನ್ನು ಬಳಸಿಕೊಳ್ಳಲು ಅಂಥ ಎಲ್ಲ ಕ್ರಮಗಳನ್ನು ಕೈಗೊಳ್ಳಲು;
f. ಸಾಮಾನ್ಯ ಮಹತ್ವದ ಕೇಂದ್ರೀಯ ಕಾನೂನುಗಳನ್ನು ಪರಿಷ್ಕರಿಸಲು, ಅವುಗಳನ್ನು ಸರಳೀಕರಿಸಲು ಮತ್ತು ವ್ಯತ್ಯಾಸಗಳು, ಅಸ್ಪಷ್ಟತೆ ಮತ್ತು ಅಸಮಾನತೆಗಳನ್ನು ತೆಗೆದುಹಾಕಲು;
ಅದರ ಶಿಫಾರಸುಗಳನ್ನು ಆಖೈರುಗೊಳಿಸುವ ಮೊದಲು, ಆಯೋಗಕ್ಕೆ ಅಗತ್ಯ ಎಂದು ಕಂಡುಬಂದಲ್ಲಿ ನೋಡಲ್ ಸಚಿವಾಲಯ / ಇಲಾಖೆ (ಗಳನ್ನು) ಮತ್ತು ಆಯೋಗದಂತಹ ಇತರ ಬಾಧ್ಯಸ್ಥರನ್ನು ಆ ಉದ್ದೇಶಕ್ಕೆ ಸಂಪರ್ಕಿಸಬಹುದು.
ಹಿನ್ನೆಲೆ
ಭಾರತೀಯ ಕಾನೂನು ಆಯೋಗವು ಶಾಸನಾತ್ಮಕವಲ್ಲದ ಸಂಸ್ಥೆಯಾಗಿದ್ದು, ಭಾರತ ಸರ್ಕಾರದಿಂದ ಕಾಲ ಕಾಲಕ್ಕೆ ಸ್ಥಾಪಿಸಲ್ಪಟ್ಟಿದೆ. ಮೂಲತಃ ಆಯೋಗವನ್ನು 1955ರಲ್ಲಿ ಸ್ಥಾಪಿಸಲಾಯಿತು ಮತ್ತು ಅದನ್ನು ಪ್ರತಿ ಮೂರು ವರ್ಷಗಳಿಗೊಮ್ಮೆ ಪುನರ್ ಸ್ಥಾಪಿಸಲಾಗುತ್ತದೆ. 21ನೇ ಭಾರತೀಯ ಕಾನೂನು ಆಯೋಗದ ಅವಧಿಯು 2018ರ ಆಗಸ್ಟ್ 31ರವರೆಗಿತ್ತು.
ದೇಶದ ಕಾನೂನಿನ ಪ್ರಗತಿಪರ ಅಭಿವೃದ್ಧಿ ಮತ್ತು ಕ್ರೋಡೀಕರಣಕ್ಕೆ ವಿವಿಧ ಕಾನೂನು ಆಯೋಗಗಳು ಮಹತ್ವದ ಕೊಡುಗೆ ನೀಡುವಲ್ಲಿ ಸಮರ್ಥವಾಗಿವೆ. ಕಾನೂನು ಆಯೋಗ ಇದುವರೆಗೆ 277 ವರದಿಗಳನ್ನು ಸಲ್ಲಿಸಿದೆ.
22ನೇ ಕಾನೂನು ಆಯೋಗವನ್ನು ಅಧಿಕೃತ ಗೆಜೆಟ್ ಅಧಿಸೂಚನೆಯ ದಿನಾಂಕದಿಂದ ಮೂರು ವರ್ಷಗಳ ಅವಧಿಗೆ ಸ್ಥಾಪಿಸಲಾಗುವುದು. ಇದು ಈ ಕೆಳಕಂಡವರನ್ನು ಒಳಗೊಂಡಿರುತ್ತದೆ:
a. ಪೂರ್ಣಾವಧಿಯ ಅಧ್ಯಕ್ಷರು;
b.ನಾಲ್ವರು ಪೂರ್ಣ ಕಾಲಿಕ ಸದಸ್ಯರು ( ಸದಸ್ಯ ಕಾರ್ಯದರ್ಶಿ ಸೇರಿದಂತೆ)
c. ಕಾನೂನು ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಪದನಿಮಿತ್ತ ಸದಸ್ಯರಾಗಿರುತ್ತಾರೆ.
d.ಶಾಸಕಾಂಗ ಇಲಾಖೆ ಕಾರ್ಯದರ್ಶಿ ಪದನಿಮಿತ್ತ ಸದಸ್ಯರಾಗಿ; ಮತ್ತು
e. ಐದಕ್ಕಿಂತ ಹೆಚ್ಚಿಲ್ಲದ ಅರೆಕಾಲಿಕ ಸದಸ್ಯರು.
**********
(Release ID: 1603808)
Visitor Counter : 325