ಸಂಪುಟ
ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) 2ನೇ ಹಂತಕ್ಕೆ ಸಂಪುಟದ ಅನುಮೋದನೆ
Posted On:
19 FEB 2020 4:27PM by PIB Bengaluru
ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) 2ನೇ ಹಂತಕ್ಕೆ ಸಂಪುಟದ ಅನುಮೋದನೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು 2024-25ರವರೆಗೆ ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) [ಎಸ್‌ಬಿಎಂ (ಜಿ)] ದ ಎರಡನೇ ಹಂತಕ್ಕೆ ಅನುಮೋದನೆ ನೀಡಿದೆ. ಇದು ಬಯಲು ಮಲವಿಸರ್ಜನೆ ಮುಕ್ತ ಪ್ಲಸ್ (ಒಡಿಎಫ್ ಪ್ಲಸ್) ಮೇಲೆ ಗಮನ ಕೇಂದ್ರೀಕರಿಸುತ್ತದೆ ಹಾಗೂ ಒಡಿಎಫ್ ಸುಸ್ಥಿರತೆ ಮತ್ತು ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ (ಎಸ್‌ಎಲ್‌ಡಬ್ಲ್ಯೂಎಂ) ಅನ್ನು ಒಳಗೊಂಡಿದೆ.
ಈ ಕಾರ್ಯಕ್ರಮವು ಎಲ್ಲರೂ ಶೌಚಾಲಯವನ್ನು ಬಳಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ. ಕೇಂದ್ರ ಮತ್ತು ರಾಜ್ಯಗಳ ಪಾಲು ಒಳಗೊಂಡಂತೆ 2020-21 ರಿಂದ 2024-25ರ ಅವಧಿಯಲ್ಲಿ ಒಟ್ಟು ಅಂದಾಜು 52,497 ಕೋ.ರೂ.ಗಳಲ್ಲಿ ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) ಎರಡನೇ ಹಂತವನ್ನು ಮೋಡ್‌ನಲ್ಲಿ ಜಾರಿಗೆ ತರಲಾಗುವುದು. ಇದರ ಜೊತೆಗೆ, ಮುಂಬರುವ ಹಣಕಾಸು ವರ್ಷದಲ್ಲಿ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಜಾರಿಗೆ ತರಲು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯಕ್ಕಾಗಿ 30,375 ಕೋಟಿ ರೂ.ಗಳನ್ನು ನಿಗದಿಪಡಿಸಲು 15 ನೇ ಹಣಕಾಸು ಆಯೋಗ ಪ್ರಸ್ತಾಪಿಸಿದೆ. ಒಡಿಎಫ್ ಪ್ಲಸ್ ಕಾರ್ಯಕ್ರಮವು ಎಂಜಿನರೇಗಾದೊಂದಿಗೆ ಸಂಯೋಜನೆಯಾಗಲಿದೆ. ವಿಶೇಷವಾಗಿ ಬಳಸಿದ ನೀರಿನ ನಿರ್ವಹಣೆ ಮತ್ತು ಹೊಸದಾಗಿ ಪ್ರಾರಂಭಿಸಲಾದ ಜಲ ಜೀವನ ಮಿಷನ್‌ಗೆ ಇದು ಪೂರಕವಾಗಿರುತ್ತದೆ.
ಕಾರ್ಯಕ್ರಮದಡಿಯಲ್ಲಿ, ಅಸ್ತಿತ್ವದಲ್ಲಿರುವ ಮಾನದಂಡಗಳಂತೆ ಪ್ರಕಾರ ಹೊಸ ಅರ್ಹ ಕುಟುಂಬಗಳಿಗೆ ವೈಯಕ್ತಿಕ ಮನೆಯ ಶೌಚಾಲಯ (ಐಎಚ್‌ಹೆಚ್‌ಎಲ್) ನಿರ್ಮಾಣಕ್ಕೆ 12,000 ರೂ.- ಪ್ರೋತ್ಸಾಹ ಧನ ನೀಡುವುದು ಮುಂದುವರಿಯುತ್ತದೆ. ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗೆ (ಎಸ್‌ಎಲ್‌ಡಬ್ಲ್ಯುಎಂ) ಧನಸಹಾಯದ ಮಾನದಂಡಗಳನ್ನು ಪರಿಷ್ಕರಿಸಲಾಗಿದೆ ಮತ್ತು ಮನೆಗಳ ಸಂಖ್ಯೆಯ ಬದಲು ವೈಯಕ್ತಿಕ ಸಂಖ್ಯೆಗೆ ಬದಲಾಯಿಸಲಾಗಿದೆ. ಹೆಚ್ಚುವರಿಯಾಗಿ, ಗ್ರಾಮ ಮಟ್ಟದಲ್ಲಿ ಸಮುದಾಯ ನಿರ್ವಹಿಸಿದ ನೈರ್ಮಲ್ಯ ಸಂಕೀರ್ಣ (ಸಿಎಮ್‌ಎಸ್‌ಸಿ) ನಿರ್ಮಾಣಕ್ಕಾಗಿ ಗ್ರಾಮ ಪಂಚಾಯಿತಿಗಳಿಗೆ ಹಣಕಾಸಿನ ನೆರವನ್ನು ಪ್ರತಿ ಸಿಎಮ್‌ಎಸ್‌ಸಿಗೆ 2 ಲಕ್ಷ ರೂ .ನಿಂದ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ.
ಶೀಘ್ರದಲ್ಲೇ ರಾಜ್ಯಗಳಿಗೆ ನೀಡಲಾಗುವ ಮಾರ್ಗಸೂಚಿಗಳ ಪ್ರಕಾರ ಈ ಕಾರ್ಯಕ್ರಮವನ್ನು ರಾಜ್ಯಗಳು / ಕೇಂದ್ರಾಡಳಿತ ಪ್ರದೆಶಗಳು ಜಾರಿಗೆ ತರಲಿವೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ನಿಧಿ ಹಂಚಿಕೆ ಮಾದರಿಯು ಈಶಾನ್ಯ ರಾಜ್ಯಗಳು ಮತ್ತು ಹಿಮಾಲಯನ್ ರಾಜ್ಯಗಳಿಗೆ ಮತ್ತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ 90:10; ಇತರ ರಾಜ್ಯಗಳಿಗೆ 60:40; ಮತ್ತು ಇತರ ಕೇಂದ್ರಾಡಳಿತ ಪ್ರದೇಶಗಳಿಗೆ 100: 0 ಆಗಿರುತ್ತದೆ.
ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ, ಜೈವಿಕವಾಗಿ ಕರಗುವ ಘನತ್ಯಾಜ್ಯ ನಿರ್ವಹಣೆ (ಪ್ರಾಣಿಗಳ ತ್ಯಾಜ್ಯ ನಿರ್ವಹಣೆ ಸೇರಿದಂತೆ), ಬಳಸಿದ ನೀರಿನ ನಿರ್ವಹಣೆ ಮತ್ತು ಮಲ ಕೆಸರು ನಿರ್ವಹಣೆಯಂತಹ ನಾಲ್ಕು ಪ್ರಮುಖ ಕ್ಷೇತ್ರಗಳಿಗೆ ಉತ್ಪಾದನೆ-ಫಲಿತಾಂಶ ಆಧಾರದ ಮೇಲೆ ಒಡಿಎಫ್ ಪ್ಲಸ್‌ನ ಎಸ್‌ಎಲ್‌ಡಬ್ಲ್ಯೂಎಂ ಘಟಕವು ಮೇಲ್ವಿಚಾರಣೆ ನಡೆಸುತ್ತದೆ.
ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) ಎರಡನೇ ಹಂತವು ಉದ್ಯೋಗ ಸೃಷ್ಟಿಯನ್ನು ಮುಂದುವರೆಸುತ್ತದೆ. ಮನೆ ಮತ್ತು ಸಮುದಾಯ ಶೌಚಾಲಯಗಳ ನಿರ್ಮಾಣದ ಮೂಲಕ ಗ್ರಾಮೀಣ ಆರ್ಥಿಕತೆಗೆ ಪ್ರಚೋದನೆಯನ್ನು ನೀಡುತ್ತದೆ. ಜೊತೆಗೆ ಎಸ್‌ಎಲ್‌ಡಬ್ಲ್ಯೂಎಂಗೆ ಕಾಂಪೋಸ್ಟ್ ಹೊಂಡಗಳು, ನೆನೆಸುವ ಹೊಂಡಗಳು, ತ್ಯಾಜ್ಯ ಸ್ಥಿರೀಕರಣ ಹೊಂಡಗಳು ಮುಂತಾದ ಮೂಲಸೌಕರ್ಯಗಳನ್ನು ಒದಗಿಸುತ್ತದೆ.
ಸ್ವಚ್ಛ ಭಾರತ ಅಭಿಯಾನ (ಗ್ರಾಮೀಣ) ಆರಂಭವಾದ 02.10.2014 ರ ಸಮಯದಲ್ಲಿ ದೇಶದಲ್ಲಿ ಗ್ರಾಮೀಣ ನೈರ್ಮಲ್ಯ ವ್ಯಾಪ್ತಿ ಶೇ.38.7 ಆಗಿತ್ತು. ಅಭಿಯಾನ ಪ್ರಾರಂಭವಾದಾಗಿನಿಂದ 10 ಕೋಟಿಗೂ ಹೆಚ್ಚು ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ; ಇದರ ಪರಿಣಾಮವಾಗಿ, ಎಲ್ಲಾ ರಾಜ್ಯಗಳಲ್ಲಿನ ಗ್ರಾಮೀಣ ಪ್ರದೇಶಗಳು ತಮ್ಮನ್ನು ಅಕ್ಟೋಬರ್ 2, 2019 ರಂತೆ ಬಯಲು ಮಲ ವಿಸರ್ಜನೆ ಮುಕ್ತ ಎಂದು ಘೋಷಿಸಿಕೊಂಡಿವೆ. ಆದರೂ ಆದರೆ ಶೌಚಾಲಯವಿಲ್ಲದ ಯಾವುದೇ ಗ್ರಾಮೀಣ ಕುಟುಂಬಗಳು ಉಳಿದಿಲ್ಲ ಎಂಬುದನ್ನು ದೃಢೀಕರಿಸಿಕೊಳ್ಳುವಂತೆ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಲ್ಲಾ ರಾಜ್ಯಗಳಿಗೆ ಸಲಹೆ ನೀಡಿದೆ. ಹಾಗೆ ಉಳಿದಿರುವ ಮನೆಗಳಿಗೆ ಪ್ರತ್ಯೇಕ ಶೌಚಾಲಯಗಳನ್ನು ನಿರ್ಮಿಸಲು ಅಗತ್ಯವಾದ ಬೆಂಬಲವನ್ನು ಕಾರ್ಯಕ್ರಮದ ಅಡಿಯಲ್ಲಿ ಒದಗಿಸಲಾಗುವುದು.
***
(Release ID: 1603673)
Visitor Counter : 272