ಹಣಕಾಸು ಸಚಿವಾಲಯ

ಓಐಸಿಎಲ್, ಎನ್ಐಸಿಎಲ್ ಮತ್ತು ಯುಐಐಸಿಎಲ್ ಗಳಲ್ಲಿ ಬಂಡವಾಳ ಹೂಡಿಕೆಗೆ ಸಂಪುಟದ ಅನುಮೋದನೆ

Posted On: 12 FEB 2020 3:53PM by PIB Bengaluru

ಓಐಸಿಎಲ್, ಎನ್ಐಸಿಎಲ್ ಮತ್ತು ಯುಐಐಸಿಎಲ್ ಗಳಲ್ಲಿ ಬಂಡವಾಳ ಹೂಡಿಕೆಗೆ ಸಂಪುಟದ ಅನುಮೋದನೆ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಮೂರು ಸಾರ್ವಜನಿಕ ವಲಯದ ವಿಮಾ ಕಂಪನಿಗಳಾದ ಓರಿಯೆಂಟಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಓಐಸಿಎಲ್), ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಎನ್ಐಸಿಎಲ್) ಮತ್ತು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ (ಯುಐಐಸಿಎಲ್)ಗಳಲ್ಲಿ ಬಂಡವಾಳ ಹೂಡಿಕೆ ಮಾಡಲು ತನ್ನ ತಾತ್ವಿಕ ಅನುಮೋದನೆ ನೀಡಿದೆ.

ಈ ಮೇಲಿನ ಅಂಶ ಗಮನದಲ್ಲಿಟ್ಟುಕೊಂಡು 3 ಪಿಎಸ್.ಜಿ.ಐ.ಸಿ.ಗಳು ಅಂದರೆ ಐಓಸಿಎಲ್, ಎಐಸಿಎಲ್ ಮತ್ತು ಯುಐಐಸಿಎಲ್ ಗಳ ಗಂಭೀರ ಹಣಕಾಸಿನ ಪರಿಸ್ಥಿತಿ ಮತ್ತು ಋಣ ಮರುಪರಿಹಾರ ಸಾಮರ್ಥ್ಯ ನಿಯಂತ್ರಕ ಉಲ್ಲಂಘನೆಯ ಅಗತ್ಯ (ಬ್ರೀಚ್ ಆಫ್ ರೆಗ್ಯುಲೇಟರಿ ಸಾಲ್ವೆನ್ಸಿ ರಿಕ್ವೇರ್ ಮೆಂಟ್ಸ್)ಕ್ಕಾಗಿ ತತ್ ಕ್ಷಣವೇ 2500 ಕೋಟಿ ರೂಪಾಯಿ ಬಿಡುಗಡೆಗೆ ಸಂಪುಟ ಅವಕಾಶ ನೀಡಿದೆ.

***


(Release ID: 1602947) Visitor Counter : 107
Read this release in: English , Urdu , Hindi , Telugu