ಪ್ರಧಾನ ಮಂತ್ರಿಯವರ ಕಛೇರಿ

ಸಿಂಗಾಪೂರದ ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರಿಂದ ಪ್ರಧಾನಿ ಭೇಟಿ

Posted On: 06 JAN 2020 5:00PM by PIB Bengaluru

ಸಿಂಗಾಪೂರದ ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರಿಂದ ಪ್ರಧಾನಿ ಭೇಟಿ
 

ಸಿಂಗಾಪೂರದ ಸಾಮಾಜಿಕ ನೀತಿಗಳ ಸಮನ್ವಯ ಸಚಿವರಾದ ಶ್ರೀ ಥರ್ಮನ್ ಷಣ್ಮುಗರತ್ನಂ ಅವರು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.

ಪ್ರಧಾನಮಂತ್ರಿಗಳು ಶ್ರೀ ಷಣ್ಮುಗರತ್ನಂ ಅವರನ್ನು ಸ್ವಾಗತಿಸಿ ಹೊಸ ವರ್ಷದ ಶುಭಾಶಯ ಕೋರಿ, ಅವರ ಮೂಲಕ ಸಿಂಗಾಪೂರದ ಪ್ರಧಾನಿ ಶ್ರೀ ಲೀ ಸೇನ್ ಲೂಂಗ್ ಅವರಿಗೆ ಶುಭಾಶಯ ಕೋರಿದರು.

ದ್ವಿಪಕ್ಷೀಯ ಸಂಬಂಧ ವೃದ್ಧಿಯ ಕುರಿತು ಶ್ರೀ ಷಣ್ಮುಗರತ್ನಂ ಮತ್ತು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ತೃಪ್ತಿ ವ್ಯಕ್ತಪಡಿಸಿದರು. ಮೂಲಭೂತ ಸೌಕರ್ಯ, ಕೌಶಲ್ಯ, ಭಾರತ ಸಿಂಗಾಪೂರ್ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA) ಮತ್ತು ಡಿಜಿಟಲ್ ಆರ್ಥಿಕತೆ ಸೇರಿದಂತೆ ಆರ್ಥಿಕ ಸಹಕಾರ ಕ್ಷೇತ್ರದಲ್ಲಿ ಪರಸ್ಪರ ಆಸಕ್ತಿಯ ಹಲವಾರು ವಿಷಯಗಳ ಕುರಿತು ಚರ್ಚಿಸಿದರು. ಶ್ರೀ ಷಣ್ಮುಗರತ್ನಂ ಅವರು ಡಿಜಿಟಲ್ ಆರ್ಥಿಕತೆ ಮತ್ತು ಭಾರತದ ಸಾಮಾಜಿಕ ಪರಿವರ್ತನೆಗೆ ಪ್ರೋತ್ಸಾಹ ನೀಡುತ್ತಿರುವ ಮೋದಿಯವರ ನಾಯಕತ್ವವನ್ನು ಶ್ಲಾಘಿಸಿದರು.

ಮೂಲಭೂತ ಸೌಕರ್ಯಗಳು, ಪ್ರವಾಸೋದ್ಯಮ, ಡಿಜಿಟಲ್ ಪಾವತಿಯ ವ್ಯವಸ್ಥೆ, ಆವಿಷ್ಕಾರ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಭಾರತ ಮತ್ತು ಸಿಂಗಾಪೂರ್ ಮಧ್ಯೆ ಸಹಕಾರ ವೃದ್ಧಿಯ ಇಚ್ಛೆಯನ್ನು ಸಹ ಪ್ರಧಾನಮಂತ್ರಿಯವರು ವ್ಯಕ್ತಪಡಿಸಿದರು.



(Release ID: 1598617) Visitor Counter : 92