ನಾಗರೀಕ ವಿಮಾನಯಾನ ಸಚಿವಾಲಯ

ಆರ್ಸಿಎಸ್-ಉಡಾನ್ ಯೋಜನೆಯಡಿ ಸುಮಾರು 35 ಲಕ್ಷ ಪ್ರಯಾಣಿಕರಿಂದ ಹಾರಾಟ

Posted On: 23 DEC 2019 2:25PM by PIB Bengaluru

ಆರ್ಸಿಎಸ್-ಉಡಾನ್ ಯೋಜನೆಯಡಿ ಸುಮಾರು 35 ಲಕ್ಷ ಪ್ರಯಾಣಿಕರಿಂದ ಹಾರಾಟ

 

ವೈಮಾನಿಕ ಉದ್ಯೋಗಗಳ ಪೋರ್ಟಲ್ ಆರಂಭ. ದೇಶದ ಅತಿ ಎತ್ತರದ ವಾಯು ಸಂಚಾರ ನಿಯಂತ್ರಣ ಗೋಪುರದ ಉದ್ಘಾಟನೆ. ಹಿಂಡನ್ ಮತ್ತು ಕಲಬುರ್ಗಿಯಲ್ಲಿ ಹೊಸ ವಿಮಾನ ನಿಲ್ದಾಣಗಳ ಕಾರ್ಯಾಚರಣೆ. ವಾಯು ಸಂಚಾರ ಹರಿವು ನಿರ್ವಹಣಾ ನಿಯಂತ್ರಣ ಮತ್ತು ಕಮಾಂಡ್ ಕೇಂದ್ರದ ಕಾರ್ಯಾಚರಣೆ. ಪಿಪಿಪಿ ಅಡಿಯಲ್ಲಿ 6 ಎಎಐ ವಿಮಾನ ನಿಲ್ದಾಣಗಳನ್ನು ಗುತ್ತಿಗೆಗೆ ನೀಡಲು ಅನುಮೋದನೆ. 85 ವಿಮಾನ ನಿಲ್ದಾಣಗಳು ಈಗ ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ವಿಮಾನ ನಿಲ್ದಾಣಗಳು.

ಉಡಾನ್- ಆರ್ಸಿಎಸ್

  • 1.1.2019 ರಿಂದ 10.12.2019 ರವರೆಗೆ 134 ಮಾರ್ಗಗಳ ಪ್ರಾರಂಭ
  • 2019 ರಲ್ಲಿ 10 ವಿಮಾನ ನಿಲ್ದಾಣಗಳು ಕಾರ್ಯಾಚರಣೆ (07.12.2019 ರವರೆಗೆ) ಅದರಲ್ಲಿ 4 ವಿಮಾನ ನಿಲ್ದಾಣಗಳು ಸೇವೆ ಸಲ್ಲಿಸುತ್ತಿವೆ ಮತ್ತು 6 ವಿಮಾನ ನಿಲ್ದಾಣಗಳು ಇನ್ನೂ ಸೇವೆಯಲ್ಲಿಲ್ಲ.

ಸೇವೆಯಲ್ಲಿರುವವು - ಲೀಲಬಾರಿ, ಬೆಳಗಾವಿ, ಪಂತ್ನಗರ ಮತ್ತು ದುರ್ಗಾಪುರ.

ಸೇವೆ ಆರಂಭವಾಗದವು - ಕುಲ್ಲು, ಕಲಬುರ್ಗಿ, ಕಣ್ಣಾರ್, ದಿಮಾಪುರ, ಹಿಂಡನ್ ಮತ್ತು ಪಿಥೋರ್ಗರ್

  • 2019 ರಲ್ಲಿ 33 ವಿಮಾನ ನಿಲ್ದಾಣಗಳನ್ನು ಒಳಗೊಂಡಂತೆ 335 ಮಾರ್ಗಗಳನ್ನು ನೀಡಲಾಗಿದೆ. (20 ಸೇವೆ ಆರಂಭವಾಗದವು,  3 ಸೇವೆಯಲ್ಲಿರುವವು, 10 ವಾಟರ್ ಏರೋಡ್ರೋಮ್ಗಳು)
  • ಆರ್ಸಿಎಸ್-ಉಡಾನ್ ಯೋಜನೆಯಡಿ ಇಲ್ಲಿಯವರೆಗೆ ಸುಮಾರು 34,74,000 ಪ್ರಯಾಣಿಕರು ಹಾರಾಟ ನಡೆಸಿದ್ದಾರೆ. ಸಣ್ಣ ವಿಮಾನ ನಿಲ್ದಾಣಗಳು ವಿವಿಧ ದೊಡ್ಡ ನಗರಗಳಿಗೆ ಸಂಪರ್ಕ ಕಲ್ಪಿಸಿದ ಕಾರಣ ಇದು ಪ್ರಮುಖ ವಿಮಾನ ನಿಲ್ದಾಣಗಳ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರಯಾಣದ ಸಮಯವು ತೀವ್ರವಾಗಿ ಕಡಿಮೆಯಾಗಿದೆ ಮತ್ತು ಪ್ರವಾಸೋದ್ಯಮ, ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ಧಾರ್ಮಿಕ ಸ್ಥಳಗಳ ಭೇಟಿ ಇತ್ಯಾದಿಗಳ ಉದ್ದೇಶದಿಂದ ಸಾರ್ವಜನಿಕರಿಗೆ ಹೆಚ್ಚಿನ ಲಾಭವಾಗಿದೆ.
  • ಅಸ್ತಿತ್ವದಲ್ಲಿರುವ ಮತ್ತು ನೂತನ ವಿಮಾನ ನಿಲ್ದಾಣಗಳನ್ನು ನವೀಕರಿಸಲು 2019 ಏಪ್ರಿಲ್ ನಿಂದ ನವೆಂಬರ್ ವರೆಗೆ 304.49 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.
  • ಬೆಳಗಾವಿ, ಪ್ರಯಾಗರಾಜ್, ಕಿಶನ್ಗರ್, ಹುಬ್ಬಳ್ಳಿ ಮತ್ತು ಜಾರ್ಸುಗುಡಾ ಉಡಾನ್ ಅಡಿಯಲ್ಲಿ ಪ್ರಾರಂಭವಾದ ಅತ್ಯಂತ ಜನಸಂದಣಿಯ ವಿಮಾನ ನಿಲ್ದಾಣಗಳಾಗಿವೆ.

 

ವಾಯು ಸಂಚಾರ ಹರಿವು ನಿರ್ವಹಣಾ ನಿಯಂತ್ರಣ ಮತ್ತು ಕಮಾಂಡ್ ಕೇಂದ್ರ (ಎಟಿಎಫ್ಎಂ-ಸಿಸಿಸಿ)

ಅತ್ಯಾಧುನಿಕ ಹೊಸ ಏರ್ ಟ್ರಾಫಿಕ್ ಫ್ಲೋ ಮ್ಯಾನೇಜ್ಮೆಂಟ್ ಕಂಟ್ರೋಲ್ ಮತ್ತು ಕಮಾಂಡ್ ಸೆಂಟರ್ (ಎಟಿಎಫ್ಎಂ-ಸಿಸಿಸಿ) 2019 ರ ಜೂನ್‌ನಲ್ಲಿ ನವದೆಹಲಿಯ ವಸಂತ್ ಕುಂಜ್‌ನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಎಟಿಎಫ್‌ಎಂ ಅನುಷ್ಠಾನ - ರಾಷ್ಟ್ರವ್ಯಾಪಿ ಕೇಂದ್ರ ವಾಯು ಸಂಚಾರ ಹರಿವು ನಿರ್ವಹಣೆ [ಎಟಿಎಫ್‌ಎಂ] ವ್ಯವಸ್ಥೆಯು 2017 ರಿಂದ ಕಾರ್ಯನಿರ್ವಹಿಸುತ್ತಿದೆ. ಸೆಂಟ್ರಲ್ ಕಮಾಂಡ್ ಸೆಂಟರ್ (ಸಿಸಿಸಿ) ವಸಂತ್ ಕುಂಜ್ ನಲ್ಲಿ  2019 ರ ಜೂನ್ 22 ರಿಂದ ಕಾರ್ಯರೂಪಕ್ಕೆ ಬಂದಿದೆ. 8 ರಕ್ಷಣಾ ವಿಮಾನ ನಿಲ್ದಾಣಗಳನ್ನು ಒಳಗೊಂಡಿರುವ ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿನ (36) ಫ್ಲೋ ಮ್ಯಾನೇಜ್ಮೆಂಟ್ ಪೊಸಿಷನ್ಸ್ (ಎಫ್ಎಂಪಿ) ಸಿಸಿಸಿಗೆ ಬೆಂಬಲಿಸುತ್ತವೆ. ಎಟಿಎಫ್‌ಎಂ ವ್ಯವಸ್ಥೆಯು ಎಲ್ಲಾ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಮತ್ತು ಎಲ್ಲಾ ವಾಯುಪ್ರದೇಶ ಕ್ಷೇತ್ರಗಳಲ್ಲಿನ ವಾಯು ಸಂಚಾರದ ಹರಿವನ್ನು ಮೇಲ್ವಿಚಾರಣೆ ಮಾಡುತ್ತದೆ. ಯಾವುದೇ ವಿಮಾನ ನಿಲ್ದಾಣಗಳು ಅಥವಾ ವಾಯುಪ್ರದೇಶದ ಕ್ಷೇತ್ರಗಳಲ್ಲಿ ಯಾವುದೇ ವಾಯು ಸಂಚಾರ ಓವರ್‌ಲೋಡ್ ಪರಿಸ್ಥಿತಿಗಳನ್ನು ಎದುರಾದಾಗ, ಎಟಿಎಫ್‌ಎಂ ವ್ಯವಸ್ಥಾಪಕರು ಎಟಿಎಫ್‌ಎಂ ನಿಯಮಗಳನ್ನು ಪೂರ್ವಭಾವಿಯಾಗಿ ಕಾರ್ಯಗತಗೊಳಿಸುತ್ತಾರೆ (ನಿರ್ಗಮನ ವಿಮಾನ ನಿಲ್ದಾಣಗಳಲ್ಲಿ ವಿಮಾನವನ್ನು ಇಳಿಸುವುದನ್ನು ವಿಳಂಬಗೊಳಿಸುವ ಮೂಲಕ) ಇದರಿಂದಾಗಿ ಟ್ರಾಫಿಕ್ ಓವರ್‌ಲೋಡ್‌ಗಳನ್ನು ನಿರ್ವಹಿಸಲಾಗುತ್ತದೆ. ಹೀಗಾಗಿ, ವಿಮಾನ ನಿಲ್ದಾಣಗಳು ಮತ್ತು ವಾಯುಪ್ರದೇಶದ ಅತ್ಯುತ್ತಮ ಬಳಕೆಯನ್ನು ಖಾತ್ರಿಪಡಿಸಿಕೊಂಡು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಎಟಿಎಫ್‌ಎಂ ಸಹಾಯ ಮಾಡುತ್ತದೆ. ಭಾರತವು ಮೇ 2018 ರಲ್ಲಿ ದೆಹಲಿಯಲ್ಲಿ ಐಸಿಎಒ ಎಪಿಎಸಿ ಎಟಿಎಫ್ಎಂ ಸಂಚಾಲನಾ ಗುಂಪಿನ ಸಭೆಯನ್ನು ಆಯೋಜಿಸಿತ್ತು, ಇದರಲ್ಲಿ 13 ಎಪಿಎಸಿ ದೇಶಗಳು ಭಾಗವಹಿಸಿದ್ದವು.

ಭಾರತಕ್ಕಾಗಿ ಸಿಎನ್ಎಸ್ / ಎಟಿಎಂ ಆಧುನೀಕರಣದ ಮಾರ್ಗಸೂಚಿ

ಮೇ, 2019 ರಲ್ಲಿ, ಬೋಯಿಂಗ್ ಮತ್ತು ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಭಾರತಕ್ಕಾಗಿ 10 ವರ್ಷಗಳ ಸಮಗ್ರ ಸಂವಹನ, ಸಂಚರಣೆ ಮತ್ತು ಕಣ್ಗಾವಲು / ವಾಯು ಸಂಚಾರ ನಿರ್ವಹಣೆ (ಸಿಎನ್‌ಎಸ್ / ಎಟಿಎಂ) ಆಧುನೀಕರಣ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ತಾಂತ್ರಿಕ ನೆರವು ಒಪ್ಪಂದಕ್ಕೆ ಸಹಿ ಹಾಕಿದವು. ವಾಯುಪ್ರದೇಶದ ಸಾಮರ್ಥ್ಯವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು, ಸಂವಹನಗಳನ್ನು ಹೆಚ್ಚಿಸಲು ಮತ್ತು ಸಂಚರಣೆ, ಕಣ್ಗಾವಲು ಹಾಗೂ ವಾಯು ಸಂಚಾರ ನಿರ್ವಹಣೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಲು ಜಾಗತಿಕ ಮತ್ತು ಸ್ಥಳೀಯ ಉತ್ತಮ ಅಭ್ಯಾಸಗಳ ಆಧಾರದ ಮೇಲೆ ಭಾರತೀಯ ರಾಷ್ಟ್ರೀಯ ವಾಯುಪ್ರದೇಶ ವ್ಯವಸ್ಥೆ (ಎನ್‌ಎಎಸ್) ಯ ಆಧುನೀಕರಣದಲ್ಲಿ ಮಾರ್ಗದರ್ಶನವಾಗಿ ಬಳಸಲು ಎಎಐಗೆ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವುದು ಒಪ್ಪಂದದ ಉದ್ದೇಶವಾಗಿದೆ. ಅಮೆರಿಕಾ ವ್ಯಾಪಾರ ಮತ್ತು ಅಭಿವೃದ್ಧಿ ಸಂಸ್ಥೆ (ಯುಎಸ್‌ಟಿಡಿಎ) ಯ ಅನುದಾನದೊಂದಿಗೆ ಈ 18 ತಿಂಗಳ ಯೋಜನೆಯನ್ನು ಕೈಗೊಳ್ಳಲಾಗುವುದು. ಯೋಜನೆಯ ಸಮಯದಲ್ಲಿ ಬೋಯಿಂಗ್ ತಜ್ಞರೊಂದಿಗೆ ಜಂಟಿಯಾಗಿ ಕೆಲಸ ಮಾಡಲು ಎಐಐ ಏರ್ಲೈನ್ಸ್, ಏರ್ಪೋರ್ಟ್ ಆಪರೇಟರ್ಸ್, ಡಿಜಿಸಿಎ, ಐಎಎಫ್, ಐಎಂಡಿ ಮತ್ತು ಎಎಐ ಅಧಿಕಾರಿಗಳಿಂದ ನಾಮನಿರ್ದೇಶಿತ ಸದಸ್ಯರನ್ನು ಒಳಗೊಂಡ ತಾಂತ್ರಿಕ ಕಾರ್ಯ ಸಮೂಹವನ್ನು (ಟಿಡಬ್ಲ್ಯೂಜಿ) ರಚಿಸಲಾಗಿದೆ. ಮೊದಲ ಸಭೆ ದೆಹಲಿಯಲ್ಲಿ 2019 ರ ಜುಲೈ 22 ರಿಂದ 25 ರವರೆಗೆ ನಡೆಯಿತು.

ವಿಮಾನ ನಿಲ್ದಾಣಗಳು - ಪಿಪಿಪಿ ಅಡಿಯಲ್ಲಿ ಎಎಐ ವಿಮಾನ ನಿಲ್ದಾಣಗಳನ್ನು ತಾತ್ವಿಕ ಒಪ್ಪಿಗೆ

ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ಮೂಲಕ ಎಎಐನ 6 ವಿಮಾನ ನಿಲ್ದಾಣಗಳನ್ನು ಅಂದರೆ ಅಹಮದಾಬಾದ್, ಜೈಪುರ, ಗುವಾಹಟಿ, ತಿರುವನಂತಪುರಂ, ಲಕ್ನೋ ಮತ್ತು ಮಂಗಳೂರು ಗುತ್ತಿಗೆಗೆ ನೀಡಲು ತಾತ್ವಿಕವಾಗಿ ಅನುಮೋದನೆ ನೀಡಲಾಗಿದೆ. ಅತಿ ಹೆಚ್ಚು ಬಿಡ್ ಮಾಡಿದವರಿಗೆ 50 ವರ್ಷಗಳ ಅವಧಿಗೆ ಅಹಮದಾಬಾದ್, ಲಕ್ನೋ ಮತ್ತು ಮಂಗಳೂರು ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದಂತೆ 15.07.2019 ರಂದು ಆದೇಶ ಪತ್ರ ನೀಡಲಾಗಿದೆ. ತಿರುವನಂತಪುರಂ, ಗುವಾಹಟಿ ಮತ್ತು ಜೈಪುರ ವಿಮಾನ ನಿಲ್ದಾಣಗಳನ್ನು ಇನ್ನೂ ನೀಡಲಾಗಿಲ್ಲ. ಭುವನೇಶ್ವರ, ವಾರಣಾಸಿ, ಇಂದೋರ್, ಅಮೃತಸರ, ರಾಯ್‌ಪುರ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳನ್ನು ಪಿಪಿಪಿ ಮೂಲಕ ಮುಂದಿನ ಸುತ್ತಿನಲ್ಲಿ ಗುತ್ತಿಗೆ ನೀಡುವ ಪ್ರಸ್ತಾವನೆಯನ್ನು ಎಎಐ ಮಂಡಳಿಯು ಶಿಫಾರಸು ಮಾಡಿದೆ, ಇದಕ್ಕಾಗಿ ವಹಿವಾಟು ಸಲಹೆಗಾರರನ್ನು ಅಂತಿಮಗೊಳಿಸಲಾಗುತ್ತಿದೆ.

ಭಾರತ ವಿಮಾನ ನಿಲ್ದಾಣ ಪ್ರಾಧಿಕಾರದ ಭವಿಷ್ಯದ ದೂರಸಂಪರ್ಕ ಮೂಲಸೌಕರ್ಯ ಉಪಕ್ರಮ

ಭಾರತ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ)ವು  ಅಮೆರಿಕಾದ ಮೆಸರ್ಸ್ ಹ್ಯಾರಿಸ್ ಗೆ 15 ವರ್ಷಗಳ 945 ಕೋ.ರೂ.ಗಳ ಎಎಐನ ಫ್ಯೂಚರಿಸ್ಟಿಕ್ ಟೆಲಿಕಮ್ಯುನಿಕೇಶನ್ಸ್ ಇನ್ಫ್ರಾಸ್ಟ್ರಕ್ಚರ್ ಉಪಕ್ರಮಕ್ಕಾಗಿ ಪ್ರಧಾನ ಗುತ್ತಿಗೆದಾರ ಮತ್ತು ಸಿಸ್ಟಮ್ಸ್ ಇಂಟಿಗ್ರೇಟರ್ ಆಗಿ ಕಾರ್ಯನಿರ್ವಹಿಸಲು ಬಿಲ್ಡ್ ಓನ್ ಆಪರೇಟ್ (ಬಿಒಒ) ಮಾದರಿಯಲ್ಲಿ ಗುತ್ತಿಗೆ ನೀಡಿದೆ. ಈ ಉಪಕ್ರಮವು ಸಂವಹನ ನೆಟ್‌ವರ್ಕ್ ಕಾರ್ಯಾಚರಣೆಗಳನ್ನು ನವೀಕರಿಸುತ್ತದೆ, ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಭಾರತದ ವಾಯು ಸಂಚಾರ ನಿರ್ವಹಣೆ (ಎಟಿಎಂ) ದೂರಸಂಪರ್ಕ ಜಾಲದ ಕಾರ್ಯಕ್ಷಮತೆ, ವಿಶ್ವಾಸಾರ್ಹತೆ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ. ಈ ಸಂವಹನ ಮೂಲಸೌಕರ್ಯವು ಆರ್ಸಿಎಸ್ ವಿಮಾನ ನಿಲ್ದಾಣಗಳಲ್ಲಿ ವಾಯು ಸಂಚಾರ ಸೇವೆಗಳನ್ನು ನಿರ್ವಹಿಸಲು ರಿಮೋಟ್ ಟವರ್‌ಗಳನ್ನು ನಿಯೋಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

 

ಡಿಜಿಟಲ್ ಉಪಕ್ರಮಗಳು

ಎ. eGCA

ಸೇವೆಗಳ ತ್ವರಿತ ವಿತರಣೆ ಮತ್ತು ನಿಯಂತ್ರಣ ಮೇಲ್ವಿಚಾರಣೆಯನ್ನು ಒದಗಿಸಲು ಡಿಜಿಸಿಎ ಕಾರ್ಯಗಳು ಮತ್ತು ಪ್ರಕ್ರಿಯೆಯಗಳನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ ತರಲಾಗುತ್ತಿದೆ. ಪೈಲಟ್ ಪರವಾನಗಿಯ ಮೊದಲ ಮಾಡ್ಯೂಲ್ ಅನ್ನು ಡಿಸೆಂಬರ್ 2019 ರಲ್ಲಿ ಪ್ರಾರಂಭಿಸಲಾಗುವುದು.

ಬಿ. DigiSky

ನಾಗರಿಕ ಡ್ರೋನ್‌ಗಳ ಹಾರಾಟಕ್ಕಾಗಿ ಡಿಜಿಸ್ಕೈ ಆನ್‌ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಡಿಜಿಸ್ಕೈನ ಬೀಟಾ ಆವೃತ್ತಿ ಲಭ್ಯವಿದೆ. ಯಾವುದೇ ಅನುಮತಿ ಇಲ್ಲದ ಟೇಕ್ ಆಫ್ ಇಲ್ಲದ (ಎನ್‌ಪಿಎನ್‌ಟಿ) ವಿಶಿಷ್ಟ ಲಕ್ಷಣಗಳ ಆಧಾರದ ಮೇಲೆ.ಡ್ರೋನ್‌ಗಳು ಮತ್ತು ಪೈಲಟ್‌ಗಳ ನೋಂದಣಿ, ಹಾರಾಟ ಮಾರ್ಗದ ಅನುಮೋದನೆ, ಹಾರಾಟದ ನಂತರದ ವಿಶ್ಲೇಷಣೆ ಇತ್ಯಾದಿಗಳು ಮತ್ತು ಡ್ರೋನ್‌ಗಳಿಗೆ ಸಂಬಂಧಿಸಿದ ಚಟುವಟಿಕೆಗಳ ಸಂಪೂರ್ಣ ವಿವರಗಳು ಲಭ್ಯವಿರುತ್ತದೆ.

ಸಿ. E-Sahaj

ನಾಗರಿಕ ವಿಮಾನಯಾನ ಸಚಿವಾಲಯ ಪ್ರಾರಂಭಿಸಿದ ಇ-ಸಹಜ್ ಆನ್‌ಲೈನ್ ಪೋರ್ಟಲ್‌ನಲ್ಲಿ ಸಚಿವಾಲಯಕ್ಕೆ ಸಂಬಂಧಿಸಿದ ಶೇ. 100 ಭದ್ರತಾ ಅನುಮತಿಗಳನ್ನು ಆನ್‌ಲೈನ್‌ನಲ್ಲಿ ಮಾಡಲಾಗಿದೆ. 24 ವಿಭಾಗಗಳಿಗೆ ಸಂಬಂಧಿಸಿದಂತೆ ಅನುಮತಿ ನೀಡಲು ಪೋರ್ಟಲ್ ಕಾರ್ಯನಿರ್ವಹಿಸುತ್ತಿದೆ.

ಡಿ. ಡಿಜಿಯಾತ್ರಾ

ಬೆಂಗಳೂರು ಮತ್ತು ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಡಿಜಿಯಾತ್ರಾ ಪ್ರಯೋಗವನ್ನು ಪ್ರಾರಂಭಿಸಲಾಗಿದೆ. ಪ್ರಯಾಣಿಕರ ಅನುಭವವನ್ನು ಸುಧಾರಿಸಲು ಬಯೋಮೆಟ್ರಿಕ್ ತಂತ್ರಜ್ಞಾನಗಳನ್ನು ಬಳಸಿಕೊಂಡು ತಡೆರಹಿತ ಪ್ರಯಾಣಿಕರ ಪ್ರಯಾಣವನ್ನು ಇದು ಯೋಜಿಸಿದೆ, ಪ್ರಯಾಣಿಕರು ಇ-ಗೇಟ್‌ಗಳ ಮೂಲಕ ನಡೆಯುವುದರಿಂದ ಸರದಿಯಲ್ಲಿ ಕಾಯುವ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಚೆಕ್ ಪಾಯಿಂಟ್‌ಗಳಲ್ಲಿನ ಪುನರಾವರ್ತನೆಗಳನ್ನು ತೆಗೆದುಹಾಕುತ್ತದೆ ಮತ್ತು ಸಂಪನ್ಮೂಲ ಬಳಕೆಯನ್ನು ಹೆಚ್ಚಿಸುತ್ತದೆ.

ಇ. MoCA ಯ ಡ್ಯಾಶ್‌ಬೋರ್ಡ್

ನಾಗರಿಕ ವಿಮಾನಯಾನ ಸಚಿವಾಲಯದ ಡ್ಯಾಶ್‌ಬೋರ್ಡ್ ಅನ್ನು ಆಗಸ್ಟ್ 17, 2019 ರಂದು ಅಭಿವೃದ್ಧಿಪಡಿಸಲಾಗಿದೆ. ಇದು ಆರ್‌ಸಿಎಸ್-ಉಡಾನ್ ಸೇರಿದಂತೆ ವಾಯು ಸಾರಿಗೆಯ ಹಲವಾರು ನಿಯತಾಂಕಗಳಲ್ಲಿ ನೈಜ-ಸಮಯದ ಡೇಟಾವನ್ನು ಒದಗಿಸುತ್ತದೆ.

ಎಫ್. ಏವಿಯೇಷನ್ ಜಾಬ್ ಪೋರ್ಟಲ್ (https://aviationjobs.co.in)

ಇದೊಂದು ಅನನ್ಯ ವೆಬ್-ಆಧಾರಿತ ಪೋರ್ಟಲ್, ಇದು ಭಾರತೀಯ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿನ ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರನ್ನು ಒಟ್ಟುಗೂಡಿಸಲು ಪ್ರಯತ್ನಿಸುತ್ತದೆ.

ಜಿ. ಏರ್ ಸೇವಾ

ವಿಮಾನ ಪ್ರಯಾಣಿಕರ ಕುಂದುಕೊರತೆಗಳನ್ನು ಪರಿಹರಿಸಲು ಎಲ್ಲಾ ವಾಯುಯಾನ ಮಧ್ಯಸ್ಥಗಾರರನ್ನು ಸಾಮಾನ್ಯ ವೇದಿಕೆಗೆ ತರಲು MoCA ಯ ಉಪಕ್ರಮ. ಉದ್ಭವಿಸಿರುವ ಸಮಸ್ಯೆಗಳ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ಟ್ರ್ಯಾಕ್ ಮಾಡಬಹುದು. ವಿಮಾನಗಳ ಹಾರಾಟದ ಸ್ಥಿತಿಯನ್ನು ಸಹ ಇದು ಒದಗಿಸುತ್ತದೆ ಮತ್ತು ಸಾಮಾಜಿಕ ಮಾಧ್ಯಮದೊಂದಿಗೆ ಸಂಪರ್ಕ ಹೊಂದಿದೆ.

ಹೆಚ್. ಕಳೆದುಹೋದ ಮತ್ತು ಸಿಕ್ಕಿದ ವಸ್ತುಗಳಿಗೆ ಆನ್‌ಲೈನ್ ಪೋರ್ಟಲ್ (https://www.aai.aero/en/lost-found/item-list)

ಕಳೆದುಹೋದ ಮತ್ತು ಸಿಕ್ಕಿದ ವಸ್ತುಗಳಿಗಾಗಿ ಪ್ರಯಾಣಿಕರು ಹಕ್ಕು ಮಂಡಿಸುವ ಪ್ರಕ್ರಿಯೆಯನ್ನು ಸರಾಗಗೊಳಿಸುವ ಸಲುವಾಗಿ ಲಾಸ್ಟ್ & ಫೌಂಡ್ ಆನ್‌ಲೈನ್ ಪೋರ್ಟಲ್ ಅನ್ನು ಜೂನ್ 2019 ರಲ್ಲಿ ಆರಂಭಿಸಲಾಗಿದೆ.

ಅತಿ ಎತ್ತರದ ಎಟಿಸಿ ಟವರ್

ದೇಶದ ಅತಿ ಎತ್ತರದ ವಾಯು ಸಂಚಾರ ನಿಯಂತ್ರಣ ಗೋಪುರ-ದೆಹಲಿ ಏರ್ ಟ್ರಾಫಿಕ್ ಸರ್ವಿಸ್ ಕಾಂಪ್ಲೆಕ್ಸ್ (ಡಿಎಟಿಎಸ್- ಕಾಂಪ್ಲೆಕ್ಸ್)- ವನ್ನು 02.09.2019 ರಂದು ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಉದ್ಘಾಟಿಸಲಾಯಿತು. ಈ ಅಪ್ರತಿಮ ಮೂಲಸೌಕರ್ಯವು ದಕ್ಷ, ಸುಗಮ ಮತ್ತು ತಡೆರಹಿತ ವಾಯು ಸಂಚಾರ ನಿರ್ವಹಣೆಗೆ ಹೆಚ್ಚಿನ ಪ್ರಮಾಣದ ಸೇವೆಗಳು ಮತ್ತು ವ್ಯವಸ್ಥೆಗಳನ್ನು ಖಚಿತಪಡಿಸುತ್ತದೆ.

ಹಿಂಡನ್ ಮತ್ತು ಕಲಬುರ್ಗಿ ವಿಮಾನ ನಿಲ್ದಾಣಗಳ ನಿರ್ಮಾಣ

ಉತ್ತರಪ್ರದೇಶದ ಗಾಜಿಯಾಬಾದ್ ನ ಹಿಂಡನ್ ಮತ್ತು ಕರ್ನಾಟಕದ ಕಲಬುರ್ಗಿಯಲ್ಲಿ ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಿ ಕಾರ್ಯಾಚರಣೆಗೊಳಿಸಲಾಗಿದೆ.

ವಿಮಾನಗಳಲ್ಲಿ ದೃಢವಾದ ಬೆಳವಣಿಗೆ

ಜೆಟ್ ಏರ್‌ವೇಸ್‌ನ ಹಿಂಜರಿತದ ಹೊರತಾಗಿಯೂ ವಿಮಾನಯಾನ ಕ್ಷೇತ್ರವು ದೃಢವಾದ ಬೆಳವಣಿಗೆಯನ್ನು ಕಂಡಿದೆ. ಜೆಟ್ ಏರ್‌ವೇಸ್‌ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ನಂತರ, ಪ್ರಮುಖ ನಿಗದಿತ ವಿಮಾನಯಾನ ಸಂಸ್ಥೆಗಳು 529 ವಿಮಾನಗಳನ್ನು ನಿರ್ವಹಿಸುತ್ತಿದ್ದವು. ಪ್ರಮುಖ ನಿಗದಿತ ವಿಮಾನಯಾನ ಸಂಸ್ಥೆಗಳ ಒಟ್ಟು ಕಾರ್ಯಾಚರಣಾ ವಿಮಾನಗಳ ಸಂಖ್ಯೆ 624 ಆಗಿದ್ದು, ಇದು ಜೆಟ್ ಕಾರ್ಯನಿರ್ವಹಿಸುತ್ತಿದ್ದ ಸಮಯದಲ್ಲಿದ್ದ ವಿಮಾನ ಕಾರ್ಯಾಚರಣೆಗಿಂತ ಹೆಚ್ಚಾಗಿದೆ.

AERA ಕಾಯ್ದೆ, 2008 ಕ್ಕೆ ತಿದ್ದುಪಡಿಗಳು

ಏರ್ಪೋರ್ಟ್ಸ್ ಎಕನಾಮಿಕ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಆಕ್ಟ್, 2008 ಅನ್ನು ತಿದ್ದುಪಡಿ ಮಾಡಲಾಗಿದೆ, ಈಗ ‘ಪ್ರಮುಖ ವಿಮಾನ ನಿಲ್ದಾಣ ಎಂದು ವರ್ಗೀಕರಣಕ್ಕೆ ವಾರ್ಷಿಕ ಪ್ರಯಾಣಿಕರ ಸಂಚಾರ ಮಾನದಂಡವು ‘ಮೂರೂವರೆ ಮಿಲಿಯನ್ ಆಗಿದೆ. ಅಂತಹ ಸುಂಕವನ್ನು ಕೇಂದ್ರ ಸರ್ಕಾರವು ಬಿಡ್ಡಿಂಗ್ ದಾಖಲೆಯ ಭಾಗವಾಗಿ ತಿಳಿಸಿದ್ದರೆ ಅಥವಾ ಕೇಂದ್ರ ಸರ್ಕಾರವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿ ಬಿಡ್ಡಿಂಗ್ ಪಾರದರ್ಶಕ ಪ್ರಕ್ರಿಯೆಯ ಮೂಲಕ ನಿರ್ಧರಿಸಿದ್ದರೆ ಪ್ರಾಧಿಕಾರವು ವಿಮಾನ ನಿಲ್ದಾಣಕ್ಕೆ ಸಂಬಂಧಿಸಿದಂತೆ ಸುಂಕವನ್ನು ಅಳವಡಿಸಿಕೊಳ್ಳುತ್ತದೆ.

ಎಎಸ್ಎಫ್ ಭದ್ರತಾ ಘಟಕ ಸುಧಾರಣೆ

ಪ್ರಯಾಣಿಕರ ಶುಲ್ಕದ ಭಾಗವಾಗಿ ವಿಧಿಸಲಾಗುವ ಏವಿಯೇಷನ್ ಸೆಕ್ಯುರಿಟಿ ಶುಲ್ಕ (ಎಎಸ್ಎಫ್) ಅನ್ನು ಸುಧಾರಿಸಲಾಗಿದೆ. ವಿಮಾನ ನಿಲ್ದಾಣಗಳಾದ್ಯಂತ ಎಲ್ಲಾ ಎಎಸ್ಎಫ್ ಸಂಗ್ರಹಗಳನ್ನು ಸಂಗ್ರಹಿಸಲು ರಾಷ್ಟ್ರೀಯ ಟ್ರಸ್ಟ್ ಅನ್ನು ರಚಿಸಲಾಗಿದೆ. ಟ್ರಸ್ಟ್ ಅನ್ನು ಎಎಐ ನಿರ್ವಹಿಸುತ್ತದೆ. ಒಂದೇ ಪೂಲ್ ಖಾತೆಯಲ್ಲಿ ಎಎಸ್ಎಫ್ ಸಂಗ್ರಹವು ಎಎಐನ ಸಣ್ಣ ವಿಮಾನ ನಿಲ್ದಾಣಗಳಿಗೆ ಕ್ರಾಸ್ ಸಬ್ಸಿಡಿ ನೀಡುವ ಉದ್ದೇಶವನ್ನು ಹೊಂದಿದೆ.

ವಿಮಾನದೊಳಗೆ ವೈಫೈ ಸಂಪರ್ಕ

ವಿಮಾನದೊಳಗೆ ವೈಫೈ ಸಂಪರ್ಕ ಮಾನದಂಡಗಳನ್ನು ರೂಪಿಸಲಾಗಿದೆ ಮತ್ತು ಅಗತ್ಯ ಭದ್ರತಾ ಅವಶ್ಯಕತೆಗಳನ್ನು ಪೂರೈಸಲಾಗಿದೆ.

ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧ

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರವು 85 ವಿಮಾನ ನಿಲ್ದಾಣಗಳನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ವಿಮಾನ ನಿಲ್ದಾಣಗಳೆಂದು ಘೋಷಿಸಿದೆ. ಏರ್ ಇಂಡಿಯಾವು ವಿಮಾನದೊಳಗೆ ವಿವಿಧ ಪ್ಲಾಸ್ಟಿಕ್ ಬಳಕೆಯ ಅಡುಗೆ ವಸ್ತುಗಳಿಗೆ ಪರ್ಯಾಯವಾಗಿ ಪರ್ಯಾಯ ವಸ್ತುಗಳಿಂದ ತಯಾರಿಸಿದ ಸಾಮಗ್ರಿಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿದೆ.

2017 ರಲ್ಲಿ ಸ್ಥಾಪನೆಯಾದ ಎಎಐನ ಸಿಎಪಿ ನಿರ್ದೇಶನಾಲಯ, ಪರವಾನಗಿ ಸಮಸ್ಯೆಗಳು ಮತ್ತು ಎಎಐನ ನಿಯಂತ್ರಕಗಳ ಪರವಾನಗಿ ಅನುಷ್ಠಾನದ ಕುರಿತು ಡಿಜಿಸಿಎ ಜೊತೆ ಸಮನ್ವಯಕ್ಕಾಗಿ ನೋಡಲ್ ಕೇಂದ್ರ ಎಂದು ನಾಮನಿರ್ದೇಶನಗೊಂಡಿದೆ. ನಿಯಂತ್ರಕಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ಮತ್ತು ಮೌಲ್ಯಮಾಪನ ಕಾರ್ಯಗಳು ಸಂಕೀರ್ಣವಾದ ಕಾರಣ ಮತ್ತು ವಾಯು ಸಂಚಾರ ನಿಯಂತ್ರಣ ಕ್ಷೇತ್ರದಲ್ಲಿ ಉನ್ನತ ಮಟ್ಟದ ಅನುಭವ ಮತ್ತು ಪರಿಣತಿಯ ಅಗತ್ಯವಿರುವುದರಿಂದ ಈ ಕಾರ್ಯಗಳನ್ನು ಡಿಜಿಸಿಎ ಮೇಲ್ವಿಚಾರಣೆಯಲ್ಲಿ ಎಎಐಗೆ ನಿಯೋಜಿಸಲಾಗಿದೆ. ಈ ಉನ್ನತ ಮಟ್ಟದ ವಿಶೇಷ ಕಾರ್ಯಗಳನ್ನು ಎಎಐನಲ್ಲಿ ಸಿಎಪಿ ನಿರ್ದೇಶನಾಲಯವು ಮಾಡುತ್ತಿದೆ.

ಯುನಿವರ್ಸಲ್ ಸೇಫ್ಟಿ ಆಡಿಟ್ ಓವರ್‌ಸೈಟ್ ಪ್ರೋಗ್ರಾಂ (ಯುಎಸ್‌ಒಎಪಿ) ಮತ್ತು ಕೋಆರ್ಡಿನೇಷನ್ ವಾಲಿಡೇಷನ್ ಮಿಷನ್ (ಐಸಿವಿಎಂ) ಅಡಿಯಲ್ಲಿ ಐಸಿಎಒ ಲೆಕ್ಕಪರಿಶೋಧನೆಯ ನಂತರ ನಾಗರಿಕ ವಿಮಾನಯಾನ ಸಚಿವಾಲಯವು ಭಾರತದಲ್ಲಿ ವಾಯು ಸಂಚಾರ ನಿಯಂತ್ರಕಗಳಿಗೆ ಪರವಾನಗಿ ನೀಡಲು ನಿರ್ಧರಿಸಿದೆ. ವಿಮಾನ ನಿಯಮಗಳು 1937ಕ್ಕೆ ನವೆಂಬರ್ 5, 2018 ರಂದು ತಿದ್ದುಪಡಿ ಮಾಡಲಾಗಿದ್ದು, ನಾಗರಿಕ ವಿಮಾನಯಾನ ಮಹಾನಿರ್ದೇಶಕರು (ಡಿಜಿಸಿಎ) ನಿಯಂತ್ರಕಗಳಿಗೆ ಪರವಾನಗಿ ನೀಡುತ್ತಾರೆ.



(Release ID: 1597947) Visitor Counter : 111


Read this release in: Hindi , English , Urdu , Bengali