ಭಾರೀ ಕೈಗಾರಿಕೆಗಳ ಸಚಿವಾಲಯ

ಭಾರಿ ಕೈಗಾರಿಕಾ ಸಚಿವಾಲಯದ ವರ್ಷಾಂತ್ಯದ ನೋಟ 2019

Posted On: 20 DEC 2019 6:04PM by PIB Bengaluru

ಭಾರಿ ಕೈಗಾರಿಕಾ ಸಚಿವಾಲಯದ ವರ್ಷಾಂತ್ಯದ ನೋಟ 2019

ಏಪ್ರಿಲ್ 1, 2019 ರಲ್ಲಿ ಪ್ರಾರಂಭವಾದ ಫೇಮ್ ಇಂಡಿಯಾ ಯೋಜನೆಯ ಎರಡನೇ ಹಂತ . ಫೇಮ್- II ಅಡಿಯಲ್ಲಿ 10,000 ಕೋಟಿ ರೂ ವಿನಿಯೋಗ ,  ಫೇಮ್- II 5595 ಅಡಿಯಲ್ಲಿ  26 ರಾಜ್ಯಗಳಲ್ಲಿ 64 ನಗರಗಳಿಗೆ ಇ-ಬಸ್ಸುಗಳು

 

ಆಟೋಮೊಬೈಲ್ ಉದ್ಯಮವು ಭಾರತದ ಆರ್ಥಿಕತೆಯ ಪ್ರಮುಖ ಶಕ್ತಿಗಳಲ್ಲಿ ಒಂದಾಗಿದೆ. ಸ್ವಯಂಚಾಲಿತ ಮಾರ್ಗದ ಮೂಲಕ 100 ಪ್ರತಿಶತ ಎಫ್ ಡಿ ಐ ಗೆ (ವಿದೇಶಿ ಬಂಡವಾಳ) ಅವಕಾಶ ನೀಡುವ ಮೂಲಕ 1991 ರಲ್ಲಿ ಈ ಕ್ಷೇತ್ರವನ್ನು ಉದಾರೀಕರಣಗೊಳಿಸಿದಾಗಿನಿಂದ, ಭಾರತೀಯ ವಾಹನ ವಲಯವು ಬಹಳಷ್ಟು ಪ್ರಗತಿಯನ್ನು ಹೊಂದಿದೆ.  ಇಂದು, ದೇಶದಲ್ಲಿ ಪ್ರತಿಯೊಂದು ಜಾಗತಿಕ ವಾಹನ ತಯಾರಕರ ಉಪಸ್ಥಿತಿಯಿದೆ.  ದ್ವಿಚಕ್ರ, ತ್ರಿಚಕ್ರ, ಪ್ರಯಾಣಿಕ ಕಾರುಗಳು, ಲಘು ವಾಣಿಜ್ಯ ವಾಹನಗಳು, ಟ್ರಕ್ಕುಗಳು, ಬಸ್ಸುಗಳು, ಟ್ರ್ಯಾಕ್ಟರ್ ಗಳು ಮತ್ತು ಭಾರಿ ವಾಣಿಜ್ಯ ವಾಹನಗಳಂತಹ ಎಲ್ಲಾ ವರ್ಗದ ವಾಹನಗಳು ದೇಶದಲ್ಲಿ ಉತ್ಪಾದಿಸಲ್ಪಡುತ್ತಿವೆ.  ಭಾರತವು  ದ್ವಿಚಕ್ರ  ಮತ್ತು ತ್ರಿಚಕ್ರ ವಾಹನಗಳ ಅತಿದೊಡ್ಡ ಉತ್ಪಾದಕವಾಗಿದೆ  ಮತ್ತು ವಿಶ್ವದಲ್ಲೇ ಪ್ರಯಾಣಿಕ ಕಾರುಗಳ 4 ನೇ ಅತಿದೊಡ್ಡ ಉತ್ಪಾದಕವಾಗಿದೆ.  2018-19ರ ಅವಧಿಯಲ್ಲಿ ಭಾರತೀಯ ವಾಹನ ಉದ್ಯಮದ ಒಟ್ಟು ವಹಿವಾಟು ಸುಮಾರು 118 ಬಿಲಿಯನ್ ಯುಎಸ್ ಡಾಲರ್ (ರೂ. 8.2 ಲಕ್ಷ ಕೋಟಿ), ಇದು ದೇಶದ ಒಟ್ಟು ಜಿಡಿಪಿಯ (ಒಟ್ಟು ಆಂತರಿಕ ಉತ್ಪಾದನೆ)  7.1%, ಕೈಗಾರಿಕಾ ಜಿಡಿಪಿಯ 27% ಮತ್ತು ಉತ್ಪಾದನಾ ಜಿಡಿಪಿಯ 49% ರಷ್ಟಿದೆ.  ಈ ಉದ್ಯಮವು ಅತಿದೊಡ್ಡ ಉದ್ಯೋಗದಾತರಲ್ಲಿ ಒಂದಾಗಿದೆ ಮತ್ತು ಸುಮಾರು 37 ದಶಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಒದಗಿಸುತ್ತದೆ.  ಎಲ್ಲಾ ವರ್ಗಗಳ ವಾಹನಗಳ ಪ್ರಸ್ತುತ ವಾರ್ಷಿಕ ಮಾರಾಟವು ಸುಮಾರು 26 ದಶಲಕ್ಷ (2018-19)ವಾಗಿದೆ,  ಇದು 2030 ರ ವೇಳೆಗೆ ಸುಮಾರು 3 ಪಟ್ಟು ಹೆಚ್ಚು ಅಂದರೆ ಸುಮಾರು 84.5 ದಶಲಕ್ಷದಷ್ಟು  ಏರಿಕೆಯಾಗಲಿದೆ.

 

ವರ್ಷಕ್ಕೆ ಶತಕೋಟಿ ಲೀಟರ್ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವುದು ಮತ್ತು ಲಕ್ಷಾಂತರ ಟನ್ ಇಂಗಾಲ ಮತ್ತು ಇತರ ಮಾಲಿನ್ಯಕಾರಕಗಳ ಹೊರಸೂಸುವಿಕೆ ದೇಶವು ಎದುರಿಸುತ್ತಿರುವ ಕೆಲವು ಪ್ರಮುಖ ಸವಾಲುಗಳಾಗಿವೆ,  ಇದು ವಾಹನ ವಲಯಕ್ಕೆ ನೇರವಾಗಿ ಸಂಬಂಧಿಸಿದೆ. ಪ್ರಸ್ತುತ, ಭಾರತವು ತೀವ್ರ ವಾಯುಮಾಲಿನ್ಯದ ಬಿಕ್ಕಟ್ಟನ್ನು ಎದುರಿಸುತ್ತಿದೆ ಮತ್ತು ವಿಶ್ವದ ಅಗ್ರ 20 ಕಲುಷಿತ ನಗರಗಳಲ್ಲಿ 14 ನಗರಗಳು ಭಾರತದಲ್ಲಿವೆ.

 

ಈ ಸವಾಲುಗಳನ್ನು ಎದುರಿಸಲು, ಸರ್ಕಾರದ ವಿವಿಧ ಸಂಬಂಧಪಟ್ಟ ಇಲಾಖೆಗಳು ಕಾರ್ಪೋರೇಟ್ ಸರಾಸರಿ ಇಂಧನ ಆರ್ಥಿಕತೆ (ಸಿಎಎಫ್ಇ) ಮಾನದಂಡಗಳನ್ನು ಬಿಗಿಗೊಳಿಸುವುದು, ಬಿಎಸ್ 4 ರಿಂದ ಬಿಎಸ್ 6ಕ್ಕೆ  ಉನ್ನತೀಕರಣವಾಗುವ  ಮೂಲಕ ಬಿಎಸ್ ಗಿI  ಪರಿಮಾಣದ ಗುಣಮಟ್ಟದ ವಾಹನಗಳನ್ನು ಪರಿಚಯಿಸುವುದು, ಹೆವಿ ಡ್ಯೂಟಿ ವಾಣಿಜ್ಯ ವಾಹನಗಳಿಗೆ ಇಂಧನ ದಕ್ಷತೆಯ ಮಾನದಂಡಗಳು, ವಾಹನಗಳಿಗೆ ಶ್ರೇಣಿಗಳ ಅಂದಾಜನ್ನು  ಪ್ರಾರಂಭಿಸುವುದು ಮತ್ತು ಮುಂತಾದ ಇತ್ಯಾದಿ ತಂತ್ರಗಳನ್ನು ರೂಪಿಸುತ್ತಿವೆ.  ಶೂನ್ಯ ವಾಯು ಮಾಲಿನ್ಯದ ಹೊರಸೂಸುವಿಕೆಯನ್ನು ಹೊಂದಿರುವ ವಿದ್ಯುತ್ ವಾಹನಗಳ  ಪ್ರಚಾರವು ತೈಲ ಅವಲಂಬನೆಯನ್ನು ಕಡಿಮೆ ಮಾಡುವ ಮತ್ತು ನಗರಗಳಿಂದ ವಾಹನ ಮಾಲಿನ್ಯವನ್ನು ಕಡಿಮೆ ಮಾಡುವ ದಿಕ್ಕಿನಲ್ಲಿ ಸರ್ಕಾರದ ಪ್ರಯತ್ನವಾಗಿದೆ.

 

ಮಾಲಿನ್ಯದಿಂದಾಗಿ ಉಂಟಾಗುವ ವಿವಿಧ ಬಿಕ್ಕಟ್ಟುಗಳನ್ನು ನಿಭಾಯಿಸಲು ಮತ್ತು ಭಾರತದ ನಾಗರಿಕರಿಗೆ ಉತ್ತಮ ಜೀವನಮಟ್ಟವನ್ನು ಒದಗಿಸಲು ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ವಾಹನಗಳನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು :

ಭಾರತ ಸರ್ಕಾರವು 2011 ರಲ್ಲಿ ನ್ಯಾಷನಲ್ ಮಿಷನ್ ಆನ್ ಎಲೆಕ್ಟ್ರಿಕ್ ಮೊಬಿಲಿಟಿ (ಎನ್ಎಂಇಎಂ) ಗೆ ಅನುಮೋದನೆ ನೀಡಿತು ಮತ್ತು ತರುವಾಯ ರಾಷ್ಟ್ರೀಯ ಎಲೆಕ್ಟ್ರಿಕ್ ಮೊಬಿಲಿಟಿ ಮಿಷನ್ ಪ್ಲಾನ್ 2020 (ಎನ್ಇಎಂಎಂಪಿ 2020) ಅನ್ನು 2013 ರಲ್ಲಿ ಪ್ರಧಾನ ಮಂತ್ರಿ ಅನಾವರಣಗೊಳಿಸಿದರು.

ಎನ್ಇಎಂಎಂಪಿ 2020 ರಾಷ್ಟ್ರೀಯ ಮಿಷನ್ ದಾಖಲೆಯಾಗಿದ್ದು, ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ವೇಗವಾಗಿ ಅಳವಡಿಸಿಕೊಳ್ಳಲು ಮತ್ತು ಅವುಗಳ ಉತ್ಪಾದನೆಗೆ  ದೂರದೃಷ್ಟಿ ಮತ್ತು ಮಾರ್ಗಸೂಚಿಯನ್ನು ಒದಗಿಸುತ್ತದೆ.  ರಾಷ್ಟ್ರದ ಇಂಧನ ಸುರಕ್ಷತೆಯನ್ನು ಹೆಚ್ಚಿಸಲು, ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಒದಗಿಸಲು ಮತ್ತು ಜಾಗತಿಕ ಉತ್ಪಾದನೆಯಲ್ಲಿ ಮುಂಚೂಣಿಯನ್ನು ಸಾಧಿಸಲು ಭಾರತೀಯ ವಾಹನ ಉದ್ಯಮಕ್ಕೆ ಅನುವು ಮಾಡಿಕೊಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.  ಇದು ಭಾರತ ಸರ್ಕಾರವು ಕೈಗೊಂಡ ಪ್ರಮುಖ ಮತ್ತು ಮಹತ್ವಾಕಾಂಕ್ಷೆಯ ಉಪಕ್ರಮಗಳಲ್ಲಿ ಒಂದಾಗಿದೆ,  ಇದು ದೇಶದ ವಾಹನ ಮತ್ತು ಸಾರಿಗೆ ಉದ್ಯಮದಲ್ಲಿ ಪರಿವರ್ತನೆಯ ಮಾದರಿ ಬದಲಾವಣೆಯನ್ನು ತರುವ ಸಾಮರ್ಥ್ಯವನ್ನು ಹೊಂದಿದೆ.  ಈ ಯೋಜನೆಯು 2020 ರ ಹೊತ್ತಿಗೆ ಭಾರತದಲ್ಲಿ ಸುಮಾರು 6-7 ದಶಲಕ್ಷ ಎಲೆಕ್ಟ್ರಿಕ್ / ಹೈಬ್ರಿಡ್ ವಾಹನಗಳ ಸಂಖ್ಯೆಯನ್ನು ಖಾತರಿಪಡಿಸುವ ಉದ್ದೇಶದಿಂದ ನೀತಿಗಳ ಸಂಯೋಜನೆಯ ಮೂಲಕ ಭಾರತದಲ್ಲಿ ಹೈಬ್ರಿಡ್ ಮತ್ತು ವಿದ್ಯುತ್  ಸಾರಿಗೆಯನ್ನು ಉತ್ತೇಜಿಸುವ ಹಾಗು ಕೆಲವು ವಾಹನ ವಿಭಾಗಗಳಲ್ಲಿ ಭಾರತದ ಜಾಗತಿಕ ಮುಂದಾಳತ್ವವನ್ನು ಖಾತರಿಪಡಿಸುವ ತಂತ್ರಜ್ಞಾನದ ನಿರ್ದಿಷ್ಟ ಮಟ್ಟದ ಸ್ವದೇಶಿ ನಿರ್ಮಾಣದ ಸಮಗ್ರ ಸಹಕಾರಿ ಯೋಜನೆಗನ್ನು ಒಳಗೊಂಡಿದೆ.

ಎನ್ ಇ ಎಮ್ ಎಮ್ ಪಿ 2020 ರ ಭಾಗವಾಗಿ, 2015 ರ ಮಾರ್ಚ್ನಲ್ಲಿ 'ಭಾರತದಲ್ಲಿ ವಿದ್ಯುತ್ (ಮತ್ತು ಹೈಬ್ರಿಡ್) ವಾಹನಗಳ ವೇಗದ ದತ್ತು ಮತ್ತು ಉತ್ಪಾದನೆ' (ಫೇಮ್ ಇಂಡಿಯ) ಎಂಬ ಯೋಜನೆಗೆ 2015 ರ 01 ನೇ ಏಪ್ರಿಲ್ ನಿಂದ 2 ವರ್ಷಗಳ ಆರಂಭಿಕ ಅವಧಿಗೆ ಸರ್ಕಾರ ಅನುಮೋದನೆ ನೀಡಿತು.  ಪಳೆಯುಳಿಕೆ ಇಂಧನದ (ಪೆಟ್ರೋಲ್ ಡೀಸಲ್ ) ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ವಾಹನ ಹೊಗೆ ಹೊರಸೂಸುವಿಕೆಯ ಸಮಸ್ಯೆಗಳನ್ನು ಪರಿಹರಿಸುವುದು.  ಒಟ್ಟು ವಿನಿಯೋಗವು ರೂ. 895 ಕೋಟಿಯಾಗಿದ್ದು,  ಈ ಯೋಜನೆಯನ್ನು ಕಾಲಕಾಲಕ್ಕೆ 2019 ರ ಮಾರ್ಚ್ 31 ರವರೆಗೆ ವಿಸ್ತರಿಸಲಾದೆ,  ಫೇಮ್ ಇಂಡಿಯಾ ಯೋಜನೆಯ 1 ನೇ ಹಂತವನ್ನು  (I) ಬೇಡಿಕೆಯ ಸೃಷ್ಟಿ, (ii) ತಂತ್ರಜ್ಞಾನ ವೇದಿಕೆ, (iii) ಪೈಲಟ್ ಯೋಜನೆ ಮತ್ತು (iv) ಚಾರ್ಜಿಂಗ್ ಮೂಲಸೌಕರ್ಯಗಳಂಥ ನಾಲ್ಕು ಕ್ಷೇತ್ರಗಳ ಮೂಲಕ   ಜಾರಿಗೆ ತರಲಾಯಿತು.

 

ಬೇಡಿಕೆಯ ಸೃಷ್ಟಿಯು ಪ್ರೋತ್ಸಾಹ ಧನವನ್ನು ನೀಡುವ ಮೂಲಕ xಇವಿ ಗಳ ಖರೀದಿದಾರರನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ,  ಇದು ವ್ಯಾಪಾರಿಗಳ ಮಟ್ಟದಲ್ಲಿ ವಾಹನವನ್ನು ಖರೀದಿಸುವ ಸಮಯದಲ್ಲಿ ಖರೀದಿಸುವ ಬೆಲೆಯನ್ನು ಕಡಿಮೆ ಮಾಡುತ್ತದೆ.  ಪ್ರಾಯೋಗಿಕ ಯೋಜನೆಗಳ ಅಂಶವು ಹೊಸ ತಂತ್ರಜ್ಞಾನಗಳು, ವ್ಯವಹಾರ ಮಾದರಿಗಳು ಇತ್ಯಾದಿಗಳ ಪ್ರಯೋಗವನ್ನು ಸಾರ್ವಜನಿಕ ಸಾರಿಗೆಯ ಮೇಲೆ ವಿಶೇಷವಾಗಿ ಗಮನಹರಿಸಿ ಮಾಡಲಾಗಿದೆ. ಇವಿ (ಎಲೆಕ್ಟ್ರಿಕ್ ವೆಹಿಕಲ್) ತಂತ್ರಜ್ಞಾನಗಳ ಅಭಿವೃದ್ಧಿಗೆ ಪಿಪಿಪಿ ಯೋಜನೆಗಳನ್ನು ಅನುಮೋದಿಸಲಾಗಿರುವ ಡಿಪಾರ್ಟ್ಮೆಂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ (ಡಿಎಸ್ಟಿ) ಯೊಂದಿಗೆ ಈ ಯೋಜನೆಯಡಿ ತಂತ್ರಜ್ಞಾನ ವೇದಿಕೆ ಕಾರ್ಯಗತಗೊಂಡಿದೆ. ಚಾರ್ಜಿಂಗ್ ಇನ್ಫ್ರಾಸ್ಟ್ರಕ್ಚರ್ ಘಟಕವು ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸುವುದನ್ನು ಅವಲಂಬಿಸಿ ವಿವಿಧ ನಗರಗಳಲ್ಲಿ ಚಾರ್ಜಿಂಗ್ ಸ್ಟೇಷನ್ ಅನ್ನು ಸ್ಥಾಪಿಸಲು ಉದ್ದೇಶಿಸಿದೆ.

 

ಫೇಮ್ ಇಂಡಿಯಾ ಯೋಜನೆಯ ಹಂತ -1 ರ ಸಾಧನೆಗಳು:

ಎನ್ ಇ ಇ ಎಮವ ಪಿ 2020 ರಲ್ಲಿ ಗ್ರಹಿಸಿದಂತೆ ಮುಖ್ಯ ಯೋಜನೆಯನ್ನು ಪರಿಗಣಿಸುವ ಮೊದಲು ಫೇಮ್ (ಎಫ್ ಎ ಎಮ್ ಇ) ಯೋಜನೆಯನ್ನು ಪೈಲಟ್ ಯೋಜನೆ ಎಂದು ವಿವರಿಸಲಾಗಿದ್ದರೂ, ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ  ವಿವಿಧ ಇಲಾಖೆಗಳು ಮತ್ತು ಎಲ್ಲಾ ಮಧ್ಯಸ್ಥಗಾರರಲ್ಲಿ ಎಲೆಕ್ಟ್ರಿಕ್ ಮೊಬಿಲಿಟಿ ಕುರಿತು ಪ್ರಮುಖ ನೀತಿಯನ್ನು ರಚಿಸುವಲ್ಲಿ ಈ ಯೋಜನೆ ಬಹಳ ಯಶಸ್ವಿಯಾಗಿದೆ.

 

ಈ ಯೋಜನೆಯ ಕೆಲವು ಪರಿಮಾಣಾತ್ಮಕ ಮತ್ತು ಗುಣಾತ್ಮಕ ಯಶಸ್ಸನ್ನು ಈ ಕೆಳಗಿನಂತೆ ನೀಡಲಾಗಿದೆ:

ಯೋಜನೆಯ ಈ ಹಂತದಲ್ಲಿ ಸುಮಾರು 2.8 ಲಕ್ಷ ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಸುಮಾರು 359 ಕೋಟಿ ರೂ.ಗಳ ಬೇಡಿಕೆಯ ಪ್ರೋತ್ಸಾಹಧನದ ಮೂಲಕ ಬೆಂಬಲವನ್ನು ನೀಡಲಾಗಿದೆ, ಇದರ ಪರಿಣಾಮವಾಗಿ ಸುಮಾರು 50 ಮಿಲಿಯನ್ ಲೀಟರ್ ಇಂಧನವನ್ನು ಉಳಿಸಬಹುದು ಮತ್ತು ಸುಮಾರು 124 ಮಿಲಿಯನ್ ಕೆ.ಜಿ. ಇಂಗಾಲದ ಡೈ ಆಕ್ಷೈಡ್ ಕಡಿಮೆಯಾಗುತ್ತದೆ.

ಸುಮಾರು 158 ಕೋಟಿ ರೂಪಾಯಿಗಳಷ್ಟು ಯೋಜನೆಗಳು ಅಂದರೆ ತಂತ್ರಜ್ಞಾನ ಅಭಿವೃದ್ಧಿ ಯೋಜನೆಗಳಿಗೆ ಮೂಲಸೌಕರ್ಯಗಳ ಸ್ಥಾಪನೆ, ವಿದ್ಯುದ್ದೀಕೃತ ಸಾರಿಗೆಯಲ್ಲಿ ಸುಧಾರಿತ ಸಂಶೋಧನೆಗಾಗಿ 'ಸೆಂಟರ್ ಆಫ್ ಎಕ್ಸಲೆನ್ಸ್' ಸ್ಥಾಪನೆ, ಬ್ಯಾಟರಿ ಎಂಜಿನಿಯರಿಂಗ್ ಇತ್ಯಾದಿಗಳಿಗೆ ವಿವಿಧ ಸಂಘ ಸಂಸ್ಥೆಗಳಾದ  ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ಎಆರ್ ಎಐ), ಐಐಟಿ ಮದ್ರಾಸ್, ಐಐಟಿ ಕಾನ್ಪುರ್, ನಾನ್ ಫೆರಸ್ ಮೆಟೀರಿಯಲ್ ಟೆಕ್ನಾಲಜಿ ಡೆವಲಪ್ಮೆಂಟ್ ಸೆಂಟರ್ (ಎನ್ಎಫ್ಟಿಡಿಸಿ) ಮತ್ತು ಅಲಿಗರ್ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು) ಗಳಿಗೆ ಅನುಮೋದನೆ ನೀಡಲಾಗಿದೆ.

ಈ ಯೋಜನೆಯಡಿ ಭಾರಿ ಕೈಗಾರಿಕಾ ಸಚಿವಾಲಯವು  ದೇಶದ ವಿವಿಧ ನಗರಗಳಿಗೆ 425 ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ಬಸ್ಸುಗಳನ್ನು ಮಂಜೂರು ಮಾಡಿದೆ. ಒಟ್ಟು ವೆಚ್ಚ 300 ಕೋಟಿ.  425 ಇ-ಬಸ್ಸುಗಳಲ್ಲಿ 400 ಅನ್ನು ಇಂದೋರ್, ಲಕ್ನೋ, ಗುವಾಹಟಿ,  ಜಮ್ಮು ಮತ್ತು ಕಾಶ್ಮೀರ, ಕೋಲ್ಕತಾ, ಹೈದರಾಬಾದ್, ಶಿಮ್ಲಾ ಮತ್ತು ಮುಂಬೈ ಮುಂತಾದ ವಿವಿಧ ನಗರಗಳಲ್ಲಿ ನಿಯೋಜಿಸಲಾಗಿದೆ. ಮುಂಬೈನಲ್ಲಿ ಉಳಿದಿರುವ 25 ಇ-ಬಸ್ಸುಗಳನ್ನು ಈ ತಿಂಗಳ ಅಂತ್ಯದ ವೇಳೆಗೆ ನಿಯೋಜಿಸುವ ನಿರೀಕ್ಷೆಯಿದೆ.

ಚಾರ್ಜಿಂಗ್ ಸೌಕರ್ಯಗನ್ನು ಒದಗಿಸುವ ಯೋಜನೆಯಲ್ಲಿ, ಬೆಂಗಳೂರು, ಚಂಡೀಗಡ, ಜೈಪುರ ಮತ್ತು ದೆಹಲಿಯ ಎನ್ಸಿಆರ್ ಮುಂತಾದ ನಗರಗಳಲ್ಲಿ ಸುಮಾರು 500 ಚಾರ್ಜಿಂಗ್ ಕೇಂದ್ರಗಳು / ಮೂಲಸೌಕರ್ಯಗಳನ್ನು ಭಾರತ ಸರ್ಕಾರ ಮಂಜೂರು ಮಾಡಿದೆ.  ಬಿ ಇ ಎಲ್ ಮತ್ತು ಆರ್ ಇ ಐ ಎಲ್  ನಂತಹ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ ನಿಯಮಿತವಾಗಿ ಮಧ್ಯಂತರಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸುವ ಮೂಲಕ ಮೂರು ಎಕ್ಸ್ಪ್ರೆಸ್ ಹೆದ್ದಾರಿಗಳನ್ನು ಸಂಪೂರ್ಣವಾಗಿ ಇ-ವಾಹನ ಸ್ನೇಹಿಯನ್ನಾಗಿ ಮಾಡುವ ಕೆಲಸವನ್ನು ಭಾರಿ ಕೈಗಾರಿಕಾ  ಇಲಾಖೆಯು ವಹಿಸಿದೆ. ಈ ಹೆದ್ದಾರಿಗಳು ಯಾವುವೆಂದರೆ ದೆಹಲಿ-ಚಂಡೀಗಡ್, ದೆಹಲಿ-ಜೈಪುರ ಮತ್ತು ಮುಂಬೈ-ಪುಣೆ ಎಕ್ಸ್ಪ್ರೆಸ್ ಹೆದ್ದಾರಿಗಳು.  ಇತ್ತೀಚೆಗೆ ದೆಹಲಿ - ಚಂಡೀಗಡ ಹೆದ್ದಾರಿಯನ್ನು ದೇಶದ ಮೊದಲ ಇ-ವಾಹನ ಸ್ನೇಹಿ ಎಕ್ಸ್ಪ್ರೆಸ್ ಹೆದ್ದಾರಿ ಎಂದು ಘೋಷಿಸಲಾಗಿದೆ.

 

ಫೇಮ್ ಇಂಡಿಯಾ ಯೋಜನೆ ಹಂತ II :

ಫೇಮ್ ಇಂಡಿಯಾ ಯೋಜನೆಯ ಫಲಿತಾಂಶ ಮತ್ತು ಅನುಭವದ ಆಧಾರದ ಮೇಲೆ, ಫೇ,ಮ್ ಯೋಜನೆಯ ಎರಡನೇ ಹಂತವನ್ನು ಅಂತಿಮಗೊಳಿಸಲಾಯಿತು ಮತ್ತು ಕೇಂದ್ರ ಕ್ಯಾಬಿನೆಟ್ನ ಅನುಮೋದನೆಯೊಂದಿಗೆ 2019 ರ ಮಾರ್ಚ್ 8 ರಂದು ಪ್ರಕಟಿಸಲಾಯಿತು  ಯೋಜನೆಯ ಎರಡನೇ ಹಂತವು 2019 ರ ಏಪ್ರಿಲ್ 1 ರಿಂದ 3 ವರ್ಷಗಳ ಅವಧಿಗೆ ಕೋಟಿ 10,000 ಕೋಟಿ ರೂಪಾಯಿಗಳ ಅನುದಾನದಲ್ಲಿ ಪ್ರಾರಂಭವಾಯಿತು. ಈ ಯೋಜನೆಯು 3 ಘಟಕಗಳನ್ನು ಹೊಂದಿದೆ. ಅವುಗಳೆಂದರೆ –

ಎ) ಬೇಡಿಕೆಗೆ  ಪ್ರೋತ್ಸಾಹ ಧನ

ಬಿ) ಚಾರ್ಜಿಂಗ್ ಮೂಲಸೌಕರ್ಯಗಳು

ಸಿ) ಪ್ರಚಾರ, ಐಇಸಿ (ಮಾಹಿತಿ, ಶಿಕ್ಷಣ ಮತ್ತು ಸಂವಹನ) ಚಟುವಟಿಕೆಗಳು ಸೇರಿದಂತೆ ಆಡಳಿತಾತ್ಮಕ ಖರ್ಚು

ಫೇಮ್ ಇಂಡಿಯಾ ಯೋಜನೆ II ಹಂತದ ಪ್ರಮುಖ ಲಕ್ಷಣಗಳು:

ಈ ಹಂತವು 7090 ಇ-ಬಸ್ಗಳು, 5 ಲಕ್ಷ ಇ – ತ್ರಿಚಕ್ರ ವಾಹನಗಳು, 55000 ಇ -   ಚತುಷ್ಚಕ್ರ ಪ್ಯಾಸೆಂಜರ್ ಕಾರುಗಳು (ಸ್ಟ್ರಾಂಗ್ ಹೈಬ್ರಿಡ್ ಸೇರಿದಂತೆ) ಮತ್ತು 10 ಲಕ್ಷ ಇ – ದ್ವಿಚಕ್ರ ವಾಹನಗಳನ್ನು ಬೆಂಬಲಿಸುವ ಮೂಲಕ ಬೇಡಿಕೆಯನ್ನು ಉತ್ಪಾದಿಸುವ ಗುರಿಯನ್ನು ಹೊಂದಿದೆ.

ಜನಸಾಮಾನ್ಯರಿಗೆ ಕೈಗೆಟುಕುವ ಮತ್ತು ಪರಿಸರ ಸ್ನೇಹಿ ಸಾರ್ವಜನಿಕ ಸಾರಿಗೆ ಆಯ್ಕೆಗಳನ್ನು ಒದಗಿಸಲು ಹೆಚ್ಚಿನ ಒತ್ತು ನೀಡುವುದರೊಂದಿಗೆ, ಈ ಯೋಜನೆ ಮುಖ್ಯವಾಗಿ ಸಾರ್ವಜನಿಕ ಸಾರಿಗೆಗೆ ಬಳಸುವ ವಾಹನಗಳಿಗೆ ಅಥವಾ ವಾಣಿಜ್ಯ ಉದ್ದೇಶಗಳಿಗಾಗಿ ನೋಂದಾಯಿಸಲ್ಪಟ್ಟ ಎಲ್ಲಾ ವಿಭಾಗದ ವಾಹನಗಳಿಗೆ ಅನ್ವಯಿಸುತ್ತದೆ.

ಇ -2 ಡಬ್ಲ್ಯೂ ವಿಭಾಗಕ್ಕೆ, ಈ ಯೋಜನೆಯು ಖಾಸಗಿ ಒಡೆತನದ ನೋಂದಾಯಿತ ಇ –ದ್ವಿಚಕ್ರ ವಾಹನಕ್ಕೂ ಅನ್ವಯಿಸುತ್ತದೆ.

ವಿವಿಧ ವರ್ಗದ ಇ-ವಾಹನಗಳ  ಮಾರಾಟಪೂರ್ವದ ಕೊಳ್ಳುವಿಕೆಗೆ ಅನುಗುಣವಾಗಿ, ಯೋಜನೆಯಲ್ಲಿ ಅಂತರವಿಭಾಗ  ಮತ್ತು  ವಿಭಾಗದೊಳಗೆ ವಿನಿಮಯ ಅಥವಾ ಬದಲಾವಣೆಗಾಗಿ ಅವಕಾಶ ಕಲ್ಪಿಸಲಾಗಿದೆ.

ಸುಧಾರಿತ ಕೆಮೆಸ್ಟ್ರಿ ಬ್ಯಾಟರಿಯೊಂದಿಗೆ ಅಳವಡಿಸಲಾಗಿರುವ xಇವಿ ವಾಹನಗಳಿಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.

ಸಿ ಎಮ್ ವಿ ಆರ್ ಪ್ರಕಾರ ಮೋಟಾರು ವಾಹನ ಎಂದು ವ್ಯಾಖ್ಯಾನಿಸಲಾದ ಮತ್ತು ರಸ್ತೆ ಸಾರಿಗೆ ಪ್ರಾಧಿಕಾರದಲ್ಲಿ ನೋಂದಾಯಿಸಲು ಅರ್ಹವಾಗಿರುವ ವಾಹನಗಳಿಗೆ ಮಾತ್ರ ಯೋಜನೆಯು ಅನ್ವಯಿಸುತ್ತದೆ.

ಈ ಎರಡನೆಯ ಹಂತದಲ್ಲಿ, ಬೇಡಿಕೆಯ ಪ್ರೋತ್ಸಾಹಧನವನ್ನು ಬ್ಯಾಟರಿ ಸಾಮರ್ಥ್ಯದೊಂದಿಗೆ ಹೊಂದಿಸಲಾಗಿದೆ,  ಅಂದರೆ ರೂ. ಇ-ಬಸ್ಸುಗಳನ್ನು ಹೊರತುಪಡಿಸಿ ಎಲ್ಲಾ ಅರ್ಹ ವಾಹನಗಳಿಗೆ ರೂ10,000 / ಪ್ರತಿ ಕಿ.ವ್ಯಾ.ಹೆಚ್ (ಇದಕ್ಕಾಗಿ ಪ್ರೋತ್ಸಾಹಕಧನ ರೂ. 20,000 / ಕಿ.ವ್ಯಾ), ಅರ್ಹ ವಾಹನಗಳ ವೆಚ್ಚದ ನಿರ್ದಿಷ್ಟ ಶೇಕಡಾವಾರು ಮೊತ್ತವು ಗರಿಷ್ಠಮಿತಿಗೆ ಒಳಪಟ್ಟಿರುತ್ತದೆ [ಅಂದರೆ. ಇ-ಬಸ್ಗೆ 40% ಮತ್ತು ಅರ್ಹ ವಾಹನಗಳ ಎಲ್ಲಾ ಇತರ ವರ್ಗಗಳಿಗೆ 20%].

ಕಾರ್ಖಾನೆಯ ತಯಾರಿಕಾ ಬೆಲೆಗಳು ಗರಿಷ್ಠ ಮೌಲ್ಯಕ್ಕಿಂತ ಕಡಿಮೆ ಇರುವ ವಾಹನಗಳಿಗೆ ಮಾತ್ರ ಬೇಡಿಕೆ ಪ್ರೋತ್ಸಾಹಕವನ್ನು ವಿಸ್ತರಿಸಲಾಗುತ್ತದೆ.

ಇದಲ್ಲದೆ, ಬ್ಯಾಟರಿಗಳಲ್ಲಿನ ಮಾರುಕಟ್ಟೆ ಮತ್ತು ತಂತ್ರಜ್ಞಾನದ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು, ಯೋಜನೆಯಡಿಯಲ್ಲಿ ಕಾಲಕಾಲಕ್ಕೆ ಬೇಡಿಕೆ ಪ್ರೋತ್ಸಾಹಕಧನಗಳನ್ನು ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ.

ಇಲಾಖೆ ಹೊರಡಿಸಿದ ಹಂತ ಹಂತದ ಉತ್ಪಾದನಾ ಕಾರ್ಯಕ್ರಮದ ಪ್ರಕಾರ ಭಾರತದಲ್ಲಿ ತಯಾರಾದ ವಾಹನಗಳಿಗೆ ಮಾತ್ರ ಪ್ರೋತ್ಸಾಹ ಧನ ಅನ್ವಯವಾಗುತ್ತದೆ.  ಚತುಷ್ಚಕ್ರ ಮತ್ತು ಬಸ್ಸುಗಳ ಸಂದರ್ಭದಲ್ಲಿ 40% ಸ್ಥಳೀಕರಣ ಮಟ್ಟವನ್ನು ಸಾಧಿಸಿದ ಓಇಎಮ್ (ಮೂಲ ಉಪಕರಣ ತಯಾರಕರು) ಗಳು ಮತ್ತು ದ್ವಿಚಕ್ರ ಮತ್ತು ತ್ರಿಚಕ್ರದ ಸಂದರ್ಭದಲ್ಲಿ 50% ಸ್ಥಳೀಕರಣವನ್ನು ಸಾಧಿಸಿದವರು ಮಾತ್ರ ಪ್ರೋತ್ಸಾಹಧನ ಪಡೆಯಲು ಅರ್ಹರಾಗಿರುತ್ತಾರೆ.

 

ಫೇಮ್ ಇಂಡಿಯಾ ಯೋಜನೆ ಹಂತ II ರ ಅಡಿಯಲ್ಲಿನ  ಸಾಧನೆಗಳು:

ಫೇಮ್ ಯೋಜನೆಯ ಹಂತ II ರ ಅಡಿಯಲ್ಲಿ ಬೇಡಿಕೆಯ ಪ್ರೋತ್ಸಾಹದ ಲಾಭ ಪಡೆಯಲು, ಒಇಎಂಗಳು ಮತ್ತು ವಾಹನ ಮಾದರಿಗಳು: ಇಲ್ಲಿಯವರೆಗೆ, 13 ಒಇಎಂಗಳು ತಮ್ಮ 39 ಇವಿ ಮಾದರಿಗಳನ್ನು ನೋಂದಾಯಿಸಿದ್ದಾರೆ [ದ್ವಿಚಕ್ರ = 14; ತ್ರಿಚಕ್ರ = 11 & ಚತುಷ್ಚಕ್ರ = 14]   ಇಲ್ಲಿಯವರೆಗೆ ಸುಮಾರು 5500 ಇವಿಗಳನ್ನು ಎಲೆಕ್ಟ್ರಿಕ್ ವಾಹನದ ಅರ್ಹ ಬಳಕೆದಾರರಿಗೆ ಮಾರಾಟ ಮಾಡಲಾಗಿದೆ.

ವಿದ್ಯುತ್ ಬಸ್ಸುಗಳ ಅನುಮತಿ: ಸಾರ್ವಜನಿಕ ಸಾರಿಗೆಯಲ್ಲಿ ವಿದ್ಯುತ್ ವಾಹನಗಳ ಸಂಚಾರವನ್ನು ಉತ್ತೇಜಿಸುವ ಸಲುವಾಗಿ, ಕಾರ್ಯಾಚರಣೆ ವೆಚ್ಚದ ಮಾದರಿ ಆಧಾರದ ಮೇಲೆ ಎಲೆಕ್ಟ್ರಿಕ್ ಬಸ್ಸುಗಳನ್ನು ನಿಯೋಜಿಸಲು ‘ಆಸಕ್ತಿಯ ಅಭಿವ್ಯಕ್ತಿ’ (ಎಕ್ಸಪ್ರೆಷನ್ ಆಫ್ ಇಂಟರೆಸ್ಟ್) ಮೂಲಕ ನಗರಗಳು ಮತ್ತು ರಾಜ್ಯ ಸಾರಿಗೆ ಸಂಸ್ಥೆಗಳಿಂದ ಪ್ರಸ್ತಾವನೆಯನ್ನು ಇಲಾಖೆ ಆಹ್ವಾನಿಸಿದೆ.  ಪ್ರಸ್ತಾವನೆಯನ್ನು ಪರಿಶೀಲಿಸಿದ ನಂತರ ಯೋಜನೆಯಡಿ 26 ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳಲ್ಲಿ 64 ನಗರಗಳಿಗೆ 5595 ಇ-ಬಸ್ಸುಗಳನ್ನು ಮಂಜೂರು ಮಾಡಲಾಗಿದೆ. ಈ ಬಸ್ಸುಗಳು ತಮ್ಮ ಒಪ್ಪಂದದ ಅವಧಿಯಲ್ಲಿ 4 ಬಿಲಿಯನ್ ಕಿಲೋಮೀಟರ್ ದೂರವನ್ನು ಓಡಲಿವೆ ಮತ್ತು ಒಪ್ಪಂದದ ಅವಧಿಯಲ್ಲಿ ಸುಮಾರು 1.2 ಬಿಲಿಯನ್ ಲೀಟರ್ ಇಂಧನವನ್ನು ಉಳತಾಯ ಮಾಡುತ್ತವೆ ಎಂದು ನಿರೀಕ್ಷಿಸಲಾಗಿದೆ,  ಇದು 2.6 ಮಿಲಿಯನ್ ಟನ್ ಇಂಗಾಲದ ಡೈಆಕ್ಷೈಡ್ ನ  ಹೊರಸೂಸುವಿಕೆಯನ್ನು ತಪ್ಪಿಸುತ್ತದೆ.

 

ಚಾರ್ಜಿಂಗ್ ಸೌಕರ್ಯಗಳ ಅನುಮತಿ: ವ್ಯಾಪ್ತಿಯ ಆತಂಕದ ಸಮಸ್ಯೆಯನ್ನು ಪರಿಹರಿಸಲು, ಫೇಮ್ ಇಂಡಿಯಾ ಸ್ಕೀಮ್ ಹಂತ II ರ ಅಡಿಯಲ್ಲಿ ಪ್ರೋತ್ಸಾಹ ಧನ ಪಡೆಯಲು ವಿವಿಧ ರಾಜ್ಯಗಳಲ್ಲಿ / ನಗರಗಳಲ್ಲಿ ಇವಿ ಚಾರ್ಜಿಂಗ್ ಮೂಲಸೌಕರ್ಯ ದೊರಕಿಸಲು .ಇಲಾಖೆಯು ನಗರದ ಸ್ಥಳೀಯ ಸಂಸ್ಥೆಗಳು (ಯುಎಲ್ಬಿಗಳು) / ಪುರಸಭೆ ನಿಗಮಗಳು, ಸಾರ್ವಜನಿಕ ಉದ್ದಿಮೆಗಳು (ರಾಜ್ಯ / ಕೇಂದ್ರ) ಮತ್ತು ನಿಯೋಜನೆಗಾಗಿ ಬಯಸುವ ಸಾರ್ವಜನಿಕ / ಖಾಸಗಿ ಸಂಸ್ಥೆಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸುವ ‘ಆಸಕ್ತಿಯ ಅಭಿವ್ಯಕ್ತಿ’ (ಇಒಐ) ಬಿಡುಗಡೆ ಮಾಡಿದೆ.  ಮೇಲಿನ ನಗರಗಳಲ್ಲಿ ಸುಮಾರು 7000 ಚಾರ್ಜಿಂಗ್ ಕೇಂದ್ರಗಳನ್ನು ನಿಯೋಜಿಸಲು ಇಒಐಗೆ ಪ್ರತಿಕ್ರಿಯೆಯಾಗಿ ಸುಮಾರು 100 ಪ್ರಸ್ತಾಪಗಳನ್ನು ಸ್ವೀಕರಿಸಲಾಗಿದೆ. ಎಲ್ಲಾ ಪ್ರಸ್ತಾಪಗಳು ಪರಿಶೀಲನೆಯಲ್ಲಿವೆ ಮತ್ತು ನಗರಗಳಾದ್ಯಂತ ಚಾರ್ಜಿಂಗ್ ಕೇಂದ್ರದ ಅನುಮತಿಯನ್ನು ಶೀಘ್ರದಲ್ಲೇ ನೀಡಲಾಗುವುದು.

 

ಎಲೆಕ್ಟ್ರಿಕ್ ಮೊಬಿಲಿಟಿ (ವಿದ್ಯುತ್ ವಾಹನ ಸಂಚಾರ) ಉತ್ತೇಜಿಸಲು ಇತರ ಉಪಕ್ರಮಗಳು:

ಫೇಮ್ ಇಂಡಿಯಾ ಯೋಜನೆ ಎರಡನೇ ಹಂತದ ಜೊತೆಗೆ, ದೇಶದಲ್ಲಿ ವಿದ್ಯುತ್ ವಾಹನ ಚಲನೆಯನ್ನು ಉತ್ತೇಜಿಸಲು ಸರ್ಕಾರದ ವಿವಿಧ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಈ ನಿಟ್ಟಿನಲ್ಲಿ ಕೆಲವು ಪ್ರಮುಖ ಕ್ರಮಗಳನ್ನು ಕೆಳಗೆ ನೀಡಲಾಗಿದೆ.

ಇವಿಗಳ ಮೇಲಿನ ಜಿಎಸ್ಟಿಯನ್ನು ಪ್ರಸ್ತುತ ದರ 12% ರಿಂದ 5% ಕ್ಕೆ ಇಳಿಸಲಾಗಿದೆ.

ಇವಿಗಳನ್ನು ಖರೀದಿಸಲು ಎಲೆಕ್ಟ್ರಿಕ್ ವಾಹನ ಖರೀದಿದಾರರಿಗೆ ಸಾಲದ ಮೇಲೆ ಪಾವತಿಸುವ ಬಡ್ಡಿಗೆ ಸರ್ಕಾರವು 1.5 ಲಕ್ಷ ರೂ.ಗಳ ಹೆಚ್ಚುವರಿ ಆದಾಯ ತೆರಿಗೆ ವಿನಾಯಿತಿಯನ್ನು ವಿಸ್ತರಿಸಿದೆ.

ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಮಾರುವ ವಿದ್ಯುತ್ ಸೇವೆಯನ್ನು ‘ಸೇವೆ’ ಎಂದು ವಿದ್ಯುತ್ ಸಚಿವಾಲಯ ಅನುಮತಿಸಿದೆ. ಮೂಲಸೌಕರ್ಯಗಳನ್ನು ಚಾರ್ಜ್ ಮಾಡಲು ಹೂಡಿಕೆಗಳನ್ನು ಆಕರ್ಷಿಸಲು ಇದು ಪ್ರೋತ್ಸಾಹಕವಾಗಿ ಕಾರ್ಯನಿರ್ವಹಿಸುತ್ತದೆ.

ಬ್ಯಾಟರಿ ಚಾಲಿತ ವಾಣಿಜ್ಯ ವಾಹನಗಳ ಸಂದರ್ಭದಲ್ಲಿ ಪರವಾನಗಿ ವಿನಾಯಿತಿ ನೀಡುವ ಬಗ್ಗೆ  ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು (ಎಂಆರ್ಟಿಎಚ್) ಅಧಿಸೂಚನೆ ಹೊರಡಿಸಿದೆ.

ಎಲೆಕ್ಟ್ರಿಕ್ ವಾಹನಗಳ ಬಳಕೆಗಾಗಿ ಗ್ರೀನ್ ನಂಬರ್ ಪ್ಲೇಟ್ಗಾಗಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಅಧಿಸೂಚನೆ ಹೊರಡಿಸಿದೆ.

ಈ ಘಟಕಗಳ ಸ್ಥಳೀಯ ಉತ್ಪಾದನೆಯನ್ನು ಉತ್ತೇಜಿಸಲು ಇವಿ ಘಟಕಗಳ ಮೇಲಿನ ಕಸ್ಟಮ್ ಸುಂಕವನ್ನು ಹಣಕಾಸು ಸಚಿವಾಲಯ ಪರಿಷ್ಕರಿಸಿದೆ.

 

ಇವಿಗಳನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳುವಲ್ಲಿ ಎದುರಾದ ಸವಾಲುಗಳು

(i) ಜನರಲ್ಲಿ ಅರಿವಿನ ಕೊರತೆ

(ii) ವ್ಯಾಪ್ತಿಯ ಆತಂಕ

(iii) ಐಸಿಇ ವಾಹನಕ್ಕೆ ಹೋಲಿಸಿದರೆ ಇವಿಗಳ ಹೆಚ್ಚಿನ ಬಂಡವಾಳ

(iv) ಐಸಿಇ ವಾಹನಕ್ಕೆ ಹೋಲಿಸಿದರೆ ಇವಿಗಳ ಕಡಿಮೆ ಕಾರ್ಯಕ್ಷಮತೆ

(v) ಬ್ಯಾಟರಿಯ ಮರುಬಳಕೆ

 

ಮುಂದಿನ  ಹೆಜ್ಜೆ :

ವಿದ್ಯುತ್ ವಾಹನಚಲನಶೀಲತೆಯನ್ನು ಉತ್ತೇಜಿಸಲು ಸರ್ಕಾರ ಈ ಕೆಳಗಿನ ಉಪಕ್ರಮಗಳಲ್ಲಿ ಕೆಲಸ ಮಾಡುತ್ತಿದೆ.

ಭಾರಿ ಕೈಗಾರಿಕಾ ಇಲಾಖೆ ಹೊರಡಿಸಿದ ಆಸಕ್ತಿಯ ಅಭಿವ್ಯಕ್ತಿಗೆ (ಇಒಐ) ಪ್ರತಿಕ್ರಿಯೆಯಾಗಿ ವಿವಿಧ ನಗರಗಳಲ್ಲಿ ಸುಮಾರು 1000 ಚಾರ್ಜಿಂಗ್ ಕೇಂದ್ರಗಳಿಗೆ ಅನುಮತಿ

ಪ್ರಮುಖ ಗುರುತಿಸಲ್ಪಟ್ಟ ಹೆದ್ದಾರಿಗಳಲ್ಲಿ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಲು ಅರ್ಹ ಸಾರ್ವಜನಿಕ ಸಂಸ್ಥೆಗಳಿಂದ ಪ್ರಸ್ತಾಪಗಳನ್ನು ಆಹ್ವಾನಿಸಲು ನೂತನ ಆಸಕ್ತಿಯ ಅಭಿವ್ಯಕ್ತಿ (ಇಒಐ).

ಯೋಜನೆಗಳ ಅಡಿಯಲ್ಲಿ ಮಂಜೂರಾದ 5595 ಎಲೆಕ್ಟ್ರಿಕ್ ಬಸ್ಸುಗಳನ್ನು 64 ನಗರಗಳು ಮತ್ತು ಎಂಟು ರಾಜ್ಯ ಸಾರಿಗೆ ಸಂಸ್ಥೆಗಳಿಗೆ ಸಕಾಲದಲ್ಲಿ ನಿಯೋಜಿಸುವ ಮೇಲ್ವಿಚಾರಣೆ.

ವಿದ್ಯುತ್ ವಾಹನ ಚಲನಶೀಲತೆಯನ್ನು ಅಳವಡಿಸಿಕೊಳ್ಳಲು ಸಾರ್ವಜನಿಕರನ್ನು ಉತ್ತೇಜಿಸಲು ಪ್ರಚಾರ ಚಟುವಟಿಕೆಗಳು.

ನಗರಗಳ ನಡುವೆ  ಮತ್ತು ನಗರಗಳ ಒಳಗಿನ ಕಾರ್ಯಾಚರಣೆಗಾಗಿ ರಾಜ್ಯಗಳು / ನಗರಗಳಿಗೆ ಹೆಚ್ಚುವರಿ ಬಸ್ಸುಗಳ ಅನುಮತಿಗಾಗಿ ಹೊಸ  ಇಒಐ ಪ್ರಕಟಣೆ.

 

ಸಾರ್ವಜನಿಕ ಉದ್ಯಮಗಳ ಇಲಾಖೆ (ಡಿ ಪಿ ಇ)

ಭಾರತ ಸರ್ಕಾರವು ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿಮಿಟೆಡ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಸಂಸ್ಥೆಗಳಿಗೆ ಮಹಾರತ್ನ ಸ್ಥಾನಮಾನವನ್ನು ನೀಡಲಾಗಿದೆ, ಇದು ಈ ಸಿಪಿಎಸ್ಇಗಳ ಮಂಡಳಿಗಳಿಗೆ ಹೆಚ್ಚಿನ ಹಣಕಾಸು ಮತ್ತು ಕಾರ್ಯಾಚರಣೆಯ ಅಧಿಕಾರವನ್ನು ಚಲಾಯಿಸಲು ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಕಾರ್ಯಾಚರಣೆಯ ವಿಸ್ತರಣೆಗೆ ಅನುಕೂಲವಾಗಲಿದೆ.

 

ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್, ಒಂದು ಮಹಾರತ್ನ ಕಂಪನಿ

ಇಸ್ರೋ ಅಭಿವೃದ್ಧಿಪಡಿಸಿದ ತಂತ್ರಜ್ಞಾನವನ್ನು ಬಳಸಿಕೊಂಡು ಬಿಹೆಚ್ ಇ ಎಲ್  ಬೆಂಗಳೂರಿನಲ್ಲಿ ಭಾರತದ ಮೊದಲ ಲಿಥಿಯಂ-ಅಯಾನ್ ಆಧಾರಿತ ಬಾಹ್ಯಾಕಾಶ ದರ್ಜೆಯ ಕೋಶ ಉತ್ಪಾದನಾ ಸೌಲಭ್ಯದ ಕಾರ್ಯವನ್ನು ಕೈಗೊಂಡಿದೆ. ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳಿಗೆ ತ್ಯಾಜ್ಯ ಹೊರಸೂಸುವಿಕೆಯ ಮಾನದಂಡಗಳನ್ನು ಪೂರೈಸಲು ಗೇಟ್ಗಳು ಮತ್ತು ಡ್ಯಾಂಪರ್ಗಳಿಗೆ ಉತ್ಪಾದನಾ ಸೌಲಭ್ಯಗಳನ್ನು ಒದಗಿಸಿತು.

 

ದೇಶದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಕಂಪನಿಯು ನೀಡಿದ ಮಹತ್ವದ ಕೊಡುಗೆಯನ್ನು ಇಸ್ರೋನ ಚಂದ್ರಯಾನ್  ಮಾಡ್ಯೂಲ್ಗಳಿಗಾಗಿ ಬಿಹಚ್ ಇ ಎಲ್ ವಿಶೇಷ ಟ್ಯಾಂಕ್ಗಳು, ರಿಗ್ಸ್, ಬ್ಯಾಟರಿಗಳು ಮತ್ತು ಸೌರ ಫಲಕಗಳನ್ನು ಪೂರೈಸಿದೆ.

 

ಬಿಹಚ್ ಇ ಎಲ್ ಮೊದಲ ಬಾರಿಗೆ ಭಾರತೀಯ ರೈಲ್ವೆಯಿಂದ 25 ಪುನರುತ್ಪಾದಕ ಬ್ರೇಕಿಂಗ್ ವ್ಯವಸ್ಥೆ ಹೊಂದಿರುವ 5000 ಎಚ್ಪಿ ಎಲೆಕ್ಟ್ರಿಕ್ ಲೊಕೊಗಳ (ಡಬ್ಲ್ಯುಎಜಿ -7 ಪ್ರಕಾರ) ಆದೇಶವನ್ನು ಪಡೆಯಿತು.

ಸಿಪಿಎಸ್ಇಗಳು (ಕೇಂದ್ರ ಸಾರ್ವಜನಿಕ ವಲಯದ ಉದ್ಯಮಗಳು) ಮತ್ತು ಇತರ ಸರ್ಕಾರಿ ಸಂಸ್ಥೆಗಳ  ರೂ. 500 ಕೋಟಿ ರೂಪಾಯಿಗೂ ಹೆಚ್ಚಿನ. ಬಂಡವಾಳ ವೆಚ್ಚವನ್ನು (ಕ್ಯಾಪೆಕ್ಸ್) ಸಾರ್ವಜನಿಕ ಉದ್ಯಮಗಳ ಇಲಾಖೆಯು ಮೇಲ್ವಿಚಾರಣೆ ಮಾಡುತ್ತಿದೆ,  ಇದು ಸಿಪಿಎಸ್ಇಗಳು ಮತ್ತು ಇತರ ಸರ್ಕಾರಿ ಸಂಸ್ಥೆಗಳಿಂದ ಮೂಲಸೌಕರ್ಯ ಯೋಜನೆಗಳಿಗೆ ಫರಪ್ರದವಾಗಿ ಖರ್ಚು ಮಾಡಲು ಕಾರಣವಾಗಿದೆ.  ಈ ಸಂಸ್ಥೆಗಳ ಕ್ಯಾಪೆಕ್ಸ್ ಸಾಧನೆಯು. 2019-20ರ ಮೊದಲ ಆರು ತಿಂಗಳಲ್ಲಿ 2,05,368 ಕೋಟಿ ರೂ. ಹಿಂದಿನ ವರ್ಷದ ಮೊದಲಾರ್ಧದಲ್ಲಿ 1,94,331 ಕೋಟಿ ರೂ. (5.69% ಹೆಚ್ಚಳ). ಆಗಿತ್ತು.  16 ಸಿಪಿಎಸ್ಇಗಳಿಗೆ ಸಂಬಂಧಿಸಿದಂತೆ ಕ್ಯಾಪೆಕ್ಸ್ ಪರಿಶೀಲನಾ ಸಭೆಗಳನ್ನು 03.09.2019 ಮತ್ತು 05.09.2019 ರಂದು ನಡೆಸಲಾಗಿದೆ.(Release ID: 1597332) Visitor Counter : 373


Read this release in: English , Hindi , Bengali , Tamil