ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯ

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವರ್ಷಾಂತ್ಯದ ಪರಾಮರ್ಶೆ -2019

Posted On: 20 DEC 2019 5:30PM by PIB Bengaluru

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ವರ್ಷಾಂತ್ಯದ ಪರಾಮರ್ಶೆ -2019

2019ರ ಸಾಲಿನಲ್ಲಿ ಅಲ್ಪಸಂಖ್ಯಾತ ಸಮುದಾಯದ 80 ಲಕ್ಷ ವಿದ್ಯಾರ್ಥಿಗಳಿಗೆ ಹಲವು ಕಲ್ಯಾಣ ಕಾರ್ಯಕ್ರಮಗಳಡಿ ಮ್ಯಾಟ್ರಿಕ್‌ ಪೂರ್ವ ವಿದ್ಯಾರ್ಥಿ ವೇತನ ಮಂಜೂರು ಹಾಗು ಸುಮಾರು 1.25 ಲಕ್ಷ ಯುವಕರಿಗೆ ಕೌಶಲ ತರಬೇತಿ ನೀಡಲಾಯಿತು


ಕ್ರಿಯಾಶೀಲ ನಾಯಕತ್ವ ಹೊಂದಿರುವ ಕೇಂದ್ರ ಅಲ್ಪಸಂಖ್ಯಾತ ಸಚಿವರಾದ ಶ್ರೀ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರ ನೇತೃತ್ವದಲ್ಲಿ ಅಲ್ಪಸಂಖ್ಯಾತ ಸಚಿವಾಲಯವು 2019ರಲ್ಲಿ ಅಲ್ಪಸಂಖ್ಯಾತರ ಶಿಕ್ಷಣ ಸಬಲೀಕರಣಕ್ಕೆ ಪ್ರಾಮುಖ್ಯತೆ ನೀಡಿತು. ವಿಶೇಷವಾಗಿ ಮುಸ್ಲಿಂ ಹೆಣ್ಣು ಮಕ್ಕಳು ಮತ್ತು ಅಲ್ಪಸಂಖ್ಯಾತ ಸಮುದಾಯದ ಯುವಕರಿಗೆ ಉದ್ಯೋಗಾಧಾರಿತ ಕೌಶಲ ಅಭಿವೃದ್ಧಿಗೆ ಆದ್ಯತೆ ನೀಡಲಾಯಿತು. ‘ಘನತೆಯಿಂದ ಅಭಿವೃದ್ಧಿ’ ಎನ್ನುವುದು ಅಲ್ಪಸಂಖ್ಯಾತ ಸಚಿವಾಲಯದ ಧ್ಯೇಯವಾಗಿದೆ.

ಶಿಕ್ಷಣದ ಸಬಲೀಕರಣ

ಆರು ಅಧಿಸೂಚಿತ ಅಲ್ಪಸಂಖ್ಯಾತರಾದ  ಜೈನ್‌, ಪಾರ್ಸಿ, ಬೌದ್ಧ, ಕ್ರೈಸ್ತ, ಸಿಖ್‌ ಮತ್ತು ಮುಸ್ಲಿಂ ಸಮುದಾಯಗಳಾದ ಸುಮಾರು 80 ಲಕ್ಷ ವಿದ್ಯಾರ್ಥಿಗಳಿಗೆ ಪ್ರಿ ಮ್ಯಾಟ್ರಿಕ್‌,  ಪೋಸ್ಟ್ ಮ್ಯಾಟ್ರಿಕ್‌, ಮೆಟ್ರಿಕ್‌–ಕಮ್‌  ಹಾಗೂ ಇತರ ವಿದ್ಯಾರ್ಥಿ ವೇತನವನ್ನು ಮೋದಿ ಸರ್ಕಾರ 2ರ ಮೊದಲ 6 ತಿಂಗಳಲ್ಲಿ ಮಂಜೂರು ಮಾಡಲಾಗಿದೆ. ಇವರಲ್ಲಿ ಶೇಕಡ 60ರಷ್ಟು ಹೆಣ್ಣು ಮಕ್ಕಳಿದ್ದಾರೆ.
2019ರಲ್ಲಿ ಮಹತ್ವಗಾಂಧಿ ಅವರ 150ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ‘ಬೇಗಂ ಹಜ್ರತ್‌ ಮಹಲ್‌ ಬಾಲಕಿಯರ ವಿದ್ಯಾರ್ಥಿವೇತನ’ವನ್ನು ಆರು ಅಧಿಸೂಚಿತ ಅಲ್ಪಸಂಖ್ಯಾತ ವರ್ಗದ 3 ಲಕ್ಷ ಆರ್ಥಿಕವಾಗಿ ಹಿಂದುಳಿದ ಬಾಲಕಿಯರಿಗೆ ನೀಡಲಾಗಿದೆ.
ಮದ್ರಸಾಗಳನ್ನು ಇತರ ಸಾಮಾನ್ಯ ಶಿಕ್ಷಣ ವ್ಯವಸ್ಥೆ ಜತೆ ಸಂಪರ್ಕ ಮಾಡುವ ನಿಟ್ಟಿನಲ್ಲಿ ವಿವಿಧ ರಾಜ್ಯಗಳಲ್ಲಿನ ಮದ್ರಸಾಗಳಲ್ಲಿನ ಮಹಿಳಾ ಶಿಕ್ಷಕರು ಸೇರಿದಂತೆ 750ಕ್ಕೂ ಹೆಚ್ಚು ಶಿಕ್ಷಕರಿಗೆ ಈ ವರ್ಷ ತರಬೇತಿ ನೀಡಲಾಗಿದೆ. ಇದರಿಂದ,  ದೇಶಾದ್ಯಂತ ಇರುವ ಮದ್ರಸಾ ವಿದ್ಯಾರ್ಥಿಗಳಿಗೆ ಮುಖ್ಯ ಶಿಕ್ಷಣವನ್ನು ಇವರು ಬೋಧಿಸಲು ಅನುಕೂಲವಾಗುತ್ತದೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ, ಮುಖ್ತಾರ್‌ ಅಬ್ಬಾಸ್‌ ನಖ್ವಿ, ‘ಮದ್ರಸಾದಲ್ಲಿ ಸಾಂಪ್ರದಾಯಿಕವಾಗಿ ಬೋಧಿಸಲಾಗುವ ಉರ್ದು, ಅರೇಬಿಕ್‌ ಮತ್ತು ಇತರ ಭಾಷೆಗಳ ಜತೆ ಮದ್ರಸಾದಲ್ಲಿನ ಶಿಕ್ಷಕರು ಮುಖ್ಯವಾಹಿನಿಯ ಶಿಕ್ಷಣದ ವಿಷಯಗಳಾದ ಹಿಂದಿ, ಗಣಿತ, ಇಂಗ್ಲಿಷ್‌, ವಿಜ್ಞಾನ ಕಂಪ್ಯೂಟರ್‌, ಪ್ರಾದೇಶಿಕ ಭಾಷೆಗಳನ್ನು ಇತ್ಯಾದಿಗಳನ್ನು ಸಹ ಕಲಿಸಬೇಕು. ಇಲ್ಲಿನ ಶಿಕ್ಷಕರಿಗೆ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಐಐಟಿ, ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ, ಜಮಿಯಾ ಮಿಲಿಯಾ, ಜಮಿಯಾ ಹಮದರ್ದ್‌, ಅಂಜುಮನ್‌––ಇ–ಇಸ್ಲಾಂ,  ಅಮಿಟಿ ವಿಶ್ವವಿದ್ಯಾಲಯ ಮತ್ತು ಇತರ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಂದ ತರಬೇತಿ ನೀಡಲಾಗುತ್ತಿದೆ’ ಎಂದು ವಿವರಿಸಿದರು.
ಶಾಲೆಯಿಂದ ಹೊರಗುಳಿದ 650ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಚಿವಾಲಯದ ವತಿಯಿಂದ 2019ರಲ್ಲಿ ಬ್ರಿಡ್ಜ್‌ ಕೋರ್ಸ್‌ ತರಬೇತಿ ನೀಡಲಾಗಿದೆ. ಇದರಿಂದ, ಈ ವಿದ್ಯಾರ್ಥಿಗಳು ಮತ್ತೆ ತಮ್ಮ ಶಿಕ್ಷಣವನ್ನು ಮುಂದುವರಿಸಿ ಉದ್ಯೋಗ ಪಡೆಯಲು ಅನುಕೂಲವಾಗುತ್ತದೆ.

ಕೌಶಲ ಅಭಿವೃದ್ಧಿ/ ಉದ್ಯೋಗಾವಕಾಶಗಳು

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಸುಮಾರು 1 ಲಕ್ಷ 25 ಸಾವಿರ ಯುವಕರಿಗೆ ಉದ್ಯೋಗ, ಕೌಶಲ ಅಭಿವೃದ್ಧಿ ತರಬೇತಿಯನ್ನು ವಿವಿಧ ಯೋಜನೆಗಳಾದ ‘ಗರೀಬ್‌ ನವಾಜ್‌ ಉದ್ಯೋಗ ಯೋಜನೆ’, ‘ಸೀಖೋ ಔರ್‌ ಕಮಾವೋ’,  ‘ನಯಿ ರೋಷನಿ’ ಅಡಿಯಲ್ಲಿ 2019ರಲ್ಲಿ ನೀಡಲಾಯಿತು.
ಅಲ್ಪಸಂಖ್ಯಾತ ಸಚಿವಾಲಯವು ಮುಂದಿನ ಐದು ವರ್ಷಗಳಲ್ಲಿ ದೇಶಾದ್ಯಂತ 100 ’ಹೂನಾರ್‌ ಹಾಥ್‌’ಗಳನ್ನು ಸಂಘಟಿಸಲು ನಿರ್ಧರಿಸಿದೆ.  ಈ ಮೂಲಕ ಕುಶಲಕರ್ಮಿಗಳಿಗೆ, ಕಲಾವಿದರಿಗೆ ಮಾರುಕಟ್ಟೆ ಒದಗಿಸಲಾಗುವುದು.
2019ರಲ್ಲಿ ಆಗಸ್ಟ್‌ 24ರಿಂದ ಸೆಪ್ಟೆಂಬರ್‌ 1ರವರೆಗೆ ಜೈಪುರನಲ್ಲಿ ಮೊದಲ ‘ಹೂನಾರ್‌ ಹಾಥ್‌’ ಅನ್ನು ಮೋದಿ ಸರ್ಕಾರ ಆಯೋಜಿಸಿತ್ತು. 200ಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು ಕಲಾವಿದರು, ತಜ್ಞರು ಭಾಗವಹಿಸಿದ್ದರು. ದೇಶದ ಮೂಲೆ, ಮೂಲೆಗಳಿಂದಲೂ  ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
‘ಹೂನಾರ್‌ ಹಾಥ್‌’ ಅನ್ನು  ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಉತ್ತರ ಮಧ್ಯ ವಲಯದ ಸಾಂಸ್ಕೃತಿಕ ಕೇಂದ್ರದಲ್ಲಿ 2019ರ ನವೆಂಬರ್‌ 1ರಿಂದ 10ರವರೆಗೆ ಆಯೋಜಿಸಲಾಗಿತ್ತು. 300ಕ್ಕೂ ಹೆಚ್ಚು ಕುಶಲಕರ್ಮಿಗಳು ಮತ್ತು ತಜ್ಞರು ಹಾಗೂ ದೇಶದ ವಿವಿಧ ಮೂಲೆ, ಮೂಲೆಗಳಿಂದ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಅಲ್ಪಸಂಖ್ಯಾತ ಸಚಿವಾಲಯವು  2019ರ ನವೆಂಬರ್‌ 14ರಿಂದ 27ರವರೆಗೆ ‘ಹುನಾರ್‌ ಹಾಥ್‌’ ಅನ್ನು ಪ್ರಗತಿ ಮೈದಾನದ ಇಂಡಿಯಾ ಇಂಟರ್‌ನ್ಯಾಷನಲ್‌ ಫೇರ್‌ನಲ್ಲಿ ಆಯೋಜಿಸಲಾಗಿತ್ತು. ಇದನ್ನು 2019ರ ನವೆಂಬರ್‌ 15ರಂದು ಉದ್ಘಾಟಿಸಲಾಯಿತು.  ಎಲ್ಲ ‘ಹೂನರ್‌ ಹಾಥ್‌’ಗಳನ್ನು ‘ಏಕ್‌ ಭಾರತ್‌, ಶ್ರೇಷ್ಠ ಭಾರತ್’ ಆಶಯದೊಂದಿಗೆ ಆಯೋಜಿಸಲಾಗುತ್ತಿದೆ. ‘ಹೂನಾರ್‌ ಹಾಥ್‌’ ಅನ್ನು ಗುಜರಾತ್‌ನ ಅಹದಾಬಾದ್‌ನ ಸಾಬರಮತಿ ನದಿ ದಂಡೆಯಲ್ಲೂ 2019ರ ಡಿಸೆಂಬರ್‌ 7ರಿಂದ 15ರವರೆಗೆ ಆಯೋಜಿಸಲಾಗಿತ್ತು. ಮುಂದಿನ ‘ಹುನಾರ್‌  ಹಾಥ್‌’ ಅನ್ನು ಮುಂಬೈನಲ್ಲಿ 2019ರ ಡಿಸೆಂಬರ್‌ 20ರಿಂದ 31ರವರೆಗೆ ಆಯೋಜಿಸಲಾಗುವುದು. ಬಳಿಕ, ಲಖನೌದಲ್ಲಿ 2020ರ ಜನವರಿ 10ರಿಂದ 20ರವರೆಗೆ, ನಂತರ ಹೈದರಾಬಾದ್‌ (2020ರ 11ರಿಂದ 19), ಚಂಡೀಗಡ (2020ರ ಜನವರಿ 1ರಿಂದ ಫೆಬ್ರುವರಿ1ರವರೆಗೆ)  ಮತ್ತ ಇಂದೋರ್‌ನಲ್ಲಿ (2020ರ ಫೆಬ್ರುವರಿ 8ರಿಂದ 16ರವರೆಗೆ)ಆಯೋಜಿಸಲು ಉದ್ದೇಶಿಸಲಾಗಿದೆ.
ಮುಂಬರುವ ದಿನಗಳಲ್ಲಿ ‘ಹೂನಾರ್‌ ಹಾಥ್‌’ಗಳನ್ನು ನವದೆಹಲಿ, ಗುರುಗ್ರಾಮ, ಬೆಂಗಳೂರು, ಚೆನ್ನೈ, ಕೋಲ್ಕತ್ತ, ಲಖನೌ,  ಡೆಹರಾಡೂನ್‌, ಪಟ್ನಾ, ಇಂದೋರ್‌, ಭೋಪಾಲ್‌, ನಾಗಪುರ, ರಾಯಪುರ, ಹೈದರಾಬಾದ್‌, ಪುದುಚೇರಿ, ಚಂಡೀಗಡ, ಅಮೃತಸರ, ಜಮ್ಮು, ಶಿಮ್ಲಾ, ಗೋವಾ, ಕೊಚ್ಚಿ, ಗುವಾಹಟಿ, ರಾಂಚಿ, ಭುವನೇಶ್ವರ, ಅಜ್ಮೇರ್‌ ಮತ್ತು ಇತರ ಸ್ಥಳಗಳಲ್ಲಿಯೂ ಆಯೋಜಿಸಲು ಉದ್ದೇಶಿಸಲಾಗಿದೆ.
ಮಹಿಳಾ ಕುಶಲಕರ್ಮಿಗಳು ಸೇರಿದಂತೆ ಸಾವಿರಾರು ಕುಶಲಕರ್ಮಿಕರ್ಮಿಗಳಿಗೆ, ಶಿಲ್ಪಿಗಳಿಗೆ, ಕಲಾವಿದರಿಗೆ ‘ಹೂನಾರ್‌ ಹಾಥ್‌’ ಮೂಲಕ 2019ರಲ್ಲಿ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ.
ಶ್ರೀ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಎರಡನೇ ಅವಧಿಯಲ್ಲಿನ ಮೊದಲ ಆರು ತಿಂಗಳಲ್ಲಿ ಅಲ್ಪಸಂಖ್ಯಾತ ಸಚಿವಾಲಯವು ದೇಶದ ವಿವಿಧ ಭಾಗಗಳಲ್ಲಿ 100 ‘ಹೂನಾರ್‌ ಹಬ್’ಗಳಿಗೂ ಮಂಜೂರಾತಿ ನೀಡಿದೆ. ಈ ಹುನಾರ್‌ ಹಬ್‌ಗಳಲ್ಲಿ ಆಧುನಿಕತೆಯ ಅಗತ್ಯಕ್ಕೆ ತಕ್ಕಂತೆ ಕುಶಲಕರ್ಮಿಗಳಿಗೆ, ಕಲಾವಿದರಿಗೆ, ಶಿಲ್ಪಿಗಳಿಗೆ ಅಗತ್ಯ ತರಬೇತಿ ನೀಡಲಾಗುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ‘ಹೂನಾರ್‌ ಹಾಥ್‌’ ಮೂಲಕ 2ಲಕ್ಷ 65ಸಾವಿರಕ್ಕೂ ಹೆಚ್ಚು ಕುಶಲಕರ್ಮಿಗಳು, ಕಲಾವಿದರು, ಶಿಲ್ಪಿಗಳು ಮತ್ತು ಈ ಕ್ಷೇತ್ರಕ್ಕೆ ಸಂಬಂಧಪಟ್ಟವರು ಉದ್ಯೋಗ ಒದಗಿಸಲಾಗಿದೆ.

 

ಪ್ರಧಾನ ಮಂತ್ರಿ ಜನ ವಿಕಾಸ ಕಾರ್ಯಕ್ರಮ (ಪಿಎಂಜೆವಿಕೆ) 

ಮೋದಿ ಸರ್ಕಾರದ ಎರಡನೇ ಅವಧಿಯಲ್ಲಿ ಅಲ್ಪಸಂಖ್ಯಾತ ಸಚಿವಾಲಯದ ‘ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ’ (ಪಿಎಂಜೆವಿಕೆ)  ಅಡಿಯಲ್ಲಿ ದೇಶಾದ್ಯಂತ ಸಾಮಾನ್ಯ ಸೇವಾ ಕೇಂದ್ರಗಳನ್ನು ಆರಂಭಿಸಲು ಅನುಮೋದನೆ ನೀಡಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳು ಮತ್ತು ಕಲ್ಯಾಣ ಕಾರ್ಯಗಳನ್ನು ಯಾವ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಕುರಿತು ಈ ಕೇಂದ್ರಗಳು ಮಾಹಿತಿ ಮತ್ತು ನೆರವು ನೀಡಲಿವೆ.
ಪಿಎಂಜೆವಿಕೆ ಅಡಿಯಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ಶೌಚಾಲಯ ಸೌಲಭ್ಯ–53, ಶಾಲೆಗಳಲ್ಲಿ ಸೌರ ಶಕ್ತಿ ಸೌಲಭ್ಯ–16, ಹೆಚ್ಚುವರಿ ತರಗತಿ ಕೊಠಡಿಗಳು –324, ಆರೋಗ್ಯ ಕೇಂದ್ರಗಳು–223, ಅಂಗನವಾಡಿ ಕೇಂದ್ರಗಳು–52, ವಸತಿ ಶಾಲೆಗಳು–33, ಪದವಿ ಕಾಲೇಜುಗಳು–7, ಶಾಲಾ ಕಟ್ಟಡಗಳು–98, ಹಾಸ್ಟೆಲ್‌ಗಳು–98, ಐಟಿಐ–4, ಹೂನಾರ್‌ ಹಬ್‌ಗಳು–100, ಕೌಶಲ ಅಭಿವೃದ್ಧಿ ಕೇಂದ್ರಗಳು–10, ವೈದ್ಯಕೀಯ ಕಾಲೇಜು–1 ಮತ್ತು ಪಾಲಿಟೆಕ್ನಿಕ್‌ 3 ಕಾಲೇಜುಗಳನ್ನು 2019ರಲ್ಲಿ ಆರಂಭಿಸಲು ಮಂಜೂರಾತಿ ನೀಡಲಾಗಿದೆ. ಇವುಗಳ ಜತೆಗೆ,  ಉತ್ತರ ಪ್ರದೇಶದ ಬರೇಲಿಯಲ್ಲಿ ಯುನಾನಿ ಕಾಲೇಜು ಅನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ₨130 ಕೋಟಿ ವೆಚ್ಚ ಮಾಡಲಾಗುತ್ತಿದೆ. ಬಾಲಕಿಯರ ಹಾಸ್ಟೆಲ್‌,  ಶಾಲಾ ಕಟ್ಟಡಗಳನ್ನು ಇತ್ಯಾದಿಗಳನ್ನು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯ, ಕೇರಳದ ಮಲ್ಲಾಪುರಂ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ನಿರ್ಮಿಸಲಾಗುತ್ತಿದೆ.

ಹಜ್‌

ಜಗತ್ತಿನಲ್ಲೇ ಹಜ್‌ 2020ರ ಕಾರ್ಯಕ್ರಮವನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿದ್ದು ಭಾರತ ಮೊದಲ ರಾಷ್ಟ್ರವಾಗಿದೆ. ಆನ್‌ಲೈನ್ ಅರ್ಜಿ, ಇ–ವೀಸಾ, ಹಜ್‌ ಮೊಬೈಲ್‌ ಆ್ಯಪ್‌, ‘ಇ–ಮಸಿಹಾ’ ಆರೋಗ್ಯ ಸೌಲಭ್ಯ, ಇ–ಲಗೇಜ್‌ ಪ್ರಿ–ಟ್ಯಾಗ್ಗಿಂಗ್‌’  ಸೇರಿದಂತೆ ಹಜ್‌ ಯಾತ್ರಾರ್ಥಿಗಳಿಗೆ ವಸತಿ, ಸಾರಿಗೆ ಇತರ ಎಲ್ಲ ಮಾಹಿತಿಯನ್ನು ಒದಗಿಸಲಾಗುತ್ತಿದೆ.
ಕೇಂದ್ರದ ಅಲ್ಪಸಂಖ್ಯಾತ ಸಚಿವ ಶ್ರೀ ಮುಕ್ತಾರ್‌ ಅಬ್ಬಾಸ್ ನಖ್ವಿ ಅವರು ಜೆಡ್ಡಾದಲ್ಲಿ 2019ರ ಡಿಸೆಂಬರ್ 1ರಂದು ದ್ವಿಪಕ್ಷೀಯ ವಾರ್ಷಿಕ ಹಜ್‌ 2020ರ ಒಪ್ಪಂದಕ್ಕೆ ಸೌದಿ ಅರೇಬಿಯಾ ಜತೆ ಸಹಿ ಹಾಕಿದ್ದಾರೆ.  ಸೌದಿ ಅರೇಬಿಯಾದ ಹಜ್‌ ಮತ್ತು ಉಮ್ರಾಹ್‌ ಸಚಿವರಾದ ಗೌರವಾನ್ವಿತ ಡಾ. ಮೊಹಮ್ಮದ್‌ ಸಲೆಹ್‌ ಬಿನ್‌ ತಹೇರ್‌ ಬೆಂಟೆನ್‌ ಅವರೊಂದಿಗೆ ಈ ಸಹಿ ಹಾಕಲಾಯಿತು.

ಇದೇ ಮೊದಲ ಬಾರಿ ಯಾತ್ರಾರ್ಥಿಗಳಿಗೆ ಬ್ಯಾಗೇಜ್‌ಗಳಿಗೆ ಡಿಜಿಟಲ್‌ ಪ್ರಿ–ಟ್ಯಾಗ್ಗಿಂಗ್‌ ಸೌಲಭ್ಯ ಕಲ್ಪಿಸಲಾಗಿದೆ.  ಇದರಿಂದ,  ಸೌದಿ ಅರೇಬಿಯಾದಲ್ಲಿ ವಿಮಾನ ನಿಲ್ದಾಣಕ್ಕೆ ತಲುಪಿದ ಬಳಿಕ ಯಾತ್ರಾರ್ಥಿಗಳಿಗೆ ಕೊಠಡಿ ವ್ಯವಸ್ಥೆ ಮತ್ತು ಬಸ್‌ ವಿವರಗಳ ಬಗ್ಗೆ ಭಾರತದಲ್ಲೇ ಮಾಹಿತಿ ದೊರೆಯುತ್ತದೆ.
ಸಿಮ್‌ ಕಾರ್ಡ್‌ ಅನ್ನು ಸಹ ಮೊಬೈಲ್‌ ಆ್ಯಪ್‌ಗೆ ಸಂಪರ್ಕ ಒದಗಿಸಲಾಗಿದೆ. ಇದರಿಂದ ಹಜ್‌ ಯಾತ್ರಾರ್ಥಿಗಳಿಗೆ ತಕ್ಷಣವೇ ಎಲ್ಲ ರೀತಿಯ ತಕ್ಷಣದ ಮಾಹಿತಿ ದೊರೆಯುತ್ತದೆ.  ಈ ವರ್ಷ ಇಡೀ ಹಜ್‌ ಪ್ರಕ್ರಿಯೆ ಬಗ್ಗೆ ಮಾಹಿತಿ ಒದಗಿಸಲು ಮುಂಬೈನ ಹಜ್‌ ಹೌಸ್‌ನಲ್ಲಿ 100 ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ.
ಇನ್ನೊಂದೆಡೆ, ದೇಶದ ಹಜ್‌ ಯಾತ್ರಾರ್ಥಿಗಳಿಗೆ ಆರೋಗ್ಯ ಕಾರ್ಡ್‌ ಅನ್ನು ಒದಗಿಸಲಾಗುತ್ತಿದೆ. ಜತೆಗೆ, ‘ಇ–ಮಸಿಹಾ’ (ವಿದೇಶದಲ್ಲಿನ ಭಾರತೀಯ ಯಾತ್ರಾರ್ಥಿಗಳಿಗೆ ಇ– ವೈದ್ಯಕೀಯ ನೆರವು ವ್ಯವಸ್ಥೆ)  ಅನ್ನು ಆನ್‌ಲೈನ್‌ ವ್ಯವಸ್ಥೆ ಮೂಲಕ ಕಲ್ಪಿಸಲಾಗುತ್ತಿದೆ. ಇದರಲ್ಲಿ ಯಾತ್ರಾರ್ಥಿಯ ಸಂಪೂರ್ಣ ಆರೋಗ್ಯ ಮಾಹಿತಿ ಮತ್ತು ವೈದ್ಯರ ಸಲಹೆಗಳು, ವೈದ್ಯಕೀಯ ಚಿಕಿತ್ಸೆ ಬಗ್ಗೆ ಇರುತ್ತದೆ. ಮೆಕ್ಕಾ–ಮದೀನಾದಲ್ಲಿ ಯಾವುದೇ ರೀತಿಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಈ ಮಾಹಿತಿ ಪಡೆದು ಚಿಕಿತ್ಸೆ ನೀಡಲು ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಇದನ್ನು ಅಭಿವೃದ್ಧಿಪಡಿಸಲಾಗಿದೆ.
ಹಜ್‌ ಗ್ರೂಪ್‌ ಆಯೋಜಕರಿಗೂ(ಎಚ್‌ಜಿಒ) ಸಹ ಶೇಕಡ 100ರಷ್ಟು ಡಿಜಿಟಲ್‌ ವ್ಯವಸ್ಥೆಯ ಜತೆ ಸಂಪರ್ಕ ಕಲ್ಪಿಸಲಾಗಿದೆ.  ಇದರಿಂದ, ಹಜ್‌ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸಲು ಮತ್ತು ಪಾರದರ್ಶಕತೆ ಕಾಪಾಡಲು ಸಾಧ್ಯವಾಗಿದೆ. ಇದೇ ಪ್ರಥಮ ಬಾರಿ, ಎಚ್‌ಜಿಒ ಪೋರ್ಟಲ್‌ ‘http://haj.nic.in/pto/ (ಹಜ್‌ ಗ್ರೂಪ್‌ ಆಯೋಜಕರಿಗೆ ಪೋರ್ಟ್‌ಲ್‌)  ಅಭಿವೃದ್ಧಿಪಡಿಸಲಾಗಿದೆ.
ಶೇಕಡ 48ರಷ್ಟು ಮಹಿಳಾ ಹಜ್‌ ಯಾತ್ರಾರ್ಥಿಗಳು ಸೇರಿದಂತೆ ದಾಖಲೆಯ 2ಲಕ್ಷ ಭಾರತೀಯ ಮುಸ್ಲಿಮರು 2019ರಲ್ಲಿ ಹಜ್‌ ಯಾತ್ರೆಯನ್ನು ಪೂರೈಸಿದ್ದಾರೆ. ಸಬ್ಸಿಡಿ ಇಲ್ಲದೆಯೇ ಇವರು ಹಜ್‌ ಯಾತ್ರೆ ಕೈಗೊಂಡಿದ್ದರು. ಇದೇ ಸಂದರ್ಭದಲ್ಲಿ ‘ಮೆಹ್ರಮ್‌’ ಇಲ್ಲದೆಯೂ ದಾಖಲೆಯ 2340 ಮುಸ್ಲಿಂ ಮಹಿಳೆಯರು ಹಜ್‌ ಯಾತ್ರೆ ಕೈಗೊಂಡಿದ್ದರು.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಶ್ರೀ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅಧ್ಯಕ್ಷತೆಯಲ್ಲಿ ನಡೆದ ಪರಿಶೀಲನಾ ಸಭೆಯಲ್ಲಿ ‘ಹಜ್‌ 2019’ ಮತ್ತು 2020ರ ಸಿದ್ಧತೆಗಳು ಕುರಿತು ಸಮಾಲೋಚನೆ ನಡೆಸಲಾಯಿತು.2020ರಲ್ಲಿ ಎರಡು ಲಕ್ಷ ಭಾರತೀಯ ಮುಸ್ಲಿಮರು ಹಜ್‌ಗೆ ತೆರಳುವ ನಿರೀಕ್ಷೆ ಇದೆ. ಹೊಸದಾಗಿ ಆಂಧ್ರಪ್ರದೇಶ ವಿಜಯವಾಡಾದಲ್ಲಿ ಯಾತ್ರಾರ್ಥಿಗಳಿಗೆ ಮತ್ತೊಂದು ಕೇಂದ್ರವನ್ನು ತೆರೆಯಲಾಗುವುದು.

ವಕ್ಫ್‌-

ದೇಶಾದ್ಯಂತ ಇರುವ ವಕ್ಫ್‌ ಆಸ್ತಿಗಳನ್ನು ಶೇಕಡ 100ರಷ್ಟು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸಿರುವುದು ಪ್ರಮುಖ ಸಾಧನೆಯಾಗಿದೆ. ದೇಶದಲ್ಲಿ 6 ಲಕ್ಷ ನೋಂದಣಿಯಾದ ವಕ್ಫ್‌ ಆಸ್ತಿಗಳಿವೆ.  ಸಮಾಜದ ಕಲ್ಯಾಣಕ್ಕೆ ಬಳಸುವ ಉದ್ದೇಶದಿಂದ ವಕ್ಫ್‌ ಆಸ್ತಿಗಳನ್ನು ಶೇಕಡ 100ರಷ್ಟು ಜಿಯೊ ಟ್ಯಾಗ್ಗಿಂಗ್‌ ಮತ್ತು ಡಿಜಿಟಲೀಕರಣಗೊಳಿಸಲಾಗುತ್ತಿದೆ.
1ಲಕ್ಷ 40 ಸಾವಿರ ವಕ್ಫ್‌ ಆಸ್ತಿಗಳ ಜಿಯೊ ಟ್ಯಾಗ್ಗಿಂಗ್‌ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಐಐಟಿ ರೂರ್ಕಿ ಮತ್ತು ಅಲಿಗಡ ಮುಸ್ಲಿಂ ವಿಶ್ವವಿದ್ಯಾಲಯದ ನೆರವಿನೊಂದಿಗೆ ವಕ್ಫ್‌ ಆಸ್ತಿಗಳ ಜಿಐಎಸ್‌/ಜಿಪಿಎಸ್‌ ಮ್ಯಾಪಿಂಗ್‌ ಅನ್ನು ಕೈಗೊಳ್ಳಲಾಗಿದೆ.
20 ರಾಜ್ಯಗಳ ವಕ್ಫ್‌ ಮಂಡಳಿಗೆ ವಿಡಿಯೊ ಕಾನ್ಫೆರೆನ್ಸಿಂಗ್‌ ಸೌಲಭ್ಯವನ್ನು ಕೇಂದ್ರೀಯ ವಕ್ಫ್‌ ಮಂಡಳಿ ಕಲ್ಪಿಸಿದೆ.  ಈ ವರ್ಷದ ಅಂತ್ಯಕ್ಕೆ ಉಳಿದ ಮಂಡಳಿಗಳಿಗೂ ಕಲ್ಪಿಸಲಾಗುವುದು. 2019ರ ನವೆಂಬರ್‌ 8ರಂದು ಕೇಂದ್ರ ಅಲ್ಪಸಂಖ್ಯಾತ ಸಚಿವ ಶ್ರೀ ಮುಕ್ತಾರ್‌ ಅಬ್ಬಾಸ್‌ ನಖ್ವಿ ಅವರು ಕೇರಳದ ಕೊಚ್ಚಿಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುತಾವಲಿಗಳ ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು. ದಕ್ಷಿಣ ರಾಜ್ಯಗಳ 200ಕ್ಕೂ ಹೆಚ್ಚು ಮುತಾವಲಿಗಳು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಸಮಾವೇಶದಲ್ಲಿ ಶ್ರೀ ನಖ್ವಿ ಅವರು ಮಾತನಾಡಿ, ಮುತಾವಲಿಗಳು ವಕ್ಫ್‌ ಆಸ್ತಿಗಳ ಕಸ್ಟಡಿಯನ್‌ಗಳಾಗಿದ್ದಾರೆ ಮತ್ತು ವಕ್ಫ್‌ ಆಸ್ತಿಗಳ ಸುರಕ್ಷತೆ ಮತ್ತು ಉತ್ತಮ ಕಾರ್ಯಕ್ಕೆ ಬಳಸುವುದು ಅವರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
2019ರ ಜನವರಿ 17ರಂದು  ನ್ಯಾಯಮೂರ್ತಿ (ನಿವೃತ್ತ) ಝಕಿವುಲ್ಲಾ ಖಾನ್‌ ನೇತೃತ್ವದ ಐವರ ಸದಸ್ಯರ ಸಮಿತಿಯು,   ವಕ್ಫ್ ಆಸ್ತಿ ಭೋಗ್ಯಕ್ಕೆ ಸಂಬಂಧಿಸಿದಂತೆ ನಿಯಮಗಳನ್ನು ಪರಾಮರ್ಶೆ ಮಾಡುವ ಕುರಿತ ವರದಿಯನ್ನು ನವದೆಹಲಿಯಲ್ಲಿ ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಖ್ವಿ ಅವರಿಗೆ ಸಲ್ಲಿಸಲಾಯಿತು.
ಆಯಾ ರಾಜ್ಯಗಳ ವಕ್ಫ್‌ ಮಂಡಳಿಗಳ ವ್ಯಾಪ್ತಿಯಲ್ಲಿ ವಕ್ಫ್‌ ಆಸ್ತಿಗಳನ್ನು ಉತ್ತಮವಾಗಿ ನಿರ್ವಹಣೆ ಮಾಡಿದ್ದಕ್ಕಾಗಿ ‘ಖ್ವಾಮಿ ವಕ್ಫ್‌ ಮಂಡಳಿ ತರಾಖ್ಖಿಯಾತಿ’ ಯೋಜನೆ ಅಡಿಯಲ್ಲಿ 8 ಮುತಾವಲಿಗಳಿಗೆ ಪ್ರಶಸ್ತಿ ನೀಡಲಾಯಿತು. 2019ರ ಜುಲೈ 29ರಂದು ದೆಹಲಿಯ ಎನ್‌ಡಿಎಂಸಿ ಕನ್ವೆನ್ಷನ್‌  ಕೇಂದ್ರದಲ್ಲಿ ನಡೆದ ಕೇಂದ್ರೀಯ ವಕ್ಫ್‌ ಮಂಡಳಿ (ಸಿಡಬ್ಲ್ಯೂಸಿ)  ರಾಷ್ಟ್ರೀಯ ಸಮ್ಮೇಳನದಲ್ಲಿ ಈ ಗೌರವ ಸಲ್ಲಿಸಲಾಯಿತು. ಇದೇ ಪ್ರಥಮ ಬಾರಿ ಮುತಾವಲಿಗಳನ್ನು ಪ್ರೋತ್ಸಾಹಿಸುವ ಕಾರ್ಯ ನಡೆಯಿತು. ವಿಶೇಷವಾಗಿ ಅಗತ್ಯವಿರುವವರಿಗೆ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ನೆರವು ನೀಡುವ ನಿಟ್ಟಿನಲ್ಲಿ ವಕ್ಫ್‌  ಆಸ್ತಿಗಳ ಉತ್ತಮ ನಿರ್ವಹಣೆ ಮಾಡಿರುವುದು ಮತ್ತು ಬಳಸಿಕೊಂಡಿರುವ ಶ್ಲಾಘನೀಯ ಕಾರ್ಯಕ್ಕೆ ಮುತಾವಲಿಗಳನ್ನು ಗೌರವಿಸಲಾಯಿತು.

 

***


(Release ID: 1597327) Visitor Counter : 203


Read this release in: English , Hindi , Bengali , Tamil