ವಸತಿ ಮತ್ತು ನಗರ ಬಡತನ ನಿರ್ಮೂಲನೆ ಸಚಿವಾಲಯ
ದೆಹಲಿ ಮೆಟ್ರೊದ ಮೂರು ಆದ್ಯತಾ ಕಾರಿಡಾರ್ಗಳ ನಾಲ್ಕನೇ ಹಂತಕ್ಕೆ ಪರಿಷ್ಕೃತ ಅನುದಾನಕ್ಕೆ ಸಂಪುಟದ ಅನುಮೋದನೆ
ಪ್ರಕಟಣಾ ದಿನಾಂಕ:
11 DEC 2019 6:23PM by PIB Bengaluru
ದೆಹಲಿ ಮೆಟ್ರೊದ ಮೂರು ಆದ್ಯತಾ ಕಾರಿಡಾರ್ಗಳ ನಾಲ್ಕನೇ ಹಂತಕ್ಕೆ ಪರಿಷ್ಕೃತ ಅನುದಾನಕ್ಕೆ ಸಂಪುಟದ ಅನುಮೋದನೆ
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆ ದೆಹಲಿ ಮೆಟ್ರೊದ ಮೂರು ಆದ್ಯತಾ ಕಾರಿಡಾರ್ಗಳ ನಾಲ್ಕನೇ ಹಂತಕ್ಕೆ ಪರಿಷ್ಕೃತ ಅನುದಾನ ಒದಗಿಸಲು ಅನುಮೋದನೆ ನೀಡಿದೆ. ಈ ನಾಲ್ಕು ಹಂತಗಳ ವಿವರ ಹೀಗಿದೆ. 1) ಏರೋಸಿಟಿಯಿಂದ ತುಘಲಕ್ಬಾದ್, 2) ಆರ್.ಕೆ. ಆಶ್ರಮದಿಂದ ಜನಕಪುರಿ (ಪಶ್ಚಿಮ) ಮತ್ತು ಮುಕುಂದಪುರದಿಂದ ಮೌಜಪುರವರೆಗೆ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರ ತಲಾ 50:50 ಅನುಪಾತದಲ್ಲಿ ಭೂಮಿಯ ವೆಚ್ಚವನ್ನು ಭರಿಸಲಿವೆ. ಮೆಟ್ರೊ ರೈಲು ನೀತಿ, 2017ಕ್ಕೆ ತಿದ್ದುಪಡಿ ಮಾಡಿದ ಬಳಿಕದ ಕೈಗೊಂಡ ಯೋಜನೆಗಳಾಗಿವೆ. ಇದು ದೆಹಲಿಗೆ ಮಾತ್ರ ಅನ್ವಯವಾಗಲಿದ್ದು, 2019ರ ಸೆಪ್ಟೆಂಬರ್ 6ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿಗೆ ಬದ್ಧವಾಗಿದೆ.
ಯೋಜನೆಯ ಒಟ್ಟು ವೆಚ್ಚ ರೂ24,948.65 ಕೋಟಿ. ಕೇಂದ್ರ ಸರ್ಕಾರದ ಸದ್ಯದ ಅನುದಾನ ರೂ 4,154.20 ಕೋಟಿಯಿಂದ ರೂ 4,643.638 ಕೋಟಿಯಾಗಿದೆ. ಇದರಿಂದ 489.438 ಕೋಟಿ ಹೆಚ್ಚುವರಿಯಾಗಿದೆ. ಹೊರಗಿನ ಸಂಸ್ಥೆಗಳಿಂದ ಪಡೆಯುವ ಸಾಲವು ದ್ವಿಪಕ್ಷೀಯ ಅಥವಾ ವಿವಿಧ ಸಂಸ್ಥೆಗಳಿಂದ ಪಡೆಯುವ ಸಾಲವನ್ನು ಡಿಎಂಆರ್ಸಿ ಪಾವತಿಸಲಿದೆ. ಈ ಮೊತ್ತವು ಈಗಿರುವ ರೂ 11,462.60 ಕೋಟಿಯಿಂದ ₨12,930.914 ಕೋಟಿಯಾಗಲಿದೆ. ಅಂದರೆ, ರೂ 1,468.314 ಕೋಟಿಯಾಗಲಿದೆ.
ಹಿನ್ನಲೆ:
ದೆಹಲಿ ಮೆಟ್ರೊದ ಮೂರು ಆದ್ಯತಾ ಕಾರಿಡಾರ್ಗಳ ನಾಲ್ಕನೇ ಹಂತಕ್ಕೆ ರೂ 24,948.65 ಕೋಟಿ ಮೊತ್ತದ ಯೋಜನೆಗೆ ಕೇಂದ್ರ ಸರ್ಕಾರ 2019ರ ಮಾರ್ಚ್ನಲ್ಲಿ ಅನುಮೋದನೆ ನೀಡಿತ್ತು. 2017ರ ಮೆಟ್ರೊ ರೈಲು ನೀತಿ ಅನ್ವಯ ಅನುದಾನವನ್ನು ಒದಗಿಸಲಾಗಿತ್ತು. ವೆಚ್ಚದ ಅನುಪಾತವನ್ನು ವಸತಿ ಮತ್ತು ನಗರಾಭಿವೃದ್ಧಿ ಮಂತ್ರಾಲಯ ಪರಿಷ್ಕರಿಸದ ಹೊರತು ಈಗಾಗಲೇ ಒಪ್ಪಿಗೆ ಪಡೆದಿರುವ ಯೋಜನೆಗಳನ್ನು ಕೈಗೊಳ್ಳಬಾರದು ಎಂದು 2019ರ ಏಪ್ರಿಲ್ನಲ್ಲಿ ಜಿಎನ್ಸಿಟಿಡಿ, ಡಿಎಂಆರ್ಸಿಗೆ ಸೂಚಿಸಿತ್ತು.
ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ, 2019ರ ಜುಲೈನಲ್ಲಿ ಕಾರ್ಯವನ್ನು ಆರಂಭಿಸಲಾಯಿತು. 2019ರ ಜುಲೈ 6ರಂದು ಆದೇಶ ನೀಡಿದ ಸುಪ್ರೀಂ ಕೋರ್ಟ್ 2017ರ ಮೆಟ್ರೊ ರೈಲು ನೀತಿಯನ್ನು ಎತ್ತಿ ಹಿಡಿಯಿತು. ಕಾರ್ಯಾಚರಣೆಯ ನಷ್ಟ ಮತ್ತು ಹೊರಗಿನ ಸಂಸ್ಥೆಗಳಿಂದ ಪಡೆದ ಸಾಲದ ಮರುಪಾವತಿಗೆ ಸಂಬಂಧಿಸಿದ ನೀತಿ ಬಗ್ಗೆ ಇದರಲ್ಲಿ ವಿವರಿಸಲಾಗಿತ್ತು. ಭೂಮಿಯ ವೆಚ್ಚವನ್ನು ಕೇಂದ್ರ ಸರ್ಕಾರ ಮತ್ತು ಜಿಎನ್ಸಿಟಿಡಿ ತಲಾ 50:50 ಅನುಪಾತದ ವೆಚ್ಚದಲ್ಲಿ ಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿತು. ಇದರ ಅನ್ವಯ ಮೆಟ್ರೊ ರೈಲು ನೀತಿ,2017 ಅನ್ನು ಸಹ ತಿದ್ದುಪಡಿ ಮಾಡಲಾಯಿತು.
****
(ಪ್ರಕಟಣೆ ಐ.ಡಿ.: 1596185)
ವಿಸಿಟರ್ ಕೌಂಟರ್ : 111