ಪ್ರಧಾನ ಮಂತ್ರಿಯವರ ಕಛೇರಿ

ಒಡಿಶಾದ ಸಾಂಬಾಲಪುರ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ

Posted On: 29 NOV 2019 5:56PM by PIB Bengaluru

ಒಡಿಶಾದ ಸಾಂಬಾಲಪುರ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವ

ಪ್ರಧಾನ ಭಾಷಣ ಡಾ. ಪ್ರಮೋದ್‌ ಕುಮಾರ್‌ ಮಿಶ್ರಾ, ಪ್ರಧಾನ ಮಂತ್ರಿಗಳವರ ಪ್ರಧಾನ ಕಾರ್ಯದರ್ಶಿ

 

ಗೌರವಾನ್ವಿತ ಒಡಿಶಾ ರಾಜ್ಯಪಾಲರಾದ ಪ್ರೊ. ಗಣೇಶಿ ಲಾಲ್‌, ಕುಲಪತಿ ಪ್ರೊ. ದೀಪಕ್‌ ಬೆಹ್ರಾ, ಸೆನೆಟ್‌, ಸಿಂಡಿಕೇಟ್‌ ಮತ್ತು ಅಕಾಡೆಮಿಕ್‌ ಕೌನ್ಸಿಲ್‌ ನ ಸದಸ್ಯರು, ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗ, ಅತಿಥಿಗಳು, ಪೋಷಕರು ಮತ್ತು ನನ್ನ ಪ್ರೀತಿಯ ವಿದ್ಯಾರ್ಥಿ ವೃಂದ,

ಸಾಂಬಾಲಪುರ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಪ್ರೊ. ಬೆಹ್ರಾ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಹಸಿರು ಮತ್ತು ಪ್ರಶಾಂತ ವಾತಾವರಣದಲ್ಲಿ ನಿಮ್ಮ ಜತೆ ಸಮಯ ಕಳೆಯಲು ಸಂತೋಷವಾಗಿದೆ.

ನಿಮ್ಮ ವಿಶ್ವವಿದ್ಯಾಲಯವು ದೇಶದ ಇತಿಹಾಸ ಮತ್ತು ಪರಂಪರೆಯನ್ನು ಎತ್ತಿ ಹಿಡಿಯುತ್ತಿದೆ. ಸಮಲೇಶ್ವರಿ ದೇವಿ ಇಲ್ಲಿಂದ ದೂರವಿಲ್ಲ. ವಸಾಹತುಶಾಹಿ ವಿರುದ್ಧ ಬಂಡಾಯವೆದ್ದಿದ್ದ ವೀರ ಸುರೇಂದ್ರ ಸಾಯಿ ಅವರ ನೆಲ ಇದಾಗಿದೆ. ಹಿರಾಕುಡ್‌ ಜಲಾಶಯವೂ ಸಮೀಪದಲ್ಲಿದೆ. ಇದು ಆಧುನಿಕ ಭಾರತದ ನಿರ್ಮಾಣವನ್ನು ಬಿಂಬಿಸುತ್ತದೆ.

ನಿಮ್ಮ ವಿಶ್ವವಿದ್ಯಾಲಯವು ವೈಯಕ್ತಿಕವಾಗಿ ನನಗೆ ಅಪಾರ ಮಹತ್ವದ್ದಾಗಿದೆ. ನನ್ನ ಪದವಿಯ ಮೂರು ವಿಶ್ವವಿದ್ಯಾಲಯ ಪರೀಕ್ಷೆಗಳು ಈ ವಿಶ್ವವಿದ್ಯಾಲಯದ ಅಡಿಯಲ್ಲೇ ನಡೆದಿವೆ. ಕುತೂಹಲಕಾರಿ ಏನೆಂದರೆ, ಈ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ಬಳಿಕ ನಾನು ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದೆ. ನನ್ನ ವಿದ್ಯಾರ್ಥಿ ದಿನಗಳ ಅವಿಸ್ಮರಣೀಯ ದಿನಗಳು ಇನ್ನೂ ಹಸಿರಾಗಿಯೇ ಉಳಿದಿವೆ.

ಪ್ರೀತಿಯ ವಿದ್ಯಾರ್ಥಿಗಳೇ, ಹಲವು ಪದವಿ, ಸ್ನಾತಕೋತ್ತರ ಪದವಿ ಮತ್ತು ಡಾಕ್ಟರೇಟ್‌ ಪದವಿಗಳು, ಪ್ರಶಸ್ತಿಗಳು ಮತ್ತು ಪದಕಗಳನ್ನು ಪಡೆದಿದ್ದೀರಿ. ನಾನು ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ನಿಮ್ಮ ಜೀವನದಲ್ಲಿ ಇದೊಂದು ಮಹತ್ವದ ಮೈಲಿಗಲ್ಲು. ಇದೇ ಸಮಯದಲ್ಲಿ ನೀವು ನಿಮ್ಮ ಭವಿಷ್ಯದ ಬಗ್ಗೆಯೂ ಚಿಂತನೆಯೂ ಮಾಡಿ. ಇಂತಹ ಮಹತ್ವದ ಮೈಲಿಗಲ್ಲುಗಳನ್ನು ಸ್ಥಾಪಿಸಿ.

ನಿಮ್ಮ ಕೋರ್ಸ್‌ ಮುಗಿದ ಬಳಿಕ ನೀವು ವಿಶ್ವವಿದ್ಯಾಲಯವನ್ನು ತೊರೆಯುತ್ತೀರಿ. ಆದರೆ, ನೀವು ಇಲ್ಲಿಂದ ದೂರವಾದಾಗ ಕೇವಲ ಪದವಿ ಅಥವಾ ಅಂಕಪಟ್ಟಿಗಳನ್ನು ಮಾತ್ರ ತೆಗೆದುಕೊಂಡು ಹೋಗಿರುವುದಿಲ್ಲ. ನಿಮ್ಮ ಕಲಿಕೆಯ ನೆನಪುಗಳನ್ನು ತೆಗೆದುಕೊಂಡು ಹೋಗಿರುತ್ತೀರಿ. ಶಿಕ್ಷಕರ ಜತೆ ಸಮಾಲೋಚನೆ, ಬೋಧಕೇತರ ಸಿಬ್ಬಂದಿ ಹಾಗೂ ಅತಿಥಿಗಳು ಸಹ ನಿಮ್ಮ ಸ್ಮೃತಿಪಟಲದಲ್ಲಿರುತ್ತಾರೆ. ಈ ನೆನಪುಗಳನ್ನು ಸಮಾಲೋಚನೆಗಳನ್ನು ನಿಮ್ಮ ಜತೆಯೇ ಬಂಧನದಲ್ಲಿರುತ್ತವೆ.

ನೆನಪಿನಲ್ಲಿಡಿ, ಇಂದು ನೀವು ಸಾಧನೆ ಮಾಡಿದ್ದು ಕೇವಲ ನಿಮ್ಮ ಪ್ರಯತ್ನದಿಂದ ಮಾತ್ರ ಅಲ್ಲ. ನಿಮ್ಮ ಪೋಷಕರು, ಶಿಕ್ಷಕರು ಮತ್ತು ನಿಮ್ಮ ಜತೆಯಲ್ಲೇ ಇರುವವರ ಕೊಡುಗೆಯೂ ಅಪಾರವಾಗಿದೆ. ನಿಮ್ಮ ಯಶಸ್ಸಿನಲ್ಲಿ ಪ್ರತಿಯೊಬ್ಬರ ಕೊಡುಗೆಯೂ ಇದೆ. ಅವರ ಕೊಡುಗೆ ಮತ್ತು ಪಾತ್ರವನ್ನು ಸದಾ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಯಾವುದೇ ವ್ಯಕ್ತಿಯು ಕೇವಲ ತನ್ನಿಂದ ಮಾತ್ರ ಯಶಸ್ಸು ಸಾಧಿಸಲು ಸಾಧ್ಯವಿಲ್ಲ.

ನಿಮ್ಮ ಜೀವನದಲ್ಲಿ ಹೊಸ ಹೆಜ್ಜೆಯನ್ನು ನೀವು ಇಡುತ್ತಿದ್ದೀರಿ. ನಿಮಗೆ ದೊರೆಯುವ ಸಾಧ್ಯತೆಗಳು ಮತ್ತು ಅವಕಾಶಗಳನ್ನು ಸಂಭ್ರಮಿಸಿ. ರಾಷ್ಟ್ರವು ಹೊಸ ಉತ್ಸಾಹಿಗಳನ್ನು ಎದುರು ನೋಡುತ್ತಿದೆ.

ಪ್ರಧಾನಿ ಅವರ ನವಭಾರತದ ಮುನ್ನೋಟದ ಅಂಗವಾಗಿ ಹೊಸ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ವಿಶೇಷವಾಗಿ ಆರ್ಥಿಕ ವಲಯದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ. 2024ರ ವೇಳೆಗೆ ಭಾರತ ಐದು ಟ್ರಿಲಿಯನ್‌ ಡಾಲರ್‌ ಆರ್ಥಿಕ ಹೊಂದಿರುವ ದೇಶವಾಗಬೇಕು ಎಂದು ಪ್ರಧಾನಿ ಬಯಸಿದ್ದಾರೆ. ಇದು ಮಹತ್ವಾಕಾಂಕ್ಷಿಯ ಆಶಯವಾಗಿದೆ. ಈ ಆಶಯವನ್ನು ಸಾಕಾರಗೊಳಿಸುವ ಮಾರ್ಗದಲ್ಲಿ ನಾವು ಸಾಗಿದ್ದೇವೆ.

ನಮ್ಮ ಆರ್ಥಿಕತೆಯ ಪಾಯ ಗಟ್ಟಿಯಾಗಿದೆ. 2014–2019ರ ನಮ್ಮ ವಾರ್ಷಿಕ ದೇಶಿಯ ಬೆಳವಣಿಗೆ ದರ ಶೇಕಡ 7.5ರಷ್ಟು ತಲುಪಿದ್ದೇವೆ. ಇದು ದೇಶಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ ಅತಿ ಹೆಚ್ಚಿನದಾಗಿದೆ. ‘ಜಿ–20’ ರಾಷ್ಟ್ರಗಳಲ್ಲಿಯೂ ಇದು ಹೆಚ್ಚಿನದು. ಕಳೆದ ಐದು ವರ್ಷಗಳಲ್ಲಿ ಆರ್ಥಿಕ ಸ್ಥಿರತೆಯು ಭದ್ರವಾಗಿತ್ತು. ಹಣದುಬ್ಬರ ಕಡಿಮೆ ಇತ್ತು, ಆರ್ಥಿಕ ವೆಚ್ಚವನ್ನು ಸಹ ನಿಯಂತ್ರಣದಲ್ಲಿತ್ತು ಮತ್ತು ಚಾಲ್ತಿ ಖಾತೆ ಕೊರತೆಯು ನಿಯಂತ್ರಣದಲ್ಲಿತ್ತು. 2009–14 ಮತ್ತು 2014–19ರ ಎರಡು ಅವಧಿಗಳನ್ನು ಹೋಲಿಸಿದರೆ ಹಣದುಬ್ಬರವು ಶೇಕಡ 10.3ರಿಂದ ಶೇಕಡ 4.5ಕ್ಕೆ ಕಡಿಮೆಯಾಗಿದೆ. ವಿತ್ತೀಯ ಕೊರತೆಯು ಶೇಕಡ 5.3ರಿಂದ ಶೇಕಡ 3.4ಕ್ಕೆ ಕಡಿಮೆಯಾಗಿದೆ. ಚಾಲ್ತಿ ಖಾತೆ ಕೊರತೆಯು ಶೇಕಡ 3.3ರಿಂದ ಶೇಕಡ 1.4 ದೇಶಿಯ ಬೆಳವಣಿಗೆ ದರಕ್ಕೆ ಇಳಿದಿದೆ.

ಹಲವು ಮಹತ್ವದ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ದೇಶದ ಹಣಕಾಸು ವ್ಯವಸ್ಥೆಯನ್ನು ಬಲಪಡಿಸಲು ಮತ್ತು ಶುದ್ಧಗೊಳಿಸಲು 2016ರಲ್ಲಿ ಸಾಲ ತೀರಿಸಲಾಗದ ಮತ್ತು ದಿವಾಳಿಗೆ ಸಂಬಂಧಿಸಿದಂತೆ ನೀತಿಯನ್ನು ರೂಪಿಸಲಾಯಿತು.

ವ್ಯವಸ್ಥೆಯ ಜತೆ ಆಟವಾಡಿದರೆ ಉತ್ತರದಾಯಿತ್ವ ಮಾಡಲಾಗುವುದು ಎಂದು ನಾಲ್ಕೈದು ವರ್ಷಗಳ ಹಿಂದೆ ಯಾವುದೇ ದೊಡ್ಡ ಕಾರ್ಪೋರೇಟ್‌ ಕಂಪನಿ ಯೋಚಿಸಿರಲಿಲ್ಲ. ಸಕಾಲಕ್ಕೆ ಮತ್ತು ಸಮರ್ಪಕವಾಗಿ ಸಾಲ ತೀರಿಸದಿದ್ದರೆ ಆಸ್ತಿಯನ್ನೇ ಈಗ ಕಳೆದುಕೊಳ್ಳಬೇಕಾಗುತ್ತದೆ.

2017ರಲ್ಲಿ ಸರಕು ಮತ್ತು ಸೇವಾ ತೆರಿಗೆ ಅನುಷ್ಠಾನಗೊಳಿಸಿ ದೇಶವನ್ನು ಒಂದೇ ತೆರಿಗೆ ವ್ಯವಸ್ಥೆ ಅಡಿಯಲ್ಲಿ ಒಗ್ಗೂಡಿಸಲಾಯಿತು. ಈ ತೆರಿಗೆ ವ್ಯವಸ್ಥೆಯಿಂದ ಅತಿ ಹೆಚ್ಚಿನ ಆರ್ಥಿಕ ಬೆಳವಣಿಗೆಯ ಸಾಧಿಸುವ ಜತೆಗೆ, ಪಾರದರ್ಶಕ ಮತ್ತು ಸುಲಲಿತ ವ್ಯಾಪಾರ ವಹಿವಾಟು ನಡೆಸಲು ಅನುಕೂಲವಾಗುತ್ತದೆ. ನಿರಂತರವಾಗಿ ಮುಕ್ತವಾಗಿ ಮತ್ತು ಉದಾರೀಕರಣದಿಂದಾಗಿ ವಿದೇಶಿ ನೇರ ಹೂಡಿಕೆಯೂ ದೇಶದಲ್ಲಿ ಹೆಚ್ಚಿದೆ.

ಸಾಮಾಜಿಕ ಅಭಿವೃದ್ಧಿ ಮತ್ತು ಸಮಾನತೆ ಸಾಧಿಸಲು ಕೈಗೊಂಡ ಕ್ರಮಗಳು ಸಹ ಅತ್ಯುತ್ತಮವಾಗಿವೆ. ಆಯುಷ್ಮಾನ ಭಾರತದಂತಹ ಯೋಜನೆಗಳಿಂದ ಬಡವರಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ಪಿಎಂ–ಕಿಸಾನ್‌ ಯೋಜನೆಯು ರೈತರಿಗೆ ಆದಾಯದ ಬೆಂಬಲ ನೀಡುತ್ತಿದೆ. ಶಿಕ್ಷಣ ವ್ಯವಸ್ಥೆಯನ್ನು ಸಮಗ್ರವಾಗಿ ಪುನರ್‌ ಪರಾಮರ್ಶಿಸುವ ನಿಟ್ಟಿನಲ್ಲಿ ನೂತನ ಶಿಕ್ಷಣ ನೀತಿಯನ್ನು ಜಾರಿಗೊಳಿಸಲಾಗುತ್ತಿದೆ.

ಇತ್ತೀಚೆಗೆ, ಭಾರತವು ದೇಶಿಯ ಒಟ್ಟು ಬೆಳವಣಿಗೆ ದರ (ಜಿಡಿಪಿ) ಹಿಂಜರಿತ ಅನುಭವಿಸಿದೆ. ಇದಕ್ಕೆ ಹಲವಾರು ಕಾರಣಗಳಿವೆ. ಜಾಗತಿಕವಾಗಿಯೂ ಹಿಂಜರಿತವಾಗಿದ್ದರಿಂದ ಭಾರತದ ಮೇಲೆಯೂ ಪರಿಣಾಮ ಬೀರಿದೆ. ಇಡೀ ವ್ಯವಸ್ಥೆಯಲ್ಲಿ ಪಾರದರ್ಶಕತೆ ಜಾರಿಗೊಳಿಸುತ್ತಿರುವುದು, ಸೋರಿಕೆ ತಡೆಯುತ್ತಿರುವುದು ಮತ್ತು ಆಡಳಿತವನ್ನು ಸುಧಾರಿಸಲಾಗುತ್ತಿದೆ. ಹೀಗಾಗಿ ಈ ಸ್ಥಿತ್ಯಂತರದ ಸಂದರ್ಭದಲ್ಲಿ ಅಲ್ಪಮಟ್ಟಿನ ಹಿಂಜರಿತ ಸಾಮಾನ್ಯ. ಕಳೆದ ಐದು ವರ್ಷಗಳಲ್ಲಿ ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ.

ಸರ್ಕಾರ ಕ್ರಿಯಾಶೀಲವಾಗಿದೆ ಮತ್ತು ಕಟ್ಟೆಚ್ಚರವಹಿಸಿದೆ. ಹಣಕಾಸು ವಲಯ ಮತ್ತು ನೈಜ ಆರ್ಥಿಕತೆಯನ್ನು ಉತ್ತೇಜಿಸಲು ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

ಭೂಮಿ, ಕಾರ್ಮಿಕ ಮತ್ತು ಬಂಡವಾಳಕ್ಕೆ ಉತ್ತಮ ಫಲಿತಾಂಶ ದೊರೆಯುವಂತೆ ಕ್ರಮಕೈಗೊಳ್ಳಲಾಗಿದೆ. ಒಟ್ಟಾರೆಯಾಗಿ ನೋಡಿದರೆ, ನಮ್ಮ ಆರ್ಥಿಕತೆಯ ವ್ಯವಸ್ಥೆಯ ಮೂಲ ಬಲಿಷ್ಠವಾಗಿದೆ. ಸ್ವಚ್ಛತಾ ಆಂದೋಲನ ಮತ್ತು ಮಹತ್ವಕಾಂಕ್ಷೆಯ ಸುಧಾರಣೆ ಕ್ರಮಗಳು ಈಗಾಗಲೇ ಜಾರಿಯಲ್ಲಿವೆ. ಮುಂದಿನ ತಿಂಗಳು ಮತ್ತು ವರ್ಷಗಳಲ್ಲಿ ಭಾರತ ಇನ್ನೂ ವೇಗವಾಗಿ ಬೆಳವಣಿಗೆ ಸಾಧಿಸಲಿದೆ. ಆರ್ಥಿಕ ಅವಕಾಶಗಳು ಅಪಾರವಾಗಿ ತೆರೆದುಕೊಳ್ಳಲಿವೆ.

ಸ್ಮಾರ್ಟ್‌ಫೋನ್‌ ಕ್ರಾಂತಿ, ಕೃತಕ ಬುದ್ಧಿಮತ್ತೆ, ಡಾಟಾ ಅನಾಲಿಟಿಕ್ಸ್‌, 3ಡಿ ಪ್ರಿಂಟಿಂಗ್‌, ರೋಬೊಟಿಕ್ಸ್ ಮತ್ತು ಬ್ಲಾಕ್‌ಚೈನ್‌ ತಂತ್ರಜ್ಞಾನವು ನಮ್ಮ ಜಗತ್ತವನ್ನು ಮೂಲಭೂತವಾಗಿ ಪರಿವರ್ತನೆ ಮಾಡುತ್ತಿವೆ ಮತ್ತು ನಾವು ಅದರ ಒಳಗೆ ತೊಡಗಿಕೊಂಡಿದ್ದೇವೆ.

ಪ್ರತಿ ದಿನವೂ ತ್ವರಿತಗತಿಯಲ್ಲಿ ಬದಲಾವಣೆಗಳಾಗುತ್ತಿವೆ. ನಾವು ಹೇಗೆ ಸಂವಹನ ಮಾಡುತ್ತೇವೆ ಮತ್ತು ಯಾವ ರೀತಿ ಇನ್ನೊಬ್ಬರ ಜತೆ ಸಂಪರ್ಕ ಸಾಧಿಸುತ್ತೇವೆ ಎನ್ನುವುದು ಸಹ ಮುಖ್ಯವಾಗುತ್ತಿದೆ. ನಾವು ಇನ್ನೊಂದು ಸ್ಥಳಕ್ಕೆ ತೆರಳುವುದು, ನಾವು ಹೇಗೆ ಹಣವನ್ನು ಕಳುಹಿಸುತ್ತೇವೆ ಮತ್ತು ಸ್ವೀಕರಿಸುತ್ತೇವೆ, ನಾವಿದ್ದಲ್ಲಿಯೇ ಆಹಾರವನ್ನು ತರಿಸಿಕೊಳ್ಳುತ್ತೇವೆ. ಇಂತಹ ಹತ್ತಾರು ಬದಲಾವಣೆಗಳಾಗಿವೆ. ಆದರೆ, ಎಲ್ಲೆಡೆಯೂ ವ್ಯತ್ಯಯವೂ ಇದೆ. ಇದು ವಿಭಿನ್ನ ಜಗತ್ತು. ದಶಕಗಳ ಹಿಂದಿನ ಜಗತ್ತಿಗೂ ಇಂದಿಗೂ ಅಪಾರ ವ್ಯತ್ಯಾಸವಿದೆ. ನಾವು ವಿಶ್ವವಿದ್ಯಾಲಯದಲ್ಲಿದ್ದ ಜಗತ್ತನ್ನು ಕ್ಷಣ ಕಾಲ ಮರೆತು ನೋಡೋಣ.

ಆದರೆ, ಈ ಹೊಸತಾದ ವಿಪುಲ ಅವಕಾಶಗಳು ಹಲವು ಸವಾಲುಗಳನ್ನು ಸಹ ಮುಂದಿಟ್ಟಿವೆ. ಬದಲಾವಣೆಗೆ ನಾವು ತೆರೆದುಕೊಳ್ಳದಿದ್ದರೆ, ಹೊಸತನ್ನು ಕಲಿಯದಿದ್ದರೆ ಮತ್ತು ಇನ್ನೊಬ್ಬರ ಜತೆ ಸ್ಪರ್ಧೆಗೆ ಇಳಿಯದಿದ್ದರೆ ನಾವು ಹಿಂದುಳಿಯುತ್ತೇವೆ. ಈ ಸವಾಲುಗಳನ್ನು ಎದುರಿಸಬೇಕು. ನಮ್ಮ ಪರಂಪರೆ ಅಪಾರ ಜ್ಞಾನವನ್ನು ನೀಡಿದೆ. ನಿರಂತರ ಕಲಿಕೆಯು ಇದು ಒಳಗೊಂಡಿದೆ. ಅತಿ ವೇಗವಾಗಿ ಬದಲಾಗುತ್ತಿರುವ ತಂತ್ರಜ್ಞಾನದ ಜಗತ್ತಿನಲ್ಲಿಯೂ ನಮ್ಮ ಹಿಂದಿನ ಪರಂಪರೆ, ಜ್ಞಾನ ಅಪಾರ ಮಹತ್ವ ಪಡೆದಿದೆ.

ಶ್ರೇಷ್ಠ ಸಂತ ಭಾರತ್ರಿಹರಿ ಜ್ಞಾನದ ಬಗ್ಗೆ ಹೀಗೆ ಹೇಳಿದ್ದಾರೆ.

विद्या नाम नरस्य रूपमधिकं प्रच्छन्नगुप्तं धनम्

विद्या भोगकरी यशः सुखकरी विद्या गुरूणां गुरुः ।

विद्या बन्धुजनो विदेशगमने विद्या परं दैवतम्

विद्या राजसु पूज्यते न हि धनं विद्याविहीनः पशुः ॥

ಒಬ್ಬ ವ್ಯಕ್ತಿಯನ್ನು ಉನ್ನತಿಕರಣಗೊಳಿಸುವುದೇ ಜ್ಞಾನ ಎಂದು ಭಾರತ್ರಿಹರಿ ಅವರು ವಿವರಿಸಿದ್ದಾರೆ. ಜ್ಞಾನದ ಸಂಪತ್ತನ್ನು ಯಾರೂ ತೆಗೆದುಕೊಂಡು ಹೋಗಲು ಅಥವಾ ಕಳ್ಳತನ ಮಾಡಲು ಸಾಧ್ಯವಿಲ್ಲ. ಜ್ಞಾನವು ಸಂತೋಷವನ್ನು ನೀಡುತ್ತದೆ. ಜ್ಞಾನವು ಎಲ್ಲ ಶಿಕ್ಷಕರ ಶಿಕ್ಷಕ. ವಿದೇಶದಲ್ಲೂ ನಮ್ಮ ಸ್ನೇಹಿತ. ಜ್ಞಾನವೇ ಶ್ರೇಷ್ಠ ದೈವ. ಸಂಪತ್ತಿಗಿಂತ ಜ್ಞಾನವನ್ನು ರಾಜರು, ನಾಯಕರು ಪ್ರತಿಯೊಬ್ಬರು ಪೂಜಿಸುತ್ತಿದ್ದಾರೆ. ಜ್ಞಾನವಿಲ್ಲದ ಮನುಷ್ಯ ಪ್ರಾಣಿಗೆ ಸಮಾನ.

ಜ್ಞಾನಕ್ಕೆ ಅಂತ್ಯ ಇಲ್ಲ. ಆಳವಾದ ಗುಣಮಟ್ಟ ಮತ್ತು ಮೌಲ್ಯಗಳನ್ನು ಹೊಂದಿರುತ್ತದೆ.

विद्या ददाति विनयं विनयाद् याति पात्रताम्।

पात्रत्वाद् धनमाप्नोति धनाद्धर्मं ततः सुखम्॥

ಜ್ಞಾನವು ಪ್ರತಿಯೊಬ್ಬರನ್ನು ವಿನಯನನ್ನಾಗಿ ಮಾಡುತ್ತದೆ. ಸಂಪತ್ತು ಸೃಷ್ಟಿಗೂ ಪೂರಕವಾಗುತ್ತದೆ. ಜ್ಞಾನವಂತನಿಗೆ ಉತ್ತಮ ನಡವಳಿಕೆ ಇರುತ್ತದೆ.

ಹೀಗಾಗಿ, ಪ್ರಾಚೀನ ಪಾಠವಾದ ಸುಭಾಷಿತಣಿಯಿಂದ ಕಲಿಯುವುದು ಮುಖ್ಯವಾಗಿದೆ.

विद्या विवादाय धनं मदाय शक्तिः परेषां परिपीडनाय ।

खलस्य साधोर्विपरीतमेतत् ज्ञानाय दानाय च रक्षणाय ॥

ಮೋಸ, ವಂಚನೆ ಮಾಡುವ ಮಂದಿಗೆ ಜ್ಞಾನವು ವಾಗ್ವಾದ ಮಾಡಲು ಸೀಮಿತವಾಗಿದೆ. ‘ಸಂಪತ್ತು’ ಅಹಂಕಾರಕ್ಕೆ ಮತ್ತು ಅಧಿಕಾರಕ್ಕೆ ಮೀಸಲಾಗಿದ್ದು, ಇನ್ನೊಬ್ಬರಿಗೆ ತೊಂದರೆ ಕೊಡುವುದಾಗಿದೆ. ಆದರೆ, ಒಬ್ಬ ಅತ್ಯುತ್ತಮ ಗುಣವುಳ್ಳ ವ್ಯಕ್ತಿಯಲ್ಲಿ ಈ ಎಲ್ಲ ಅಂಶಗಳು ವ್ಯತಿರಿಕ್ತವಾಗಿವೆ. ಈ ವ್ಯಕ್ತಿಗೆ ಜ್ಞಾನವು ಎನ್ನುವುದು ವಿವೇಕವುಳ್ಳದ್ದು ಮತ್ತು ಚಾತುರ್ಯ ಹೊಂದಿರುವುದಾಗಿದೆ. ಜ್ಞಾನ ಹೊಂದಿರುವ ವ್ಯಕ್ತಿಗೆ ಸಂಪತ್ತು ಇನ್ನೊಬ್ಬರಿಗೆ ನೀಡುವುದಾಗಿದೆ ಮತ್ತು ಅಧಿಕಾರ ಎನ್ನುವುದು ದುರ್ಬಲರನ್ನು ರಕ್ಷಿಸುವುದಾಗಿದೆ.

ಕೆಲವು ದಿನಗಳ ಹಿಂದೆ ದೇಶವು 2019ರ ನವೆಂಬರ್‌ 26ರಂದು ಸಂವಿಧಾನ ದಿನವನ್ನು ಆಚರಿಸಿತು. ಮುಂದಿನ ನಾಲ್ಕು ತಿಂಗಳು ಕಾಲ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ವರ್ಷ ಸಂವಿಧಾನದಲ್ಲಿ ಉಲ್ಲೇಖಿಸಿರುವ ಮೂಲಭೂತ ಕರ್ತವ್ಯಗಳ ಕುರಿತು ಈ ವರ್ಷದ ಸಂದೇಶವಾಗಿದೆ. ನಮ್ಮ ಹಕ್ಕುಗಳ ಬಗ್ಗೆ ನಾವು ಯಾವಾಗಲೂ ಯೋಚಿಸುತ್ತೇವೆ. ನಮ್ಮ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ನಾವು ಜಾಗೃತಿ ಮೂಡಿಸಬೇಕಾಗಿದೆ.

ನಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ಮಾಡಿದರೆ ಹಕ್ಕುಗಳನ್ನು ಪಡೆಯುವುದು ಸುಲಭವಾಗಿಯೇ ಪಡೆಯುತ್ತೇವೆ ಎಂದು ಗಾಂಧೀಜಿ ಹೇಳಿದ್ದರು. ನಾವು ನಮ್ಮ ಕರ್ತವ್ಯಗಳನ್ನು ಮಾಡದೆಯೇ ಹಕ್ಕುಗಳ ಬಗ್ಗೆ ಹೆಚ್ಚು ಹೋರಾಟ ನಡೆಸುತ್ತೇವೆ. ಹೀಗಾಗಿ, ಹಕ್ಕುಗಳು ಸಹ ದೂರವಾಗುತ್ತವೆ. 1947ರಲ್ಲಿ ಮಾನವ ಹಕ್ಕುಗಳ ಕುರಿತು ಪ್ರಬಂಧ ನೀಡುವಂತೆ ಯುನೆಸ್ಕೊ ಮಹಾನಿರ್ದೇಶಕ ಜುಲಿಯನ್‌ ಹಕ್ಲ್ಸೆಯಿ ಅವರ ಕೋರಿಕೆಯನ್ನು ಗಾಂಧೀಜಿ ತಿರಸ್ಕರಿಸಿದ್ದರು. ‘ ಎಲ್ಲ ಹಕ್ಕುಗಳು ಸಹ ಗೌರವಿಸುವಂತವಾಗಿವೆ ಮತ್ತು ರಕ್ಷಿಸಬೇಕಾಗಿದೆ ಎನ್ನುವುದನ್ನು ನಾನು ಅನಕ್ಷರಸ್ಥ ತಾಯಿಯಿಂದ ಕಲಿತಿರುವೆ. ನಾವು ನಮ್ಮ ಕರ್ತವ್ಯವನ್ನು ಸಮರ್ಪಕವಾಗಿ ಪೂರೈಸಿದಾಗ ಬದುಕು ಹಕ್ಕು ಸಹ ದೊರೆಯುತ್ತದೆ’ ಎಂದು ಗಾಂಧೀಜಿ ಹೇಳಿದ್ದರು.

ಸ್ನೇಹಿತರೇ, ನಮ್ಮ ಕರ್ತವ್ಯಗಳನ್ನು ಸಮರ್ಪಕವಾಗಿ ಮತ್ತು ಸಕಾಲಿಕವಾಗಿ ಮಾಡುವ ಮೂಲಕ ಗಾಂಧೀಜಿ ಅವರ ಮೂಲಭೂತ ಪಾಠವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಈ ಮೂಲಕ, ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮ ದಿನದಂದು ವಿಶೇಷ ಗೌರವ ಸಲ್ಲಿಸಬೇಕಾಗಿದೆ. ಈ ಮಹತ್ವದ ಕೈಂಕರ್ಯವನ್ನು ಮುಂದಿನ ಪೀಳಿಗೆಯು ಅನುಸರಿಸಬೇಕಾಗಿದೆ. ನಮ್ಮ ಪರಿಸರವನ್ನು ಕಾಪಾಡಬೇಕಾಗಿದೆ. ವಿಶ್ವ ಗುರು ಭಾರತ ಎನ್ನುವುದನ್ನು ಜಗತ್ತು ಸದಾ ನೋಡಿದೆ. ಹೀಗಾಗಿ, ಪರಿವರ್ತನೆಯನ್ನು ತರಲೇಬೇಕಾಗಿದೆ.

ಹೀಗಾಗಿ, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ನನ್ನ ಮನವಿ. ‘ಕರ್ತವ್ಯ’ದ ಮೂಲ ಸಿದ್ಧಾಂತದ ಅಡಿಯಲ್ಲಿ ಸಾಂಬಲಪುರ ವಿಶ್ವವಿದ್ಯಾಲಯವನ್ನು ಉತ್ತುಂಗ ಸ್ಥಿತಿಗೆ ತಲುಪಿಸಿಬೇಕು. 2022 ಮತ್ತು 2047ರಲ್ಲಿ ಕ್ರಮವಾಗಿ 75 ಮತ್ತು 100ನೇ ಸ್ವಾತಂತ್ರ್ಯೋತ್ಸವ ಆಚರಣೆಗೆ ವಿಶ್ವವಿದ್ಯಾಲಯವು ಸಹ ಉನ್ನತ ಸ್ಥಾನದಲ್ಲಿರಬೇಕು. ಕರ್ತವ್ಯದ ಮುನ್ನೋಟ ಮತ್ತು ಅದು ಯಾವ ರೀತಿ ಕೊಡುಗೆ ನೀಡುತ್ತದೆ ಎನ್ನುವ ಬಗ್ಗೆಯೂ ನಾವು ಮುಖ್ಯವಾಗಿ ಗಮನಿಸಬೇಕು.

ವಿದ್ಯಾರ್ಥಿಗಳೇ, ನೀವು ಪದವಿ ಮತ್ತು ಪದಕಗಳನ್ನು ಪಡೆದಿದ್ದೀರಿ. ನಿಮ್ಮ ಸಾಧನೆ ಬಗ್ಗೆ ನಿಮಗೆ ಹೆಮ್ಮೆ ಇರಲಿ. ಇದೇ ವೇಳೆ, ನಿಮ್ಮ ಯಶಸ್ಸಿಗೆ ಸಹಕರಿಸಿರುವ ಪ್ರತಿಯೊಬ್ಬರ ಬಗ್ಗೆ ಕೃತಜ್ಞತೆ ಇರಲಿ.

ನೀವು ಜ್ಞಾನ, ಕಲ್ಪನೆ ಮತ್ತು ಸಂಪರ್ಕವನ್ನು ಹೊಂದಿದ್ದೀರಿ. ಇದು ನಿಮಗೆ ಕೊಡುಗೆ. ಆದರೆ, ಹಿತೋಪದೇಶದಲ್ಲಿ ಉಲ್ಲೇಖಿಸಿರುವಂತೆ ನಿಜವಾದ ಜ್ಞಾನ ವಿನೀತನನ್ನಾಗಿ ಮಾಡುತ್ತದೆ ಮತ್ತು ಮಾನವೀಯತೆಯನ್ನು ಕಲಿಸುತ್ತದೆ. ಜತೆಗೆ ವಿದುರ ನೀತಿಯು, ಕರ್ತವ್ಯ ಮಾಡದೆ ಜ್ಞಾನವಿದ್ದರೆ ನಿಷ್ಪ್ರಯೋಜಕ, ಉದ್ದೇಶವಿಲ್ಲದೆಯೇ ಕರ್ತವ್ಯ ಮಾಡಿದರೂ ವ್ಯರ್ಥ ಎನ್ನುವುದು ವಿದುರ ನೀತಿಯಾಗಿದೆ ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಿ.

असम्यगुपयुक्तं हि ज्ञानं सुकुशलैरपि ।

उपलभ्यं चाविदितं विदितं चाननुष्ठितम् ॥

ಜೀವನದ ಮಹತ್ವದ ಘಟ್ಟವನ್ನು ನೀವು ಪ್ರವೇಶಿಸುತ್ತಿದ್ದೀರಿ. ನವ ಭಾರತದಲ್ಲಿ ನೀವು ಸಾಗುತ್ತಿದ್ದೀರಿ. ಶಾಂತಿ, ಪ್ರಗತಿ ಮತ್ತು ಸಮೃದ್ಧಿಯ ಭಾರತದಲ್ಲಿ ನೀವು ಇದ್ದೀರಿ. ನಿಮಗೆ ಅಪಾರ ವಿಪುಲ ಅವಕಾಶಗಳಿವೆ. ಇವುಗಳ ನಡುವೆ, ನಿಮ್ಮ ಕರ್ತವ್ಯ, ಧರ್ಮವನ್ನು ಮರೆಯದಿರಿ. ನಮ್ಮ ಪರಂಪರೆ ಮತ್ತು ಮೌಲ್ಯಗಳಿಗೆ ಮೂಲಭೂತ ಅಂಶಗಳಾಗಿವೆ. ಇವೆಲ್ಲವೂ ಇಂದು ಬಹಳ ಪ್ರಸ್ತುತವಾಗಿವೆ.

ಬದಲಾವಣೆಯಾಗುತ್ತಿರುವ ಜಗತ್ತಿನಲ್ಲಿ ನೀವಿದ್ದೀರಿ. ಇಂದು ನೀವು ಕಲಿತದ್ದು ನಾಳೆಗೆ ವ್ಯರ್ಥವಾಗಬಹುದು. ನೀವು ಇಂದು ಮಾಡಿದ್ದು, ಜಗತ್ತಿನ ಯಾವುದಾದರೂ ಭಾಗದಲ್ಲಿ ಇನ್ನೂ ಉತ್ತಮವಾಗಿ ಮಾಡಬಹುದು. ಹೀಗಾಗಿ, ನೀವು ನಿರಂತರವಾಗಿ ಕಲಿಯುತ್ತಿರಬೇಕು. ನೀವು ಬೆಳವಣಿಗೆ ಸಾಧಿಸುತ್ತಿರಬೇಕು, ಜ್ಞಾನವನ್ನು ನಿರಂತರವಾಗಿ ಪಡೆಯುತ್ತಿರಬೇಕು.

ನಾನು ಮತ್ತೊಮ್ಮೆ ಎಲ್ಲರನ್ನೂ ಅಭಿನಂದಿಸುತ್ತೇನೆ. 2020ರ ಹೊಸ ವರ್ಷದ ಶುಭಾಶಯಗಳು

 

*****


(Release ID: 1594495) Visitor Counter : 117
Read this release in: English , Bengali , Punjabi , Tamil