ಪ್ರಧಾನ ಮಂತ್ರಿಯವರ ಕಛೇರಿ

ಅಕೌಂಟೆಂಟ್ ಜನರಲ್ ಗಳ ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ

Posted On: 20 NOV 2019 3:48PM by PIB Bengaluru

ಅಕೌಂಟೆಂಟ್ ಜನರಲ್ ಗಳ ಸಮಾವೇಶ ಉದ್ದೇಶಿಸಿ ಪ್ರಧಾನಿ ಭಾಷಣ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಕೌಂಟೆಂಟ್ ಜನರಲ್ ಹಾಗೂ ಡೆಪ್ಯೂಟಿ ಅಕೌಂಟೆಂಟ್ ಜನರಲ್ ಗಳ ಸಮಾವೇಶವನ್ನು ಉದ್ದೇಶಿಸಿ ನಾಳೆ 2019ರ ನವೆಂಬರ್ 21ರಂದು ಭಾಷಣ ಮಾಡಲಿದ್ದಾರೆ. ಭಾರತೀಯ ಲೆಕ್ಕ ಪರಿಶೋಧಕರು ಮತ್ತು ನಿಯಂತ್ರಕರ ಕಚೇರಿಗಳಲ್ಲಿ ದೇಶಾದ್ಯಂತ ಇರುವ ಅಕೌಂಟೆಂಟ್ ಜನರಲ್ ಹಾಗೂ ಡೆಪ್ಯೂಟಿ ಅಕೌಂಟೆಂಟ್ ಜನರಲ್ ಗಳನ್ನು ಉದ್ದೇಶಿ ಭಾಷಣ ಮಾಡುವ ಮುನ್ನ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮಹಾತ್ಮಾ ಗಾಂಧೀಜಿ ಅವರ ಪ್ರತಿಮೆಯನ್ನು ಉದ್ಘಾಟಿಸಲಿದ್ದಾರೆ.
ಈ ಸಮಾವೇಶದ ಘೋಷ ವಾಕ್ಯ “ಡಿಜಿಟಲ್ ಜಗತ್ತಿನಲ್ಲಿ ಲೆಕ್ಕ ಪರಿಶೋಧನೆ ಮತ್ತು ಭರವಸೆಗಳ ಪರಿವರ್ತನೆ’’ ಎಂಬುದಾಗಿದ್ದು, ಅನುಭವ ಮತ್ತು ಕಲಿಕೆಯನ್ನು ಒಟ್ಟುಗೂಡಿಸಿ ಮುಂದಿನ ಕೆಲ ವರ್ಷಗಳಲ್ಲಿ ಭಾರತದ ಲೆಕ್ಕ ಪರಿಶೋಧನೆ ಮತ್ತು ನಿಯಂತ್ರಣ ಇಲಾಖೆಯ ದಿಕ್ಯೂಚಿಯನ್ನು ರೂಪಿಸುವ ಉದ್ದೇಶವಿದೆ. ಇಂದಿನ ಕ್ಷಿಪ್ರ ನೀತಿ ಬದಲಾವಣೆ ಮತ್ತು ಸರಕಾರಿ ಆಡಳಿತದ ವಾತಾವರಣವನ್ನು ಸರಕಾರ ಹೇಗೆ ಹೆಚ್ಚಿನ ತಂತ್ರಜ್ಞಾನ ಅಳವಡಿಸಿಕೊಂಡು ಮುನ್ನಡೆಯುತ್ತಿದೆ ಎಂಬುದನ್ನಿಟ್ಟುಕೊಂಡು ಇಲಾಖೆಯನ್ನು ತಂತ್ರಜ್ಞಾನ ಆಧಾರಿತ ಸಂಸ್ಥೆಯನ್ನಾಗಿ ಪರಿವರ್ತಿಸುವ ಮಾರ್ಗೋಪಾಯಗಳ ಬಗ್ಗೆ ಸಂವಾದಗಳು, ಗುಂಪು ಚರ್ಚೆಗಳು ನಡೆಯಲಿವೆ.
ಇಲಾಖೆಯಲ್ಲಿ ಒಂದು ಐಎ ಮತ್ತು ಎಡಿ- ಒಂದು ವ್ಯವಸ್ಥೆ ಮೂಲಕ ಆಂತರಿಕವಾಗಿ ಸಹಜವಾದ ಆಡಿಟ್ ಪ್ರಕ್ರಿಯೆ ಜಾರಿಗೊಳಿಸಿದೆ. ಡಿಜಿಟಲ್ ಆಡಿಟ್ ವರದಿಯನ್ನು ಸಿದ್ಧಪಡಿಸುವುದು ಮತ್ತು ಇಂದಿನ ಸಂವಹನಾತ್ಮಕ ಪ್ರಕ್ರಿಯೆಯಲ್ಲಿ ಆಡಿಟ್ ಘಟಕಗಳಿಗೆ ಭೇಟಿ ನೀಡುವುದನ್ನು ಕಡಿಮೆಗೊಳಿಸಲು ಮತ್ತು ಪುನರ್ ಮನನ ಕಾರ್ಯಗಳತ್ತ ಇಲಾಖೆ ಸಾಗುತ್ತಿದೆ. ಜ್ಞಾನ ಸಂಪನ್ಮೂಲವನ್ನು ವೃದ್ದಿಸಲು ಐ.ಟಿ ಆಧಾರಿತ ವೇದಿಕೆಗಳು ಮತ್ತು ಜ್ಷಾನ ಆಧಾರಿತ ಸಂಸ್ಥೆಗಳ ಮೂಲಕ ಪ್ರಯತ್ನಗಳು ಸಾಗಿವೆ ಮತ್ತು ಆಡಿಟರ್ ಗಳಿಗೆ ಯಾವುದೇ ಸಮಯದಲ್ಲಿ, ಎಲ್ಲಿದ್ದರೂ ಬೇಕಾಗುವಂತಹ ಟೂಲ್ ಕಿಟ್ ಅಭಿವೃದ್ಧಿಗೊಳಿಸುವ ಅಗತ್ಯವಿದೆ. ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತದ ಆಡಿಟ್ ಮತ್ತು ಅಕೌಂಟೆಂಟ್ ಇಲಾಖೆ ಹೊಸ ಯುಗದ ತಂತ್ರಜ್ಞಾನ ಆಧಾರಿತ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ.



(Release ID: 1592748) Visitor Counter : 75