ಸಂಪುಟ

ರೇಡಿಯೋ ಮತ್ತು ಟೆಲಿವಿಷನ್ ವಲಯದಲ್ಲಿ ಭಾರತ ಮತ್ತು ವಿದೇಶಿ ಪ್ರಸಾರಕರ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ

ಪ್ರಕಟಣಾ ದಿನಾಂಕ: 09 OCT 2019 2:45PM by PIB Bengaluru

ರೇಡಿಯೋ ಮತ್ತು ಟೆಲಿವಿಷನ್ ವಲಯದಲ್ಲಿ ಭಾರತ ಮತ್ತು ವಿದೇಶಿ ಪ್ರಸಾರಕರ ನಡುವಿನ ಒಪ್ಪಂದಕ್ಕೆ ಸಂಪುಟ ಅನುಮೋದನೆ
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ರೇಡಿಯೋ ಮತ್ತು ಟೆಲಿವಿಷನ್ ವಲಯದಲ್ಲಿ ಭಾರತ ಮತ್ತು ವಿದೇಶಿ ಪ್ರಸಾರಕರ ನಡುವಿನ ಒಪ್ಪಂದಕ್ಕೆ ಘಟನೋತ್ತರ ಅನುಮೋದನೆ ನೀಡಿತು.

ಅನುಕೂಲಗಳು:

ಒಪ್ಪಂದಗಳಿಂದ ವಿದೇಶಿ ಪ್ರಸಾರಕರಿಗೆ ಈ ಕೆಳಗಿನ ರೀತಿ ಸಹಾಯಕವಾಗುತ್ತದೆ.

1. ಸಾರ್ವಜನಿಕ ಪ್ರಸಾರಕರು ಹೊಸ ದೃಷ್ಟಿಕೋನಗಳನ್ನು ಅನ್ವೇಷಿಸುವರು.

2. ಪ್ರಬಲ ಸ್ಪರ್ಧೆ ಮತ್ತು ಹೊಸ ತಂತ್ರಜ್ಞಾನಗಳೊಂದಿಗೆ ಬೇಡಿಕೆಗಳನ್ನು ಈಡೇರಿಸಲು ಹೊಸ ಕಾರ್ಯತಂತ್ರಗಳನ್ನು ರೂಪಿಸುವುದು.

3. ಮಾಧ್ಯಮ ಉದಾರವಾದ ಮತ್ತು

4. ಜಾಗತೀಕರಣ

ಪ್ರಮುಖ ಪರಿಣಾಮ:

ಕಾರ್ಯಕ್ರಮಗಳ ಪ್ರಸಾರ ಪರಸ್ಪರ ವಿನಿಯಮ ಮಾಡಿಕೊಳ್ಳಬಹುದು, ಸಹ ನಿರ್ಮಾಣದಿಂದ ದೂರದರ್ಶನ ಮತ್ತು ಆಕಾಶವಾಣಿಯ ವೀಕ್ಷಕರು/ ಕೇಳುಗರ ನಡುವೆ ಸಮಾನತೆ ಮತ್ತು ಒಳಗೊಳ್ಳುವಿಕೆ ಬೆಳೆಯುತ್ತದೆ. ತಾಂತ್ರಿಕ ಪರಿಣಿತಿಯನ್ನು ವಿನಿಯಮ ಮಾಡಿಕೊಳ್ಳುವುದು, ನೈಪುಣ್ಯತೆ ಮತ್ತು ಮಾನವ ಸಂಪನ್ಮೂಲ ತರಬೇತಿಯಿಂದಾಗಿ ಸಾರ್ವಜನಿಕ ಪ್ರಸಾರಕರು ಪ್ರಸಾರ ವಲಯದಲ್ಲಿ ಎದುರಾಗುವ ಸವಾಲುಗಳನ್ನು ಹತ್ತಿಕ್ಕಲು ಸಹಾಯಕವಾಗುತ್ತದೆ.
 

**************


(ಪ್ರಕಟಣೆ ಐ.ಡಿ.: 1587815) ವಿಸಿಟರ್ ಕೌಂಟರ್ : 152
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , Urdu , हिन्दी , Marathi , Bengali , Punjabi , Gujarati , Tamil , Telugu , Malayalam