ಪ್ರಧಾನ ಮಂತ್ರಿಯವರ ಕಛೇರಿ

ಆಯುಷ್ಮಾನ್ ಭಾರತ ಯೋಜನೆಯಿಂದ ಅಸ್ಸಾಂನ ಬಡ ರೈತನ ಜೀವ ಉಳಿಯಿತು.

ಪ್ರಕಟಣಾ ದಿನಾಂಕ: 01 OCT 2019 7:51PM by PIB Bengaluru

ಆಯುಷ್ಮಾನ್ ಭಾರತ ಯೋಜನೆಯಿಂದ ಅಸ್ಸಾಂನ ಬಡ ರೈತನ ಜೀವ ಉಳಿಯಿತು.

 

ನಗದು ರಹಿತ ವಿಮಾ ಯೋಜನೆಯ ಮೂಲಕ ಅಸ್ಸಾಂನ ಕಾಲಿತಾ ಉಚಿತ ಕ್ರಾನಿಯೋಪ್ಲ್ಯಾಸ್ಟಿ ಶಸ್ತ್ರಚಿಕಿತ್ಸೆಯನ್ನು ಮಾಡಿಸಿಕೊಳ್ಳುವಂತಾಗುತ್ತದೆ.

ಅಸ್ಸಾಂನಲ್ಲಿ ಭತ್ತ ಬೆಳೆಯುವ ಬಡ ಕೃಷಿಕರಾದ 35 ವರ್ಷದ ದ್ವಿಜೆನ್ ಕಾಲಿತಾ ಅವರ ತಲೆಗೆ ತೀವ್ರ ಪೆಟ್ಟಾಗಿತ್ತು.  ಅವರನ್ನು ಕಮ್ರಪ್ ಮೆಟ್ರೋ ಆಸ್ಪತ್ರೆಗೆ ದಾಖಲಿಸಿದಾಗ, ಅವರು ಅರೆ ಪ್ರಜ್ಞೆ ಹೊಂದಿದ್ದರು ಮತ್ತು ತೀವ್ರ ನೋವಿನಿಂದ ಬಳಲುತ್ತಿದ್ದರು.  ವಿವರವಾದ ಪರೀಕ್ಷೆಯ ನಂತರ ಅವರಿಗೆ ಸಬ್ಡ್ಯೂರಲ್ ಹೆಮಟೋಮಾ ಇದೆ ಎಂದು ಗುರುತಿಸಲಾಯಿತು ಮತ್ತು ಅವರಿಗೆ ನರಶಸ್ತ್ರಚಿಕಿತ್ಸೆ, ಕ್ರಾನಿಯೊಪ್ಲ್ಯಾಸ್ಟಿ ಮತ್ತು ಹೊರಗಿನ ಕಸಿಯ ಅಗತ್ಯವಿತ್ತು.

ಕಾಲಿತಾ ಅವರ ಆರ್ಥಿಕ ಪರಿಸ್ಥಿತಿ ದುಸ್ಥಿತಿಯಾಗಿರುವುದರಿಂದ ಅವರ ಕುಟುಂಬಕ್ಕೆ ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಅಸಾಧ್ಯವೆಂದು ತೋರುತ್ತಿತ್ತು.

ಆದರೆ, ಆಯುಷ್ಮಾನ್ ಭಾರತ - ಪಿಎಂಜೆಎವೈ (ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ) ಬಗ್ಗೆ ತಿಳಿಸಿದಾಗ ಕುಟುಂಬವು ತನ್ನ ನಿಜವಾದ ಭರವಸೆಯನ್ನು ಕಂಡುಕೊಂಡಿತು,  ಈ ಯೋಜನೆಯಡಿಯಲ್ಲಿ ಅವರು ನಿಗದಿತ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು.

ಈ ಯೋಜನೆ ತನ್ನಂತಹ ಬಡ ಜನರಿಗೆ ವರದಾನ ಎಂದು ಕಾಲಿತಾ ಅಭಿಪ್ರಾಯಪಟ್ಟಿದ್ದಾರೆ.

ಇಂದು ಅವರು ಒಬ್ಬ ಆರೋಗ್ಯವಂತ ವ್ಯಕ್ತಿಯಾಗಿದ್ದಾರೆ ಮತ್ತು ವಿಶ್ವದ ಅತಿದೊಡ್ಡ ಆರೋಗ್ಯ ಯೋಜನೆಯ ಯಶಸ್ಸನ್ನು ವಿವರಿಸಲು ಪ್ರಧಾನ ಮಂತ್ರಿಯವರನ್ನು ಭೇಟಿಯಾದ 31 ಫಲಾನುಭವಿಗಳಲ್ಲಿ ಒಬ್ಬರಾಗಿದ್ದರು.

ಸರಿಯಾಗಿ ಒಂದು ವರ್ಷದ ಹಿಂದೆ 2018 ರಲ್ಲಿ ಪ್ರಾರಂಭವಾದ ಆಯುಷ್ಮಾನ್ ಭಾರತ ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು ದೇಶದ 10.74 ಕೋಟಿ ಬಡ ಜನರಿಗೆ ವೈದ್ಯಕೀಯ ಸೌಲಭ್ಯಗಳನ್ನು ಸುಲಭವಾಗಿ ಒದಗಿಸುವ ಗುರಿಯನ್ನು ಹೊಂದಿದೆ.

ಕಳೆದ ಒಂದು ವರ್ಷದಲ್ಲಿ ಆಯುಷ್ಮಾನ್ ಭಾರತದ ಕಾರ್ಯಕ್ರಮದ ಕಾರಣದಿಂದಾಗಿ ರತನ್ ಬಾರೈ ಅವರಂತಹ 50,000 ಕ್ಕೂ ಹೆಚ್ಚು ರೋಗಿಗಳು ತಮ್ಮ ರಾಜ್ಯದ ಹೊರಗೆ ಸಿಗುವ ಉತ್ತಮ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಬಹುದು.

ಆಯುಷ್ಮಾನ್ ಭಾರತ ಪ್ರಧಾನ ಮಂತ್ರಿ ಜನ ಆರೋಗ್ಯ (ಪಿಎಂ-ಜಯ್) ಯೋಜನೆಯಲ್ಲಿ 16,085 ಆಸ್ಪತ್ರೆಗಳನ್ನು  ಸೇರಿಸಲಾಗಿದೆ, 41 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಚಿಕಿತ್ಸೆ ನೀಡಲಾಗಿದೆ ಮತ್ತು 10 ಕೋಟಿಗೂ ಹೆಚ್ಚು ಇ-ಕಾರ್ಡ್‌ಗಳನ್ನು ನೀಡಲಾಗಿದೆ.

ಆಯುಷ್ಮಾನ್ ಭಾರತದ ಅಡಿಯಲ್ಲಿ ದೇಶಾದ್ಯಂತ 20,700 ಕ್ಕೂ ಹೆಚ್ಚು ಆರೋಗ್ಯ ಮತ್ತು ಸ್ವಾಸ್ಥ್ಯ ಸೇವಾ ಕೇಂದ್ರಗಳು ಕಾರ್ಯರೂಪಕ್ಕೆ ಬಂದಿವೆ.


(ಪ್ರಕಟಣೆ ಐ.ಡಿ.: 1587164) ವಿಸಿಟರ್ ಕೌಂಟರ್ : 75
ಪ್ರಕಟಣೆಯನ್ನು ಇದರಲ್ಲಿ ಓದಿ: Assamese , English , हिन्दी , Marathi , Bengali , Punjabi , Punjabi , Tamil