ಪ್ರಧಾನ ಮಂತ್ರಿಯವರ ಕಛೇರಿ
ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರಗಳ ನಾಯಕರನ್ನು ಪ್ರಧಾನ ಮಂತ್ರಿಯವರು ಭೇಟಿಯಾದರು.
Posted On:
25 SEP 2019 3:45AM by PIB Bengaluru
ಪೆಸಿಫಿಕ್ ಸಾಗರದ ದ್ವೀಪ ರಾಷ್ಟ್ರಗಳ ನಾಯಕರನ್ನು ಪ್ರಧಾನ ಮಂತ್ರಿಯವರು ಭೇಟಿಯಾದರು.
ಭಾರತ-ಪೆಸಿಫಿಕ್ ದ್ವೀಪಗಳ ಅಭಿವೃದ್ಧಿಶೀಲ ರಾಜ್ಯಗಳ (ಪಿಎಸ್‌ಐಡಿಎಸ್) ನಾಯಕರ ಸಭೆ 24 ಸೆಪ್ಟೆಂಬರ್ 2019ರಂದು ನ್ಯೂಯಾರ್ಕ್‌ನಲ್ಲಿ ಉನ್ನತ ಮಟ್ಟದ ವಿಭಾಗದ ಯುಎನ್ಜಿಎದ 74 ನೇ ಅಧಿವೇಶನದ ಸಂದರ್ಭದಲ್ಲಿ ನಡೆಯಿತು. ಸಭೆಯಲ್ಲಿ ಫಿಜಿ, ರಿಪಬ್ಲಿಕ್ ಆಫ್ ಕಿರಿಬಾಟಿ, ರಿಪಬ್ಲಿಕ್ ಆಫ್ ಮಾರ್ಷಲ್ ದ್ವೀಪಗಳು, ಫೆಡರೇಟೆಡ್ ಸ್ಟೇಟ್ಸ್ ಆಫ್ ಮೈಕ್ರೋನೇಷಿಯಾ, ರಿಪಬ್ಲಿಕ್ ಆಫ್ ನೌರು, ರಿಪಬ್ಲಿಕ್ ಆಫ್ ಪಲಾವ್, ಸ್ವತಂತ್ರ ರಾಜ್ಯ ಪಪುವಾ ನ್ಯೂಗಿನಿಯಾ, ಸ್ವತಂತ್ರ ರಾಜ್ಯ ಸಮೋವಾ, ಸೊಲೊಮನ್ ದ್ವೀಪಗಳು, , ಟೋಂಗಾ ಸಾಮ್ರಾಜ್ಯ, ತುವಾಲು ಮತ್ತು ವನವಾಟು ಗಣರಾಜ್ಯ ಭಾಗವಹಿಸಿದ್ದವು.
ಪೆಸಿಫಿಕ್ ದ್ವೀಪ ರಾಷ್ಟ್ರಗಳೊಂದಿಗಿನ ಭಾರತದ ಸಂಬಂಧವು ಆಕ್ಟ್ ಈಸ್ಟ್ ಪಾಲಿಸಿಯ ವಿಕಾಸದೊಂದಿಗೆ ಗಟ್ಟಿಯಾಗಿದೆ, ಇದರ ಪರಿಣಾಮವಾಗಿ ಕ್ರಿಯಾಶೀಲವಾದ ಫೋರಮ್ ಫಾರ್ ಇಂಡಿಯಾ-ಪೆಸಿಫಿಕ್ ದ್ವೀಪ ಸಹಕಾರ (ಎಫ್‌ಐಪಿಐಸಿ) ಸ್ಥಾಪನೆಯಾಯಿತು. ಎಫ್‌ಐಪಿಐಸಿ ಯ ಮೊದಲ ಮತ್ತು ಎರಡನೆಯ ಆವೃತ್ತಿಗಳು ಕ್ರಮವಾಗಿ ಫಿಜಿ (2015) ಮತ್ತು ಜೈಪುರ (2016) ದಲ್ಲಿ ನಡೆದವು. ಎಫ್‌ಐಪಿಐಸಿ ಯ ಶೃಂಗಸಭೆಯಲ್ಲಿ ಪ್ರಧಾನ ಮಂತ್ರಿಯವರು ಪೆಸಿಫಿಕ್ ದ್ವೀಪ ರಾಷ್ಟ್ರಗಳ ನಿಕಟ ಪಾಲುಗಾರಿಕೆ ಹೊಂದಿರಬೇಕೆಂಬ ಭಾರತದ ಬಯಕೆ ಮತ್ತು ಅವುಗಳ ಅಭಿವೃದ್ಧಿ ಕಾರ್ಯಸೂಚಿಯನ್ನು ಮುನ್ನಡೆಸಲು ನಿಕಟವಾಗಿ ಕೆಲಸ ಮಾಡಲು ಭಾರತವು ಸಿದ್ಧವಾಗಿರುವುದನ್ನು ವ್ಯಕ್ತಪಡಿಸಿದರು. ಇದೇ ಮೊದಲ ಬಾರಿಗೆ ಪ್ರಧಾನ ಮಂತ್ರಿಯವರು ಯುಎನ್‌ಜಿಎ ಮಹಾ ಅಧಿವೇಶನದಲ್ಲಿ ಪಿಎಸ್‌ಐಡಿಎಸ್ ಮುಖಂಡರನ್ನು ಬಹುಪಕ್ಷೀಯವಾಗಿ ಭೇಟಿ ಮಾಡಿರುವರು.
ಎಸ್‌ಡಿಜಿಗಳ ಸಾಧನೆಗಾಗಿ ಅಭಿವೃದ್ಧಿ ಅನುಭವಗಳನ್ನು ಹಂಚಿಕೊಳ್ಳುವುದು, ನವೀಕರಿಸಬಹುದಾದ ಇಂಧನದಲ್ಲಿ ಸಹಕಾರವನ್ನು ಹೆಚ್ಚಿಸುವುದು, ವಿಪತ್ತಿನ ಸಂಧರ್ಭದಲ್ಲಿ ಮೂಲಸೌಕರ್ಯಕ್ಕಾಗಿ ಹೊಸದಾಗಿ ಪ್ರಾರಂಭಿಸಲಾದ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವುದು, ಸಾಮರ್ಥ್ಯ ವೃದ್ಧಿ, ಭಾರತ-ಯುಎನ್ ಅಭಿವೃದ್ಧಿ ಸಹಭಾಗಿತ್ವ ನಿಧಿಯಡಿ ಯೋಜನೆಗಳ ಅನುಷ್ಠಾನ ಸೇರಿದಂತೆ ಹಲವಾರು ವಿಷಯಗಳ ಕುರಿತು ಮತ್ತು ಭವಿಷ್ಯದ ಭಾರತ-ಪಿಎಸ್ಐಡಿಎಸ್ ಸಹಕಾರಕ್ಕಾಗಿ ಮಾರ್ಗಸೂಚಿಯ ಬಗ್ಗೆ ನಾಯಕರುಗಳು ಚರ್ಚಿಸಿದರು.
ಭಾರತ ಮತ್ತು ಪಿಎಸ್ಐಡಿಗಳು ಸಮಾನ ಮೌಲ್ಯಗಳನ್ನು ಹಂಚಿಕೊಂಡಿವೆ ಮತ್ತು ಭವಿಷ್ಯವನ್ನು ಹಂಚಿಕೊಂಡಿವೆ ಎಂದು ಪ್ರಧಾನ ಮಂತ್ರಿ ಮೋದಿಯವರು ಒತ್ತಿ ಹೇಳಿದರು. ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಜನರ ಜೀವನದ ಗುಣಮಟ್ಟದ ಸಬಲೀಕರಣ ಮತ್ತು ಸುಧಾರಣೆಗೆ ಕೊಡುಗೆ ನೀಡುವಂತೆ ಅಭಿವೃದ್ಧಿ ನೀತಿಗಳು ಸಮಗ್ರ ಮತ್ತು ಸುಸ್ಥಿರವಾಗಿರಬೇಕಾದ ಅಗತ್ಯವನ್ನು ಅವರು ಎತ್ತಿ ತೋರಿಸಿದರು. ಜಾಗತಿಕ ತಾಪಮಾನ, ಹವಾಮಾನ ಬದಲಾವಣೆಯ ಪರಿಣಾಮವನ್ನು ನಿಭಾಯಿಸಲು ಭಾರತ ಸಮಾನವಾಗಿ ಬದ್ಧವಾಗಿದೆ ಮತ್ತು ಅಗತ್ಯವಾದ ಅಭಿವೃದ್ಧಿ ಮತ್ತು ತಾಂತ್ರಿಕ ನೆರವಿನ ಮೂಲಕ ಪಿಎಸ್ಐಡಿಗಳು ತಮ್ಮ ಅಭಿವೃದ್ಧಿ ಗುರಿಗಳನ್ನು ಸಾಧಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತದೆ ಎಂದು ಅವರು ಹೇಳಿದರು.
ಹವಾಮಾನ ಬದಲಾವಣೆಯ ವಾಸ್ತವತೆಯನ್ನು ಪ್ರಧಾನ ಮಂತ್ರಿ ಮೋದಿಯವರು ಒತ್ತಿಹೇಳಿದರು ಮತ್ತು ಹವಾಮಾನ ಬದಲಾವಣೆಯ ಅನೇಕ ದುಷ್ಪರಿಣಾಮಗಳನ್ನು ತಗ್ಗಿಸಲು ಒಟ್ಟು ಶಕ್ತಿಯ ಮಿಶ್ರಣದಲ್ಲಿ ನವೀಕರಿಸಬಹುದಾದ ಶಕ್ತಿಯ ಪಾಲನ್ನು ಹೆಚ್ಚಿಸಲು ಕರೆ ನೀಡಿದರು. ಪರ್ಯಾಯ ಶಕ್ತಿಯನ್ನು ಅಭಿವೃದ್ಧಿಪಡಿಸುವಲ್ಲಿ ತನ್ನ ಅನುಭವಗಳನ್ನು ಹಂಚಿಕೊಳ್ಳಲು ಭಾರತ ಸಿದ್ಧವಾಗಿರುವುದನ್ನು ಅವರು ತಿಳಿಸಿದರು. ಈ ಪ್ರದೇಶದ ಅನೇಕ ದೇಶಗಳು ಅಂತರರಾಷ್ಟ್ರೀಯ ಸೌರ ಒಕ್ಕೂಟಕ್ಕೆ ಸೇರ್ಪಡೆಗೊಂಡಿರುವುದರಿಂದ ಮತ್ತು ಇತರರನ್ನು ಈ ಉಪಕ್ರಮಕ್ಕೆ ಸೇರಲು ಆಹ್ವಾನಿಸಿರುವುದರಿಂದ ಅವರು ತೃಪ್ತಿ ವ್ಯಕ್ತಪಡಿಸಿದರು. ವಿಪತ್ತು ಮೂಲಸೌಕರ್ಯದ ಒಕ್ಕೂಟಕ್ಕೆ (ಸಿಡಿಆರ್ ಐ) ಸೇರಲು ಪಿಎಸ್ಐಡಿಎಸ್ ನಾಯಕರನ್ನು ಪ್ರಧಾನ ಮಂತ್ರಿಯವರು ಆಹ್ವಾನಿಸಿದರು.
ಅವರ ಮೂಲಭೂತ ಮಂತ್ರವಾದ "ಸಬ್ಕಾ ಸಾಥ್, ಸಬ್ಕಾ ವಿಕಾಸ್ ಮತ್ತು ಸಬ್ಕಾ ವಿಶ್ವಾಸ್ (ಎಲ್ಲರ ಜೊತೆಗೂಡಿ, ಎಲ್ಲರ ಅಭಿವೃದ್ಧಿಗಾಗಿ ಮತ್ತು ಎಲ್ಲರ ವಿಶ್ವಾಸದಿಂದ) ತಮ್ಮ ಆಯ್ಕೆಯ ಪ್ರದೇಶದಲ್ಲಿ ಹೆಚ್ಚಿನ ಪ್ರಭಾವದ ಅಭಿವೃದ್ಧಿ ಯೋಜನೆಯ ಅನುಷ್ಠಾನಕ್ಕಾಗಿ ಪ್ರಧಾನ ಮಂತ್ರಿ ಮೋದಿಯವರು 12 ಮಿಲಿಯನ್ ಡಾಲರ್ ಅನುದಾನವನ್ನು ಘೋಷಿಸಿದರು (ಪ್ರತಿಯೊಬ್ಬರಿಗೂ 1 ಮಿಲಿಯನ್ ಡಾಲರ್) ಪಿಎಸ್ಐಡಿಎಸ್) ಇದಲ್ಲದೆ, ಪ್ರತಿ ದೇಶದ ಅವಶ್ಯಕತೆಯ ಆಧಾರದ ಮೇಲೆ ಸೌರಶಕ್ತಿ, ನವೀಕರಿಸಬಹುದಾದ ಇಂಧನ ಮತ್ತು ಹವಾಮಾನ ಸಂಬಂಧಿತ ಯೋಜನೆಗಳನ್ನು ಕೈಗೊಳ್ಳಲು ಪಿಎಸ್ಐಡಿಎಸ್ ನಿಂದ 150 ಮಿಲಿಯನ್ ಡಾಲರ್ ರಿಯಾಯಿತಿ ದರದ ಸಾಲವನ್ನು ಪಡೆಯಬಹುದು. ಎಂದು ಘೋಷಿಸಲಾಯಿತು.
ಪ್ರಸ್ತಾಪಿಸಲಾದ ತರಬೇತಿ ನೀಡಲು ತಾಂತ್ರಿಕ ತಜ್ಞರನ್ನು ನಿಯೋಜಿಸಲು, ಸಾಮರ್ಥ್ಯ ವೃದ್ಧಿಗೆ ಅಭಿವೃದ್ಧಿ ನೆರವು ನೀಡುವ ಭಾರತದ ಬದ್ಧತೆಯನ್ನು ಪ್ರಧಾನ ಮಂತ್ರಿ ಮೋದಿಯವರು ಪುನರುಚ್ಚರಿಸಿದ್ದಾರೆ ಮತ್ತು ವಿದೇಶಿ ಸೇವೆಯಲ್ಲಿ ಪೆಸಿಫಿಕ್ ದ್ವೀಪ ರಾಷ್ಟ್ರಗಳ ರಾಜತಾಂತ್ರಿಕರಿಗೆ ತರಬೇತಿ ಸೇರಿದಂತೆ ಪಾಲುದಾರ ರಾಷ್ಟ್ರಗಳು ಗುರುತಿಸಿರುವ ಆದ್ಯತೆಯ ಕ್ಷೇತ್ರಗಳಲ್ಲಿ ಐಟಿಇಸಿ ಕಾರ್ಯಕ್ರಮದಡಿಯಲ್ಲಿ ವಿಶೇಷ ಕೋರ್ಸ್ಗಳನ್ನು ಆಯೋಜಿಸಲು ಪ್ರಸ್ತಾಪಿಸಿದರು. ಆರೋಗ್ಯ ಕ್ಷೇತ್ರದಲ್ಲಿ, ‘ಇಂಡಿಯಾ ಫಾರ್ ಹ್ಯುಮಾನಿಟಿ’ ಕಾರ್ಯಕ್ರಮದಡಿಯಲ್ಲಿ ಪೆಸಿಫಿಕ್ ಪ್ರಾದೇಶಿಕ ಸ್ಥಳದಲ್ಲಿ ಜೈಪುರ ಕಾಲು ಕೃತಕ ಅಂಗ ಜೋಡಣಾ ಶಿಬಿರವನ್ನು ಆಯೋಜಿಸಲು ಸಿದ್ಧರಿರುವುದಾಗಿ ಪ್ರಧಾನ ಮಂತ್ರಿಯವರು ತಿಳಿಸಿದರು.
ಜನರಿಂದ ಜನರ ಸಂಪರ್ಕವನ್ನು ಇನ್ನಷ್ಟು ಹೆಚ್ಚಿಸಲು, ಈ ದೇಶಗಳ ಗಣ್ಯ ವ್ಯಕ್ತಿಗಳು ಭಾರತಕ್ಕೆ ಭೇಟಿ ನೀಡಬಹುದಾದ ವಿಶೇಷ ಸಂದರ್ಶನದ ಕಾರ್ಯಕ್ರಮವನ್ನು ಪ್ರಧಾನಮಂತ್ರಿಯವರು ಘೋಷಿಸಿದರು. ಪಿಐಸಿ ಪ್ರದೇಶಗಳಿಂದ ಸಂಸದೀಯ ನಿಯೋಗದ ಭೇಟಿಯನ್ನು ಭಾರತವು ಸ್ವಾಗತಿಸುತ್ತದೆ ಎಂದು ಹೇಳಿದರು. ಉನ್ನತ ಮಟ್ಟದ ಮಾತುಕತೆಯನ್ನು ಮುಂದುವರೆಸಲು, 2020 ರ ಮೊದಲಾರ್ಧದಲ್ಲಿ ಪೋರ್ಟ್ ಮೊರೆಸ್ಬಿಯಲ್ಲಿ ನಡೆಯಲಿರುವ 3 ನೇ ಎಫ್ಐಪಿಐಸಿ ಶೃಂಗಸಭೆಗೆ ಪ್ರಧಾನ ಮಂತ್ರಿಯವರು ಎಲ್ಲಾ ನಾಯಕರಿಗೆ ಆಹ್ವಾನವನ್ನು ನೀಡಿದರು.
ಪಿಎಸ್ಐಡಿಎಸ್ ನಾಯಕರು ಉಭಯ ಪಕ್ಷಗಳ ನಡುವಿನ ಮಾತುಕತೆ ಮತ್ತು ಸಹಕಾರವನ್ನು ಬಲಪಡಿಸಲು ಪ್ರದಾನ ಮಂತ್ರಿ ಮೋದಿಯವರು ಪ್ರಸ್ತಾಪಿಸಿದ ಉಪಕ್ರಮಗಳನ್ನು ಸ್ವಾಗತಿಸಿದರು ಮತ್ತು ಆಯಾ ಸರ್ಕಾರಗಳಿಂದ ಸಂಪೂರ್ಣ ಬೆಂಬಲದ ಆಶ್ವಾಸನೆಯನ್ನು ನೀಡಿದರು.
(Release ID: 1586832)
Visitor Counter : 172