ಪ್ರಧಾನ ಮಂತ್ರಿಯವರ ಕಛೇರಿ

ಹ್ಯೂಸ್ಟನ್ ನಲ್ಲಿ ಸಿಖ್ ಸಮುದಾಯದ ಸದಸ್ಯರೊಂದಿಗೆ ಪ್ರಧಾನಮಂತ್ರಿ ಸಂವಾದ

Posted On: 22 SEP 2019 7:07PM by PIB Bengaluru

ಹ್ಯೂಸ್ಟನ್ ನಲ್ಲಿ ಸಿಖ್ ಸಮುದಾಯದ ಸದಸ್ಯರೊಂದಿಗೆ ಪ್ರಧಾನಮಂತ್ರಿ ಸಂವಾದ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹ್ಯೂಸ್ಟನ್, ಟೆಕ್ಸಾಸ್ ನಲ್ಲಿ ಸಿಖ್ ಸಮುದಾಯದ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.  ಪ್ರಧಾನಮಂತ್ರಿಯವರಿಗೆ ಸಮುದಾಯದ ಸದಸ್ಯರು ಆತ್ಮೀಯ ಸ್ವಾಗತ ಕೋರಿದರು.

ಈ ಸಂವಾದದ ವೇಳೆ, ಸಮುದಾಯದ ಸದಸ್ಯರು, ಸಿಖ್ ಸಮುದಾಯ ಮತ್ತು ದೇಶದ ಸರ್ವಾಂಗೀಣ ಅಭಿವೃದ್ಧಿಗಾಗಿ ಭಾರತ ಸರ್ಕಾರ ಕೈಗೊಂಡಿರುವ ಮಹತ್ವದ ಹೆಜ್ಜೆಗಳಿಗಾಗಿ ಧನ್ಯವಾದ ಅರ್ಪಿಸಿದರು.

“ನಾನು ಹ್ಯೂಸ್ಟನ್ ನಲ್ಲಿ ಸಿಖ್ ಸಮುದಾಯದವರೊಂದಿಗೆ ಅದ್ಭುತವಾದ ಮಾತುಕತೆ ನಡೆಸಿದೆ. ಭಾರತದ ಅಭಿವೃದ್ಧಿಯ ಬಗ್ಗೆ ಅವರಿಗಿರುವ ಕಾಳಜಿ ನನಗೆ ಸಂತಸ ಉಂಟು ಮಾಡಿತು!”, ಎಂದು ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದಾರೆ.

*****



(Release ID: 1585860) Visitor Counter : 57