ಪ್ರಧಾನ ಮಂತ್ರಿಯವರ ಕಛೇರಿ

ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಪ್ರಯತ್ನಕ್ಕೆ ಪ್ರಧಾನಿ ಶ್ಲಾಘನೆ

Posted On: 07 SEP 2019 10:32AM by PIB Bengaluru

ಭಾರತದ ಬಾಹ್ಯಾಕಾಶ ವಿಜ್ಞಾನಿಗಳ ಪ್ರಯತ್ನಕ್ಕೆ ಪ್ರಧಾನಿ ಶ್ಲಾಘನೆ

 

ಆಶಾದಾಯಕವಾಗಿರಿ ಮತ್ತು ಭಾರತದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಪರಿಶ್ರಮವನ್ನು ಮುಂದುವರಿಸಿ ಎಂದು ಪ್ರೋತ್ಸಾಹಿಸಿದ ಪ್ರಧಾನಿ

 

ಬೆಂಗಳೂರಿನಲ್ಲಿ ಇಸ್ರೋ ವಿಜ್ಞಾನಿಗಳ ಜೊತೆ ಚಂದ್ರಯಾನ 2 ರ ಅವರೋಹಣಕ್ಕೆ ಸಾಕ್ಷಿಯಾಗಿದ್ದ ಪ್ರಧಾನಿ ಶ್ರೀ.ನರೇಂದ್ರ ಮೋದಿಯವರು, ಚಂದ್ರಯಾನ- 2 ಮಿಷನ್ ಇಸ್ರೋ ಪ್ರಧಾನ ಕಚೇರಿಯಲ್ಲಿನ ನಿಯಂತ್ರಣ ಕೇಂದ್ರದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಾಗಲೂ “ಭಾರತ ನಮ್ಮ ವಿಜ್ಞಾನಿಗಳ ಬಗ್ಗೆ ಹೆಮ್ಮೆಪಡುತ್ತದೆ! ಅವರು ಅತ್ಯುತ್ತಮ ಪ್ರಯತ್ನ ಮಾಡಿದ್ದಾರೆ. ಯಾವಾಗಲೂ ಭಾರತ ಹೆಮ್ಮೆ ಪಡುವಂತೆ ಮಾಡುತ್ತಾರೆ. ಇವು ಧೈರ್ಯದಿಂದಿರಬೇಕಾದ  ಕ್ಷಣಗಳು ಮತ್ತು ನಾವು ಧೈರ್ಯಶಾಲಿಗಳಾಗಿರುತ್ತೇವೆ!” ಎಂದರು.

 

ವಿಜ್ಞಾನಿಗಳ ಆತ್ಮಸ್ಥೈರ್ಯವನ್ನು ಹೆಚ್ಚಿಸುವ ವೈಯಕ್ತಿಕ ಪ್ರಯತ್ನದಲ್ಲಿ ಪ್ರಧಾನಿಯವರು, “ದೇಶವು ನಿಮ್ಮೊಂದಿಗಿದೆ, ನಾನು ನಿಮ್ಮೊಂದಿಗಿದ್ದೇನೆ. ಪ್ರಯತ್ನವು ಮತ್ತು ಪ್ರಯಾಣ ಎರಡೂ ಮೌಲ್ಯಯುತವಾಗಿದ್ದವು“ ಎಂದರು.

 

"ನೀವು ಭಾರತ ಮಾತೆಯ ವಿಜಯಕ್ಕಾಗಿ ಕೆಲಸ ಮಾಡುವವರು ಮತ್ತು ಅದಕ್ಕಾಗಿ ಹೋರಾಡುತ್ತೀರಿ ಮತ್ತು ಅವಳು ಹೆಮ್ಮೆಪಡುವಂತಹ ಮನೋಭಾವ ಮತ್ತು ದೃಢನಿಶ್ಚಯವನ್ನು ಹೊಂದಿದ್ದೀರಿ“ ಎಂದು ಪ್ರಧಾನಿ ಹೇಳಿದರು.

 

ನಿನ್ನೆ ರಾತ್ರಿ ನೀವು ಅನುಭವಿಸಿರುವ ನಿರಾಶೆ ಮತ್ತು ಭಾವನೆಗಳನ್ನು ನಾನು ಗ್ರಹಿಸಬಲ್ಲೆ. ನೌಕೆಯು ಸಂಪರ್ಕ ಕಳೆದುಕೊಂಡಾಗ ನಾನು ನಿಮ್ಮ ನಡುವೆಯೇ ಇದ್ದೆ. ಉತ್ತರಿಸಲಾಗದ ಹಲವಾರು ಪ್ರಶ್ನೆಗಳಿವೆ. ಆದರೆ ನೀವು ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳುತ್ತೀರಿ ಎಂದು ನನಗೆ ಖಾತ್ರಿಯಿದೆ. ಇದರ ಹಿಂದೆ ಕಠಿಣ ಪರಿಶ್ರಮವಿದೆ ಎಂಬುದು ನನಗೆ ತಿಳಿದಿದೆ. "

 

"ನಮ್ಮ ಪ್ರಯಾಣದಲ್ಲಿ ನಾವು ಒಂದು ಸಣ್ಣ ಹಿನ್ನಡೆ ಎದುರಿಸಿರಬಹುದು. ಆದರೆ ಇದು ನಮ್ಮ ಗುರಿ ಸಾಧಿಸಲು ನಮ್ಮ ಹುರುಪು ಮತ್ತು ಉತ್ಸಾಹವನ್ನು ಕುಂದಿಸಲು ಬಿಡುವುದಿಲ್ಲ"

 

ನಮ್ಮ ಸಂಕಲ್ಪವು ಈಗ ಬಲಿಷ್ಠಗೊಂಡಿದೆ.

 

“ನಮ್ಮ ವಿಜ್ಞಾನಿ ಸೋದರ, ಸೋದರಿಯರೊಂದಿಗೆ ಒಗ್ಗಟ್ಟಿನಿಂದ ಇಡೀ ರಾಷ್ಟ್ರವು ಕಳೆದ ರಾತ್ರಿ ಎಚ್ಚರವಾಗಿತ್ತು. ನಾವು ಚಂದ್ರನ ಮೇಲ್ಮೈಗೆ ಬಹಳ ಹತ್ತಿರ ಬಂದಿದ್ದೆವು ಮತ್ತು ಆ ಪ್ರಯತ್ನವು ಹೆಚ್ಚು ಶ್ಲಾಘನೀಯವಾದುದು “

 

"ನಮ್ಮ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ವಿಜ್ಞಾನಿಗಳ ಬಗ್ಗೆ ನಮಗೆ ಹೆಮ್ಮೆ ಇದೆ, ಅವರ ಕಠಿಣ ಪರಿಶ್ರಮ ಮತ್ತು ದೃಢ ನಿಶ್ಚಯವು ನಮ್ಮ ನಾಗರಿಕರಿಗೆ ಮಾತ್ರವಲ್ಲದೆ ಇತರ ರಾಷ್ಟ್ರಗಳಿಗೂ ಉತ್ತಮ ಜೀವನವನ್ನು ಖಾತ್ರಿಪಡಿಸಿದೆ. ಅವರ ಅನ್ವೇಷಣೆಯ ಹುರುಪಿನ ಫಲಿತಾಂಶವೇ ಹಲವಾರು ಜನರು ಉತ್ತಮ ಆರೋಗ್ಯ ಮತ್ತು ಶಿಕ್ಷಣ ಸೇರಿದಂತೆ ಉತ್ತಮ ಜೀವನ ಮಟ್ಟವನ್ನು ಪಡೆದಿದ್ದಾರೆ. ”

 

"ಸಂತೋಷಪಡಲು ಇನ್ನೂ ಅನೇಕ ಹೆಮ್ಮೆಯ ಕ್ಷಣಗಳಿವೆ ಎಂದು ಭಾರತಕ್ಕೆ ತಿಳಿದಿದೆ."

 

"ಬಾಹ್ಯಾಕಾಶ ಕಾರ್ಯಕ್ರಮದ ವಿಷಯದಲ್ಲಿ ಉತ್ತಮವಾದದ್ದು ಇನ್ನೂ ಬರಬೇಕಿದೆ"

 

“ಅನ್ವೇಷಿಸಲು ಹೊಸ ಗಡಿರೇಖೆಗಳು ಮತ್ತು ಹೋಗಲು ಹೊಸ ಸ್ಥಳಗಳಿವೆ. ನಾವು ಆ ಎತ್ತರಕ್ಕೆ ಏರುತ್ತೇವೆ ಮತ್ತು ಯಶಸ್ಸಿನ ಹೊಸ ಎತ್ತರವನ್ನು ಮುಟ್ಟುತ್ತೇವೆ. “

 

"ನಮ್ಮ ವಿಜ್ಞಾನಿಗಳಿಗೆ ನಾನು ಹೇಳಲು ಬಯಸುವುದೇನೆಂದರೆ, ಭಾರತವು ನಿಮ್ಮೊಂದಿಗಿದೆ. ನಿಮ್ಮ ಹಾಗೆ ನೀವಿರಿ, ಇದುವರೆಗೆ ಯಾರೂ, ಹಿಂದೆಂದೂ ಹೋಗದ ಸ್ಥಳಕ್ಕೆ ಕಾಲಿಡುವ ಸಾಹಸ ಮಾಡಿದ್ದೀರಿ”

 

“ನೀವು ಎಷ್ಟು ಸಾಧ್ಯವೋ ಅಷ್ಟು ಹತ್ತಿರ ಹೋಗಿದ್ದೀರಿ. ಪ್ರಯತ್ನವು ಯೋಗ್ಯವಾಗಿತ್ತು ಮತ್ತು ಪ್ರಯಾಣವೂ ಸಹ ಎಂದು ನಾನು ಹೆಮ್ಮೆಯಿಂದ ಹೇಳಬಲ್ಲೆ

 

ನಮ್ಮ ತಂಡವು ಪರಿಶ್ರಮದಿಂದ ದೂರದ ಪ್ರಯಾಣ ಮಾಡಿತು, ಆ ಪಾಠಗಳು ಯಾವಾಗಲೂ ನಮ್ಮೊಂದಿಗೆ ಉಳಿದಿರುತ್ತವೆ ”

 

"ಇವತ್ತು ನಾವು ಕಲಿತಿರುವುದರಿಂದ, ನಮಗೆ ಬಲಿಷ್ಠ ಮತ್ತು ಉತ್ತಮವಾದ ನಾಳೆ ದೊರೆಯುತ್ತದೆ"

 

“ನಮ್ಮ ಬಾಹ್ಯಾಕಾಶ ವಿಜ್ಞಾನಿಗಳ ಕುಟುಂಬಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಅವರ ಮೌನವಾದ ಆದರೆ ಅಮೂಲ್ಯವಾದ ಬೆಂಬಲ ನಮ್ಮ ಪ್ರಯತ್ನದಲ್ಲಿ ಪ್ರಮುಖ ಶಕ್ತಿಯಾಗಿದೆ. ”

 

“ಸೋದರ, ಸೋದರರೇ, ಚೇತರಿಕೆ ಮತ್ತು ಧಾರಣತ್ವ ಭಾರತದ ನೀತಿಯ ಕೇಂದ್ರವಾಗಿವೆ. ನಮ್ಮ ಅದ್ಭುತ ಇತಿಹಾಸದಲ್ಲಿ ನಾವು ನಮ್ಮನ್ನು ಪುಡಿಪುಡಿ ಮಾಡಬಹುದಾದ ಕ್ಷಣಗಳನ್ನು ಎದುರಿಸಿದ್ದೇವೆ. ಆದರೆ ನಾವು ಎಂದಿಗೂ ಎದೆಗುಂದಲಿಲ್ಲ. ಈ ಕಾರಣದಿಂದಾಗಿಯೇ ನಮ್ಮ ನಾಗರಿಕತೆಯು ಎತ್ತರಕ್ಕೇರಿದೆ"

 

 “ನಾವು ಐತಿಹಾಸಿಕ ಸಾಧನೆಗಳನ್ನು ಮಾಡಿದ್ದೇವೆ. ಇಸ್ರೋ ಸಹ ವಿಫಲತೆಗಳಿಂದ ಎದೆಗುಂದುವುದಿಲ್ಲ ಎಂದು ನನಗೆ ತಿಳಿದಿದೆ ”

 

"ಹೊಸ ಉದಯ ಮತ್ತು ಉತ್ತಮ ನಾಳೆ ಇದ್ದೇ ಇರುತ್ತದೆ. ಫಲಿತಾಂಶಗಳ ಬಗ್ಗೆ ಚಿಂತಿಸದೆ ನಾವು ಮುಂದುವರಿಯುತ್ತೇವೆ ಮತ್ತು ಅದು ನಮ್ಮ ಇತಿಹಾಸ ”

 

ನಿಮ್ಮ ಬಗ್ಗೆ ನನಗೆ ವಿಶ್ವಾಸವಿದೆ. ನಿಮ್ಮ ಕನಸುಗಳು ನನ್ನದಕ್ಕಿಂತ ಹೆಚ್ಚು. ನಿಮ್ಮ ಭರವಸೆಗಳ ಮೇಲೆ ನನಗೆ ಸಂಪೂರ್ಣ ವಿಶ್ವಾಸವಿದೆ.

 

ನಿಮ್ಮಿಂದ ಸ್ಫೂರ್ತಿ ಪಡೆಯಲು ನಾನು ನಿಮ್ಮನ್ನು ಭೇಟಿಯಾಗಿದ್ದೇನೆ. ನೀವು ಸ್ಫೂರ್ತಿಯ ಸಾಗರ ಮತ್ತು ಸ್ಫೂರ್ತಿಯ ಜೀವಂತ ಸಾಕ್ಷಿ

 

ನಾನು ನಿಮ್ಮೆಲ್ಲರನ್ನೂ ಅಭಿನಂದಿಸುತ್ತೇನೆ ಮತ್ತು ನಿಮ್ಮ ಪ್ರಯತ್ನದಲ್ಲಿ ನಿಮಗೆ ಶುಭ ಹಾರೈಸುತ್ತೇನೆ



(Release ID: 1585291) Visitor Counter : 92