ಪ್ರಧಾನ ಮಂತ್ರಿಯವರ ಕಛೇರಿ

ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿರ್ಗಮಿಸಿದ ನೃಪೇಂದ್ರ ಮಿಶ್ರಾ

Posted On: 30 AUG 2019 6:51PM by PIB Bengaluru

ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ನಿರ್ಗಮಿಸಿದ ನೃಪೇಂದ್ರ ಮಿಶ್ರಾ

 

ಪ್ರಧಾನ ಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ಜವಾಬ್ದಾರಿಯಿಂದ ಮುಕ್ತಗೊಳಿಸುವಂತೆ ಶ್ರೀ ನೃಪೇಂದ್ರ ಮಿಶ್ರಾ ಅವರು ಮನವಿ ಮಾಡಿದ್ದು, ಎರಡು ವಾರಗಳ ಕಾಲ ಮುಂದುವರೆಯುವಂತೆ ಪ್ರಧಾನ ಮಂತ್ರಿಗಳು ಅವರನ್ನು ಕೋರಿದ್ದಾರೆ.ಪ್ರಧಾನ ಮಂತ್ರಿ ಅವರು ನಿವೃತ್ತ ಐ.ಎ.ಎಸ್. ಅಧಿಕಾರಿ ಶ್ರೀ. ಪಿ.ಕೆ.ಸಿನ್ಹಾ (ಯು.ಪಿ.77) ಅವರನ್ನು ಪ್ರಧಾನ ಮಂತ್ರಿ ಕಚೇರಿಗೆ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಿಸಿದ್ದಾರೆ.

“ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಅವರಡಿಯಲ್ಲಿ ದೇಶಕ್ಕೆ ಸೇವೆ ಸಲ್ಲಿಸಿರುವುದು ಒಂದು ಗೌರವ. ಈ ಅವಕಾಶಕ್ಕಾಗಿ ಮತ್ತು ಅವರು ನನ್ನಲ್ಲಿ ಇಟ್ಟ ಸಂಪೂರ್ಣ ಭರವಸೆಗಾಗಿ, ನಾನು ಅವರಿಗೆ ಅತ್ಯಂತ ಋಣಿಯಾಗಿದ್ದೇನೆ.

ಐದು ವರ್ಷಗಳಿಗೂ ಅಧಿಕ ಕಾಲ ನನ್ನ ಪ್ರತಿಯೊಂದು ಗಂಟೆಯನ್ನು ಮತ್ತು ಚಿಂತನೆಯನ್ನು ಕೆಲಸಕ್ಕೆ ಮುಡಿಪಾಗಿಡುವ ಮೂಲಕ  ನಾನು ಕೆಲಸದಲ್ಲಿ ಸಂತೋಷವನ್ನು ಅನುಭವಿಸಿದ್ದೇನೆ. ಇದೊಂದು ತೃಪ್ತಿದಾಯಕ ಪ್ರಯಾಣ. ನಾನು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಕಾಳಜಿಯ ಕೆಲಸಗಳಿಗೆ ನನ್ನ ಬದ್ದತೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ. ಈಗ ನನಗೆ ಇಲ್ಲಿಂದ ಹೊರಗೆ ಹೋಗುವ ಸಮಯ ಬಂದಿದೆ. ನಾನು ಸರಕಾರದ ಒಳಗಿರುವ ಮತ್ತು ಹೊರಗಿರುವ  ನನ್ನೆಲ್ಲಾ ಸಹೋದ್ಯೋಗಿಗಳಿಗೆ, ಸ್ನೇಹಿತರಿಗೆ ಮತ್ತು ನನ್ನ ಕುಟುಂಬದವರಿಗೆ ನನಗೆ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸುತ್ತೇನೆ. ದೇಶವನ್ನು ಭವ್ಯ ಭವಿತವ್ಯದತ್ತ ಕೊಂಡೊಯ್ಯುವ ನಾಯಕತ್ವವನ್ನು ವಹಿಸಿರುವ ನಮ್ಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ನಾನು ಯಶಸ್ಸನ್ನು ಹಾರೈಸುತ್ತೇನೆ.” ಎಂದು ಶ್ರೀ ನೃಪೇಂದ್ರ ಮಿಶ್ರಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.(Release ID: 1583752) Visitor Counter : 29