ಪ್ರಧಾನ ಮಂತ್ರಿಯವರ ಕಛೇರಿ

ಫಿಟ್ ಇಂಡಿಯಾ ಆಂದೋಲನಕ್ಕೆ ಪ್ರಧಾನ ಮಂತ್ರಿ ಅವರಿಂದ ಚಾಲನೆ

Posted On: 29 AUG 2019 2:24PM by PIB Bengaluru

ಫಿಟ್ ಇಂಡಿಯಾ ಆಂದೋಲನಕ್ಕೆ ಪ್ರಧಾನ ಮಂತ್ರಿ ಅವರಿಂದ ಚಾಲನೆ

 

ನವ ಭಾರತ ಫಿಟ್ ಇಂಡಿಯಾ ಆಗಿರಬೇಕು ಎನ್ನುತ್ತಾರೆ ಪ್ರಧಾನ ಮಂತ್ರಿ, ನಿಮ್ಮ ಜೀವನ ವಿಧಾನ ಬದಲಾಯಿಸಿ, ದೈಹಿಕ ಕ್ಷಮತೆಯನ್ನು ದೈನಂದಿನ ಅಭ್ಯಾಸ ಮಾಡಿಕೊಳ್ಳಿ-ಭಾರತದ ಜನತೆಗೆ ಪ್ರಧಾನ ಮಂತ್ರಿ ಮನವಿ. ದೈಹಿಕ ಕ್ಷಮತೆ ನಮ್ಮ ಚಾರಿತ್ರಿಕ ಪರಂಪರೆಯ ಅಂಗವಾಗಿತ್ತು: ಪ್ರಧಾನ ಮಂತ್ರಿ. ಆರೋಗ್ಯವಂತ ವ್ಯಕ್ತಿ, ಆರೋಗ್ಯವಂತ ಕುಟುಂಬ ಮತ್ತು ಆರೋಗ್ಯವಂತ ಸಮಾಜ ನವಭಾರತವನ್ನು ಫಿಟ್ ಇಂಡಿಯಾ ಮಾಡಲು ಆವಶ್ಯಕ: ಪ್ರಧಾನ ಮಂತ್ರಿ ಶ್ರೀ ಮೋದಿ.

ರಾಷ್ಟ್ರೀಯ ಕ್ರೀಡಾ ದಿನವಾದ ಇಂದು ಹೊಸದಿಲ್ಲಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಫಿಟ್ ಇಂಡಿಯಾ ಆಂದೋಲನಕ್ಕೆ ಚಾಲನೆ ನೀಡಿದರು. ದೈಹಿಕ ಕ್ಷಮತೆಯನ್ನು ತಮ್ಮ ಜೀವನ ವಿಧಾನವನ್ನಾಗಿ ಮಾಡಿಕೊಳ್ಳುವಂತೆ ಅವರು ದೇಶದ ಜನತೆಗೆ ಮನವಿ ಮಾಡಿದರು.

ಮೇಜರ್ ಧ್ಯಾನ್ ಚಂದ್ ಅವರ ಜನ್ಮ ವರ್ಷಾಚರಣೆಯಂದು ಜನಾಂದೋಲನಕ್ಕೆ ಚಾಲನೆ ನೀಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ, ತಮ್ಮ ಆಟದಿಂದ ಮತ್ತು ತಂತ್ರಜ್ಞಾನದಿಂದ  ವಿಶ್ವವನ್ನು ರೋಮಾಂಚನಗೊಳಿಸಿದ  ಭಾರತದ ಕ್ರೀಡಾ ತಾರೆ ಮೇಜರ್ ಧ್ಯಾನ್ ಚಂದ್ ಅವರಿಗೆ ಗೌರವಾರ್ಪಣೆ ಮಾಡಿದರು. ತಮ್ಮ ಪ್ರಯತ್ನ ಮತ್ತು ಸಾಧನೆಗಳ ಮೂಲಕ ವಿಶ್ವ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಮಾಡುತ್ತಿರುವ ದೇಶದ ಕ್ರೀಡಾ ಪಟುಗಳನ್ನು ಅವರು ಅಭಿನಂದಿಸಿದರು.

“ ಅವರ ಪದಕಗಳು ಅವರ ಕಠಿಣ ಶ್ರಮದ ಫಲಿತಾಂಶ ಮಾತ್ರವಲ್ಲ ಅವು ನವ ಭಾರತದ ಹೊಸ ಹುರುಪು ಮತ್ತು ಭರವಸೆಯನ್ನು ಪ್ರತಿಬಿಂಬಿಸುತ್ತವೆ” ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

“ಫಿಟ್ ಇಂಡಿಯಾ ಆಂದೋಲನ” ರಾಷ್ಟ್ರೀಯ ಗುರಿಯಾಗಬೇಕು ಮತ್ತು ಅದರ ಆಶೋತ್ತರಗಳ ಪ್ರತಿನಿಧಿಯಾಗಬೇಕು ಎಂದ ಪ್ರಧಾನ ಮಂತ್ರಿಗಳು ರಾಷ್ಟ್ರವನ್ನು ಪ್ರೇರೇಪಿಸುವ ಪ್ರಯತ್ನವಾಗಿ ಫಿಟ್ ಇಂಡಿಯಾ ಆಂದೋಲನವನ್ನು ಸರಕಾರವೇ ಆರಂಭಿಸಬಹುದಾದರೂ ಅದನ್ನು ನಾಯಕತ್ವ ವಹಿಸಿ ಮುಂದುವರೆಸಿಕೊಂಡು ಹೊಗಬೇಕಾದವರು ಜನರು ಮತ್ತು ಅವರೇ ಅದನ್ನು ಯಶಸ್ವಿಗೊಳಿಸಬೇಕಾದವರು ಎಂದರು.

“ಯಶಸ್ಸು ದೈಹಿಕ ಕ್ಷಮತೆಯನ್ನು ಅವಲಂಬಿಸಿದೆ. ನಮ್ಮ  ಬದುಕಿನ ಯಾವುದೇ ಕ್ಷೇತ್ರದ ,ಎಲ್ಲಾ ಪ್ರತಿಮಾ ಸ್ವರೂಪಿ ಸಾಧಕರ ಯಶೋಗಾಥೆಯಲ್ಲಿ ಸಮಾನವಾದ ಒಂದಂಶವಿದೆ-ಅವರಲ್ಲಿ ಬಹುತೇಕ ಮಂದಿ ದೈಹಿಕ ಸಾಮರ್ಥ್ಯ ಹೊಂದಿದವರು ಮತ್ತು ದೈಹಿಕ ಕ್ಷಮತೆಗೆ ಹೆಚ್ಚು ಗಮನ ಕೊಡುತ್ತಿದ್ದರು ಮತ್ತು ಅದರ ಬಗ್ಗೆ ಕಾಳಜಿ ಹೊಂದಿದ್ದರು.” ಎಂದು ಪ್ರಧಾನ ಮಂತ್ರಿ ಅವರು ಹೇಳಿದರು.

“ತಂತ್ರಜ್ಞಾನ ನಮ್ಮ ದೈಹಿಕ ಸಾಮರ್ಥ್ಯವನ್ನು ಕುಂಠಿತಗೊಳಿಸಿದೆ.ಮತ್ತು ನಮ್ಮ ದೈನಂದಿನ ಕ್ಷಮತೆಯ ಅಭ್ಯಾಸದಿಂದ ನಮ್ಮನ್ನು ವಿಮುಖಗೊಳಿಸಿದೆ.ಇಂದು ನಮಗೆ ನಮ್ಮನ್ನು ದೈಹಿಕವಾಗಿ ಸಮರ್ಥರನ್ನಾಗಿಸುವ  ಸಾಂಪ್ರದಾಯಿಕ ಅಭ್ಯಾಸಗಳು ಮತ್ತು ಜೀವನ ವಿಧಾನದ ಬಗ್ಗೆ ನಮಗೆ ತಿಳಿದಿಲ್ಲ. ಕಾಲ ಕಳೆದಂತೆ ನಮ್ಮ ಸಮಾಜದಲ್ಲಿ ದೈಹಿಕ ಕ್ಷಮತೆ ಕಡಿಮೆ ಆದ್ಯತೆಯ ಕ್ಷೇತ್ರವಾಯಿತು. ಹಿಂದೆ ಜನರು ಕಿಲೋಮೀಟರುಗಟ್ಟಲೆ ನಡೆಯುತ್ತಿದ್ದರು ಅಥವಾ ಸೈಕಲ್ ತುಳಿಯುತ್ತಿದ್ದರು, ಇಂದು ನಾವು ಎಷ್ಟು ಹೆಜ್ಜೆ ನಡೆದೆವು ಎಂಬುದನ್ನು ತಿಳಿಸುವುದಕ್ಕೆ ಮೊಬೈಲ್ ಆಪ್ ಗಳು ಬಂದಿವೆ” ಎಂದು ಪ್ರಧಾನ ಮಂತ್ರಿ ಹೇಳಿದರು.

ಭಾರತದಲ್ಲಿ ಇಂದು ಜೀವನ ವಿಧಾನ ಸಂಬಂಧಿ ಖಾಯಿಲೆಗಳು ಹೆಚ್ಚುತ್ತಿವೆ, ಮತ್ತು ಅವು ಯುವ ಜನತೆಯನ್ನೂ ಬಾಧಿಸುತ್ತಿವೆ. ಮಧುಮೇಹ ಮತ್ತು ಹೈಪರ್ ಟೆನ್ಷನ್ ಖಾಯಿಲೆಗಳು ಹೆಚ್ಚುತ್ತಿದ್ದು, ಮಕ್ಕಳಲ್ಲಿಯೂ ಸಾಮಾನ್ಯವಾಗುತ್ತಿವೆ. ಜೀವನ ವಿಧಾನದಲ್ಲಿ ಸಣ್ಣದೊಂದು ಬದಲಾವಣೆ ಈ ಜೀವನ ವಿಧಾನ ಸಂಬಂಧಿ ಖಾಯಿಲೆಗಳನ್ನು ಬದಲಾಯಿಸಬಲ್ಲುದು. ಫಿಟ್ ಇಂಡಿಯಾ ಆಂದೋಲನ ಇಂತಹ ಸಣ್ಣ ಜೀವನ ವಿಧಾನ ಬದಲಾವಣೆಯನ್ನು ತರುವ ಪ್ರಯತ್ನ ಎಂದೂ ಪ್ರಧಾನ ಮಂತ್ರಿ ಅವರು ವಿವರಿಸಿದರು.

ಯಾವುದೇ ವೃತ್ತಿಯಲ್ಲಿರುವ ವ್ಯಕ್ತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ದೃಢವಾಗಿದ್ದರೆ  ತಮ್ಮ ವೃತ್ತಿಯಲ್ಲಿ ದಕ್ಷತೆಯನ್ನು ಸಾಧಿಸಬಹುದು ಎಂದು ನುಡಿದ ಪ್ರಧಾನ ಮಂತ್ರಿ ಅವರು ದೈಹಿಕ ಕ್ಷಮತೆ ಇದ್ದರೆ, ಆಗ ನೀವು ಮಾನಸಿಕವಾಗಿ ದೃಢವಾಗಿರುತ್ತೀರಿ. ಕ್ರೀಡೆಯು ದೈಹಿಕ ಕ್ಷಮತೆಯಲ್ಲಿ ನೇರ ಸಂಬಂಧ ಹೊಂದಿದೆ, ಆದರೆ ಫಿಟ್ ಇಂಡಿಯಾ ಆಂದೋಲನ ದೈಹಿಕ ಕ್ಷಮತೆಯನ್ನು ಮೀರಿದುದಾಗಿದೆ ಎಂದರು. ದೈಹಿಕ ಕ್ಷಮತೆ ಬರೇ ಒಂದು ಪದ ಪುಂಜವಲ್ಲ, ಅದು ಆರೋಗ್ಯಪೂರ್ಣ ಮತ್ತು ಸಮೃದ್ಧ ಜೀವನದ ಆಧಾರಸ್ತಂಭ . ನಾವು ನಮ್ಮ ದೇಹಗಳನ್ನು ಯುದ್ದಕ್ಕೆ ಸಜ್ಜುಗೊಳಿಸಿಕೊಳ್ಳುತ್ತಿರುವಾಗ , ನಾವು ನಮ್ಮ ದೇಶವನ್ನು ಉಕ್ಕಿನಂತೆ ಬಲಿಷ್ಟಗೊಳಿಸುತ್ತೇವೆ. ದೈಹಿಕ ಕ್ಷಮತೆ ನಮ್ಮ ಚಾರಿತ್ರಿಕ ಆಡಳಿತದ ಒಂದಂಗ. ಭಾರತದ ಪ್ರತಿಯೊಂದು ಮೂಲೆಯಲ್ಲೂ ಆಟಗಳನ್ನು , ಕ್ರೀಡೆಗಳನ್ನು ಆಡಲಾಗುತ್ತದೆ. ದೇಹದ ಮೇಲೆ ಕೆಲಸ ಮಾಡುವುದರಿಂದ , ಅದು ಮನಸ್ಸಿಗೆ ತರಬೇತಿ ನೀಡುತ್ತದೆ. ಮತ್ತು ದೇಹದ ಭಾಗಗಳ ನಡುವೆ ಸಮನ್ವಯ ಹಾಗು ಗಮನವನ್ನು ಹೆಚ್ಚಿಸುತ್ತದೆ. ಆರೋಗ್ಯವಂತ ವ್ಯಕ್ತಿ, ಆರೋಗ್ಯವಂತ ಕುಟುಂಬ ಮತ್ತು ಆರೋಗ್ಯವಂತ ಸಮಾಜ ನವಭಾರತವನ್ನು ಫಿಟ್ ಇಂಡಿಯಾ ಮಾಡುವುದಕ್ಕೆ ಅವಶ್ಯ ಎಂದು ಪ್ರಧಾನ ಮಂತ್ರಿ ಶ್ರೀ ಮೋದಿ ಹೇಳಿದರು.

 “ಸ್ವಸ್ಥ ವ್ಯಕ್ತಿ, ಸ್ವಸ್ಥ ಪರಿವಾರ್ ಔರ್ ಸ್ವಸ್ಥ ಸಮಾಜ್, ಯೆಹಿ ನಯಾ ಭಾರತ್ ಕೋ ಶ್ರೇಷ್ಟ ಭಾರತ್ ಬನಾನೆ ಕಾ ರಾಸ್ತಾ ಹೈ. ಇಂದು , ರಾಷ್ಟ್ರೀಯ ಕ್ರೀಡಾ ದಿನದಂದು ನಾವು ಫಿಟ್ ಇಂಡಿಯಾ ಆಂದೋಲನವನ್ನು ಬಲಪಡಿಸಲು ಪ್ರತಿಜ್ಞೆ ಕೈಗೊಳ್ಳೋಣ ಎಂದೂ ಪ್ರಧಾನ ಮಂತ್ರಿ ಹೇಳಿದರು.



(Release ID: 1583579) Visitor Counter : 213