ಸಂಪುಟ

ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆಗೆ ಸಂಪುಟ ಅನುಮೋದನೆ 

Posted On: 28 AUG 2019 7:42PM by PIB Bengaluru

ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಅಂತಾರಾಷ್ಟ್ರೀಯ ಕೇಂದ್ರ ಸ್ಥಾಪನೆಗೆ ಸಂಪುಟ ಅನುಮೋದನೆ 
 

ನ್ಯೂಯಾರ್ಕ್ ನಲ್ಲಿ 2019ರ ಸೆಪ್ಪೆಂಬರ್ 23ರಂದು ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಶೃಂಗಸಭೆ ವೇಳೆ ಪ್ರಧಾನಿ ಅವರಿಂದ ಸಿ ಡಿ ಆರ್ ಐ ಉದ್ಘಾಟನೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ ವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯ ಅಂತಾರಾಷ್ಟ್ರೀಯ ಕೇಂದ್ರ(ಸಿ ಡಿ ಆರ್ ಐ) ಸ್ಥಾಪನೆಗೆ ಹಾಗೂ ನವದೆಹಲಿಯಲ್ಲಿ ಅದಕ್ಕೆ ಅಗತ್ಯ ಸಚಿವಾಲಯ ಕಚೇರಿ ಹೊಂದಲು ಘಟನೋತ್ತರ ಅನುಮೋದನೆ ನೀಡಿದೆ. ಈ ಪ್ರಸ್ತಾವವನ್ನು ಪ್ರಧಾನಮಂತ್ರಿಗಳು 2019ರ ಆಗಸ್ಟ್ 13ರಂದು ಅನುಮೋದಿಸಿದ್ದರು.

ಅಮೆರಿಕ ನ್ಯೂಯಾರ್ಕ್ ನಲ್ಲಿ 2019ರ ಸೆಪ್ಟೆಂಬರ್ 23ರಂದು ನಡೆಯಲಿರುವ ವಿಶ್ವಸಂಸ್ಥೆಯ ಹವಾಮಾನ ಕ್ರಿಯಾ ಶೃಂಗಸಭೆ ವೇಳೆ ಸಿ ಡಿ ಆರ್ ಐ ಅನ್ನು ಉದ್ಘಾಟಿಸಲು ಉದ್ದೇಶಿಸಲಾಗಿದೆ. ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಇದನ್ನು ಆಯೋಜಿಸಿದ್ದು, ಈ ಶೃಂಗಸಭೆಯಲ್ಲಿ ಅತಿ ದೊಡ್ಡ ಸಂಖ್ಯೆಯ ರಾಷ್ಟ್ರಗಳ ಮುಖ್ಯಸ್ಥರು ಸೇರಿ, ಹವಾಮಾನ ವೈಪರೀತ್ಯ ಮತ್ತು ಅದರಿಂದಾಗುವ ವಿಪತ್ತುಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಸಾಮಾನ್ಯ ಬದ್ಧತೆಗಳ ಬಗ್ಗೆ ಚರ್ಚಿಸಲಾಗುವುದು ಮತ್ತು ಸಿ ಡಿ ಆರ್ ಐ ಗೆ ಬೇಕಾದ ಉನ್ನತ ಮಟ್ಟದ ದೃಷ್ಟಿಕೋನವನ್ನು ಒದಗಿಸಿಕೊಡಲಾಗುವುದು.

ಈ ಅನುಮೋದನೆಯೊಂದಿಗೆ ಈ ಕೆಳಗಿನ ಕ್ರಮಗಳನ್ನು ಕೈಗೊಳ್ಳಲಾಗುವುದು

1. ನವದೆಹಲಿಯಲ್ಲಿ ಸಹಾಯಕ ಸಚಿವಾಲಯ ಕಚೇರಿ ಒಳಗೊಂಡಂತೆ ಅಂತಾರಾಷ್ಟ್ರೀಯ ಸಿ ಡಿ ಆರ್ ಐ ಸ್ಥಾಪಿಸುವುದು. 

2. ಸಿ ಡಿ ಆರ್ ಐ ಗೆ ಸಚಿವಾಲಯ ಸ್ಥಾಪಿಸುವುದು ಮತ್ತು ಅದನ್ನು ಸೊಸೈಟಿಗಳ ನೋಂದಣಿ ಕಾಯ್ದೆ 1860ರಡಿ ನವದೆಹಲಿಯಲ್ಲಿ ‘ಸಿ ಡಿ ಆರ್ ಐ ಸೊಸೈಟಿ’ ಅಥವಾ ಲಭ್ಯತೆ ಆಧರಿಸಿ ಇತರೆ ಹೆಸರಿನಲ್ಲಿ ನೋಂದಣಿ ಮಾಡುವುದು. ಸಿ ಡಿ ಆರ್ ಐ ಸೊಸೈಟಿಯ ಉಪಬಂಧ ಹಾಗೂ ಉಪ ನಿಯಮಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ(ಎನ್ ಡಿ ಎಂ ಎ) ಮುಂದಿನ ದಿನಗಳಲ್ಲಿ ಸಿದ್ಧಪಡಿಸಲಿದೆ ಮತ್ತು ಅಂತಿಮಗೊಳಿಸಲಿದೆ.

3. ಭಾರತ ಸರ್ಕಾರ 480 ಕೋಟಿ ರೂಪಾಯಿಗಳು(ಅಂದಾಜು 70 ಮಿಲಿಯನ್ ಅಮೆರಿಕನ್ ಡಾಲರ್)ಅನ್ನು ಸಿ ಡಿ ಆರ್ ಐ ಗೆ ಆವರ್ತನಿಧಿ ರೂಪದಲ್ಲಿ ನೀಡಲು ತಾತ್ವಿಕ ಒಪ್ಪಿಗೆ ನೀಡಲಾಗಿದೆ. ಆ ನಿಧಿಯನ್ನು ಸದ್ಯ ಚಾಲ್ತಿಯಲ್ಲಿರುವ ಸಂಶೋಧನಾ ಯೋಜನೆಗಳು, ತಾಂತ್ರಿಕ ಸಹಕಾರ ಕಾರ್ಯಗಳಿಗೆ ಸಚಿವಾಲಯ ಕಚೇರಿ ಸ್ಥಾಪನೆಗೆ ಮತ್ತು 2019-20ರಿಂದ 2023-24ರ ವರೆಗೆ ಅಂದರೆ ಐದು ವರ್ಷಗಳ ಕಾಲ ತಗುಲಲಿರುವ ವೆಚ್ಚಗಳಿಗೆ ಬಳಕೆ ಮಾಡಿಕೊಳ್ಳಲಾಗುವುದು.

4. ಪರಿಷ್ಕೃತ ಆವೃತ್ತಿಯ ಚಾರ್ಟೆಡ್ ಡಾಕ್ಯೂಮೆಂಟ್ (ಒಪ್ಪಂದ ದಾಖಲೆ) ಸಿ ಡಿ ಆರ್ ಐ ನ ಮೂಲ ದಾಖಲೆಯಾಗಲಿದೆ. ಆ ಚಾರ್ಟರ್ ಅನ್ನು ಎನ್ ಡಿ ಎಂ ಎನ್ ಸಂಭಾವ್ಯ ಸದಸ್ಯ ರಾಷ್ಟ್ರಗಳಿಂದ ಮಾಹಿತಿ ಪಡೆದು, ವಿದೇಶಾಂಗ ವ್ಯವಹಾರದ ಸಚಿವಾಲಯದೊಡನೆ ಸಮಾಲೋಚಿಸಿ, ಅಂತಿಮಗೊಳಿಸಲಾಗುವುದು. 

ಪ್ರಮುಖ ಪರಿಣಾಮ:

ಸಿ ಡಿ ಆರ್ ಐ ವಿಪತ್ತು ಮತ್ತು ಹವಾಮಾನ ಸ್ಥಿತಿ ಸ್ಥಾಪಕ ಮೂಲಸೌಕರ್ಯದ ನಾನಾ ಆಯಾಮಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲು ಮತ್ತು ವಿನಿಮಯ ಮಾಡಿಕೊಳ್ಳಲು ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ. ಇದರಡಿ ನಾನಾ ವಿಭಾಗಕ್ಕೆ ಸಂಬಂಧಿಸಿದ ತಾಂತ್ರಿಕ ತಜ್ಞರು ಒಂದೆಡೆ ಸೇರಲಿದ್ದಾರೆ. ಆ ಮೂಲಕ ಹಲವು ರಾಷ್ಟ್ರಗಳಿಗೆ ತಮ್ಮ ಸಾಮರ್ಥ್ಯ ಮತ್ತು ಪದ್ಧತಿಗಳನ್ನು ಮೇಲ್ದರ್ಜೆಗೇರಿಸಿಕೊಳ್ಳಲು ಮತ್ತು ಆ ದೇಶಗಳಿಗಿರುವ ಅಪಾಯ ಮತ್ತು ಆರ್ಥಿಕ ಅಗತ್ಯತೆಗಳಿಗೆ ಅನುಗುಣವಾಗಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಬಹುದಾಗಿದೆ.

ಈ ಉಪಕ್ರಮದಿಂದಾಗಿ ಸಮಾಜದ ಎಲ್ಲ ವರ್ಗಗಳಿಗೂ ಅನುಕೂಲವಾಗಲಿದೆ. ವಿಪತ್ತುಗಳಿಂದ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವರ್ಗ, ಮಹಿಳೆಯರು ಮತ್ತು ಮಕ್ಕಳು ಹೆಚ್ಚು ಪರಿಣಾಮಗಳನ್ನು ಎದುರಿಸುತ್ತಾರೆ. ಹಾಗಾಗಿ ಜ್ಞಾನ ಹಾಗೂ ಪದ್ಧತಿಗಳ ಸುಧಾರಣೆಯಿಂದಾಗಿ ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ವೃದ್ಧಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ಹೆಚ್ಚಿನ ವಿಪತ್ತು ಅಪಾಯವಿರುವ ಪ್ರದೇಶಗಳಿಗೂ ಇದು ಅನುಕೂಲ ಕಲ್ಪಿಸಲಿದೆ. ಭಾರತದಲ್ಲಿ ಈಶಾನ್ಯ ಮತ್ತು ಹಿಮಾಲಯ ಪ್ರದೇಶಗಳು ಹೆಚ್ಚು ಭೂಕಂಪಕ್ಕೆ ಆಗಾಗ್ಗೆ ತುತ್ತಾಗುತ್ತಿರುತ್ತವೆ. ಕರಾವಳಿ ಪ್ರದೇಶಗಳು ಚಂಡಮಾರುತ ಮತ್ತು ಸುನಾಮಿಗಳನ್ನು ಎದುರಿಸಿದರೆ ಮಧ್ಯ ಭಾಗ ಹೆಚ್ಚು ಬರ ಸ್ಥಿತಿಯನ್ನು ಎದುರಿಸುತ್ತಿದೆ.

ಆವಿಷ್ಕಾರ :

ನಾನಾ ಬಗೆಯ ವಿಪತ್ತು ಅಪಾಯಗಳನ್ನು ತಪ್ಪಿಸಲು ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ನಾನಾ ರಾಷ್ಟ್ರಗಳಲ್ಲಿ ಅವುಗಳ ವಿಪತ್ತು ಅಪಾಯ ಮತ್ತು ಅಭಿವೃದ್ಧಿ ನಿಟ್ಟಿನಲ್ಲಿ ಬೇರೆ ಬೇರೆ ರೀತಿಯಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಅಭಿವೃದ್ಧಿ ಹೊಂದಿರುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳು ಸಣ್ಣ ಹಾಗೂ ದೊಡ್ಡ ಆರ್ಥಿಕತೆಯ ರಾಷ್ಟ್ರಗಳು ಸೇರಿದಂತೆ ಬಹುತೇಕ ರಾಷ್ಟ್ರಗಳು ಸಾಮಾನ್ಯವಾಗಿ ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಕೊರತೆಯನ್ನು ಜಾಗತಿಕವಾಗಿ ಎದುರಿಸುತ್ತಿವೆ. ಕೆಲವು ರಾಷ್ಟ್ರಗಳು, ಹೆಚ್ಚಿನ ಅಪಾಯದ ಅಥವಾ ಸಾಧಾರಣ ಅಪಾಯದ ಮುನ್ಸೂಚನೆ ಅರಿತಿರುವ ರಾಷ್ಟ್ರಗಳು ಶೀಘ್ರ ಮತ್ತು ಆಧುನಿಕ ರೀತಿಯಲ್ಲಿ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುತ್ತಿವೆ. ಸೆಂದೈ ಒಪ್ಪಂದ, ಸುಸ್ಥಿರ ಅಭಿವೃದ್ಧಿ ಗುರಿಗಳು(ಎಸ್ ಡಿ ಜಿ) ಮತ್ತು ಹವಾಮಾನ ವೈಪರೀತ್ಯ ವಿಷಯಗಳಲ್ಲಿ ಮೂಲಸೌಕರ್ಯವೃದ್ಧಿಗೆ ಕೆಲವು ಖಚಿತ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯಕ್ಕೆ ಆದ್ಯತೆ ನೀಡುವುದರಿಂದ ಸಹಜವಾಗಿ ಸೆಂದೈ ಒಪ್ಪಂದದಂತೆ ನಷ್ಟ ತಗ್ಗಿಸುವ ಗುರಿ, ಸಿ ಡಿ ಆರ್ ಐ ಯ ಹಲವು ಗುರಿಗಳನ್ನು ಸಾಧಿಸಲು ಮತ್ತು ಹವಾಮಾನ ವೈಪರೀತ್ಯ ಕ್ರಮಗಳನ್ನು ಅಳವಡಿಸಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ವಿಪತ್ತು ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯವೃದ್ಧಿಗೆ ಜಾಗತಿಕ ಕೇಂದ್ರ ಅತ್ಯಂತ ಅಗತ್ಯ ಎಂಬುದು ಸ್ಪಷ್ಟವಾಗಿದೆ.

ಭಾರತದ ನಾನಾ ಭಾಗಗಳ ಬಗೆಗೆ ನೈಸರ್ಗಿಕ ವಿಪತ್ತುಗಳ ಮುನ್ಸೂಚನೆ ಪ್ರಕಟಿಸುವುದರಿಂದ ಸಾರ್ವಜನಿಕರು ತಮ್ಮ ಪ್ರಾಂತ್ಯಗಳಲ್ಲಿ ಇರುವ ಅಪಾಯಗಳನ್ನು ಅರಿತೊಕೊಳ್ಳಲು ನೆರವಾಗುತ್ತದೆ ಮತ್ತು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಆಡಳಿತದಿಂದ ಅಂತಹ ವಿಪತ್ತುಗಳನ್ನು ನಿಯಂತ್ರಿಸಲು ಅಗತ್ಯ ಸಿದ್ಧತೆ ಹಾಗೂ ಕ್ರಮಗಳನ್ನು ಕೈಗೊಳ್ಳುವ ಬೇಡಿಕೆಗಳನ್ನು ಒಡ್ಡಲು ಸಹಾಯಕವಾಗುತ್ತದೆ.
 

**************



(Release ID: 1583399) Visitor Counter : 136