ಸಂಪುಟ

ಅಂತರ-ರಾಜ್ಯ ನೀರಿನ ವಿವಾದಗಳಿಗೆ ಸಮರ್ಥ ಮತ್ತು ವೇಗವಾದ ಪರಿಹಾರ 

Posted On: 10 JUL 2019 6:06PM by PIB Bengaluru

ಅಂತರ-ರಾಜ್ಯ ನೀರಿನ ವಿವಾದಗಳಿಗೆ ಸಮರ್ಥ ಮತ್ತು ವೇಗವಾದ ಪರಿಹಾರ 

ಅಂತರ ರಾಜ್ಯ ನದಿ ನೀರು ವಿವಾದಗಳ (ತಿದ್ದುಪಡಿ) ಮಸೂದೆ, 2019ಕ್ಕೆ ಸಂಪುಟದ ಅನುಮೋದನೆ 

 

ಪ್ರಧಾನಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಂತರರಾಜ್ಯ ನದಿಗಳ ನೀರು ಮತ್ತು ಅದರ ನದಿ ಕಣಿವೆಯ ನೀರಿಗೆ ಸಂಬಂಧಿಸಿದ ವಿವಾದಗಳ ಅಂತರ್-ರಾಜ್ಯ ನದಿ ನೀರಿನ ವಿವಾದ (ತಿದ್ದುಪಡಿ) ಮಸೂದೆ 2019 ಕ್ಕೆ ಅನುಮೋದನೆ ನೀಡಿದೆ.

ಇದು ಅಂತರರಾಜ್ಯ ನದಿ ನೀರಿನ ವಿವಾದಗಳ ತೀರ್ಪನ್ನು ಮತ್ತಷ್ಟು ಸುಗಮಗೊಳಿಸುತ್ತದೆ. ಅಂತರ ರಾಜ್ಯ ನದಿ ನೀರಿನ ವಿವಾದಗಳ ತೀರ್ಪನ್ನು ಸುವ್ಯವಸ್ಥಿತಗೊಳಿಸುವ ಉದ್ದೇಶದಿಂದ 1956 ರ ಅಂತರ ರಾಜ್ಯ ನದಿ ನೀರಿನ ವಿವಾದ ಕಾಯ್ದೆಗೆ ಈ ಮಸೂದೆ ತಿದ್ದುಪಡಿ ತರಲಿದೆ. 

ಪರಿಣಾಮ:

ತೀರ್ಪಿನ ಕಟ್ಟುನಿಟ್ಟಿನ ಸಮಯವನ್ನು ನಿಗದಿಪಡಿಸುವುದರ ಜೊತೆಗೆ ವಿವಿಧ ನ್ಯಾಯಪೀಠಗಳ ಏಕ ನ್ಯಾಯಮಂಡಳಿಯ ರಚನೆ, ಅಂತರರಾಜ್ಯ ನದಿಗಳಿಗೆ ಸಂಬಂಧಿಸಿದ ವಿವಾದಗಳನ್ನು ತ್ವರಿತವಾಗಿ ಪರಿಹರಿಸಲು ಕಾರಣವಾಗುತ್ತದೆ. ಮಸೂದೆಯಲ್ಲಿನ ತಿದ್ದುಪಡಿಗಳು ಅದನ್ನು ಉಲ್ಲೇಖಿಸಿರುವ ನೀರಿನ ವಿವಾದಗಳ ತೀರ್ಪನ್ನು ವೇಗಗೊಳಿಸುತ್ತವೆ.

ಅಂತರರಾಜ್ಯ ನದಿಗಳಲ್ಲಿನ ಯಾವುದೇ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಯಾವುದೇ ರಾಜ್ಯ ಸರ್ಕಾರದಿಂದ ಈ ಕಾಯ್ದೆಯಡಿ ಯಾವುದೇ ವಿನಂತಿಯನ್ನು ಸ್ವೀಕರಿಸಿದಾಗ ಮತ್ತು ಮಾತುಕತೆಗಳಿಂದ ನೀರಿನ ವಿವಾದವನ್ನು ಬಗೆಹರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರವು ಅಭಿಪ್ರಾಯಪಟ್ಟಾಗ, ಕೇಂದ್ರ ಸರ್ಕಾರವು ನೀರಿನ ವಿವಾದದ ತೀರ್ಪುಗಾಗಿ ನದಿ ನೀರು ನ್ಯಾಯಮಂಡಳಿಯನ್ನು ರಚಿಸುತ್ತದೆ.



(Release ID: 1578306) Visitor Counter : 322