ರೈಲ್ವೇ ಸಚಿವಾಲಯ

ರೈಲ್ವೇ  ಕ್ಷೇತ್ರದಲ್ಲಿ ಭಾರತ ಮತ್ತು ಬೊಲಿವಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಸಮ್ಮತಿ

Posted On: 12 JUN 2019 8:14PM by PIB Bengaluru

ರೈಲ್ವೇ  ಕ್ಷೇತ್ರದಲ್ಲಿ ಭಾರತ ಮತ್ತು ಬೊಲಿವಿಯಾ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ಸಚಿವ ಸಂಪುಟದ ಸಮ್ಮತಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಗೆ ಭಾರತ ಮತ್ತು ಬೊಲಿವಿಯಾ ನಡುವೆ ಬಯೋಕ್ಯಾನಿಕ್ ರೈಲ್ವೇಸ್ ಸಮನ್ವಯ ಕಾರಿಡಾರ್ ಯೋಜನೆ ಸಹಕಾರ ಕುರಿತ ತಿಳಿವಳಿಕೆ ಒಪ್ಪಂದದ ಬಗ್ಗೆ ವಿವರಣೆ ನೀಡಲಾಯಿತು.

ಈ ತಿಳಿವಳಿಕೆ ಒಪ್ಪಂದವು, ಮಾಹಿತಿಯ ವಿನಿಮಯ, ತಜ್ಞರ ಸಭೆಗಳು, ವಿಚಾರ ಸಂಕಿರಣಗಳು, ತಾಂತ್ರಿಕ ಭೇಟಿಗಳು ಮತ್ತು ಜಂಟಿಯಾಗಿ ಸಮ್ಮತಿಸಲಾದ ಸಹಕಾರ ಯೋಜನೆಗಳ ಅನುಷ್ಠಾನಕ್ಕೆ ಅವಕಾಶ ಕಲ್ಪಿಸುತ್ತದೆ.  

ಈ ತಿಳಿವಳಿಕೆ ಒಪ್ಪಂದಕ್ಕೆ 2019ರ ಮಾರ್ಚ್ ನಲ್ಲಿ ಅಂಕಿತ ಹಾಕಲಾಗಿತ್ತು.

 

****



(Release ID: 1574181) Visitor Counter : 51


Read this release in: English , Urdu , Hindi , Tamil , Telugu