ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಡಾ. ಹರ್ಷವರ್ಧನ್ ಅಧಿಕಾರ ಸ್ವೀಕಾರ
ಪ್ರಕಟಣಾ ದಿನಾಂಕ:
03 JUN 2019 5:27PM by PIB Bengaluru
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಡಾ. ಹರ್ಷವರ್ಧನ್ ಅಧಿಕಾರ ಸ್ವೀಕಾರ
ಅಧಿಕಾರ ಸ್ವೀಕಾರಕ್ಕೆ ನಿರ್ಮಾಣ ಭವನಕ್ಕೆ ಸೈಕಲ್ ನಲ್ಲಿ ಪಯಣ
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿ ಡಾ.ಹರ್ಷವರ್ಧನ್ ಅವರು ಇಂದು ನಿರ್ಮಾಣ ಭವನದಲ್ಲಿ ಅಧಿಕಾರ ಸ್ವೀಕರಿಸಿದರು. ನಿರ್ಮಾಣಭವನಕ್ಕೆ ಸೈಕಲ್ ನಲ್ಲಿ ಬಂದ ಸಚಿವರು ತಮ್ಮ ಸೈಕಲ್ ಸವಾರಿಯನ್ನು ದಿನದ ಒಳ್ಳೆಯ ಪರಿಸರದ ಕೆಲಸ ಎಂದು ಹೇಳೀದರು.
ಪ್ರಧಾನಿ ಶ್ರೀ ನರೇಂದ್ರ ಮೋದಿಯವರಿಗೆ ವಂದನೆ ಸಲ್ಲಿಸಿದ ಅವರು, ದೇಶದ ಜನತೆಯ ಆರೋಗ್ಯ ಮೋದಿ ಸರ್ಕಾರದ ಪ್ರಮುಖ ಆದ್ಯತೆ ಎಂದರು. ಜನರು ಧನಾತ್ಮಕ ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ಆರೋಗ್ಯವಾಗಿರಲು ಉತ್ತೇಜಿಸುವ ಮತ್ತು ರೋಗ ತಡೆ ತಂತ್ರಗಳನ್ನು ಬಲಪಡಿಸುವ ಬಗ್ಗೆ ಸರ್ಕಾರ ಗಮನಹರಿಸಲಿದೆ ಎಂದು ಅವರು ಹೇಳಿದರು.
ಆಯುಷ್ಮಾನ್ ಭಾರತ್ ಕುರಿತು ಮಾತನಾಡಿದ ಡಾ.ಹರ್ಷವರ್ಧನ್ ಅವರು, ಸದ್ಯ PMJAY ನ ಪಟ್ಟಿಯಿಂದ ಹೊರಗುಳಿದಿರುವ ಬಡವರು ಹಾಗೂ ದುರ್ಬಲ ವರ್ಗದ ಜನರನ್ನು ಇದರಲ್ಲಿ ಸೇರಿಸಲು ನಾವು ಅರ್ಹತಾ ಮಾನದಂಡವನ್ನು ವಿಸ್ತರಿಸುತ್ತೇವೆ ಎಂದರು. ಈ ಯೋಜನೆಯಲ್ಲಿ ಹೆಚ್ಚಿನ ಖಾಸಗಿ ಆಸ್ಪತ್ರೆಗಳನ್ನು ಸೇರಿಸಲು ಪ್ರಯತ್ನಗಳನ್ನು ಮಾಡಲಾಗುವುದು. ಆಯುಷ್ಮಾನ್ ಭಾರತ್ ಅನುಷ್ಠಾನದಲ್ಲಿರುವ ಸಮಸ್ಯೆಗಳನ್ನು ಪರಿಹರಿಸಿ ಜನ ಸಾಮಾನ್ಯರಿಗೆ ಸುಲಭವಾಗಿ ದೊರೆಯುವಂತೆ ಮಾಡಲಾಗುವುದು ಎಂದರು.
ಜನರ ಒಳಗೊಳ್ಳುವಿಕೆಯ ಮೂಲಕ ಆರೋಗ್ಯವನ್ನು 'ಜನಾಂದೋಲನ'ವನ್ನಾಗಿ ಮಾಡಲು ಒತ್ತು ನೀಡಲಾಗುವುದು.. “ಎಲ್ಲರಿಗೂ ಆರೋಗ್ಯ” ಗುರಿಯನ್ನು ಮುಟ್ಟುವ ಸಾಮರ್ಥ್ಯವನ್ನು ಭಾರತ ಹೊಂದಿದೆ ಎಂದು ಡಾ. ಹರ್ಷ ವರ್ಧನ್ ಹೇಳಿದರು.
ಎಂಸಿಐನ ಪುನರ್ ಸಂಘಟನೆ ಸೇರಿದಂತೆ ಬಾಕಿ ಉಳಿದಿರುವ ಮಸೂದೆಗಳನ್ನು ತೆಗೆದುಕೊಳ್ಳುವ ಮೂಲಕ ವೈದ್ಯಕೀಯ ಶಿಕ್ಷಣದಲ್ಲಿ ಸುಧಾರಣೆಗಳನ್ನು ತರಲಾಗುವುದು ಎಂದು ಆರೋಗ್ಯ ಸಚಿವರು ಹೇಳಿದರು. ಶಿಶು ಮರಣ ಪ್ರಮಾಣ ಹಾಗೂ ತಾಯಂದಿರ ಮರಣ ಪ್ರಮಾಣ ಹೆಚ್ಚಿರುವ ರಾಜ್ಯಗಳನ್ನು ಕೇಂದ್ರೀಕರಿಸಿ ಸಭೆಗಳನ್ನು ನಡೆಸುವಂತೆ ಅವರು ಅಧಿಕಾರಿಗಳಿಗೆ ಸೂಚಿಸಿದರು.
(ಪ್ರಕಟಣೆ ಐ.ಡಿ.: 1573321)
ವಿಸಿಟರ್ ಕೌಂಟರ್ : 71