ಸಂಪುಟ

ಅಟಲ್ ಅನ್ವೇಷಣಾ ಅಭಿಯಾನ ಮುಂದುವರಿಕೆಗೆ ಸಂಪುಟದ ಅನುಮೋದನೆ

Posted On: 07 MAR 2019 2:39PM by PIB Bengaluru

ಅಟಲ್ ಅನ್ವೇಷಣಾ ಅಭಿಯಾನ ಮುಂದುವರಿಕೆಗೆ ಸಂಪುಟದ ಅನುಮೋದನೆ 
 

ಪ್ರಧಾನಮಂತ್ರಿ ಶ್ರಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಅಟಲ್ ಅನ್ವೇಷಣಾ ಅಭಿಯಾನ (AIM) ದ ಮುಂದುವರಿಕೆಗೆ ಅನುಮೋದನೆ ನೀಡಿದೆ. ಶಾಲಾ ಮಟ್ಟದಲ್ಲಿ ಅತ್ಯಂತ ಯಶಸ್ಸು ಕಂಡಿರುವ ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳನ್ನು 10,000 ಶಾಲೆಗಳಿಗೆ ವಿಸ್ತರಿಸಲು 2019-20 ರವರೆಗೆ 1000 ಕೋ.ರೂ.ಗಳ ವೆಚ್ಚಕ್ಕೂ ಅನುಮೋದನೆ ನೀಡಲಾಗಿದೆ. 

ವಿವರಗಳು 

· ಅಟಲ್ ಅನ್ವೇಷಣಾ ಅಭಿಯಾನ ದೇಶದಲ್ಲಿ ಅನ್ವೇಷಣೆಯನ್ನು ಪ್ರೋತ್ಸಾಹಿಸಲು ಹಾಗೂ ಬೆಂಬಲ ನೀಡಲು ವಿವಿಧ ಕಾರ್ಯಕ್ರಮಗಳನ್ನು ಹೊಂದಿದೆ. 

· ಸಾವಿರಾರು ಶಾಲೆಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್ಸ್ (ATLS) ಗಳನ್ನು ಸ್ಥಾಪಿಸಲಾಗಿದೆ. ವಿಶ್ವ ದರ್ಜೆಯ ಅಟಲ್ ಇನ್ಕುಬೇಷನ್ ಸೆಂಟರ್ (AIC) ಮತ್ತು ಅಟಲ್ ಸಮುದಾಯ ಅನ್ವೇಷಣಾ ಕೇಂದ್ರ (ACIC) ಗಳನ್ನು ವಿಶ್ವವಿದ್ಯಾಲಯಗಳು ಮತ್ತು ಕೈಗಾರಿಕೆಗಳಿಗಾಗಿ ಸ್ಥಾಪಿಸಲಾಗಿದೆ. 

· ರಾಷ್ಟ್ರೀಯ ಪ್ರಸ್ತುತತೆ ಮತ್ತು ಸಾಮಾಜಿಕ ಪ್ರಾಮುಖ್ಯತೆಯ ಕ್ಷೇತ್ರಗಳಲ್ಲಿ ಉತ್ಪನ್ನ ಅಭಿವೃದ್ಧಿಯನ್ನು ಅಟಲ್ ನವಭಾರತ ಸವಾಲುಗಳ (ANIC) ಮೂಲಕ ಉತ್ತೇಜಿಸಲಾಗುತ್ತಿದೆ. 

ಹಣಕಾಸು ಪರಿಣಾಮಗಳು 

· ಪ್ರತೀ ಅಟಲ್ ಟಿಂಕರಿಂಗ್ ಲ್ಯಾಬ್ ಮೊದಲ ವರ್ಷ 12 ಲಕ್ಷ ರೂಪಾಯಿ ಅನುದಾನ ಪಡೆಯುತ್ತದೆ. ಅಟಲ್ ಟಿಂಕರಿಂಗ್ ಲ್ಯಾಬ್ ನ ಸಲಕರಣೆಗಳು ಹಾಗೂ ಕಾರ್ಯಾಚರಣೆಯ ವೆಚ್ಚವಾಗಿ ಮುಂದಿನ ನಾಲ್ಕು ವರ್ಷಗಳವರೆಗೆ ಪ್ರತೀ ವರ್ಷ 2 ಲಕ್ಷ ರೂಪಾಯಿಗಳವರೆಗೆ ಪಡೆಯುತ್ತದೆ. 

· ಆಯ್ಕೆ ಮಾಡಲಾದ ಅಟಲ್ ಇನ್ಕುಬೇಷನ್ ಸೆಂಟರ್ ಪರಾಮರ್ಶೆ ಮತ್ತು ಯೋಜಿತ ಮೈಲಿಗಲ್ಲುಗಳ ಸಾಧನೆಯ ಆಧಾರದಲ್ಲಿ 3-5 ವರ್ಷಗಳವರೆಗೆ 10 ಕೋ.ರೂ.ಗಳವರೆಗೆ ಅನುದಾನ ಪಡೆಯುತ್ತದೆ. 

· ಎ.ಎನ್.ಐ.ಸಿ ಗಳ ಅಡಿಯಲ್ಲಿ ಅನ್ವೇಷಕರು ವಾಣಿಜ್ಯೀಕರಣ ಮತ್ತು ತಂತ್ರಜ್ಞಾನ ಅಳವಡಿಕೆಗಾಗಿ 1 ಕೋ.ರೂ.ಗಳವರೆಗೂ ಅನುದಾನ ಪಡೆಯುತ್ತಾರೆ. 

ಪರಿಣಾಮ: 

· ಈ ಅಭಿಯಾನವು ಅಟಲ್ ಟಿಂಕರಿಂಗ್ ಲ್ಯಾಬ್ಸ್ (ATL) ಮತ್ತು ಅಟಲ್ ಇನ್ಕುಬೇಷನ್ ಸೆಂಟರ್ (AIC) ಗಳಂತಹ ಅನೇಕ ಮುಕ್ತ ಹಾಗೂ ಭವಿಷ್ಯದ ಉಪಕ್ರಮಗಳನ್ನು ಕೈಗೊಂಡಿದೆ. 

· ಅಟಲ್ ಅನ್ವೇಷಣಾ ಅಭಿಯಾನದ ನೆರವು ಹಾಗೂ ತಂತ್ರಜ್ಞಾನದ ಬೆಂಬಲದೊಂದಿಗೆ ಭಾರತ ಸರ್ಕಾರದ ಹಲವು ಸಚಿವಾಲಯಗಳು/ಇಲಾಖೆಗಳು ಅನ್ವೇಷಣೆ ಸಂಬಂಧಿ ಚಟುವಟಿಕೆಗಳನ್ನು ಆರಮಭಿಸಿವೆ. 

· ಅಟಲ್ ಟಿಂಕರಿಂಗ್ ಲ್ಯಾಬ್ ಕಾರ್ಯಕ್ರಮದಡಿ, 2020ರ ಹೊತ್ತಿಗೆ 10,000 ಶಾಲೆಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. 

· 100 ಕ್ಕೂ ಹೆಚ್ಚು ಅಟಲ್ ಇನ್ಕ್ಯುಬೇಷನ್ ಕೇಂದ್ರಗಳು (AIC) ದೇಶಾದ್ಯಂತ ಸ್ಥಾಪನೆಯಾಗಲಿವೆ, ಮೊದಲ ಐದು ವರ್ಷಗಳಲ್ಲಿ ಕನಿಷ್ಠ 50-60 ಸ್ಟಾರ್ಟಪ್ ಉದ್ಯಮಗಳಿಗೆ ಬೆಂಬಲ ನೀಡುತ್ತವೆ. 

· ತಮ್ಮ ಅನ್ವೇಷಣೆಯನ್ನು ಉತ್ಪನ್ನೀಕರಣಗೊಳಿಸುವ 100 ಕ್ಕೂ ಹೆಚ್ಚು ಅನ್ವೇಷಕರು/ಸ್ಟಾರ್ಟಪ್ ಬೆಂಬಲ ಪಡೆಯುವ ನಿರೀಕ್ಷೆಯಿದೆ. 

· ಸಚಿವಾಲಯಗಳ ಮೂಲಕ ಬೆಂಬಲಿಸುವ ಇತರ ಕಾರ್ಯಕ್ರಮಗಳು ಇನ್ನಷ್ಟು ಫಲಾನುಭವಿಗಳನ್ನು ಹೊಂದಿರಲಿವೆ 

· ಪ್ರತೀ ಇನ್ಕುಬೇಟರ್ ಪ್ರತಿ ನಾಲ್ಕು ವರ್ಷಗಳಲ್ಲಿ 50-60 ತಂತ್ರಜ್ಞಾನ ಆಧರಿತ ನಾವೀನ್ಯ ಸ್ಟಾರ್ಟಪ್ ಗಳನ್ನು ಪೋಷಿಸುವ ನಿರೀಕ್ಷೆ ಇದೆ. 

· 100ಕ್ಕೂ ಹೆಚ್ಚು ಇನ್ಕುಬೇಟರ್ ಗಳ ಸ್ಥಾಪನೆಯು 5000-6000 ನಾವೀನ್ಯ ಸ್ಟಾರ್ಟಪ್ ಗಳನ್ನು ಪೋಷಿಸಲಿವೆ. ಹೊಸ ಇನ್ಕುಬೇಟರ್ ಗಳ ಸ್ಥಾಪನೆಯು ಇದನ್ನು ಮತ್ತಷ್ಟು ಹೆಚ್ಚಿಸಲಿದೆ. 

· ಇಂತಹ ನಾವೀನ್ಯ ಸ್ಟಾರ್ಟಪ್ ಗಳಿಂದ ಉದ್ಯೋಗ ಸೃಷ್ಟಿಯ ಸಾಮರ್ಥ್ಯವು ಹೆಚ್ಚೇ ಇರುತ್ತದೆ. 

ಅನುಷ್ಠಾನ ತಂತ್ರ ಮತ್ತು ಗುರಿಗಳು: 

ಅಟಲ್ ಅನ್ವೇಷಣಾ ಅಭಿಯಾನವು ಮುಕ್ತ, ಸ್ಪರ್ಧಾತ್ಮಕ ಆನ್ ಲೈನ್ ಅರ್ಜಿಗಳ ಮೂಲಕ ಫಲಾನುಭವಿಯನ್ನು ಆಯ್ಕೆ ಮಾಡಿ , ಅನುದಾನವನ್ನು ನೇರವಾಗಿ ವಿತರಿಸುತ್ತದೆ. ಇದಲ್ಲದೇ, ದೇಶಾದ್ಯಂತ ಎ.ಟಿ.ಎಲ್ ಮತ್ತು ಎ.ಐ.ಸಿ ಗಳಲ್ಲಿ ಸಾಮರ್ಥ್ಯ ನಿರ್ಮಾಣಕ್ಕಾಗಿ ತನ್ನ ತಜ್ಞರು ಹಾಗೂ ಜಾಲಗಳನ್ನು ಎ.ಐ.ಎಮ್ ಬಳಕೆ ಮಾಡುತ್ತದೆ. ಹೆಚ್ಚುವರಿಯಾಗಿ, ಕಾರ್ಪೋರೇಟ್ ಮತ್ತು ಅಂತರರಾಷ್ಟ್ರೀಯ ಪಾಲುದಾರರು ಎ.ಐ.ಎಮ್ ಫಲಾನುಭವಿಗ ಳೊಂದಿಗೆ ಸಂಪರ್ಕ ಹೊಂದುತ್ತಾರೆ, ಶಿಕ್ಷಣ, ತಂತ್ರಜ್ಞಾನ ಮತ್ತು ತಂತ್ರಜ್ಞಾನದ ನಡುವಿನ ಮಾಹಿತಿ ಮತ್ತು ತಂತ್ರಜ್ಞಾನದ ಹರಿವನ್ನು ಖಚಿತಪಡಿಸಿಕೊಳ್ಳಲು ಮತ್ತು ಎ.ಐ.ಎಮ್ ಯ ಉಪಕ್ರಮಗಳ ಯಶಸ್ಸನ್ನು ಖಚಿತಪಡಿಸಿಕೊಳ್ಳಲು ಮಾರ್ಗದರ್ಶನದ ಬೆಂಬಲವನ್ನು ಒದಗಿಸುತ್ತಾರೆ. ಇದುವರೆಗೆ ದೇಶಾದ್ಯಂತ 5441 ಅಟಲ್ ಟಿಂಕರಿಂಗ್ ಲ್ಯಾಬ್ ಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 623 ಜಿಲ್ಲೆಗಳ 2171 ಎ.ಟಿ.ಎಲ್ ಗಳು ತಮ್ಮ ಶಾಲೆಗಳಲ್ಲಿ ಪ್ರಯೋಗಾಲಯಗಳನ್ನು ಸ್ಥಾಪಿಸಲು ಮೊದಲ ಕಂತಿನ ಅನುದಾನವನ್ನು ಪಡೆದಿವೆ. ದೇಶಾದ್ಯಂತ 101 ಅಟಲ್ ಇನ್ಕುಬೇಷನ್ ಕೇಂದ್ರಗಳನ್ನು ಆಯ್ಕೆ ಮಾಡಲಾಗಿದೆ. ಇವುಗಳಲ್ಲಿ 31 ಮೊದಲ ಕಂತಿನ ಅನುದಾನ ಪಡೆದುಕೊಂಡಿವೆ. 

24 ಅಟಲ್ ನವಭಾರತ ಸವಾಲುಗಳು (ANIC) ಗಳನ್ನು ಆರಂಭಿಸಲಾಗಿದ್ದು, 800ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಪ್ರತೀ ಅಟಲ್ ನವಭಾರತ ಸವಾಲುಗಳು 2-3 ವಿಜೇತರನ್ನು ಆಯ್ಕೆ ಮಾಡಲಾಗುವುದು. ಪರಾಮರ್ಶೆ ಮತ್ತು ಯೋಜಿತ ಮೈಲಿಗಲ್ಲುಗಳ ಸಾಧನೆಯ ಸಾಕ್ಷ್ಯದ ಆಧಾರದಲ್ಲಿ 1 ಕೋ.ರೂ.ವರೆಗೆ ಮೂರು ಕಂತುಗಳಲ್ಲಿ ಅನುದಾನ ಪಡೆಯಲಿದ್ದಾರೆ. 

ಎ.ಟಿ.ಎಲ್ ಗಳ ಯಶಸ್ಸನ್ನು ಖಾತ್ರಿಪಡಿಸಿಕೊಳ್ಳಲು ಬದಲಾವಣೆ ಕಾರ್ಯಕ್ರಮದ ಎ.ಐ.ಎಮ್ ಮಾರ್ಗದರ್ಶಕರನ್ನು ಕಡ್ಡಾಯ ಮಾಡಲಾಗಿದೆ. ಈ ಕಾರ್ಯಕ್ರಮದ ಮೂಲಕ ವಿವಿಧ ವೃತ್ತಿ ಹಿನ್ನೆಲೆಯ ಉತ್ತಮ ಅರ್ಹತೆಯ ಮಾರ್ಗದರ್ಶಕರನ್ನು ಆಯ್ಕೆ ಮಾಡಲಾಗುವುದು. ಇವರು ಎ.ಟಿ.ಎಲ್ ವಿದ್ಯಾರ್ಥಿಗಳಿಗೆ ವಿವಿಧ ಕೌಶಲ್ಯಗಳ ಬಗ್ಗೆ ಮಾರ್ಗದರ್ಶನ ನೀಡುತ್ತಾರೆ. ಎ.ಐ.ಎಮ್ ನಿಗದಿಪಡಿಸಿದ ರೀತಿಯಲ್ಲಿ ಎ.ಟಿ.ಎಲ್ ಗಳು ಕಾರ್ಯಾಚರಿಸುತ್ತಿರುವುದನ್ನು ಖಾತ್ರಿಪಡಿಸಿಕೊಳ್ಳಲು ಈ ಮಾರ್ಗದರ್ಶಕರು ಶಾಲಾ ಆಡಳಿತದೊಂದಿಗೆ ಸಹಯೋಗದಲ್ಲಿರುತ್ತಾರೆ. ಇದುವರೆಗೆ, ಸುಮಾರು 1,300 ಎ.ಟಿ.ಎಲ್ ಗಳಲ್ಲಿ 2,500ಕ್ಕೂ ಹೆಚ್ಚು ಮಾರ್ಗದರ್ಶಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. 

ಹಿನ್ನೆಲೆ: 

ದೇಶಾದ್ಯಂತ ಶಾಲೆ, ವಿಶ್ವವಿದ್ಯಾಲಯ, ಸಂಶೋಧನಾ ಸಂಸ್ಥೆ, ಎಮ್.ಎಸ್.ಎಮ್.ಇ ಮತ್ತು ಕೈಗಾರಿಕಾ ಮಟ್ಟಗಳಲ್ಲಿ ಅನ್ವೇಷಣೆ ಮತ್ತು ಉದ್ಯಮಶೀಲತೆಯನ್ನು ಸೃಷ್ಟಿಸಿ, ಉತ್ತೇಜಿಸುವುದು ಎ.ಐ.ಎಮ್ ನ ಉದ್ದೇಶ. 2015ರ ಬಜೆಟ್ ಭಾಷಣದಲ್ಲಿ ಗೌರವಾನ್ವಿತ ಹಣಕಾಸು ಸಚಿವರ ಘೋಷಣೆಯಂತೆ ನೀತಿ ಆಯೋಗದ ಅಡಿಯಲ್ಲಿ ಈ ಅಭಿಯಾನವನ್ನು ಸ್ಥಾಪಿಸಲಾಗಿದೆ. 


(Release ID: 1568266) Visitor Counter : 175