ಸಂಪುಟ
ಭೋಪಾಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ಕ್ಕೆ ಸೇರಿದ 106.76 ಎಕರೆ ಭೂಮಿಯನ್ನು ಮಧ್ಯಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ
Posted On:
07 MAR 2019 2:44PM by PIB Bengaluru
ಭೋಪಾಲ್ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ಕ್ಕೆ ಸೇರಿದ 106.76 ಎಕರೆ ಭೂಮಿಯನ್ನು ಮಧ್ಯಪ್ರದೇಶ ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆ, ಭೋಪಾಲ್ ನ ಗಾಂಧಿನಗರದಲ್ಲಿರುವ ವಿಮಾನ ನಿಲ್ದಾಣದಲ್ಲಿ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಎಎಐ)ಕ್ಕೆ ಸೇರಿದ 106.76 ಎಕರೆ ಭೂಮಿಯನ್ನು ಮಧ್ಯಪ್ರದೇಶ ಸರ್ಕಾರ(ಎಂಪಿ)ಕ್ಕೆ ಒತ್ತುವರಿ ಮಾಡಿಕೊಂಡಿದ್ದು, ಅದನ್ನು ಹಸ್ತಾಂತರಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಿತು. ಇದಕ್ಕೆ ಬದಲಾಗಿ ಮಧ್ಯಪ್ರದೇಶ ಸರ್ಕಾರ ಈಗಾಗಲೇ 96.56 ಎಕರೆ ಭೂಮಿಯನ್ನು ಹಸ್ತಾಂತರಿಸಿದೆ. ಉಳಿದ 10.20 ಎಕರೆ(ಅಂದಾಜು) ಭೂಮಿಯನ್ನು ಮಧ್ಯಪ್ರದೇಶ ಸರ್ಕಾರ, ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಹಸ್ತಾಂತರಿಸಲಿದೆ.
ಪ್ರಯೋಜನ:-
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ 106.76 ಎಕರೆ ಭೂಮಿಯನ್ನು ಮಧ್ಯಪ್ರದೇಶ ಸರ್ಕಾರ ಒತ್ತುವರಿ ಮಾಡಿಕೊಂಡಿದೆ. ಅದಕ್ಕೆ ಬದಲಾಗಿ ಮಧ್ಯಪ್ರದೇಶ ಸರ್ಕಾರ ಅಂದಾಜು 96.56 ಎಕರೆ ಭೂಮಿಯನ್ನು ನೀಡಲು ಒಪ್ಪಿದೆ. ಈ ಭೂಮಿ ಹಾಲಿ ಭೋಪಾಲ್ ವಿಮಾನ ನಿಲ್ದಾಣವಿರುವ ಜಾಗಕ್ಕೆ ಹೊಂದಿಕೊಂಡಿದ್ದು, ಅದನ್ನು ಪ್ರಾಧಿಕಾರ ತನ್ನ ವೈಮಾನಿಕ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದಾಗಿ ಹಾಲಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೇರಿದ 106.76 ಎಕರೆ ಜಾಗವನ್ನು ಮಧ್ಯಪ್ರದೇಶ ಸರ್ಕಾರದ ಸರ್ಕಾರಿ ಕಚೇರಿಗಳು, ಸಾರ್ವಜನಿಕ ಸೌಲಭ್ಯಗಳು ಮತ್ತು ವಲಸೆ ಸಿಂಧಿ ಕುಟುಂಬಗಳ ಪುನರ್ ವಸತಿಗೆ ಬಳಕೆ ಮಾಡಿಕೊಳ್ಳಲಾಗಿದ್ದು, ಆ ಜಾಗವನ್ನು ಸರ್ಕಾರಕ್ಕೆ ಬಿಟ್ಟುಕೊಟ್ಟಂತಾಗುತ್ತದೆ. ಅದಕ್ಕೆ ಬದಲಾಗಿ ರಾಜ್ಯ ಸರ್ಕಾರ ಭೋಪಾಲ್ ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ 96.56 ಎಕರೆ ಭೂಮಿಯನ್ನು ವೈಮಾನಿಕ ಉದ್ದೇಶಗಳಿಗೆ ನೀಡಲು ಒಪ್ಪಿದೆ. ರಾಜ್ಯ ಸರ್ಕಾರ ನೀಡಲು ಒಪ್ಪಿರುವ ಜಾಗದಲ್ಲಿ ವಿಮಾನ ನಿಲ್ದಾಣ ಪ್ರಾಧಿಕಾರ ತನ್ನ ವೈಮಾನಿಕ ಸಂಬಂಧಿ ಚಟುವಟಿಕೆಗಳಿಗೆ ನ್ಯಾಯಯುತವಾಗಿ ಬಳಸಿಕೊಳ್ಳಬಹುದಾಗಿದೆ. ಆದ್ದರಿಂದ ಈ ಅನುಮೋದನೆ ಸಾರ್ವಜನಿಕವಾಗಿ ಬಹು ಉಪಯೋಗವಾಗಲಿದೆ.
(Release ID: 1568253)
Visitor Counter : 104