ಪ್ರಧಾನ ಮಂತ್ರಿಯವರ ಕಛೇರಿ

ನಿರ್ಮಾಣ ತಂತ್ರಜ್ಞಾನ ಭಾರತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ.

Posted On: 02 MAR 2019 1:55PM by PIB Bengaluru

ನಿರ್ಮಾಣ ತಂತ್ರಜ್ಞಾನ ಭಾರತ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಭಾಷಣ.

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೊದಿ ಅವರು ಇಂದು ವಿಜ್ಞಾನ ಭವನದಲ್ಲಿ ಆಯೋಜನೆ ಆಗಿರುವ ಕನ್ಸ್ಟ್ರ್ ಕ್ಷನ್ ಟೆಕ್ನಾಲಜಿ ಇಂಡಿಯಾ (ನಿರ್ಮಾಣ ತಂತ್ರಜ್ಞಾನ ಭಾರತ) ಕಾರ್ಯಕ್ರಮ 2019 ರಲ್ಲಿ ಭಾಗವಹಿಸಿ ಮಾತನಾಡಿದರು.

 

ಕೇಂದ್ರ ಸರಕಾರದ ಬದ್ದತೆಯಿಂದಾಗಿ ಪ್ರತೀ ಕುಟುಂಬವೂ ಮನೆ ಹೊಂದುವ ಕನಸು ನನಸಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ಭಾರತದಲ್ಲಿ ತ್ವರಿತಗತಿಯಿಂದ ನಡೆಯುತ್ತಿರುವ ನಗರೀಕರಣದಿಂದಾಗಿ ಜಾಗತಿಕ ವಸತಿ ತಂತ್ರಜ್ಞಾನ ಸವಾಲು ಅವಶ್ಯವಾಯಿತು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನಾ, ಹೃದಯ್, ಮತ್ತು ಅಮೃತ್ ಸಹಿತ ಹಲವು ಯೋಜನೆಗಳ ಅಂಶಗಳು ವಸತಿ ಕ್ಷೇತ್ರವನ್ನು ಪರಿವರ್ತಿಸುವ ಧೋರಣೆಯನ್ನು ಹೊಂದಿವೆ ಎಂದ ಅವರು ವಿವಿಧ ಭೌಗೋಳಿಕ ಪರಿಸ್ಥಿತಿಗಳಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕೂಡಾ ಒಂದು ಸವಾಲಾಗಿದೆ ಎಂದರು.

 

ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ, ರಿಯಲ್ ಎಸ್ಟೇಟ್ ವಲಯ , ಕೌಶಲ್ಯ ಅಭಿವೃದ್ದಿ ಮತ್ತು ವಸತಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಬಹಳ ಒತ್ತು ನೀಡಲಾಗಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

 

2022 ರೊಳಗಾಗಿ ಪ್ರತೀ ಭಾರತೀಯರೂ ಸರಿಯಾದ ವಸತಿ ಹೊಂದಿರಬೇಕು ಎಂಬ ತಮ್ಮ ಕನಸನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು ತಮ್ಮ ಅವಧಿಯಲ್ಲಿ 1.3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಎಂದರು. ಬಡವರಿಗೆ ಸಹಾಯ ಮಾಡಲು ಮತ್ತು ಸಾಮರ್ಥ್ಯ್ವನ್ನು ವರ್ಧಿಸಲು ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಬೇಕು ಎಂದವರು ಕರೆ ನೀಡಿದರು.

 

ತೆರಿಗೆ ಮತ್ತು ಇತರ ಪ್ರೋತ್ಸಾಹಧನದ ಮೂಲಕ ಜನರು ಮನೆಗಳನ್ನು ಖರೀದಿಸುವುದನ್ನು ಸರಕಾರ ಸರಳಗೊಳಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ ) ಕಾಯ್ದೆ (ರೇರಾ) ಯು ಡೆವಲಪರ್ ಗಳಲ್ಲಿ ಬಳಕೆದಾರರ ವಿಶ್ವಾಸವನ್ನು ವೃದ್ದಿಸಿದೆ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆಯನ್ನು ತಂದಿದೆ ಎಂದರು. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೌಶಲ್ಯಯುಕ್ತ ಮಾನವ ಸಂಪನ್ಮೂಲದ ಬೃಹತ್ ಸಮೂಹವನ್ನು ಸೃಜಿಸಲಾಗಿದೆ. ನಿರ್ಮಾಣ ಕ್ಷೇತ್ರದಲ್ಲೀಗ ವಿಪತ್ತು ಸ್ಥಿತಿಸ್ಥಾಪಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ , ಇಂಧನ ದಕ್ಷತೆ ಮತ್ತು ಸ್ಥಳೀಯ ಅನ್ವೇಷಣೆಗೂ ಪ್ರಾಧಾನ್ಯತೆ ಸಲ್ಲುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ಜಾಗತಿಕ ಮನೆ ತಂತ್ರಜ್ಞಾನ ಸವಾಲು ; ಭಾರತದ ನಿರ್ಮಾಣ ಪರಿಸರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿದೂಗುವಂತೆ ಎತ್ತರಿಸಲು ವೇದಿಕೆಯಾಗಲಿದೆ ಎಂದು ನುಡಿದ ಪ್ರಧಾನಮಂತ್ರಿ ಅವರು 2019 ರ ಏಪ್ರಿಲ್ ನಿಂದ 2020 ರ ಮಾರ್ಚ್ ವರೆಗಿನ ಅವಧಿಯನ್ನು ನಿರ್ಮಾಣ ತಂತ್ರಜ್ಞಾನ ವರ್ಷವನ್ನಾಗಿ ಆಚರಿಸಲಾಗುವುದೆಂದರು.



(Release ID: 1567740) Visitor Counter : 117