ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ

2019ರ ಮಾರ್ಚ್ 7ನ್ನು  ಭಾರತದಾದ್ಯಂತ ‘ಜನೌಷಧ ದಿನ’ವಾಗಿ ಆಚರಣೆ

Posted On: 06 MAR 2019 1:21PM by PIB Bengaluru

2019ರ ಮಾರ್ಚ್ 7ನ್ನು  ಭಾರತದಾದ್ಯಂತ ಜನೌಷಧ ದಿನವಾಗಿ ಆಚರಣೆ

ದೇಶದ 652 ಜಿಲ್ಲೆಗಳಾದ್ಯಂತ 5050ಕ್ಕೂ ಹೆಚ್ಚು ಜನೌಷಧ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ,  2020ರ ಹೊತ್ತಿಗೆ ದೇಶದ ಪ್ರತಿಯೊಂದು ವಿಭಾಗದಲ್ಲೂ ಪಿಎಂಬಿಜೆಪಿ ಕೇಂದ್ರ: ಶ್ರೀ ಮನ್ಸುಖ್ ಮಾಂಡವೀಯ

ಎಲ್ಲರಿಗೂ ಕೈಗೆಟಕುವ ದರದಲ್ಲಿ ಆರೋಗ್ಯ ಆರೈಕೆ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಭಾರತದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಉಪಕ್ರಮದ ಹಿನ್ನೆಲೆಯಲ್ಲಿ, ಪ್ರಧಾನ ಮಂತ್ರಿ ಭಾರತೀಯ ಜನೌಷಧ ಪರಿಯೋಜನೆ (ಪಿ.ಎಂ. ಬಿಜೆಪಿ) ಮೂಲಕ ಜನರಿಗೆ ಕೈಗೆಟಕುವ ಮತ್ತು ಗುಣಮಟ್ಟದ ಜನೌಷಧಗಳನ್ನು ದೊರಕಿಸಿ ಜನಪ್ರಿಯಗೊಳಿಸಲು ಸರ್ಕಾರ ಮಹತ್ವದ ಕ್ರಮಗಳನ್ನು ಕೈಗೊಂಡಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಹಡಗು ಖಾತೆ ರಾಜ್ಯ ಸಚಿವ ಶ್ರೀ ಮನ್ಸುಖ್ ಮಾಂಡವೀಯ ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದ್ದಾರೆ..

ಜನೌಷಧಗಳ ಬಳಕೆಯ ಬಗ್ಗೆ ಅರಿವು ಮೂಡಿಸಲು ಮತ್ತು ಉತ್ತೇಜನ ನೀಡಲು, ದೇಶದಾದ್ಯಂತ 2019ರ ಮಾರ್ಚ್ 7ರಂದು ಜನೌಷಧ ದಿನವಾಗಿ ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 2019ರ ಮಾರ್ಚ್ 7ರಂದು ಮಧ್ಯಾಹ್ನ 1.00ಗಂಟೆಗೆ ಪ್ರಧಾನಮಂತ್ರಿಯವರು ದೇಶದಾದ್ಯಂತದ ಜನೌಷಧ ಕೇಂದ್ರಗಳ ಮಾಲೀಕರು ಮತ್ತು ಯೋಜನೆಯ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ. ಭವಿಷ್ಯದ ಅಭಿವೃದ್ಧಿ ಕ್ರಮಗಳ ಬಗ್ಗೆ ಮಾತನಾಡಿದ ಶ್ರೀ ಮಾಂಡವೀಯ ಈ ವೇಗದಲ್ಲಿನ ಪ್ರಗತಿಯೊಂದಿಗೆ 2020ರ ಹೊತ್ತಿಗೆ ದೇಶದ ಎಲ್ಲ ವಿಭಾಗಗಳಲ್ಲೂ ಕನಿಷ್ಠ 1 ಪಿಎಂಬಿಜೆಪಿ ಕೇಂದ್ರ ಹೊಂದಲಾಗುವುದು ಎಂದರು.

ಬಡ ಜನರು ಕೈಗೆಟಕುವ ದರದ ಗುಣಮಟ್ಟದ ಔಷಧ ದೊರಕದ ಕಾರಣಕ್ಕೆ ಮೃತಪಡಬಾರದು ಎಂಬ ಪ್ರಧಾನಮಂತ್ರಿಯವರ ನಿಲುವನ್ನು ಪ್ರಸ್ತಾಪಿಸಿದ ಶ್ರೀ ಮಾಂಡವೀಯ, ಹೆಚ್ಚು ಹೆಚ್ಚು ವೈದ್ಯರು ಜನೌಷಧಗಳನ್ನು ಬರೆದುಕೊಡುತ್ತಿರುವ ಬೆಳವಣಿಗೆಯ ಹಿನ್ನೆಲೆಯಲ್ಲಿ ದೇಶದ 652 ಜಿಲ್ಲೆಗಳಲ್ಲಿ 5050ಕ್ಕೂ ಹೆಚ್ಚು ಜನೌಷಧ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಕುರಿತು ಜಾಗೃತಿ ಮೂಡಿದೆ ಮತ್ತು ಕೈಗೆಟಕುವ ದರದಲ್ಲಿ ಅತ್ಯುನ್ನತ ಗುಣಮಟ್ಟದ ಔಷಧ ಲಭ್ಯತೆ ದೇಶದಲ್ಲಿ ಹೆಚ್ಚಾಗಿದೆ ಎಂದರು. ಸುಮಾರು 10-15 ಲಕ್ಷ ಜನರು ಪ್ರತಿನಿತ್ಯ ಜನೌಷಧಗಳ ಪ್ರಯೋಜನ ಪಡೆಯುತ್ತಿದ್ದಾರೆ ಮತ್ತು  ಮಾರುಕಟ್ಟೆಯಲ್ಲಿ ಜನೌಷಧದ ಪಾಲು ಕಳೆದ ಮೂರು ವರ್ಷಗಳಲ್ಲಿ ಮೂರು ಪಟ್ಟು ವೃದ್ಧಿಸಿದ್ದು, ಶೇ.2ರಿಂದ ಶೇ.7ಕ್ಕೆ ಹೆಚ್ಚಾಗಿದೆ ಎಂದು ಸಚಿವರು ತಿಳಿಸಿದರು.

ಆರೋಗ್ಯ ಅಭಿವೃದ್ಧಿಯ ಮಹತ್ವದ ಭಾಗವಾಗಿದ್ದು, ಈ ಸರ್ಕಾರ ಎಲ್ಲರಿಗೂ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಆರೈಕೆ ದೊರಕುವುದನ್ನು ಖಾತ್ರಿಪಡಿಸಲು ಆಯುಷ್ಮಾನ್ ಭಾರತ್, ಪಿಎಂ ಬಿಜೆಪಿಯಂಥ ಯೋಜನೆಗಳ ಮೂಲಕ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಸಚಿವ ಶ್ರೀ ಮಾಂಡವೀಯ ತಿಳಿಸಿದರು. ಭಾರತದಲ್ಲಿ ಮಾರಣಾಂತಿಕ ಕಾಯಿಲೆಗಳಿಂದ ಬಳಲುತ್ತಿರುವವರ ಕಿಸೆಯ ವೆಚ್ಚವನ್ನು ತಗ್ಗಿಸುವಲ್ಲಿ ಜನೌಷಧಗಳು ಮಹತ್ವದ ಪಾತ್ರ ನಿರ್ವಹಿಸುತ್ತಿವೆ. ಪಿಎಂ ಬಿಜೆಪಿ ಯೋಜನೆ ಶ್ರೀಸಾಮಾನ್ಯರಿಗೆ ಅಂದಾಜು 1000 ಕೋಟಿ ರೂಪಾಯಿಗಳ ಉಳಿತಾಯಕ್ಕೆ ಕಾರಣವಾಗಿದೆ, ಏಕೆಂದರೆ ಈ ಔಷಧಗಳ ದರ ಸರಾಸರಿ ಮಾರುಕಟ್ಟೆ ದರಕ್ಕಿಂತ ಶೇ.50ರಿಂದ ಶೇ.90ರವರೆಗೂ ಅಗ್ಗವಾಗಿದೆ ಎಂದು ಹೇಳಿದರು.

ನಾಳೆ ಜನೌಷಧ ದಿನ ಆಚರಣೆಯ ಭಾಗವಾಗಿ, ಎಲ್ಲ ಪಿಎಂಬಿಜೆಪಿ ಕೇಂದ್ರಗಳಲ್ಲಿ ಯೋಜನೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸುತ್ತಿರುವುದಾಗಿ ಔಷಧ ಇಲಾಖೆ ಕಾರ್ಯದರ್ಶಿ ಶ್ರೀ ಜೆ.ಪಿ. ಪ್ರಕಾಶ್ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು. ಈ ಕಾರ್ಯಕ್ರಮಗಳಿಗೆ ವೈದ್ಯರು, ಆರೋಗ್ಯ ತಜ್ಞರು, ಎನ್.ಜಿ.ಓಗಳು ಮತ್ತು ಫಲಾನುಭವಿಗಳ ಪಾಲ್ಗೊಳ್ಳುವಿಕೆಗೆ ಸಾಕ್ಷಿಯಾಗಲಿದೆ, ಇದು ಸಾಮಾನ್ಯ ಜನರಿಗೆ ಯೋಜನೆಯ ಬಗ್ಗೆ ಅರಿವು ಹೆಚ್ಚಿಸಲು ಸಹಕಾರಿ ಎಂದರು  

ಭಾರತೀಯ ಪಿಎಸ್.ಯು. ಔಷಧ ಶಾಖೆ (ಬಿಪಿಪಿಐ)ಯ ಸಿಇಓ, ಶ್ರೀ ಸಚಿಮ್ ಕುಮಾರ್ ಸಿಂಗ್ ಪಿಎಂಬಿಜೆಪಿ, ನಿರಂತರ ಗಳಿಕೆ ಮತ್ತು ಸ್ವಯಂ ಸ್ಥಿರತೆಯಿಂದ ಸ್ವಯಂ ಉದ್ಯೋಗಕ್ಕೆ ಉತ್ತಮ ಮೂಲವನ್ನೂ ಒದಗಿಸುತ್ತಿದೆ ಎಂದರು. ಯೋಜನೆ ಜಾರಿಗೊಳಿಸಿರುವ ಬಿಪಿಪಿಐ ನಡೆಸಿದ ಸಮೀಕ್ಷೆಯ ರೀತ್ಯ ಪ್ರತಿ ತಿಂಗಳು ಪ್ರತಿ ಮಳಿಗೆಯ ಸರಾಸರಿ ಮಾರಾಟ (ಓಟಿಸಿ ಮತ್ತು ಇತರ ಉತ್ಪನ್ನ ಸೇರಿದಂತೆ)ರೂ.1.50 ಲಕ್ಷಕ್ಕೆ ಹೆಚ್ಚಳವಾಗಿದೆ. ಎಲ್ಲ ಪಿಎಂಬಿಜೆಪಿ ಕೇಂದ್ರಗಳಲ್ಲಿ ಅಗತ್ಯ ಪ್ರಮಾಣದ ಜನೌಷಧದ ಲಭ್ಯತೆಗಾಗಿ ದೆಹಲಿ, ಗುವಾಹಟಿ, ಬೆಂಗಳೂರು, ಚೆನ್ನೈನಲ್ಲಿ ನಾಲ್ಕು ಬೃಹತ್ ಗೋದಾಮುಗಳನ್ನು ತೆರೆಯಲಾಗಿದೆ ಎಂದರು.

ಶ್ರೀ ಸಿಂಗ್ ಅವರು, ಈಗಾಗಲೇ ಪಿಎಂಬಿಜೆಪಿ ಯೋಜನೆ ಅಡಿಯಲ್ಲಿ ಬಿಡುಗಡೆ ಮಾಡಲಾಗಿರುವ ಮತ್ತು ಪಿಎಂಬಿಜೆಪಿ ಕೇಂದ್ರಗಳಲ್ಲಿ ಲಭ್ಯವಿರುವ ವಿಸ್ತೃತ ಶ್ರೇಣಿಯ ಕೈಗೆಟಕುವ ದರದ ಗುಣಮಟ್ಟದ ಔಷಧ ಉತ್ಪನ್ನಗಳನ್ನು ಪ್ರದರ್ಶಿಸಿದರು. ಇದರಲ್ಲಿ ಪ್ರತಿ ಪೀಸ್ ಗೆ 2.50 ರೂಪಾಯಿಗೆ ಲಭ್ಯವಾಗುವ ಜನ್ ಔಷಧ ಸುವಿಧಾ ಓಕ್ಸ್ಓ – ಜೈವಿಕವಾಗಿ ನಾಶವಾಗುವ ಸ್ಯಾನಿಟರಿ ನ್ಯಾಪ್ಕಿನ್140 ರೂಪಾಯಿಗಳಿಗೆ ದೊರಕುವ 5 ಹಿರಿಯರ ಡೈಪರ್ ನ ಪೊಟ್ಟಣ5 ಮಕ್ಕಳ ಡೈಪರ್ ಗಳ ಪೊಟ್ಟಣಕ್ಕೆ ಕೇವಲ 20 ರೂಪಾಯಿಗೆ ಲಭ್ಯವಾಗುವ ಜನೌಷಧ ಬಜ್ಪನ್ 20 ರೂಪಾಯಿಗಳಿಗೆ ಲಭ್ಯವಾಗುವ ಜನೌಷಧಿ ಅಂಕುರ್ ಗರ್ಭಿಣಿಯರ ಪರೀಕ್ಷಾ ಕಿಟ್ರೂ.35ಕ್ಕೆ ಲಭ್ಯವಾಗುವ 300 ಗ್ರಾಮ್ ಪೊಟ್ಟಣದ ಜನೌಷಧ ಊರ್ಜಾ ಚೈತನ್ಯ ಪೇಯ ಇತ್ಯಾದಿ ಇದರಲ್ಲಿ ಸೇರಿದೆ.

*****



(Release ID: 1567632) Visitor Counter : 149