ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ

ಆರ್.ಪಿ.ಡಬ್ಲ್ಯು.ಡಿ . ಕಾಯ್ದೆ 2016 ರ ಸೆಕ್ಷನ್ 74(2) ರನ್ವಯ ದಿವ್ಯಾಂಗರ ಮುಖ್ಯ ಕಮಿಷನರ್ ಅವರಿಗೆ ನೆರವಾಗುವುದಕ್ಕಾಗಿ ಕೇಂದ್ರ ಸರಕಾರದಲ್ಲಿ ದಿವ್ಯಾಂಗರಿಗಾಗಿರುವ ಎರಡು ಕಮಿಶನರ್ ಹುದ್ದೆಗಳನ್ನು ಸೃಜಿಸುವುದಕ್ಕೆ ಸಂಪುಟ ಅನುಮೋದನೆ. 

Posted On: 28 FEB 2019 10:40PM by PIB Bengaluru

ಆರ್.ಪಿ.ಡಬ್ಲ್ಯು.ಡಿ . ಕಾಯ್ದೆ 2016 ರ ಸೆಕ್ಷನ್ 74(2) ರನ್ವಯ ದಿವ್ಯಾಂಗರ ಮುಖ್ಯ ಕಮಿಷನರ್ ಅವರಿಗೆ ನೆರವಾಗುವುದಕ್ಕಾಗಿ ಕೇಂದ್ರ ಸರಕಾರದಲ್ಲಿ ದಿವ್ಯಾಂಗರಿಗಾಗಿರುವ ಎರಡು ಕಮಿಶನರ್ ಹುದ್ದೆಗಳನ್ನು ಸೃಜಿಸುವುದಕ್ಕೆ ಸಂಪುಟ ಅನುಮೋದನೆ. 
 
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ದಿವ್ಯಾಂಗ ವ್ಯಕ್ತಿಗಳ ಹಕ್ಕುಗಳ ಪ್ರಸ್ತಾವನೆಗಳ (ಆರ್.ಪಿ.ಡಬ್ಲ್ಯು.ಡಿ .) ಕಾಯ್ದೆ 2016 ರ ಅಡಿಯಲ್ಲಿ ದಿವ್ಯಾಂಗ ವ್ಯಕ್ತಿಗಳ ಮುಖ್ಯ ಕಮಿಷನರ್ (ಸಿ.ಸಿ.ಪಿ.ಡಿ.) ಅವರ ಕಚೇರಿಯಲ್ಲಿ ಎರಡು ಕಮಿಶನರ್ ಹುದ್ದೆಗಳನ್ನು ಸೃಜಿಸಲು ಅನುಮೋದನೆ ನೀಡಿತು. ಎರಡು ಕಮಿಶನರ್ ಹುದ್ದೆಗಳಲ್ಲಿ ಒಂದು ಹುದ್ದೆ ದಿವ್ಯಾಂಗರಿಗೆ ಮೀಸಲು. 

ಈ ಮೇಲಿನ ಇಬ್ಬರು ಕಮಿಶನರ್ ಗಳು ಮೇಲ್ಕಾಣಿಸಿದ ಕಾಯ್ದೆಯನುಸಾರ ಸಿ.ಸಿ.ಪಿ.ಡಿ.ಯು ತಮ್ಮ ಶಾಸನಾತ್ಮಕ ಕಾರ್ಯವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತಾರೆ. ಇದು ದಿವ್ಯಾಂಗರ ದೂರು ದುಮ್ಮಾನಗಳನ್ನು ತ್ವರಿತವಾಗಿ ಪರಿಶೀಲಿಸಲು ಸಿ.ಸಿ.ಪಿ.ಡಿ. ಕಚೇರಿಗೆ ಸಹಾಯ ಮಾಡುತ್ತದೆಯಲ್ಲದೆ, ಆರ್.ಪಿ.ಡಬ್ಲ್ಯು.ಡಿ. ಕಾಯ್ದೆ, 2016 ರ ಅನುಷ್ಟಾನದ ಮೇಲುಸ್ತುವಾರಿ ಮಾಡುವ ವ್ಯವಸ್ಥೆಯನ್ನು ಬಲಪಡಿಸುತ್ತದೆ. 

(Release ID: 1566940) Visitor Counter : 102
Read this release in: English , Urdu , Tamil