ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ

“ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ದೇಶೀಯ ಅನ್ವೇಷಣೆ ಮತ್ತು ಉತ್ಪಾದನೆ ಹೆಚ್ಚಿಸುವ ಉದ್ದೇಶದ ಅನ್ವೇಷಣಾ ಸುಧಾರಣೆ ಮತ್ತು ಲೈಸೆನ್ಸಿಂಗ್ ನೀತಿ” ಗೆ ಸಂಪುಟದ ಅಂಗೀಕಾರ. 

Posted On: 19 FEB 2019 9:07PM by PIB Bengaluru

“ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ದೇಶೀಯ ಅನ್ವೇಷಣೆ ಮತ್ತು ಉತ್ಪಾದನೆ ಹೆಚ್ಚಿಸುವ ಉದ್ದೇಶದ ಅನ್ವೇಷಣಾ ಸುಧಾರಣೆ ಮತ್ತು ಲೈಸೆನ್ಸಿಂಗ್ ನೀತಿ” ಗೆ ಸಂಪುಟದ ಅಂಗೀಕಾರ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ತೈಲ ಮತ್ತು ಅನಿಲ ಕ್ಷೇತ್ರದಲ್ಲಿ ದೇಶೀಯ ಅನ್ವೇಷಣೆ ಮತ್ತು ಉತ್ಪಾದನೆ ಹೆಚ್ಚಿಸುವುದಕ್ಕಾಗಿ ಅನ್ವೇಷಣೆ ಮತ್ತು ಪರವಾನಗಿ ವಲಯದ ಸುಧಾರಣೆಗಳ ನೀತಿ ಚೌಕಟ್ಟಿಗೆ ಅನುಮೋದನೆ ನೀಡಲಾಯಿತು. ಅನ್ವೇಷಣೆ ಮತ್ತು ಉತ್ಪಾದನಾ (ಇ.ಆಂಡ್ ಪಿ.) ವಲಯದಲ್ಲಿ ಹೊಸ ಹೂಡಿಕೆಯನ್ನು ಆಕರ್ಷಿಸುವುದು, ಇದುವರೆಗೆ ಅನ್ವೇಷಣೆ ನಡೆಯದೇ ಇರುವ ಪ್ರದೇಶಗಳಲ್ಲಿ ಅನ್ವೇಷಣಾ ಚಟುವಟಿಕೆಗಳನ್ನು ತ್ವರಿತಗೊಳಿಸುವುದು ಮತ್ತು ಉತ್ಪಾದನಾ ತಾಣಗಳ ನೀತಿಯ ಉದಾರೀಕರಣ ಈ ನೀತಿಯ ಧೇಯ್ಯೋದ್ದೇಶಗಳಾಗಿವೆ. ತೈಲ ಮತ್ತು ಅನಿಲದ ದೇಶೀಯ ಉತ್ಪಾದನೆ ಸ್ಥಿರವಾಗಿರುವುದು/ ಕುಸಿಯುತ್ತಿರುವುದನ್ನು ಪರಿಗಣಿಸಿ , ಆಮದು ಅವಲಂಬನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತು ಇ ಆಂಡ್ ಪಿ ಚಟುವಟಿಕೆಯಲ್ಲಿ ಹೂಡಿಕೆ ಕುಸಿಯುತ್ತಿರುವುದರಿಂದಾಗಿ ಇನ್ನಷ್ಟು ನೀತಿ ಸುಧಾರಣೆಗಳನ್ನು ತರುವುದು ಅವಶ್ಯವೆಂದು ಭಾವಿಸಲಾಗಿದೆ. 

ನೀತಿ ಸುಧಾರಣೆಗಳು ನಾಲ್ಕು ಪ್ರಮುಖ ಕ್ಷೇತ್ರಗಳನ್ನು ಕೇಂದ್ರೀಕರಿಸಿವೆ. ಮೊದಲನೇಯದ್ದು ಅನಿರೀಕ್ಷಿತ ಪ್ರದೇಶಗಳಲ್ಲಿ ಅನ್ವೇಷಣಾ ಚಟುವಟಿಕೆಗಳನ್ನು ಹೆಚ್ಚಿಸುವುದು. ಯಾವ ತಾಣಗಳಲ್ಲಿ ವಾಣಿಜ್ಯಿಕ ಉತ್ಪಾದನೆ ಇಲ್ಲವೋ ಅಲ್ಲಿ ಅನ್ವೇಷಣಾ ಬ್ಲಾಕ್ ಗಳನ್ನು ಸರಕಾರಕ್ಕೆ ಯಾವುದೇ ಆದಾಯ ಅಥವಾ ಉತ್ಪಾದನಾ ಹಂಚಿಕೆ ಇಲ್ಲದೆ ಅನ್ವೇಷಣಾ ಕಾರ್ಯ ಕಾರ್ಯಕ್ರಮದಡಿಯಲ್ಲಿ ವಿಶೇಷವಾಗಿ ಹರಾಜು ಹಾಕಲಾಗುವುದು. ಗೌರವಧನ ಮತ್ತು ಇತರ ಶಾಸನಾತ್ಮಕ ತೆರಿಗೆಗಳನ್ನು ಗುತ್ತಿಗೆದಾರರು ಪಾವತಿಸಬೇಕಾಗುತ್ತದೆ.ಆದರೆ ಮಂಜೂರಾಗದೆ ಇರುವ /ಅನ್ವೇಷಣೆಯಾಗದೇ ಇರುವ ತೈಲ ಉತ್ಪಾದನಾ ತಾಣಗಳ ಹರಾಜು ಪ್ರಕ್ರಿಯೆಯು ಆದಾಯ ಹಂಚಿಕೆಯ ಆಧಾರದಲ್ಲಿ ಮುಂದುವರಿಯುತ್ತದೆಯಾದರೂ ಕಾರ್ಯ ಆಧಾರಿತ ಕಾರ್ಯಕ್ರಮಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಾರ್ಯಸಾಧುವಲ್ಲದ ಹರಾಜನ್ನು ತಡೆಯುವುದಕ್ಕಾಗಿ ಕಂದಾಯ ಹಂಚಿಕೆ ಹರಾಜಿಗೆ ಸಂಬಂಧಿಸಿ ಮಿತಿಯನ್ನು ನಿಗದಿ ಮಾಡಲಾಗಿದೆ. ಈ ನೀತಿಯು ಅಲ್ಪಕಾಲೀನ ಅನ್ವೇಷಣೆ ಅವಧಿ ಮತ್ತು ಅವಧಿಗೆ ಮೊದಲೇ ಉತ್ಪಾದನೆ ಆರಂಭಿಸಿದಲ್ಲಿ ಪ್ರೋತ್ಸಾಹಧನ ನೀಡುವುದಕ್ಕೂ ಅವಕಾಶ ಒದಗಿಸುತ್ತದೆ. ಗುತ್ತಿಗೆದಾರರು ತಮ್ಮ ಕೈಚಾಚುವಂತಹ ದೂರದ ಒಳಗೆ ಆಧಾರದಲ್ಲಿ ಕಚ್ಚ ತೈಲ ಮತ್ತು ನೈಸರ್ಗಿಕ ಅನಿಲವನ್ನು ಪಾರದರ್ಶಕ ಹಾಗು ಸ್ಪರ್ಧಾತ್ಮಕ ಹರಾಜು ಪ್ರಕ್ರಿಯೆಯ ಮೂಲಕ ಮಾರಾಟ ಮಾಡುವುದಕ್ಕಾಗಿ ಮಾರುಕಟ್ಟೆ ಮತ್ತು ದರ ನಿಗದಿಗೆ ಸಂಬಂಧಿಸಿ ಪೂರ್ಣ ಸ್ವಾತಂತ್ರ್ಯ ಹೊಂದಿರುತ್ತಾರೆ. 

ಎರಡನೆಯದಾಗಿ , ಅನಿಲ ಉತ್ಪಾದನೆ ಹೆಚ್ಚಳ ಉತ್ತೇಜಿಸುವುದಕ್ಕಾಗಿ , ಮಾರುಕಟ್ಟೆ ಮತ್ತು ದರ ನಿಗದಿ ಸ್ವಾತಂತ್ರ್ಯವನ್ನು ಹೊಸ ಅನಿಲ ಶೋಧಗಳಿಗೆ , ಅವುಗಳ ಕ್ಷೇತ್ರ ಅಭಿವೃದ್ದಿ ಯೋಜನೆ (ಎಫ್.ಡಿ.ಪಿ.) ಇನ್ನಷ್ಟೇ ಅನುಮೋದನೆಗೊಳ್ಳಬೇಕಿದ್ದರೂ ಒದಗಿಸಲಾಗುತ್ತದೆ. ದೇಶೀಯ ಕ್ಷೇತ್ರಗಳಲ್ಲಿ ಸಾಮಾನ್ಯ ಸಹಜ ಉತ್ಪಾದನಾ ಪ್ರಮಾಣಕ್ಕಿಂತ ಹೆಚ್ಚಿನ ಅನಿಲ ಉತ್ಪಾದನೆ ಮಾಡಿದರೆ ಆ ಸಂದರ್ಭದಲ್ಲಿಯೂ ಪ್ರೋತ್ಸಾಹಧನ ಒದಗಿಸಲಾಗುವುದು. ಮೂರನೇಯದಾಗಿ, ಒ.ಎನ್.ಜಿ.ಸಿ. ಮತ್ತು ಒ.ಐ.ಎಲ್. ಗಳ ಹಾಲಿ ಇರುವ ಸೂಚಿತ ಕ್ಷೇತ್ರಗಳಲ್ಲಿ ಎರಡೂ ಪಿ.ಎಸ್.ಯು.ಗಳಿಂದ ಉತ್ಪಾದನಾ ಹೆಚ್ಚಳ ಪ್ರೊಫೈಲ್ ಗಳನ್ನು ರೂಪಿಸಲಾಗುವುದು. ಉತ್ಪಾದನೆ ಹೆಚ್ಚಳಕ್ಕೆ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದಲ್ಲದೆ ಬಂಡವಾಳ ಮತ್ತು ಖಾಸಗಿ ವಲಯದ ಪಾಲುದಾರರನ್ನು ಸೇರಿಸಿಕೊಳ್ಳಲು ನಿರಾಕ್ಷೇಪಣಾ ಪತ್ರಗಳನ್ನು ನೀಡಲಾಗುವುದು. ನಾಲ್ಕನೇಯ ಕ್ರಮವಾಗಿ ಸಮನ್ವಯ ವ್ಯವಸ್ಥೆಯನ್ನು ಸ್ಥಾಪಿಸಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು ಮತ್ತು ಡಿ.ಜಿ.ಎಚ್. ಮಂಜೂರಾತಿಯನ್ನು ಸರಳಗೊಳಿಸಲಾಗುವುದು. ಪರ್ಯಾಯ ದೂರು/ ವಿವಾದ ಪರಿಹಾರ ವ್ಯವಸ್ಥೆ ಇತ್ಯಾದಿಗಳನ್ನು ರೂಪಿಸಲಾಗುವುದು. 

ಈ ನೀತಿಯ ಮೂಲಕ ಪಾರದರ್ಶಕ, ಹೂಡಿಕೆದಾರ ಸ್ನೇಹಿ ಮತ್ತು ಸ್ಪರ್ಧಾತ್ಮಕ ನೀತಿ ಚೌಕಟ್ಟನ್ನು ಅನ್ವೇಷಣಾ ಚಟುವಟಿಕೆಗಳಿಗೆ ವೇಗ ಕೊಡುವುದಕ್ಕಾಗಿ ಕಲ್ಪಿಸಲಾಗುವುದು ಮತ್ತು ತೈಲ ಮತ್ತು ಅನಿಲ ಉತ್ಪಾದನೆ ಹೆಚ್ಚಳಕ್ಕೆ ವೇಗ ದೊರಕಿಸಿಕೊಡಲಾಗುವುದು. ಸೂಚಿತ ಕ್ಷೇತ್ರಗಳ ಉತ್ಪಾದನಾ ಹೆಚ್ಚಳ ಯೋಜನೆಯಲ್ಲಿ ಉತ್ಪಾದನೆಯ ಹೆಚ್ಚಳವು ನಿರಾಕ್ಷೇಪಣಾ ಪತ್ರಗಳು, ಅತ್ಯಾಧುನಿಕ ತಂತ್ರಜ್ಞಾನ , ಬಂಡವಾಳ ಮತ್ತು ಖಾಸಗಿ ವಲಯದ ಸಹಭಾಗಿತ್ವದೊಂದಿಗೆ ನಿರ್ವಹಣಾ ವಿಧಾನಗಳಿಂದಾಗಿ ಸಾಧ್ಯವಾಗುವ ನಿರೀಕ್ಷೆ ಇದೆ. ಇ ಆಂಡ್ ಪಿ. ಕಾರ್ಯಚಟುವಟಿಕೆಗಳ ಹೆಚ್ಚಳದಿಂದಾಗಿ ಪೂರಕ ಸೇವೆಗಳ ಅಭಿವೃದ್ದಿ, ಉದ್ಯೋಗಾವಕಾಶಗಳ ನಿರ್ಮಾಣ, ಅತ್ಯಾಧುನಿಕ ತಂತ್ರಜ್ಞಾನದ ವರ್ಗಾವಣೆ ಇತ್ಯಾದಿಗಳಿಂದಾಗಿ ಅಲ್ಲಿ ಬೃಹತ್ ಆರ್ಥಿಕತೆಯ ಲಾಭಗಳು ಒದಗಿ ಬರಲಿವೆ. ಉತ್ಪಾದನೆಯಲ್ಲಿ ಹೆಚ್ಚಳ ಆಮದು ಅವಲಂಬನೆಯನ್ನು ಕಡಿಮೆ ಮಾಡಲಿದೆ , ದೇಶದ ಇಂಧನ ಭದ್ರತೆಯನ್ನು ಸುಧಾರಿಸಲಿದೆ ಮತ್ತು ಆಮದು ಮೊತ್ತದ ಮೇಲಿನ ಅಮೂಲ್ಯ ವಿದೇಶೀ ವಿನಿಮಯವನ್ನು ಉಳಿತಾಯ ಮಾಡಲು ನೆರವಾಗಲಿದೆ. 


(Release ID: 1565720) Visitor Counter : 212


Read this release in: Tamil , English , Urdu , Hindi