ರೈಲ್ವೇ ಸಚಿವಾಲಯ

ರೈಲ್ವೆಯ 8 ಸಂಘಟಿತ ಗ್ರೂಪ್ 'ಎ' ಸೇವೆಗಳ ಶ್ರೇಣಿ ಪುನರ್ ವಿಮರ್ಶೆ (ಕೇಡರ್ ರಿವ್ಯೂ) ಗೆ ಸಂಪುಟದ ಅನುಮೋದನೆ

ಪ್ರಕಟಣಾ ದಿನಾಂಕ: 19 FEB 2019 8:52PM by PIB Bengaluru

ರೈಲ್ವೆಯ 8 ಸಂಘಟಿತ ಗ್ರೂಪ್ 'ಎ' ಸೇವೆಗಳ ಶ್ರೇಣಿ ಪುನರ್ ವಿಮರ್ಶೆ (ಕೇಡರ್ ರಿವ್ಯೂ) ಗೆ ಸಂಪುಟದ ಅನುಮೋದನೆ

 

ರೈಲ್ವೆಯ 8 ಸಂಘಟಿತ  ಗ್ರೂಪ್  'ಎ' ಸೇವೆಗಳು ಅಂದರೆ ಭಾರತೀಯ ರೈಲ್ವೆಯ ಹಣಕಾಸು ಸೇವೆ (ಐಆರ್ ಎ ಎಸ್), ಭಾರತೀಯ ರೈಲ್ವೇ ಸಿಬ್ಬಂದಿ ಸೇವೆ (ಐ ಆರ್ ಪಿಎಸ್), ಭಾರತೀಯ ರೈಲ್ವೇ ಟ್ರಾಫಿಕ್ ಸೇವೆ (ಐ ಆರ್ ಟಿಎಸ್ ) ಇವುಗಳ ಶ್ರೇಣಿ ಪುನರ್ ವಿಮರ್ಶೆ (ಕೇಡರ್ ರಿವ್ಯೂ) ಯ ಪ್ರಸ್ತಾವನೆಯನ್ನು  ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಕ್ಯಾಬಿನೆಟ್ ಅನುಮೋದಿಸಿದೆ. ಭಾರತೀಯ ರೈಲ್ವೇ ಸರ್ವಿಸ್ ಆಫ್ ಇಂಜಿನಿಯರ್ಸ್ (ಐ ಆರ್ ಎಸ್ ಇ), ಭಾರತೀಯ ರೈಲ್ವೆ  ಸರ್ವಿಸ್ ಆಫ್ ಎಲೆಕ್ಟ್ರಿಕಲ್ ಎಂಜಿನಿಯರ್ಸ್ (ಐ ಆರ್ ಎಸ್ ಇ ಇ), ಭಾರತೀಯ ರೈಲ್ವೆ  ಸರ್ವಿಸ್ ಆಫ್ ಮೆಕ್ಯಾನಿಕಲ್ ಎಂಜಿನಿಯರ್ಸ್    (ಐ ಆರ್ ಎಸ್ ಎಮ್ ಇ), ಭಾರತೀಯ ರೈಲ್ವೇ ಸ್ಟೋರ್ಸ್ ಸರ್ವಿಸ್ (ಐ ಆರ್ ಎಸ್ ಎಸ್), ಭಾರತೀಯ ರೈಲ್ವೇ ಸಿಗ್ನಲ್ ಇಂಜಿನಿಯರ್ಸ್   ಸರ್ವಿಸ್ (ಐ ಆರ್ ಎಸ್ ಎಸ್ಇ).

 

ಐಆರ್ ಪಿಎಸ್ ಕೇಡರ್ ಹುದ್ದೆಯೊಂದಾದ ಸದಸ್ಯರು (ಸಿಬ್ಬಂದಿ)  ಹುದ್ದೆ , ಮತ್ತು ಡೈರೆಕ್ಟರ್ ಜನರಲ್ (ಸಿಗ್ನಲ್ ಮತ್ತು ಟೆಲಿಕಾಂ), ಡೈರೆಕ್ಟರ್ ಜನರಲ್ (ಸ್ಟೋರ್ಸ್) ಮತ್ತು ಡೈರೆಕ್ಟರ್ ಜನರಲ್ (ಸುರಕ್ಷತೆ) ಇವರನ್ನು  ಸದಸ್ಯರು (ಎಸ್ & ಟಿ) ಮತ್ತು ಸದಸ್ಯರು (ಮೆಟೀರಿಯಲ್ಸ್ ಮ್ಯಾನೇಜ್ ಮೆಂಟ್) ಇವರನ್ನು  ಡೈರೆಕ್ಟರ್ ಜನರಲ್ (ಸುರಕ್ಷತೆ)  ಎಂದು ಅನುಕ್ರಮವಾಗಿ ಇವರ   ಹುದ್ದೆಗಳ  ಮರುನಾಮಕರಣವನ್ನು ಸಂಪುಟ ಅನುಮೋದಿಸಿದೆ.

 

2012 ರಿಂದ ಈ ಕೇಡರ್ ರಿವ್ಯೂ ಬಾಕಿ ಉಳಿದಿದ್ದು ಇದು ಈ ಸೇವೆಗಳಲ್ಲಿರುವ 900 ಅಧಿಕಾರಿಗಳಿಗೆ ಲಾಭವಾಗಲಿದೆ.


(ಪ್ರಕಟಣೆ ಐ.ಡಿ.: 1565699) ವಿಸಿಟರ್ ಕೌಂಟರ್ : 77
ಪ್ರಕಟಣೆಯನ್ನು ಇದರಲ್ಲಿ ಓದಿ: English , Urdu , Tamil