ಪ್ರಧಾನ ಮಂತ್ರಿಯವರ ಕಛೇರಿ
ಉತ್ತರ ಪ್ರದೇಶದ ಜಾನ್ಸಿಗೆ ನಾಳೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
Posted On:
14 FEB 2019 6:42PM by PIB Bengaluru
ಉತ್ತರ ಪ್ರದೇಶದ ಜಾನ್ಸಿಗೆ ನಾಳೆ ಭೇಟಿ ನೀಡಲಿರುವ ಪ್ರಧಾನಮಂತ್ರಿ
ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ, ಜಾನ್ಸಿ – ಖೈರಾರ್ ವಿಭಾಗದ 297 ಕಿ.ಮೀ. ಉದ್ದದ ವಿದ್ಯುದ್ದೀಕರಣ ಮಾರ್ಗ ಉದ್ಘಾಟಿಸಲಿರುವ ಪಿ.ಎಂ, ಪಹರಿ ಜಲಾಶಯ ಆಧುನೀಕರಣ ಯೋಜನೆಯನ್ನು ದೇಶಕ್ಕೆ ಸಮರ್ಪಿಸಲಿರುವ ಪಿ.ಎಂ., ಬುಂದೇಲಖಂಡಕ್ಕೆ ಖಾತ್ರಿ ಪಡಿಸಿದ ನೀರು ಸರಬರಾಜು ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2019ರ ಫೆಬ್ರವರಿ 15ರಂದು ಜಾನ್ಸಿಗೆ ಭೇಟಿ ನೀಡಲಿದ್ದಾರೆ. ಪ್ರಧಾನಮಂತ್ರಿಯವರು ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಜಾನ್ಸಿಯಲ್ಲಿ ಚಾಲನೆ ನೀಡಲಿದ್ದಾರೆ ಇಲ್ಲವೇ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಉತ್ತರ ಪ್ರದೇಶದ ಜಾನ್ಸಿಯಲ್ಲಿ ಪ್ರಧಾನಮಂತ್ರಿಯವರು ರಕ್ಷಣಾ ಕಾರಿಡಾರ್ ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಕ್ಷಣಾ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಲು ಭಾರತ ಸರ್ಕಾರ ದೇಶದಲ್ಲಿ ಎರಡು ರಕ್ಷಣಾ ಕಾರಿಡಾರ್ ಸ್ಥಾಪಿಸುವ ನಿರ್ಧಾರ ಕೈಗೊಂಡಿದೆ. ತಮಿಳುನಾಡಿನಲ್ಲಿ ಒಂದು ಮತ್ತು ಉತ್ತರ ಪ್ರದೇಶದಲ್ಲಿ ಮತ್ತೊಂದು. ಉತ್ತರ ಪ್ರದೇಶದ ರಕ್ಷಣಾ ಕಾರಿಡಾರ್ ನ ಆರು ನೋಡಲ್ ಕೇಂದ್ರಗಳಲ್ಲಿ ಜಾನ್ಸಿ ಸಹ ಒಂದಾಗಿದೆ. ಪ್ರಧಾನಮಂತ್ರಿಯವರು ಉತ್ತರ ಪ್ರದೇಶದಲ್ಲಿ 2018ರ ಫೆಬ್ರವರಿಯಲ್ಲಿ ನಡೆದಿದ್ದ ಹೂಡಿಕೆದಾರರ ಮೇಳದ ವೇಳೆ ಉತ್ತರ ಪ್ರದೇಶದ ಬುಂದೇಲಖಂಡ ವಲಯದಲ್ಲಿ ಇಂಥ ಒಂದು ಕಾರಿಡಾರ್ ನಿರ್ಮಿಸುವುದಾಗಿ ಪ್ರಕಟಿಸಿದ್ದರು.
ಪ್ರಧಾನಮಂತ್ರಿಯವರು ಜಾನ್ಸಿ – ಖೈರಾರ್ ವಿಭಾಗದಲ್ಲಿ 297 ಕಿ.ಮೀ. ಉದ್ದದ ವಿದ್ಯುದ್ದೀಕರಣ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ವಿದ್ಯುದ್ದೀಕರಣವು ವೇಗದ ರೈಲುಗಳ ಸಂಚಾರಕ್ಕೆ ಕಾರಣವಾಗಲಿದ್ದು, ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲಿದೆ ಮತ್ತು ಸುಸ್ಥಿರ ಪರಿಸರ ಮೂಡಿಸುತ್ತದೆ.
ಪಶ್ಚಿಮ ಉತ್ತರ ಪ್ರದೇಶಕ್ಕೆ ತಡೆರಹಿತ ವಿದ್ಯುತ್ ಪೂರೈಸುವುದನ್ನು ಖಾತ್ರಿಪಡಿಸುವ ಸಲುವಾಗಿ ಪಶ್ಚಿಮ – ಉತ್ತರ ಅಂತರ ವಲಯ ವಿದ್ಯುತ್ ಸರಬರಾಜು ವರ್ಧನೆ ಯೋಜನೆಯನ್ನು ಅವರು ದೇಶಕ್ಕೆ ಸಮರ್ಪಿಸಲಿದ್ದಾರೆ.
ಪಿಎಂ ಅವರು ಪಹರಿ ಜಲಾಶಯ ಆಧುನಿಕರಣ ಯೋಜನೆಯನ್ನು ಉದ್ಘಾಟಿಸಲಿದ್ದಾರೆ. ಪಹರಿ ಜಲಾಶಯ ಜಾನ್ಸಿ ಜಿಲ್ಲೆಯ ದಸನ್ ನದಿಗೆ ಕಟ್ಟಲಾಗಿರುವ ಜಲ ಸಂಗ್ರಹಣೆ ಜಲಾಶಯವಾಗಿದೆ.
ಸರ್ವರಿಗೂ ಕುಡಿಯುವ ನೀರು ಪೂರೈಸುವ ಸರ್ಕಾರದ ನಿಲುವನ್ನು ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಮಂತ್ರಿಯವರು ಬುಂದೇಲಖಂಡ ವಲಯದ ಗ್ರಾಮೀಣ ಪ್ರದೇಶಗಳಿಗೆ ಕೊಳವೆ ಮಾರ್ಗದ ಮೂಲಕ ನೀರು ಪೂರೈಸುವ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬರ ಪೀಡಿತ ಬುಂದೇಲಖಂಡ ವಲಯಕ್ಕೆ ನೀರಿನ ಖಾತ್ರಿ ಪಡಿಸುವ ಈ ಯೋಜನೆಯು ಮಹತ್ವದ್ದಾಗಿದೆ. ಜಾನ್ಸಿ ನಗರದ ಕುಡಿಯುವ ನೀರು ಯೋಜನೆ 2ನೇ ಹಂತಕ್ಕೆ ಅಮೃತ್ ಅಡಿಯಲ್ಲಿ ಶಂಕುಸ್ಥಾಪನೆಯನ್ನು ಪ್ರಧಾನಮಂತ್ರಿ ನೆರವೇರಿಸಲಿದ್ದಾರೆ.
ಜಾನ್ಸಿಯಲ್ಲಿ ಪ್ರಧಾನಮಂತ್ರಿಯವರು , ಕೋಚ್ ನವೀಕರಿಸುವ ಕಾರ್ಯಾಗಾರಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಸೌಲಭ್ಯವು ಬುಂದೇಲಖಂಡ ವಲಯದಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ.
ಪ್ರಧಾನಮಂತ್ರಿಯವರು 425 ಕಿ.ಮೀ ಉದ್ದದ ಜಾನ್ಸಿ – ಮಾಣಿಕ್ಪುರ ಮತ್ತು ಭೀಮ್ ಸೇನ್ – ಖೈರಾರ್ ನಡುವಿನ ಜೋಡಿ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದು ರೈಲುಗಳ ಸುಗಮ ಸಂಚಾರವನ್ನಷ್ಟೇ ಒದಗಿಸುವುದಿಲ್ಲ ಜೊತೆಗೆ ಬುಂದೇಲ್ ಖಂಡ ವಲಯದ ಸರ್ವಾಂಗೀಣ ಅಭಿವೃದ್ಧಿಗೂ ನೆರವಾಗಲಿದೆ.
ಇದಕ್ಕೂ ಮುನ್ನ ಪ್ರಧಾನಮಂತ್ರಿ, ಶ್ರೀ ನರೇಂದ್ರ ಮೋದಿ ಅವರು, 300 ಕೋಟಿಯ ಊಟವನ್ನು ಉಣಬಡಿಸಲು ಮತ್ತು ಪ್ರವಾಸಿ ಭಾರತೀಯ ದಿವಸ್ ನಲ್ಲಿ ಭಾಗಿಯಾಗಲು ಅನುಕ್ರಮವಾಗಿ ಉತ್ತರ ಪ್ರದೇಶದ ಬೃಂದಾವನ ಮತ್ತು ವಾರಾಣಸಿಗೆ ಭೇಟಿ ನೀಡಿದ್ದರು.
(Release ID: 1564678)