ಸಂಪುಟ

ಪಟ್ನಾದಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಸಂಪರ್ಕ ವರ್ಧನೆ ಎರಡು ಕಾರಿಡಾರ್ ಗಳಾದ (i) ದಾನಾಪುರದಿಂದ ಮಿಥಾಪುರ ಮತ್ತು (ii) ನೂತನ ಐ.ಎಸ್.ಬಿ.ಟಿ. ಪಟ್ನಾ ರೈಲ್ವೇ ನಿಲ್ದಾಣದ 26.94 ಕಿ.ಮೀ ಉದ್ದದ ಮೆಟ್ರೋ ಮಾರ್ಗ ದಾನಾಪುರದಿಂದ ಮಿಥಾಪುರ ಕಾರಿಡಾರ್, ಪಟ್ನಾ ಜಂಕ್ಷನ್ನಿನಿಂದ ಹೊಸ ಐ.ಎಸ್.ಬಿ.ಟಿ. ವರೆಗೆ 14.45 ಕಿ.ಮೀ. ಉದ್ದದ ಮಾರ್ಗ 13,365.77 ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಕ್ಕೆ ಸಂಪುಟವು ಅನುಮೋದನೆ ನೀಡಿತು. ಯೋಜನೆ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ

Posted On: 13 FEB 2019 9:18PM by PIB Bengaluru

ಪಟ್ನಾದಲ್ಲಿ ಸಾರ್ವಜನಿಕ ಸಾರಿಗೆ ಮತ್ತು ಸಂಪರ್ಕ ವರ್ಧನೆ 

ಎರಡು ಕಾರಿಡಾರ್ ಗಳಾದ  (i) ದಾನಾಪುರದಿಂದ ಮಿಥಾಪುರ ಮತ್ತು (ii) ನೂತನ ಐ.ಎಸ್.ಬಿ.ಟಿ.  ಪಟ್ನಾ ರೈಲ್ವೇ ನಿಲ್ದಾಣದ  26.94  ಕಿ.ಮೀ ಉದ್ದದ ಮೆಟ್ರೋ ಮಾರ್ಗ ದಾನಾಪುರದಿಂದ ಮಿಥಾಪುರ ಕಾರಿಡಾರ್, ಪಟ್ನಾ ಜಂಕ್ಷನ್ನಿನಿಂದ ಹೊಸ ಐ.ಎಸ್.ಬಿ.ಟಿ. ವರೆಗೆ 14.45  ಕಿ.ಮೀ. ಉದ್ದದ ಮಾರ್ಗ  13,365.77  ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳುವುದಕ್ಕೆ ಸಂಪುಟವು ಅನುಮೋದನೆ ನೀಡಿತು.  ಯೋಜನೆ ಐದು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಎರಡು ಮೆಟ್ರೋ ರೈಲು ಕಾರಿಡಾರುಗಳಾದ (I) ದಾನಾಪುರದಿಂದ ಮಿಥಾಪುರ ಮತ್ತು (ii) ಹೊಸ ಐ.ಎಸ್.ಬಿ.ಟಿ.ಯ ಪಟ್ನಾ ರೈಲ್ವೇ ನಿಲ್ದಾಣದ ಕಾರಿಡಾರುಗಳನ್ನು ಒಳಗೊಂಡ ಪಟ್ನಾ ಮೆಟ್ರೋ ರೈಲು ಯೋಜನೆಯನ್ನು ಅಂದಾಜು 13365.77 ಕೋ.ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಅನುಮೋದನೆ ನೀಡಿತು.

 

ಯೋಜನೆಯ ವಿವರಗಳು:

 

·         ಯೋಜನೆಯು ಐದು ವರ್ಷಗಳಲ್ಲಿ ಪೂರ್ಣಗೊಳ್ಳುತ್ತದೆ.

 

·         ದಾನಾಪುರದಿಂದ ಮಿಥಾಪುರ ಕಾರಿಡಾರು ನಗರದ ಹೃದಯ ಭಾಗದಿಂದ ಹಾದುಹೋಗುತ್ತದೆ ಮತ್ತು ಜನದಟ್ಟಣೆಯ ಪ್ರದೇಶಗಳಾದ ರಾಜಾ ಬಜಾರ್, ಸಚಿವಾಲಯ, ಹೈಕೋರ್ಟು, ಕಾನೂನು ವಿಶ್ವವಿದ್ಯಾಲಯ ರೈಲ್ವೇ ನಿಲ್ದಾಣಗಳನ್ನು ಸಂಪರ್ಕಿಸುತ್ತದೆ.

 

ಪಟ್ನಾ ಜಂಕ್ಷನ್ನಿನಿಂದ ಐ.ಎಸ್.ಬಿ.ಟಿ. ಕಾರಿಡಾರ್ ಗಾಂಧಿ ಮೈದಾನ, ಪಿ.ಎಂ.ಸಿ.ಎಚ್. , ಪಟ್ನಾ ವಿಶ್ವವಿದ್ಯಾಲಯ, ರಾಜೇಂದ್ರ ನಗರ , ಮಹಾತ್ಮಾ ಗಾಂಧಿ ಸೇತು, ಟ್ರಾನ್ಸ್ ಪೋರ್ಟ್ ನಗರ  ಮತ್ತು ಐ.ಎಸ್.ಬಿ.ಟಿ.ಯನ್ನು ಜೋಡಿಸುತ್ತದೆ.

ಮೆಟ್ರೋ ಪರಿಸರ ಸ್ನೇಹಿ, ಮತ್ತು ಸಹ್ಯ ಸಾರ್ವಜನಿಕ ಸಾರಿಗೆಯನ್ನು ನಿವಾಸಿಗಳಿಗೆ, ಪ್ರಯಾಣಿಕರಿಗೆ, ಕೈಗಾರಿಕಾ ಕಾರ್ಮಿಕರಿಗೆ, ಸಂದರ್ಶಕರಿಗೆ, ಮತ್ತು ಪ್ರಯಾಣಿಕರಿಗೆ ಒದಗಿಸುತ್ತದೆ.

ಪಟ್ನಾ ಮೆಟ್ರೋ ಯೋಜನೆಯ ಮುಖ್ಯಾಂಶಗಳು:

 

i . ದಾನಾಪುರದಿಂದ ಮಿಥಾಪುರ ಕಾರಿಡಾರ್ 16.94  ಕಿ.ಮೀ. ಉದ್ದವಿದ್ದು, ಇದು ಬಹುವಂಶ ಭೂಗತ (11.20 ಕಿ.ಮೀ.)  ಮತ್ತು ಆಂಶಿಕವಾಗಿ ಎತ್ತರದಲ್ಲಿ (5.48 ಕಿ.ಮೀ.) ಇರುತ್ತದೆ. ಮತ್ತು 11 ನಿಲ್ದಾಣಗಳನ್ನು ( 3 ಎತ್ತರದ ನಿಲ್ದಾಣಗಳು ಮತ್ತು 8 ಭೂಗತ ನಿಲ್ದಾಣಗಳು) ಒಳಗೊಂಡಿರುತ್ತದೆ.

 

ii. ಪಟ್ನಾ ನಿಲ್ದಾಣದಿಂದ ಹೊಸ ಐ.ಎಸ್.ಬಿ.ಟಿ. ಕಾರಿಡಾರ್ 14.45 ಕಿ.ಮೀ. ಉದ್ದವಿದ್ದು, ಬಹುಪಾಲು (9.9 ಕಿ.ಮೀ.) ಭೂಸ್ತರಕ್ಕಿಂತ ಎತ್ತರದಲ್ಲಿ ಮತ್ತು ಆಂಶಿಕವಾಗಿ (4.55 ಕಿ.ಮೀ.) ಭೂಗತ ವಾಗಿರುತ್ತದೆ. ಮತ್ತು 12 ನಿಲ್ದಾಣಗಳನ್ನು (9 ಎತ್ತರದಲ್ಲಿ, ಮತ್ತು 3 ಭೂಗತ) ಹೊಂದಿರುತ್ತದೆ.

 

ಪಟ್ನಾದ ಸುತ್ತಮುತ್ತಲಿನ ಪ್ರದೇಶದ ಹಾಲಿ ಇರುವ 26.33 ಲಕ್ಷ ಜನತೆಗೆ ಪಟ್ನಾ ಮೆಟ್ರೋ ರೈಲ್ವೇ ಯೋಜನೆಯಿಂದ ನೇರ ಹಾಗು ಪರೋಕ್ಷ ಪ್ರಯೋಜನ ಆಗುವ ನಿರೀಕ್ಷೆ ಇದೆ.

 

ಅನುಮೋದನೆಗೊಂಡಿರುವ ಕಾರಿಡಾರ್ ಗಳು ರೈಲ್ವೇ ನಿಲ್ದಾಣಗಳು ಮತ್ತು ಐ.ಎಸ್.ಬಿ.ಟಿ. ನಿಲ್ದಾಣಗಳ ಜೊತೆ ಬಹುಮಾದರಿ  ಸಮಗ್ರತೆಯನ್ನು ಹೊಂದಿರುತ್ತವೆ ಮತ್ತು ಬಸ್, ಮಧ್ಯಂತರ ಸಾರ್ವಜನಿಕ ಸಾರಿಗೆ (ಐ.ಪಿ.ಟಿ.)  ಹಾಗು ಮೋಟಾರೇತರ ಸಾರಿಗೆ ( ಎನ್.ಎಂ.ಟಿ.) ಜಾಲವನ್ನು ಹೊಂದಿರುತ್ತದೆ. ಯೋಜನೆಯು ಬಾಡಿಗೆ ಮತ್ತು ಜಾಹೀರಾತು ಹಾಗು ಟ್ರಾನ್ಸಿಟ್  ಆಧಾರಿತ ಅಭಿವೃದ್ದಿ (ಟಿ.ಒ.ಡಿ.) ಮತ್ತು ಅಭಿವೃದ್ದಿ ಹಕ್ಕುಗಳ ವರ್ಗಾವಣೆ (ಟಿ.ಡಿ.ಕೆ.) ವ್ಯವಸ್ಥೆ ಯಂತಹ ಮೌಲ್ಯ ಸಂಗ್ರಹ ಹಣಕಾಸು (ವಿ.ಸಿ.ಎಫ್.) ಮೂಲಕ ಪ್ರಯಾಣ ದರ ಹೊರತುಪಡಿಸಿದ ಆದಾಯವನ್ನು ಹೊಂದಿರುತ್ತದೆ.

 

ಈ ಮೆಟ್ರೋ ರೈಲಿನ ಮಾರ್ಗದಲ್ಲಿ ಬರುವ ನಿವಾಸಿ ಪ್ರದೇಶಗಳು ಈ ಯೋಜನೆಯಿಂದ  ಬಹಳ ಪ್ರಯೋಜನ ಪಡೆಯಲಿವೆ. ಈ ಪ್ರದೇಶಗಳ ಜನತೆ ತಮ್ಮ ಹತ್ತಿರದ ಪ್ರದೇಶಗಳಿಂದ ನಗರದ ವಿವಿಧ ಪ್ರದೇಶಗಳಿಗೆ ರೈಲುಗಳಲ್ಲಿ ಸುಲಲಿತವಾಗಿ ಪ್ರಯಾಣಿಸಲು ಸಾಧ್ಯವಾಗುತ್ತದೆ. 



(Release ID: 1564452) Visitor Counter : 70