ಪ್ರಧಾನ ಮಂತ್ರಿಯವರ ಕಛೇರಿ

ಗುಂಟೂರಿಗೆ ಪ್ರಧಾನಮಂತ್ರಿ ಭೇಟಿ, 1.33 ಎಂ.ಎಂ.ಟಿ. ವಿಶಾಖಪಟ್ಟಣಂ ಎಸ್.ಪಿ.ಆರ್. ಸೌಲಭ್ಯ ದೇಶಕ್ಕೆ ಸಮರ್ಪಣೆ, ಬಿಪಿಸಿಎಲ್ ಕರಾವಳಿ ಅನುಸ್ಥಾಪನಾ ಯೋಜನೆ ಮತ್ತು ಓಎನ್.ಜಿ.ಸಿ.ಯ ಎಸ್.1 ವಶಿಷ್ಠ ಅನಾವರಣ

Posted On: 10 FEB 2019 1:18PM by PIB Bengaluru

ಗುಂಟೂರಿಗೆ ಪ್ರಧಾನಮಂತ್ರಿ ಭೇಟಿ, 1.33 ಎಂ.ಎಂ.ಟಿ. ವಿಶಾಖಪಟ್ಟಣಂ ಎಸ್.ಪಿ.ಆರ್. ಸೌಲಭ್ಯ ದೇಶಕ್ಕೆ ಸಮರ್ಪಣೆ, ಬಿಪಿಸಿಎಲ್ ಕರಾವಳಿ ಅನುಸ್ಥಾಪನಾ ಯೋಜನೆ ಮತ್ತು ಓಎನ್.ಜಿ.ಸಿ.ಯ ಎಸ್.1 ವಶಿಷ್ಠ ಅನಾವರಣ 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಆಂಧ್ರಪ್ರದೇಶದ ಗುಂಟೂರಿಗೆ ಭೇಟಿ ನೀಡಿ, ಮೂರು ಪ್ರಮುಖ ಯೋಜನೆಗಳ ಅನಾವರಣ ಮಾಡಿದರು.

 

ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಶ್ರೀ ಇ.ಎಸ್.ಎಲ್. ನರಸಿಂಹನ್, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಹಾಗೂ ನಾಗರಿಕ ವಿಮಾನಯಾನ ಸಚಿವ ಶ್ರೀ ಸುರೇಶ್ ಪ್ರಭು ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

 

ದೇಶದಲ್ಲಿ ಇಂಧನ ಭದ್ರತೆಗೆ ಚೈತನ್ಯ ತುಂಬುವ ನಿಟ್ಟಿನಲ್ಲಿ ಪ್ರಧಾನಮಂತ್ರಿಯವರು, ಭಾರತೀಯ ತುರ್ತು ಅವಶ್ಯಕತೆಯ ಪೆಟ್ರೋಲಿಯಂ ಮೀಸಲು ನಿಯಮಿತ (ಐ.ಎಸ್.ಪಿ.ಆರ್.ಎಲ್.)ನ 1.33 ಎಂ.ಎಂ.ಟಿ. ವಿಶಾಖಪಟ್ಟಣಂ ತುರ್ತು ಅವಶ್ಯಕತೆಯ ಪೆಟ್ರೋಲಿಯಂ ಸಂಗ್ರಹ (ಎಸ್.ಪಿ.ಆರ್.)ವನ್ನು ಸೌಲಭ್ಯವನ್ನು ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಯ ವೆಚ್ಚ 1125 ಕೋಟಿ ರೂಪಾಯಿಗಳಾಗಿವೆ. ಈ ಸೌಲಭ್ಯವು ದೇಶದಲ್ಲಿ ಅತಿ ದೊಡ್ಡ ಭೂಗತ ದಾಸ್ತಾನು ವಿಭಾಗ ಒಳಗೊಂಡಿದೆ.

 

ಅವರು ಕೃಷ್ಣಪಟ್ಟಣಂನಲ್ಲಿ ಭಾರತ್ ಪೆಟ್ರೋಲಿಯಂ ಲಿಮಿಟೆಡ್ (ಬಿಪಿಸಿಎಲ್)ನ ಕರಾವಳಿ ಸ್ಥಾಪನೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿದರು. 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಯೋಜನೆಯ ಅಂದಾಜು ವೆಚ್ಚ 580 ಕೋಟಿ ರೂಪಾಯಿಗಳಾಗಿವೆ. ಈ ಯೋಜನೆ 2020ರ ಹೊತ್ತಿಗೆ ಕಾರ್ಯಾರಂಭ ಮಾಡಲಿದೆ. ಸಂಪೂರ್ಣ ಸ್ವಯಂಚಾಲಿತವಾದ ಮತ್ತು ಸುಸಜ್ಜಿತ ಕರಾವಳಿ ಅನುಸ್ಥಾಪನಾ ಯೋಜನೆ ಆಂಧ್ರಪ್ರದೇಶದ ಪೆಟ್ರೋಲಿಯಂ ಉತ್ಪನ್ನಗಳ ಸುರಕ್ಷತೆಯನ್ನು ಖಾತ್ರಿಪಡಿಸುತ್ತದೆ.

 

 

ಅನಿಲ ಆಧಾರಿತ ಆರ್ಥಿಕತೆಗೆ ಪ್ರಮುಖ ಒತ್ತು ನೀಡಿ, ಪ್ರಧಾನಮಂತ್ರಿಯವರು ಆಂಧ್ರಪ್ರದೇಶದಲ್ಲಿ ಕೃಷ್ಣ – ಗೋದಾವರಿ (ಕೆಜಿ) ಕಣಿವೆಯಾಚೆ  ಓ.ಎನ್.ಜಿ.ಸಿ.ಯ  ಎಸ್. 1 ವಶಿಷ್ಠ ಅಭಿವೃದ್ಧಿ ಯೋಜನೆಯನ್ನು  ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಯ ವೆಚ್ಚ ಅಂದಾಜು 5,700 ಕೋಟಿ ರೂಪಾಯಿಗಳು. ಈ ಯೋಜನೆ ತೈಲ ಆಮದನ್ನು 2020ರ ಹೊತ್ತಿಗೆ ಶೇ.10ರಷ್ಟು ತಗ್ಗಿಸುವ ಪ್ರಧಾನಮಂತ್ರಿಯವರ ಮುನ್ನೋಟವನ್ನು ಸಾಕಾರಗೊಳಿಸುವಲ್ಲಿ ಗಣನೀಯ ಕೊಡುಗೆ ನೀಡಲಿದೆ.

 

****


(Release ID: 1563742)