ವಾರ್ತಾ ಮತ್ತು ಪ್ರಸಾರ ಸಚಿವಾಲಯ
ಚಲನ ಚಿತ್ರ ಕೃತಿಚೌರ್ಯ ಮತ್ತು ಕಾಪಿರೈಟ್ ಉಲ್ಲಂಘನೆ ನಿಯಂತ್ರಣ.
Posted On:
06 FEB 2019 9:41PM by PIB Bengaluru
ಚಲನ ಚಿತ್ರ ಕೃತಿಚೌರ್ಯ ಮತ್ತು ಕಾಪಿರೈಟ್ ಉಲ್ಲಂಘನೆ ನಿಯಂತ್ರಣ.
ಚಲನಚಿತ್ರಗಳನ್ನು ಅನಧಿಕೃತವಾಗಿ ಕ್ಯಾಮ್ ಕಾರ್‍ಡಿಂಗ್ ಮಾಡುವುದಕ್ಕಾಗಿ ಮತ್ತು ಚಲನ ಚಿತ್ರ ನಕಲುಗಳಿಗೆ ಸಂಬಂಧಿಸಿದಂತೆ ಇರುವ ಸಿನೆಮಾಟೋಗ್ರಾಫಿ ಕಾಯ್ದೆ , 1952 ನ್ನು ಉಲ್ಲಂಘಿಸುವವರಿಗಾಗಿ ಇರುವ ದಂಡನಾ ಪ್ರಸ್ತಾವಗಳಲ್ಲಿ ಮೂರು ವರ್ಷ ಜೈಲು ಶಿಕ್ಷೆ ಅಥವಾ 10 ಲಕ್ಷ ರೂ. ದಂಡ ಅಥವಾ ಈ ಎರಡನ್ನೂ ವಿಧಿಸುವಂತೆ ಅವಕಾಶ ಒದಗಿಸುವ ತಿದ್ದುಪಡಿಗೆ ಸಂಪುಟ ಅನುಮೋದನೆ.
1952 ರ ಸಿನೆಮಾಟೋಗ್ರಾಫಿ ಕಾಯ್ದೆಯನ್ನು ತಿದ್ದುಪಡಿ ಮಾಡುವುದಕ್ಕಾಗಿ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸಿನೆಮಾಟೋಗ್ರಾಫಿ ವಿಧೇಯಕ ,2019 ನ್ನು ಮಂಡಿಸುವುದಕ್ಕೆ ಕೇಂದ್ರ ಸಂಪುಟವು ತನ್ನ ಅನುಮೋದನೆ ನೀಡಿದೆ. ಈ ವಿಧೇಯಕವು ಚಲನಚಿತ್ರಗಳ ಚೌರ್ಯ, ನಕಲು ಮಾಡುವಿಕೆಯನ್ನು ತಡೆಯುವ, ಅನಧಿಕೃತ ಕ್ಯಾಮ್ ಕಾರ್ಡಿಂಗ್ ಮತ್ತು ಚೌರ್ಯ ಮಾಡುವುದಕ್ಕೆ ದಂಡನಾ ಪ್ರಸ್ತಾವನೆಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ತಡೆಯುವ ಉದ್ದೇಶವನ್ನು ಒಳಗೊಂಡಿದೆ.
ವಿವರಗಳು:
ಚಲನ ಚಿತ್ರ ನಕಲು ಹಾವಳಿಯನ್ನು ತಡೆಗಟ್ಟುವುದಕ್ಕಾಗಿ ತಿದ್ದುಪಡಿಗಳು ಈ ಅವಕಾಶಗಳನ್ನು ಒದಗಿಸುತ್ತವೆ:
* ಅನಧಿಕೃತ ರೆಕಾರ್ಡಿಂಗ್ ಪ್ರತಿಬಂಧಿಸಲು ಹೊಸ ಸೆಕ್ಷನ್ 6 AA ಸೇರ್ಪಡೆ
ಸಿನೆಮಾಟೋಗ್ರಾಫ್ ಕಾಯ್ದೆ 1952 ರ ಸೆಕ್ಷನ್ 6 A ಬಳಿಕ ಈ ಕೆಳಗಿನ ಸೆಕ್ಷನ್ ಅನ್ನು ಸೇರ್ಪಡೆ ಮಾಡಲಾಗುವುದು. 6 AA. : “ ಆದಾಗ್ಯೂ ಹಾಲಿ ಜಾರಿಯಲ್ಲಿರುವ ಯಾವುದೇ ಕಾನೂನು ಅನ್ವಯ ಲೇಖಕರ ಲಿಖಿತ ಅನುಮತಿ ಇಲ್ಲದೆ ಯಾವುದೇ ದೃಶ್ಯ –ಶ್ರಾವ್ಯ ಸಲಕರಣೆಯನ್ನು ಗೊತ್ತಿದ್ದೂ ಅದನ್ನು ಯಾ ಚಲನ ಚಿತ್ರದ ಪ್ರತಿಯನ್ನು ಅಥವಾ ಅದರ ಭಾಗವನ್ನು ವರ್ಗಾಯಿಸುವುದಕ್ಕೆ, ಪ್ರಸಾರ ಮಾಡುವುದಕ್ಕೆ ಅಥವಾ ಆ ಕೃತ್ಯಕ್ಕೆ ದುಷ್ಪ್ರೇರಣೆ ನೀಡಲು ಅವಕಾಶ ಇಲ್ಲ. “
· ಲೇಖಕರು ಎಂಬ ಪದದ ವಿವರಣೆ ಕಾಪಿ ರೈಟ್ ಕಾಯ್ದೆ 1957 ರ ಸೆಕ್ಷನ್ 2 ರ ನಿಬಂಧನೆ (d) ಯಲ್ಲಿ ವ್ಯಕ್ತಪಡಿಸಿದಂತೆ ಇರತಕ್ಕದ್ದು.
ಸೆಕ್ಷನ್ 7 ಕ್ಕೆ ತಿದ್ದುಪಡಿಯನ್ನು ಸೆಕ್ಷನ್ 6 AA ಯ ಪ್ರಸ್ತಾವನೆಗಳನ್ನು ಉಲ್ಲಂಘಿಸಿದಲ್ಲಿ ದಂಡನಾ ಪ್ರಸ್ತಾವನೆಗಳನ್ನು ತರಲು ಮಾಡಲಾಗಿದೆ. : ಪ್ರಮುಖ ಕಾಯ್ದೆಯ ಸೆಕ್ಷನ್ 7 ರಲ್ಲಿ , ಉಪ ಸೆಕ್ಷನ್ 1 ರ ಬಳಿಕ ಈ ಕೆಳಗಿನ ಉಪಸೆಕ್ಷನ್ (1 A ) ಯನ್ನು ಸೇರಿಸಿಕೊಳ್ಳತಕ್ಕದ್ದು. :
“ಯಾವುದೇ ವ್ಯಕ್ತಿಯು ಸೆಕ್ಷನ್ 6 AA ಯ ಪ್ರಸ್ತಾವನೆಗಳನ್ನು ಉಲ್ಲ್ಲಂಘಿಸಿದಲ್ಲಿ , ಆ ವ್ಯಕ್ತಿಗೆ 3 ವರ್ಷಕ್ಕೆ ವಿಸ್ತರಿಸಬಹುದಾದ ಅವಧಿಯ ಸೆರೆ ವಾಸ ಅಥವಾ 10 ಲಕ್ಷ ರೂ. ಗಳವರೆಗೆ ದಂಡ ಇಲ್ಲವೇ ಈ ಎರಡನ್ನೂ ವಿಧಿಸಬಹುದಾಗಿದೆ”
ಈ ಪ್ರಸ್ತಾವಿತ ತಿದ್ದುಪಡಿಗಳು ಉದ್ಯಮದ ಆದಾಯವನ್ನು, ಹೆಚ್ಚಿಸುವುದಲ್ಲದೆ, ಉದ್ಯೋಗ ಸೃಷ್ಟಿಗೂ ಉತ್ತೇಜನ ಕೊಡಲಿವೆ, ಮತ್ತು ಭಾರತದ ರಾಷ್ಟ್ರೀಯ ಐ.ಪಿ. ನೀತಿಯ ಪ್ರಮುಖ ಉದ್ದೇಶಗಳನ್ನು ಈಡೇರಿಸಲಿವೆ ಹಾಗು ಕೃತಿಚೌರ್ಯ ಮತ್ತು ಆನ್ ಲೈನ್ ಸಾಮಗ್ರಿಗಳ ಅತಿಕ್ರಮಣ ವಿರುದ್ದ ಪರಿಹಾರ ಒದಗಿಸಲಿವೆ.
ಹಿನ್ನೆಲೆ:
ಸಿನೆಮಾ ಮಾಧ್ಯಮ , ಅದರೊಂದಿಗೆ ಅಡಕಗೊಂಡಿರುವ ಸಲಕರಣೆಗಳು ಮತ್ತು ತಂತ್ರಜ್ಞಾನ ಮತ್ತು ಅದರ ಪ್ರೇಕ್ಷಕರು , ಕೇಳುಗರು ಕಾಲಾನುಕ್ರಮದಲ್ಲಿ ಗಮನಾರ್ಹ ಬದಲಾವಣೆಗೆ ಒಳಪಟ್ಟಿದ್ದಾರೆ. ಮಾಧ್ಯಮ ಮತ್ತು ಮನರಂಜನಾ ಕ್ಷೇತ್ರದಲ್ಲಿ ಟಿ.ವಿ. ವಾಹಿನಿಗಳ ಪ್ರವೇಶದಿಂದ ಮತ್ತು ಕೇಬಲ್ ಜಾಲದಿಂದ ದೇಶಾದ್ಯಂತ ವ್ಯಾಪಕ ಬದಲಾವಣೆಗಳಾಗಿವೆ. ನವ ಡಿಜಿಟಲ್ ತಂತ್ರಜ್ಞಾನದ ಉದಯವು ಕೃತಿ ಚೌರ್ಯ, ನಕಲು ಹಾವಳಿಯ ಆತಂಕವನ್ನೂ ಉಂಟು ಮಾಡಿರುವುದಲ್ಲದೆ , ಅಂತರ್ಜಾಲದಲ್ಲಿ ಚಲನಚಿತ್ರಗಳ ಕೃತಿಚೌರ್ಯದ ಆವೃತ್ತಿಯನ್ನು ಬಿಡುಗಡೆ ಮಾಡುವುದಕ್ಕೂ ಅವಕಾಶ ನೀಡುತ್ತಿರುವುದರಿಂದ ಚಲನಚಿತ್ರ ಉದ್ಯಮ ಮತ್ತು ಸರಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ.
ಚಲನ ಚಿತ್ರ ಉದ್ಯಮ ಬಹಳ ಧೀರ್ಘ ಕಾಲದಿಂದ , ಕ್ಯಾಮ್ ಕಾರ್ಡಿಂಗ್ ಮತ್ತು ನಕಲು ತಡೆಯಲು ಕಾನೂನು ತಿದ್ದುಪಡಿ ತರುವ ಬಗ್ಗೆ ಪರಿಶೀಲಿಸಬೇಕು ಎಂದು ಆಗ್ರಹಿಸುತ್ತಿತ್ತು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಂಬಯಿಯಲ್ಲಿ 2019 ರ ಜನವರಿ 19 ರಂದು ಭಾರತೀಯ ಸಿನೆಮಾದ ರಾಷ್ಟ್ರೀಯ ವಸ್ತುಸಂಗ್ರಹಾಲಯ ಉದ್ಘಾಟನಾ ಸಮಾರಂಭದಲ್ಲಿ ಕ್ಯಾಮ್ ಕಾರ್ಡಿಂಗ್ ಹಾವಳಿ ಮತ್ತು ನಕಲು ತಡೆಗೆ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದ್ದರು. ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಈ ವಿಷಯವನ್ನು ಕೇಂದ್ರ ಸಂಪುಟದ ಪರಿಗಣನೆಗೆ ಮಂಡಿಸಿತ್ತು.
***
(Release ID: 1563471)
Visitor Counter : 117