ಪ್ರಧಾನ ಮಂತ್ರಿಯವರ ಕಛೇರಿ

2019ರ ಜನವರಿ 27ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ 

Posted On: 25 JAN 2019 7:46PM by PIB Bengaluru

2019ರ  ಜನವರಿ 27ರಂದು ಕೇರಳದ ಕೊಚ್ಚಿಗೆ ಭೇಟಿ ನೀಡಲಿರುವ ಪ್ರಧಾನಮಂತ್ರಿ

 

ಕೊಚ್ಚಿಯಲ್ಲಿ ಸಮಗ್ರ ಶುದ್ಧೀಕರಣ ವಿಸ್ತರಣಾ ಸಮುಚ್ಚಯ ಮತ್ತು ಕೊಚ್ಚಿಯ ಬಾಟ್ಲಿಂಗ್ ಘಟಕದಲ್ಲಿ ಮೌಂಡೆಡ್  ಸ್ಟೋರೇಜ್ ವೆಹಿಕಲ್ ನ್ನು ದೇಶಕ್ಕೆ ಸಮರ್ಪಿಸಲಿರುವ ಪ್ರಧಾನಮಂತ್ರಿ, ಬಿಪಿಸಿಎಲ್ ಕೊಚ್ಚಿ ಶುದ್ಧೀಕರಣದಲ್ಲಿ ಪೆಟ್ರೋಕೆಮಿಕಲ್ ಸಮುಚ್ಚಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿರುವ ಪ್ರಧಾನಮಂತ್ರಿ

 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, 2019ರ ಜನವರಿ 27ರಂದು ಕೇರಳದ ಕೊಚ್ಚಿಗೆ ಭೇಟಿ ನೀಡುತ್ತಿದ್ದು, ಈ ಭೇಟಿ ವೇಳೆ ಅವರು, 2019ರ ಜನವರಿ 27ರಂದು ಕೊಚ್ಚಿಯ ಬಿಪಿಸಿಎಲ್ ನ ಸಮಗ್ರ ಶುದ್ಧೀಕರಣ ವಿಸ್ತರಣಾ ಸಮುಚ್ಚಯವನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದೇ ಸ್ಥಳದಲ್ಲಿ ಅವರು ಪೆಟ್ರೋ ಕೆಮಿಕಲ್ ಸಮುಚ್ಚಯಕ್ಕೆ ಶಿಲಾನ್ಯಾಸವನ್ನೂ ನೆರವೇರಿಸಲಿದ್ದಾರೆ. ಕೊಚ್ಚಿಯ  ಐ.ಓ.ಸಿ.ಎಲ್. ಎಲ್.ಪಿ.ಜಿ. ಬಾಟಲಿಂಗ್ ಘಟಕದಲ್ಲಿ  ಮೌಂಡೆಡ್  ಸ್ಟೋರೇಜ್ ವೆಹಿಕಲ್ನ್ನು  ಉದ್ಘಾಟಿಸಲಿದ್ದಾರೆ ಮತ್ತು ಎತ್ತುಮಣ್ಣೂರ್ ನಲ್ಲಿ ಕೌಶಲ ಅಭಿವೃದ್ಧಿ ಸಂಸ್ಥೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

 

 

ಸಮಗ್ರ ಶುದ್ಧೀಕರಣ ವಿಸ್ತರಣಾ ಸಮುಚ್ಚಯ ಒಂದು ಆಧುನಿಕ ವಿಸ್ತರಣಾ ಸಮುಚ್ಚಯವಾಗಿದ್ದು, ಕೊಚ್ಚಿ ಶುದ್ಧೀಕರಣ ಘಟಕವನ್ನು ವಿಶ್ವದರ್ಜೆಯ ಗುಣಮಟ್ಟದೊಂದಿಗೆ ಭಾರತದ ಬೃಹತ್ ಪಿ.ಎಸ್.ಯು. ಶುದ್ಧೀಕರಣವಾಗಿ ಪರಿವರ್ತಿಸುತ್ತದೆ. ಇದು ಭಾರತಕ್ಕೆ ಸ್ವಚ್ಛ ಇಂಧನ ಉತ್ಪಾದನೆಗೆ ಅಣಿಯಾಗಲಿದೆ. ಇದು ಎಲ್.ಪಿ.ಜಿ. ಮತ್ತು ಡೀಸೆಲ್ ನ ಉತ್ಪಾದನೆಯನ್ನು ದುಪ್ಪಟ್ಟು ಮಾಡಲಿದೆ ಮತ್ತು ಈ ಘಟಕದಲ್ಲಿ ಪೆಟ್ರೋಕೆಮಿಕಲ್ ಯೋಜನೆಗಳಿಗೆ ಪೂರಕ ಉತ್ಪನ್ನ ಉತ್ಪಾದನೆಯನ್ನೂ ಆರಂಭಿಸುತ್ತದೆ.

 

ಮೌಂಡೆಡ್ ಸಂಗ್ರಹಣಾ ಭಾಂಡ, ಐ.ಓ.ಸಿ.ಎಲ್. ಎಲ್.ಪಿ.ಜಿ. ಬಾಟ್ಲಿಂಗ್ ಘಟಕ, ಕೊಚ್ಚಿಯು ಒಟ್ಟು 4350 ಎಂ.ಟಿ. ದಾಸ್ತಾನು ಸಾಮರ್ಥ್ಯವನ್ನು ಹೊಂದಿದೆ. ಘಟಕದ ಸುಮಾರು 6 ದಿನಗಳ ಬಾಟ್ಲಿಂಗ್ ಸಾಮರ್ಥ್ಯದ ಎಲ್.ಪಿ.ಜಿ. ಅಗತ್ಯ ಸರಿದೂಗಿಸಲು ಘಟಕದ ದಾಸ್ತಾನು ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಇದು ಸುರಕ್ಷಿತ ದಾಸ್ತಾನು ಭಾಂಡವಾಗಿದ್ದು, ಘಟಕ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಅತ್ಯುತ್ಕೃಷ್ಟ ಮಟ್ಟದ ಸುರಕ್ಷತೆಯ ಖಾತ್ರಿ ಒದಗಿಸುತ್ತದೆ. ಕೊಳವೆ ಮಾರ್ಗದ ಮೂಲಕ ಎಲ್.ಪಿ.ಜಿ. ಸ್ವೀಕೃತಿಯು ರಸ್ತೆಗಳಲ್ಲಿ ಎಲ್.ಪಿ.ಜಿ. ಟ್ಯಾಂಕರ್ ಗಳ ಓಡಾಟವನ್ನುತಗ್ಗಿಸುತ್ತದೆ.

 

ಪೆಟ್ರೋಕೆಮಿಕಲ್ ಸಮುಚ್ಚಯ, ಬಿಪಿಸಿಎಲ್, ಕೊಚ್ಚಿ ಶುದ್ಧೀಕರಣ ಘಟಕ ಮೇಕ್ ಇನ್ ಇಂಡಿಯಾ ಉಪಕ್ರಮವಾಗಿದ್ದು, ಆಮದಿನ ಅವಲಂಬನೆಯನ್ನು ತಗ್ಗಿಸುವ ಉದ್ದೇಶ ಹೊಂದಿದೆ. ಪ್ರೋಪಿಲೀನ್ ವ್ಯುತ್ಪನ್ನ ಪೆಟ್ರೋಕೆಮಿಕಲ್ ಮತ್ತು ಪಾಲ್ಯೋಲ್ ಯೋಜನೆ ಹಲವು ಕೆಳ ಹಂತದ ಕೈಗಾರಿಕೆಗಳಿಗೆ ವೇಗವರ್ಧಕವಾಗಲಿದೆ.

 

ಎತ್ತುಮಣ್ಣೂರ್ ನ ಕೌಶಲ ಅಭಿವೃದ್ಧಿ ಸಂಸ್ಥೆಗೆ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಬೆಂಬಲವಿದ್ದು, ಅರ್ಹ ಯುವಕರಿಗೆ ವೃತ್ತಿ ತರಬೇತಿ ನೀಡಿ, ಅವರ ಔದ್ಯೋಗಿಕತೆ ಹೆಚ್ಚಿಸುತ್ತದೆ ಮತ್ತು ತೈಲ ಮತ್ತು ಅನಿಲ ಹಾಗೂ ಇತರ ಕೈಗಾರಿಕೆಗಳಲ್ಲಿ ಉದ್ಯಮಶೀಲತೆಗೆ ಅವಕಾಶ ಒದಗಿಸುತ್ತದೆ. 

 

ವಿಶ್ವದರ್ಜೆಯ ಈ ಸಂಸ್ಥೆಯು ಕೇರಳ ಸರ್ಕಾರದಿಂದ 8 ಎಕರೆ ಪ್ರದೇಶದಲ್ಲಿ ಸ್ಥಾಪನೆಯಾಗಿದೆ. ಇದು 20 ವಿವಿಧ ಕೌಶಲಗಳಲ್ಲಿ 1000 ಯುವಕರಿಗೆ ಕೌಶಲ ವರ್ಧನೆಯ ಸಾಮರ್ಥ್ಯ ಹೊಂದಿದೆ.

 

ಈ ಮುನ್ನ 2019ರ ಜನವರಿ 15ರಂದು ಪ್ರಧಾನಮಂತ್ರಿಯವರು ಕೊಲ್ಲಂ ಬೈಪಾಸ್ ಉದ್ಘಾಟಿಸಲು ಕೇರಳಕ್ಕೆ ಭೇಟಿ ನೀಡಿದ್ದರು ಮತ್ತು ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ್ದರು.    

***


(Release ID: 1561609)