ಕುಡಿಯುವ ನೀರು ಮತ್ತು ಸ್ವಚ್ಚತೆ ಸಚಿವಾಲಯ
ವಾರ್ಷಿಕ ಅವಲೋಕನ 2018 : ಸ್ವಚ್ಛ ಭಾರತ ಮಿಷನ್ : ಕುಡಿಯುವ ನೀರು ಮತ್ತು ಶುದ್ಧೀಕರಣ ಸಚಿವಾಲಯ
Posted On:
19 DEC 2018 3:13PM by PIB Bengaluru
ವಾರ್ಷಿಕ ಅವಲೋಕನ 2018
ಸ್ವಚ್ಛ ಭಾರತ ಮಿಷನ್
ಕುಡಿಯುವ ನೀರು ಮತ್ತು ಶುದ್ಧೀಕರಣ ಸಚಿವಾಲಯ
2014 ಅಕ್ಟೋಬರ್ 2 ತಂದು ಸಾರ್ವತಿಕ ನೈಮರ್ಲ್ಯೀಕರಣವನ್ನು ಭಾರತದಲ್ಲಿ ಸಾಧಿಸುವ ನಿಟ್ಟಿನಲ್ಲಿ ಹಾಗೂ ಈ ನಿಟ್ಟಿನಲ್ಲಿ ಇನ್ನಷ್ಟು ಕಾರ್ಯವಿಧಾನವನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀನರೇಂದ್ರ ಮೋದಿ ಸ್ವಚ್ಛ ಭಾರತ ಮಿಷನ್ ನ್ನು ಜಾರಿಗೆ ತಂದರು. ಈ ಸ್ವಚ್ಛ ಭಾರತ ಮಿಷನ್ 2019 ಅಕ್ಟೋಬರ್ 2 ರಂದು ಮಹಾತ್ಮ ಗಾಂಧಿಜಿಯವರ 150 ಜನ್ಮ ಜಯಂತಿಯ ಅಂಗವಾಗಿ ಬಯಲುಶೌಚಮುಕ್ತ ಭಾರತವನ್ನಾಗಿಸುವ ಮೂಲಕ ರಾಷ್ಟ್ರಪಿತರಿಗೆ ಅರ್ಹಗೌರವವನ್ನು ಸಲ್ಲಿಸುವ ಮಹಾತ್ವಾಕಾಂಕ್ಷೆಯನ್ನು ಹೊಂದಿದೆ. ಬಯಲುಶೌಚ ಮುಕ್ತ (ಒಡಿಎಫ್ ) ಸಾಧನೆಯಲ್ಲಿ ಸ್ವಚ್ಛ ಭಾರತ ಮಿಷನ್ಪ್ರಾಥಮಿಕ ಹಾಗೂ ಮೂಲಭೂತ ಅಂಶವಾಗಿ ಹೊರಹೊಮ್ಮಿದೆ. 2014 ರಲ್ಲಿ ಸ್ವಚ್ಛ ಭಾರತ ಮಿಷನ್ ಅನುಷ್ಠಾನಗೊಳಿಸಿದ ಬಳಿಕ ಶೇಕಡಾ 38.7 ರಷ್ಟಿದ್ದ ಗ್ರಾಮೀಣ ನೈರ್ಮಲ್ಯೀಕರಣದ ವ್ಯಾಪ್ತಿಯುಶೇಕಡಾ 96.88 ರಷ್ಟನ್ನು ತಲುಪಿದೆ. (5ನೇ ಡಿಸೆಂಬರ್ 2018ಕ್ಕೆ ಹೊಂದಿಕೊಂಡಂತೆ)
ಸ್ವಚ್ಛ ಭಾರತ ಮಿಷನ್ (ಜಿ) ಪಕ್ಷಿನೋಟ
|
8.95
2014 ಅಕ್ಟೋಬರ್ ನಿಂದ ನಂತರ
ಐ.ಹೆಚ್.ಹೆಚ್.ಎಲ್. ಗಳ ನಿರ್ಮಾಣ
(ಕೋಟಿ ರೂಪಾಯಿಗಳಲ್ಲಿ )
|
58.18
% ನೈರ್ಮಲ್ಯ ವ್ಯಾಪ್ತಿ ಯಲ್ಲಿ ಹೆಚ್ಚಳ
(ಅಕ್ಟೋಬರ್ 2, 2014ರಿಂದ ನಂತರ)
|
534
ಬಯಲುಶೌಚ ಮುಕ್ತ ಜಿಲ್ಲೆಗಳ ಸಂಖ್ಯೆ
|
4470
ನಮಾಮಿ ಗಂಗೆ ಬಯಲುಶೌಚ ಮುಕ್ತ
ಗ್ರಾಮಗಳ ಸಂಖ್ಯೆ
|
25
ಬಯಲುಶೌಚ ಮುಕ್ತ ರಾಜ್ಯ / ಕೇಂದ್ರಾಡಳಿತ ಪ್ರದೇಶಗಳು
|
5,33,911
ಬಯಲುಶೌಚ ಮುಕ್ತಗ್ರಾಮಗಳ ಸಂಖ್ಯೆ
|
ಸ್ವಚ್ಛಭಾರತ ಪ್ರತಿಯೊಬ್ಬರ ಕರ್ತವ್ಯ ( ವ್ಯವಹಾರ / ಆಧ್ಯತೆ)
ಕುಡಿಯುವ ನೀರು ಮತ್ತು ನೈರ್ಮಲೀಕರಣ ಸಚಿವಾಲಯವು ಸ್ವಚ್ಛಭಾರತ್ ಮಿಷನಿನ ಜವಾಬ್ದಾರಿ ವಹಿಸಿಕೊಂಡ ಹೊರತಾಗಿಯು ಸ್ವಚ್ಛಭಾರತ ಸಾಧನೆಯನ್ನು ದೇಶದೆಲ್ಲೆಡೆ ಸಾಧಿಸುವ ನಿಟ್ಟಿನಲ್ಲಿಸಂಘಟಿತ ಹಾಗೂ ಒಗಟ್ಟಿನ ಚಟುವಟಿಕೆಗಳನ್ನು ಕೈಗೊಂಡಿದೆ. ಕೇಂದ್ರ ಎಲ್ಲಾ ಸಚಿವಾಲಯಗಳು, ರಾಜ್ಯ ಸರ್ಕಾರಗಳು, ಸ್ಥಳೀಯ ಸಂಸ್ಥೆಗಳು , ಎನ್ಜಿಒಗಳು, ಸಂಘ ಸಂಸ್ಥೆಗಳು, ಮಾಧ್ಯಮ ಸೇರಿದಂತೆಹಲವರೊಂದಿಗೆ ಕೈಜೋಡಿಸಿರುವ ಸಚಿವಾಲಯವೂ ಸ್ವಚ್ಛಭಾರತದ ನಿರ್ಮಾಣಕ್ಕಾಗಿ ಕಾರ್ಯನಿರ್ವಹಿಸುತ್ತಿದೆ. ಕೇವಲ ನೈರ್ಮಲೀಕರಣದ ವಿಭಾಗವಷ್ಟೆ ಅಲ್ಲದೇ ಸರ್ವರಲ್ಲೂ ಸ್ವಚ್ಛಭಾರತದಕಾಳಜಿಯನ್ನು ತರುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಕಳಕಳಿಯ ಆದೇಶದೊಂದಿಗೆ ಈ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ವಿವಿಧ ಸಚಿವಾಲಯಗಳವತಿಯಿಂದ ವಿಶೇಷ ಕಾರ್ಯಚಟುವಟಿಕೆಗಳು ಹಾಗೂ ಯೋಜನೆಗಳನ್ನು ಕೈಗೊಳ್ಳಲಾಗಿದ್ದು ಸಚಿವಾಲಯದಿಂದ ನಿರ್ವಹಿಸಲಾಗುತ್ತಿದೆ.
ಸ್ವಚ್ಛತಾ ಪಾಕ್ಷಿಕ ಅಭಿಯಾನ
ಸ್ವಚ್ಛತಾ ಪಾಕ್ಷಿಕ ಅಭಿಯಾನವೂ ಎಲ್ಲಾ ಕೇಂದ್ರ ಸಚಿವಾಲಯವೂ ಸ್ವಚ್ಛತೆಗೆ ಸಂಬಂಧಿಸಿದಂತೆ ಕಾರ್ಯಚಟುವಟಿಕೆಗಳಲ್ಲಿ ಪಾಲ್ಗೊಳ್ಳಲಿ ಎಂಬ ಉದ್ದೇಶದಿಂದ ಪ್ರಧಾನಮಂತ್ರಿಯವರ ದೂರದೃಷ್ಠಿಯಿಂದಪ್ರೇರಿತವಾಗಿ 2016 ರ ಏಪ್ರಿಲ್ ನಲ್ಲಿ ಅನುಷ್ಠಾನಕ್ಕೆ ತಂದಿರುವ ುಪಕ್ರಮವಾಗಿದೆ. ಈ ಪ್ರಕಾರವಾಗಿ ಎಲ್ಲಾ ಸಚಿವಾಲಯಗಳಿಗೆ ಸ್ವಚ್ಛತಾ ಮಾಸದ ಬಗ್ಗೆ ನಿಗಧಿಪಡಿಸಿದ ಕ್ಯಾಲೇಂಡರ್ ಅನ್ನು ವಿತರಿಸಲಾಗಿದ್ದು, ಪೂರ್ವ ನಿಗದಿಯಾಗಿ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಚಟುವಟಿಕೆಗಳನ್ನು ನಿಗದಿಪಡಿಸಿಕೊಳ್ಳಲು ಅದು ಸಹಕಾರಿಯಾಗಿದೆ. ಇನ್ನು ಸ್ವಚ್ಛತಾ ಪಾಕ್ಷಿಕಾಚರಣೆಯ 2016 , 2017 ರವಾರ್ಷಿಕ ಆವೃತ್ತಿಯು 2108 ನೇ ಸಾಲಿನಲ್ಲಿ ಎಂ.ಡಿ.ಡಬ್ಲ್ಯು.ಎಸ್ ನಿಂದ ಬಿಡುಗಡೆಗೊಳಿಸಲಾಗಿದೆ.
ನಮಾಮಿ ಗಂಗೆ
ನಮಾಮಿ ಗಂಗೆ ಯೋಜನೆಯ ಜಲಸಂಪನ್ಮೂಲ ಸಚಿವಾಲಯದ ಕಾರ್ಯಕ್ರಮವಾಗಿದ್ದು, ಅಂತರ್ ಸಚಿವಾಲಯದ ಕಾರ್ಯಚಟುವಟಿಕೆಯ ಭಾಗವಾಗಿ ನೀರು ಮತ್ತು ನೈರ್ಮಲೀಕರಣ ಸಚಿವಾಲಯವೂಗಂಗಾ ತೀರದಲ್ಲಿನ ಗ್ರಾಮಗಳಲ್ಲಿ ಬಯಲು ಶೌಚ ಮುಕ್ತ ಪ್ರದೇಶ ಮಾಡಲು ಕ್ರಮಕೈಗೊಂಡಿದೆ. ಹಾಗೂ ಈ ಪ್ರದೇಶಗಳಲ್ಲಿ ದ್ರವ ಹಾಗೂ ಘನ ತ್ಯಾಜ್ಯ ವಿಲೇವಾರಿ ಘಟಕಗಳನ್ನು ಅನುಷ್ಠಾನಗೊಳಿಸುತ್ತಿದೆ.
ಉತ್ತರಾಖಂಡ್, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್ ಹಾಗೂ ಪಶ್ಚಿಮ ಬಂಗಾಳದ ರಾಜ್ಯಸರ್ಕಾರಗಳ ಸಹಾಯದೊಂದಿಗೆ 52 ಜಿಲ್ಲೆಗಳ 4470 ಹಳ್ಳಿಗಳನ್ನು ಬಯಲು ಶೌಚ ಮುಕ್ತ ಗ್ರಾಮಗಳನ್ನಾಗಿಘೋಷಿಸಲಾಗಿದೆ. ಸದ್ಯ ಗಂಗಾ ತೀರದಲ್ಲಿರುವ 25 ಗ್ರಾಮಗಳನ್ನು ಗಂಗಾ ಗ್ರಾಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಎನ್ಎಂಸಿಜಿಯ ಸಹಕಾರದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇನ್ನುಎಂ.ಡಿ.ಡಬ್ಲ್ಯೂ.ಎಸ್. ಐದು ಗಂಗಾ ರಾಜ್ಯಗಳಿಗೆ ₹67 ಕೋಟಿ ರೂಪಾಯಿಗಳನ್ನು , ಗಂಗಾ ತೀರದ ಕಂದಾಯ ಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮಗಳಂತಹ ಯೋಜನೆಗಳಿಗಾಗಿ ನೀಡಿದೆ. 2018 ರಲ್ಲಿಐದು ಗಂಗಾ ಗ್ರಾಮಗಳಲ್ಲಿ ಸ್ವಚ್ಛತಾ ಸಮ್ಮೇಳನವನ್ನು ಎಂ.ಡಿ.ಡಬ್ಲ್ಯೂ.ಎಸ್. ನ ವತಿಯಿಂದ ಸ್ವಚ್ಛತಾ ಅಭಿಯಾನದ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ನಡೆಸಲಾಯಿತು.
ಸ್ವಚ್ಛತಾ ಕಾರ್ಯಸೂಚಿ ಯೋಜನೆ (ಎಸ್.ಎ.ಪಿ)
ವಾರ್ಷಿಕವಾಗಿ ಸ್ವಚ್ಛತಾ ಅಭಿಯಾನಕ್ಕೆ ಸಂಬಂಧಿಸಿದಂತೆ ಯಾವೆಲ್ಲಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎನ್ನುವ ಕಾರ್ಯಸೂಚಿ ಯೋಜನೆ ಎಲ್ಲಾ ಕೇಂದ್ರ ಸಚಿವಾಲಯವೂ ಕೈಗೊಳ್ಳುತ್ತಿದ್ದು, ಈಸಂಬಂಧ ಕೇಂದ್ರ ಬಜೆಟ್ಗೆ ಪೂರಕವಾಗಿ ನೈರ್ಮಲೀಕರಣ ಸಂಬಂಧಿಸಿದ ಯೋಜನೆಗಳನ್ನು ಕೈಗೊಳ್ಳುತ್ತಿವೆ. ಈ ಸಂಬಂಧ 2017-18 ನೇ ಸಾಲಿನಲ್ಲಿ 74 ಸಚಿವಾಲಯಗಳು 18154.82 ಕೋಟಿರೂಪಾಯಿಗಳು ಹಾಗೂ 2018-19 ನೇ ಸಾಲಿನಲ್ಲಿ ₹ 17077.81 ಕೋಟಿ ರೂಪಾಯಿಗಳನ್ನು ಕಾರ್ಯಸೂಚಿ ಯೋಜನೆ ಗಾಗಿ ಕೇಂದ್ರಿಯ ಬಜೆಟ್ನಲ್ಲಿ ನೀಡಲಾಗಿದೆ.
ಐತಿಹಾಸಿಕ ಸ್ಥಳಗಳಲ್ಲಿ ಸ್ವಚ್ಛತೆ
ಈ ಯೋಜನೆಯ ಅಡಿಯಲ್ಲಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಐತಿಹಾಸಿಕವಾಗಿ ಪ್ರಸಿದ್ಧಿ ಪಡೆದಿರುವ ನೂರು ಸ್ಥಳದಲ್ಲಿ ಸ್ವಚ್ಛತೆಯ ಅಭಿಯಾನವನ್ನು ಜಾಗೃತಿ ಪೂರ್ವಕವಾಗಿ ಕೈಗೊಳ್ಳಲಾಗಿದೆ. ವಸತಿಮತ್ತು ನಗಾರಭಿವೃದ್ಧಿ ಇಲಾಖೆ, ಪ್ರವಾಸೋಧ್ಯಮ ಹಾಗೂ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಎಂ.ಡಿ.ಡಬ್ಲ್ಯೂ.ಎಸ್. ಈ ಕಾರ್ಯವನ್ನು ನಿರ್ವಹಿಸುತ್ತಿದ್ದು ಈ ನಿಟ್ಟಿನ್ಲಲಿ ಮೊದಲ ಮೂರುಹಂತಗಳಲ್ಲಿ 30 ಐತಿಹಾಸಿಕ ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕಾರ್ಯಸೂಚಿ ಯೋಜನೆ ಕೂಡ ರೂಪಗೊಂಡಿದ್ದು, ತಾಂತ್ರಿಕ ಸಹಾಯವನ್ನು ಕೂಡಒದಗಿಸಲಾಗಿದೆ.
ಸತ್ಯಾಗ್ರಹದಿಂದ ಸ್ವಚ್ಛತಾಗ್ರಹ ಅಭಿಯಾನ (03-10 ನೇ ಏಪ್ರಿಲ್ 2018)
ಕುಡಿಯುವ ನೀರು ಮತ್ತು ಶುದ್ಧೀಕರಣ ಸಚಿವಾಲಯದ ಸಹಕಾರದೊಂದಿಗೆ ಬಿಹಾರ ಸರ್ಕಾರವೂ 3-10 ನೇ ಏಪ್ರಿಲ್ ವರೆಗೂ ಒಂದು ವಾರಗಳ ಕಾಲ ಸತ್ಯಾಗ್ರಹದಿಂದ ಸ್ವಚ್ಛತಾಗ್ರಹದ ಅಭಿಯಾನಕೈಗೊಂಡಿತ್ತು. ಏಪ್ರಿಲ್ 10, ರಂದು ಪೂರ್ವ ಚಂಪಾರಣ್ಯದಲ್ಲಿ ಅಂತ್ಯಗೊಂಡ ಅಭಿಯಾನದಲ್ಲಿ 20 ಸಾವಿರ ಸ್ವಚ್ಛತಾಗ್ರಹಿಗಳು ಪಾಲ್ಗೊಂಡಿದ್ದರು. ಮತ್ತು ಈ ಸಮಾರೋಪ ಸಮಾರಂಭದಲ್ಲಿ ಗೌರವಾನ್ವಿತಪ್ರಧಾನಮಂತ್ರಿ ಶ‍್ರೀ ನರೇಂದ್ರ ಮೋದಿ ಪಾಲ್ಗೊಂಡಿದ್ದರು. ಅಲ್ಲದೆ ಬಿಹಾರದ ಮುಖ್ಯಮಂತ್ರಿ ಶ್ರೀ ನಿತೀಶ್ ಕುಮಾರ್ , ಕೇಂದ್ರ ಕುಡಿಯುವ ನೀರು ಮತ್ತು ಶುದ್ಧೀಕರಣ ಸಚಿವೆ ಉಮಾ ಭಾರತಿ ಹಾಗೂಇತರೇ ಕೇಂದ್ರ ಮಂತ್ರಿಗಳು, ರಾಜ್ಯ ಮಂತ್ರಿಗಳು, ಸಂಸದರು ಮತ್ತು ಎಮ್.ಎಲ್.ಎಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಪ್ರಧಾನಮಂತ್ರಿಗಳು 10 ಅತ್ಯುತ್ತಮ ಸ್ವಚ್ಛತಾಗ್ರಹಿಗಳನ್ನುಸನ್ಮಾನಿಸಿದರು.
ಗೋಬರ್ ಧನ್ ಯೋಜನೆ
ಕುಡಿಯುವ ನೀರು ಸಚಿವಾಲಯ 2018 ರ ಎಪ್ರಿಲ್ 30 ರಂದು ಹರಿಯಾಣ ಕರ್ನಾಲ್ ನಲ್ಲಿ ಗಾಲ್ವೇನೈಸಿಂಗ್ ಆರ್ಗಾನಿಕ್ ಬಯೋ-ಆಗ್ರೋ ರಿಸೋರ್ಸ್ ದಾನ ಅಥವಾ ಗೋಬರ್ ಧನ್ ಯೋಜನೆಯನ್ನುಜಾರಿಗೆ ತಂದಿದೆ. ಹಳ್ಳಿಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರ ಜೊತೆಯಲ್ಲಿ ರೈತರಿಗೆ ಹಾಗೂ ಪಶುಗಳನ್ನು ಹೊಂದಿರುವ ಮಾಲೀಕರಿಗೆ ಆದಾಯ ತಂದುಕೊಡುವ ಸಲುವಾಗಿ ಸ್ಥಳೀಯ ಉದ್ಯಮಿಗಳಿಗೆಹಸುವಿನ ಸಗಣಿಯನ್ನು ಬಯೋಗ್ಯಾಸ್ ಸೇರಿದಂತೆ ಇತರೇ ಉತ್ಮನ್ನಗಳನ್ನು ತಯಾರಿಸುವುದಕ್ಕೆ ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
ಸ್ವಚ್ಛ ಭಾರತ್ ಸಮ್ಮರ್ ಇಂಟರ್ನ್ಶಿಪ್ 2018
ಕುಡಿಯುವ ನೀರು ಮತ್ತು ಶುದ್ಧೀಕರಣ ಸಚಿವಾಲಯ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹಾಗೂ ಯುವ ಜನ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಸ್ವಚ್ಛ ಭಾರತ್ ಸಮ್ಮರ್ಇಂಟರ್ನ್ಶಿಪ್ 2018 ಜಾರಿಗೆ ತರಲಾಗಿದೆ. ಈ ಇಂಟರ್ನಿಶಿಪ್ ನ ಅಂಗವಾಗಿ ಅಭ್ಯರ್ಥಿಗಳು 100 ಗಂಟೆಗಳ ಕಾಲ ಕಾರ್ಯನಿರ್ವಹಿಸಬೇಕಾಗುತ್ತದೆ. ಶ್ರಮದಾನ, ನೈರ್ಮಲೀಕರಣದ ಮೂಲಸೌಕರ್ಯಗಳಉತ್ಪಾದನೆ, ವ್ಯವಸ್ಥೆಯ ರೂಪುರೇಷಣೆ, ಸೇರಿದಂತೆ ಇತರೆ ಕಾರ್ಯಗಳು ಈ ಇಂಟರ್ನ್ಶಿಪ್ ಒಳಗೊಂಡಿದ್ದು, ಒಟ್ಟು ಸುಮಾರು 3.8 ಕೋಟಿ ವಿದ್ಯಾರ್ಥಿಗಳು ಈ ಇಂಟರ್ನ್ಶಿಪ್ ನಲ್ಲಿ ತಮ್ಮ ಹೆಸರನ್ನುರಿಜಿಸ್ಟರ್ ಮಾಡಿದ್ದಾರೆ.
ಸ್ವಚ್ಛತಾ ಹಿ ಸೇವಾ (15ನೇ ಸೆಪ್ಟಂಬರ್ 2018 ರಿಂದ 2ನೇ ಅಕ್ಟೋಬರ್2018)
ಸ್ವಚ್ಛತಾ ಹಿ ಸೇವಾ ಅಭಿಯಾನದ ಎರಡನೇ ಆವೃತ್ತಿ ಹಿನ್ನೆಲೆಯಲ್ಲಿ 15ನೇ ಸೆಪ್ಟಂಬರ್ 2018 ರಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಮೂಲಕ 17 ಸ್ಥಳದ ಜನರೊಂದಿಗೆಸಮಾಲೋಚನೆ ನಡೆಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಿದರು. ಅವರ ಬೆನ್ನಲ್ಲೇ ಶ್ರೀ ಅಮಿತಾಮ್ ಬಚ್ಚನ್, ಶ್ರೀ ರತನ್ ಟಾಟಾ, ಶ್ರೀ ಸದ್ಗುರು, ಶ್ರೀ, ಶ್ರೀ ರವಿಶಂಕರ್ ಸೇರಿದಂತೆಗಣ್ಯಾತಿಗಣ್ಯರು ಈ ಸಂಬಂಧ ಶ್ರಮಾದಾನ ನೀಡಿದರು. ಇನ್ನೂ 2ನೇ ಅಕ್ಟೋಬರ್ 2018 ರಂದು ನೈರ್ಮಲೀಕರಣದ ಜನಾಂದೋಲನ ಕೈಗೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವರು , ಎಮ್.ಎಲ್.ಎ.ಗಳು, ಸಂಸದರು ಸೇರಿದಂತೆ ಗಣ್ಯಾತಿಗಣ್ಯರು ಸ್ವಚ್ಛತೆಯ ಅಭಿಯಾನದಲ್ಲಿ ಕೈಜೋಡಿಸಿದರು.
ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ನೈರ್ಮಲೀಕರಣ ಸಮಾವೇಶ (29ನೇ ಸೆಪ್ಟಂಬರ್ ನಿಂದ 2ನೇ ಅಕ್ಟೋಬರ್ 2018 ವರೆಗೆ )
ಮಹಾತ್ಮ ಗಾಂಧಿ ಅಂತಾರಾಷ್ಟ್ರೀಯ ನೈರ್ಮಲೀಕರಣ ಸಮಾವೇಶವೂ ನೈರ್ಮಲೀಕರಣಕ್ಕೆ ಸಂಬಂಧಿಸಿದಂ ಸಚಿವರನ್ನು ಹಾಗೂ ಈ ಕ್ಷೇತ್ರದಲ್ಲಿರುವ ವಿಶ್ವದ ತಜ್ಞರನ್ನು ಒಂದುಗೂಡಿಸಿತು. ಸರಿಸುಮಾರು67 ರಾಷ್ಟ್ರಗಳ 200 ಕ್ಕೂ ಹೆಚ್ಚು ಗಣ್ಯರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಪ್ರವಾಸಿ ಭಾರತೀಯ ಕೇಂದ್ರ ದೆಹಲಿಯಲ್ಲಿ ನಡೆದ ಕಾರ್ಯಕ್ರಮವನ್ನು ಗೌರವಾನ್ವಿತ ರಾಷ್ಟ್ರಪತಿಯವರು ಉದ್ಧಾಘಿಸಿದರು. ಸ್ವಚ್ಛಭಾರತ್ ಮಿಷನ್ ಅನುಭವವನ್ನು ಹಂಚಿಕೊಳ್ಳುವುದರ ಜೊತೆಗೆ ಪಾಲ್ಗೊಂಡ ರಾಷ್ಟ್ರಗಳು ತಮ್ಮಲ್ಲಿನ್ನ ನೈರ್ಮಲೀಕರಣದ ಉತ್ತಮ ವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು. ಇನ್ನೂ ವಿವಿಧಆಯಾಮಗಳಲ್ಲಿ ನಡೆದ ಸಮಾವೇಶದ ಸಮಾರೋಪಕ್ಕೆ ಸಾಕ್ಷಿಯಾದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇದೇ ವೇದಿಕೆ ಮೂಲಕ ದೇಶವನ್ನು ಉದ್ದೇಶಿಸಿ ಸ್ವಚ್ಛತಾ ಭಾರತ ಅಭಿಯಾನದಸಂಬಂಧ ಮಾತನಾಡಿದರು.
ಸ್ವಜಲ
ಸಮುದಾಯ ಅಭಿವದ್ಧಿ ಚಾಲಿತ, ವಿಕೇಂದ್ರಿಕೃತ, ನೀತಿ ಆಯೋಗದಿಂದ ಗುರುತಿಸಲ್ಪಟ್ಟ 117 ಜಿಲ್ಲೆಗಳಿಗೆ ಸಂಬಂಧಿಸಿದಂತೆ ಕುಡಿಯುವ ನೀರು ಮತ್ತು ಶುದ್ಧೀಕರಣ ಸಚಿವಾಲಯ “ಸ್ವಜಲ” ಕಾರ್ಯಕ್ರಮನ್ನುಜಾರಿಗೊಳಿಸಿದೆ. ಗ್ರಾಮೀಣ ಸಮಿತಿಗಳು, ಗ್ರಾಮ ಪಂಚಾಯತ್ ಗಳು, ರಾಜ್ಯದಲ್ಲಿ ವಿವಿಧ ಏಜೆನ್ಸಿಗಳು ಈ ಯೋಜನೆಯಲ್ಲಿ ಕೈಜೋಡಿಸಿವೆ.
ತರಬೇತುದಾರರಿಗೆ ತರಬೇತಿ ಕಾರ್ಯಕ್ರಮವನ್ನು ಕುಡಿಯುವ ನೀರು ಮತ್ತು ಶುದ್ಧೀಕರಣ ಸಚಿವಾಲಯದ ಅಡಿಯಲ್ಲಿ ಸೆಪ್ಟಂಬರ್ ನಿಂದ ನವೆಂಬರ್ ವರೆಗೆ ಮೂರು ತಿಂಗಳು ನಡೆಸಲಾಯಿತು. ಭೋಪಾಲ್, ಪುಣೆ, ರಾಂಚಿ, ರಾಯ್ ಪುರ , ಗೌಹಾಟಿಯಲ್ಲಿ ಈ ತರಬೇತಿಯನ್ನು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ನೀಡಲಾಯಿತು.
ಸ್ವಜಲವನ್ನು ಹೊಂದಿರುವ ಟಿಎಂಟಿ ಮಾದರಿಯನ್ನು 2018 ನವೆಂಬರ್ 30 ರಂದು ಉತ್ತರಾಖಂಡದ ನೈನಿತಾಲ್ ನಲ್ಲಿ ನಡೆದ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಅನುಷ್ಠಾನಗೊಳಿಸಲಾಯಿತು. ಜೊತೆಯಲ್ಲಿಇಂಟರ್ಗ್ರೇಟೆಡ್ ಮ್ಯಾನೇಜ್ಮೆಂಟ್ ಇನ್ಫಾರ್ಮೇಶನ್ ಸಿಸ್ಟಮ್ ಅನ್ನು ಕೂಡ ಯೋಜನೆಯನ್ನು ನಿರ್ವಹಿಸಲು ಅನುಷ್ಠಾನಗೊಳಿಸಯಾಯಿತು.
ಈ ಯೋಜನೆಗಾಗಿ 27.9.2018 ರಂದು ಗೌರವಾನ್ವಿತ ಉಪರಾಷ್ಟ್ರಪತಿಗಳು ಜಾರ್ಖಂಡ್ ನಲ್ಲಿ ಶಿಲನ್ಯಾಸ ಕಾರ್ಯ ನೇರವೇರಿಸಿದರು ಮತ್ತು ಇದರ ಮೊದಲ ಯೋಜನೆಯನ್ನು ಹಜಾರಿಭಾಗ್ ನಲ್ಲಿ ವಿಶ್ವಶೌಚಾಲಯ ದಿನದಂದು (19ನೇ ನವೆಂಬರ್ 2018) ಉದ್ಘಾಟಿಸಲಾಯಿತು.
(Release ID: 1559042)
Visitor Counter : 140