ಪ್ರಧಾನ ಮಂತ್ರಿಯವರ ಕಛೇರಿ

ಜನವರಿ 5, 2019ರಂದು ಪ್ರಧಾನಮಂತ್ರಿ ಅವರು ಝಾರ್ಖಂಡ್ ಮತ್ತು ಒಡಿಶಾಕ್ಕೆ ಬೇಟಿ ನೀಡಲಿದ್ದಾರೆ. 

Posted On: 04 JAN 2019 6:27PM by PIB Bengaluru

ಜನವರಿ 5, 2019ರಂದು ಪ್ರಧಾನಮಂತ್ರಿ ಅವರು ಝಾರ್ಖಂಡ್ ಮತ್ತು ಒಡಿಶಾಕ್ಕೆ ಬೇಟಿ ನೀಡಲಿದ್ದಾರೆ. 
 

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 5, 2019ರಂದು ಝಾರ್ಖಂಡ್ ಮತ್ತು ಒಡಿಶಾಕ್ಕೆ ಬೇಟಿ ನೀಡಲಿದ್ದಾರೆ. ಝಾರ್ಖಂಡ್ ನಲ್ಲಿ ಕಂಹಾರ್ ಸ್ಟೋನ್ ಪೈಪ್ ಲೈನ್ ನೀರಾವರಿ ವ್ಯವಸ್ಥೆ ಮತ್ತು ನೋರ್ಥ್ ಕೋಯೆಲ್ (ಮಂಡಲ್ ಡಾಮ್) ಪುನಶ್ಚೇತನ ಕೆಲಸ, ಶಂಕುಸ್ಥಾಪನೆಯ ಸಂಕೇತವಾಗಿ ಪ್ರಧಾನಮಂತ್ರಿ ಅವರು ಫಲಕವನ್ನು ಅನಾವರಣ ಮಾಡಲಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯ 25000 ಫಲಾನುಭವಿಗಳ ಒಟ್ಟಾಗಿ ಇ-ಗೃಹಪ್ರವೇಶವನ್ನು ವೀಡಿಯೊ ಸಂವಾದ ಮೂಲಕ ಉದ್ಘಾಟಿಸಲಿದ್ದಾರೆ.

ಆನಂತರ ಪ್ರಧಾನಮಂತ್ರಿ ಅವರು ಒಡಿಶಾಕ್ಕೆ ಪ್ರಯಾಣ ಮುಂದುವರಿಸಲಿದ್ದಾರೆ. ಬರಿಪಾಡಾದಲ್ಲಿ, ಐ.ಒ.ಸಿ.ಎಲ್ ನ ಎಲ್.ಪಿ.ಜಿ. ಪೈಪ್ ಲೈನ್ ನ ಬಲಸೊರ್ –ಹಾಲ್ದಿಯಾ –ದುರ್ಗಾಪುರ್ ವಿಭಾಗವನ್ನು ಮತ್ತು ಬಲಸೊರ್ ಮಲ್ಟಿ ಮೊಡಲ್ ಲಾಜಿಸ್ಟಿಕ್ ಪಾರ್ಕ್ ಅನ್ನು ಪ್ರಧಾನಮಂತ್ರಿ ಅವರು ದೇಶಾರ್ಪಣೆ ಮಾಡಲಿದ್ದಾರೆ. 

ಹರಿಪುರಗರ್ ನ ಪುರಾತನ ಕೋಟೆಯಲ್ಲಿ ರಸಿಕ ರೇ ದೇವಾಲಯದ ಸಂರಕ್ಷಣೆ ಮತ್ತು ಅಭಿವೃದ್ಧಿ ಕೆಲಸ ಪ್ರಾರಂಭದ ಸಂಕೇತವಾಗಿ ಪ್ರಧಾನಮಂತ್ರಿ ಅವರು ಫಲಕವನ್ನು ಅನಾವರಣ ಮಾಡಲಿದ್ದಾರೆ. ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಪ್ರಧಾನಮಂತ್ರಿ ಅವರು ಶಂಕುಸ್ಥಾಪನೆ ಮಾಡಲಿದ್ದಾರೆ ಮತ್ತು ಆರು ಪಾಸ್ ಪೋರ್ಟ್ ಸೇವಾ ಕೇಂದ್ರ ವನ್ನು ಉದ್ಘಾಟಿಸಲಿದ್ದಾರೆ. ಟಾಟಾನಗರ್ ದಿಂದ ಬಾದಾಂಪಹರ್ ಗೆ ಎರಡನೇ ಪ್ಯಾಸೆಂಜರ್ ರೈಲ್ ಗೆ ಪ್ರಧಾನಮಂತ್ರಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ. 

ಅವರು ಬರಿಪಾಡಾದಲ್ಲಿ ಸಾರ್ವಜನಿಕ ಸಭೆಯಲ್ಲಿ ಸಭಿಕರನ್ನುದ್ಧೇಶಿಸಿ ಭಾಷಣ ಮಾಡಲಿದ್ದಾರೆ.
 

*****



(Release ID: 1558816) Visitor Counter : 43


Read this release in: Assamese , English , Gujarati , Tamil